• Home
  • »
  • News
  • »
  • lifestyle
  • »
  • Diabetes: ಬೆಳಗ್ಗೆ ಈ ಸಮಸ್ಯೆಗಳಾದ್ರೆ ನೆಗ್ಲೆಕ್ಟ್ ಮಾಡ್ಬೇಡಿ, ಅದು ಮಧುಮೇಹದ ಸೂಚನೆಯಂತೆ

Diabetes: ಬೆಳಗ್ಗೆ ಈ ಸಮಸ್ಯೆಗಳಾದ್ರೆ ನೆಗ್ಲೆಕ್ಟ್ ಮಾಡ್ಬೇಡಿ, ಅದು ಮಧುಮೇಹದ ಸೂಚನೆಯಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Morning Signs Of Diabetes: ಬೆಳಗಿನ ಸಮಯದಲ್ಲಿ ನಮ್ಮ ದೇಹವು ಹೆಚ್ಚಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗುರುತಿಸಲು ಸಹಾಯ ಮಾಡುವ ಅನೇಕ ಎಚ್ಚರಿಕೆಯ ಚಿಹ್ನೆಗಳನ್ನು ನೀಡುತ್ತಿರುತ್ತದೆ ಎಂದು ಹೇಳುತ್ತಾರೆ. ಆ ಲಕ್ಷಣಗಳು ಯಾವುವು ಎಂಬುದು ಇಲ್ಲಿದೆ.

  • Trending Desk
  • 4-MIN READ
  • Last Updated :
  • Share this:

ಮಧುಮೇಹವನ್ನು (Diabetes) ಸಾಮಾನ್ಯವಾಗಿ ಸೈಲೆಂಟ್‌ ಕಿಲ್ಲರ್‌ ಅಂತ ಕರೆಯಲಾಗುತ್ತೆ. ಇದು ದೇಹದ ಒಟ್ಟಾರೆ ಕಾರ್ಯ ನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕ್ರಮೇಣ ಇದು ಹೃದಯದ ಸಮಸ್ಯೆ (Heart Problem) , ಮೂತ್ರಪಿಂಡದ ಹಾನಿ, ದೃಷ್ಟಿ-ಸಂಬಂಧಿತ ಸಮಸ್ಯೆ ಸೇರಿದಂತೆ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂದಹಾಗೆ ಮಧುಮೇಹವನ್ನು ಕಂಡುಹಿಡಿಯಲು ಸಾಕಷ್ಟು ರೋಗಲಕ್ಷಣಗಳಿವೆ. ಹಿರಿಯ ಮಧುಮೇಹ ತಜ್ಞ ಡಾ. ಬಿ.ಎಂ.ಮಕ್ಕರ್ ಅವರು, “ಕೆಲವೊಮ್ಮೆ ಮಧುಮೇಹದ ರೋಗಲಕ್ಷಣಗಳು ತುಂಬಾ ಸೂಕ್ಷ್ಮವಾಗಿದ್ದು, ಅವುಗಳನ್ನು ಪ್ರತ್ಯೇಕಿಸಲು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿ, ಮಧುಮೇಹಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ತಿಳಿದುಕೊಂಡು ಅದು ನೀಡುವ ನಿರ್ದಿಷ್ಟ ಸಂಕೇತಗಳನ್ನು ಗುರುತಿಸುವುದು ಮುಖ್ಯ. ಬೆಳಗಿನ ಸಮಯದಲ್ಲಿ ನಮ್ಮ ದೇಹವು ಹೆಚ್ಚಿನ ರಕ್ತದಲ್ಲಿನ ಸಕ್ಕರೆ (Sugar Level)  ಮಟ್ಟವನ್ನು ಗುರುತಿಸಲು ಸಹಾಯ ಮಾಡುವ ಅನೇಕ ಎಚ್ಚರಿಕೆಯ ಚಿಹ್ನೆಗಳನ್ನು ನೀಡುತ್ತಿರುತ್ತದೆ ಎಂದು ಹೇಳುತ್ತಾರೆ.


ಬೆಳಗಿನ ಸಮಯದಲ್ಲಿ ಮಧುಮೇಹವು ನೀಡುವ ಸಂಕೇತಗಳಿವು


ಒಣ ಬಾಯಿ: ಮಧುಮೇಹದ ಪ್ರಮುಖ ಎಚ್ಚರಿಕೆಯ ಸಂಕೇತವೆಂದರೆ ಒಣ ಬಾಯಿ.ಬೆಳಗಿನ ಸಮಯದಲ್ಲಿ ಬಾಯಿ ಒಣಗಿದೆ ಎಂಬಂತೆ ನಿಮಗೆ ಅನಿಸಿದರೆ ಅಥವಾ ಬೆಳಿಗ್ಗೆ ಎದ್ದ ತಕ್ಷಣ ತುಂಬಾ ಬಾಯಾರಿಕೆಯನ್ನು ಅನುಭವಿಸಿದರೆ ಅದು ಮಧುಮೇಹದ ಎಚ್ಚರಿಕೆಯಾಗಿರಬಹುದು. ಹಾಗಾಗಿ ಅದನ್ನು ಪರಿಗಣಿಸಿ ತಕ್ಷಣವೇ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.


ವಾಕರಿಕೆ: ಅಧಿಕ ರಕ್ತದ ಸಕ್ಕರೆಯ ಮಟ್ಟದಿಂದಾಗಿ ಬೆಳಗ್ಗೆ ಕಂಡುಬರುವಂಥ ಇನ್ನೊಂದು ಲಕ್ಷಣವೆಂದರೆ ವಾಕರಿಕೆ. ಮಧುಮೇಹ ಅಥವಾ ಇತರ ಪರಿಸ್ಥಿತಿಗಳಿಂದ ಉಂಟಾಗುವ ತೊಡಕುಗಳ ಪರಿಣಾಮವಾಗಿ ಇದು ಸಂಭವಿಸಬಹುದು. ಹೆಚ್ಚಿನ ಸಮಯ, ವಾಕರಿಕೆ ನಿರುಪದ್ರವ ಮತ್ತು ಬಹಳ ಕ್ಷಣಿಕವಾಗಿರುತ್ತದೆ. ಆದಾಗ್ಯೂ, ಇದು ಹೆಚ್ಚು ತೀವ್ರವಾದ ಮಧುಮೇಹ ಸಮಸ್ಯೆಯನ್ನು ಸೂಚಿಸುವ ಲಕ್ಷಣ ಇದಾಗಿರಬಹುದು.


ಇದನ್ನೂ ಓದಿ: ಚಳಿಗಾಲದಲ್ಲಿರಲಿ ಅಂಜೂರ ಹಣ್ಣುಗಳ ಸೇವನೆ; ಮಕ್ಕಳಿಗೆ ಹಾಲಿನ ಜೊತೆ ಸೇರಿಸಿ ಕೊಡಿ


ಮಸುಕಾದ ದೃಷ್ಟಿ: ನೀವು ಬೆಳಿಗ್ಗೆ ಎದ್ದಾಗ ನಿಮಗೆ ಮಸುಕಾದ ದೃಷ್ಟಿ ಕಂಡುಬಂದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ಆದಷ್ಟು ಬೇಗನೇ ಪರೀಕ್ಷಿಸಬೇಕು. ಮಧುಮೇಹವು ಕಣ್ಣಿನ ಮಸೂರವನ್ನು ಹಿಗ್ಗಿಸಲು ಕಾರಣವಾಗಬಹುದು. ಇದು ಮಬ್ಬು ದೃಷ್ಟಿಗೆ ಕಾರಣವಾಗಬಹುದು. ನಿಮ್ಮ ಕಣ್ಣಿನ ಲೆನ್ಸ್‌ ಆಕಾರವನ್ನು ಬದಲಾಯಿಸಬಹುದು . ಆದ್ದರಿಂದ ಮಧುಮೇಹ ಸ್ಥಿರಗೊಂದ ಬಳಿಕವೇ ನಿಮ್ಮ ದೃಷ್ಟಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ಡಾ. ಮಕ್ಕರ್ ಹೇಳುತ್ತಾರೆ.


ಜೋಮು ಹಿಡಿದಂಥ ಅನುಭವ: ಅಧಿಕ ರಕ್ತದ ಸಕ್ಕರೆ (ಗ್ಲೂಕೋಸ್) ನಿಂದ ನರಗಳ ಸಮಸ್ಯೆ ಉಂಟಾಗಬಹುದು. ಮಧುಮೇಹದಿಂದಾಗಿ ಕಾಲುಗಳು ಮತ್ತು ಪಾದಗಳಲ್ಲಿನ ನರಗಳ ಮೇಲೆ ಪರಿಣಾಮ ಬೀರಬಹುದು. ಮಧುಮೇಹ ನರರೋಗದ ಲಕ್ಷಣಗಳಲ್ಲಿ ಪ್ರಮುಖವಾಗಿ ಜುಮ್ಮೆನಿಸುವಿಕೆ, ನೋವಿನಿಂದ ಕೂಡಿದ ಕೈಗಳು, ಪಾದಗಳು ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಕಾಣಿಸಿಕೊಳ್ಳಬಹುದು. ಇದು ಯಾವ ನರಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.




ಹಾಗಾಗಿ ಬೆಳಗ್ಗೆ ನೀವು ಎಚ್ಚರವಾದಾಗ ದಿಗ್ಭ್ರಮೆ, ಮೂರ್ಛೆ, ದಣಿವು ಮತ್ತು ಜೋಮು ಹಿಡಿದ ಪಾದಗಳಂತಹ ಅನುಭವ ಪಡೆದರೆ ಇದು ಮಧುಮೇಹದ ಎಚ್ಚರಿಕೆಯ ಸಂಕೇತವಾಗಿರಬಹುದು. ಈ ಬದಲಾವಣೆಗಳು ಅವುಗಳ ಸ್ವಭಾವದಲ್ಲಿ ಬಹಳ ಸೂಕ್ಷ್ಮವಾಗಿರುತ್ತವೆ. ಆದಾಗ್ಯೂ, ನಿಮ್ಮ ಮಧುಮೇಹ ಹೊಂದಿದ್ದೀರಾ ಎಂಬುದನ್ನು ನಿರ್ಧರಿಸಲು ಅವು ನಿರ್ಣಾಯಕವಾಗಿವೆ. ಗುಣಪಡಿಸುವ ಕ್ರಮಗಳ ಬದಲಿಗೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.


ಇದನ್ನೂ ಓದಿ: ದೇಹದ ತೂಕ ಬೇಗ ಕಡಿಮೆ ಆಗಲು ಜಸ್ಟ್ ಈ 5 ಪದಾರ್ಥ ಸೇವಿಸಿ ಸಾಕು


ಒಟ್ಟಾರೆ, ಮಧುಮೇಹದಂತಹ ಮಾರಣಾಂತಿಕ ಆರೋಗ್ಯದ ತೊಡಕುಗಳನ್ನು ನಿರ್ವಹಿಸಲು ಈ ಸೂಕ್ಷ್ಮ ಚಿಹ್ನೆಗಳನ್ನು ಗಮನಿಸಬೇಕು.ಅಂತಹ ಕಾಯಿಲೆಗಳ ಪ್ರಗತಿಯನ್ನು ನಿಯಂತ್ರಿಸಲು ವೈದ್ಯರ ಬಳಿ ತೆರಳುವುದು ಖಚಿತವಾದ ಶಾಟ್ ಮಾರ್ಗಗಳಲ್ಲಿ ಒಂದಾಗಿದೆ ಎಂದು ನೀವು ನೆನಪಿಟ್ಟುಕೊಳ್ಳಬೇಕು.ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹವನ್ನು ನಿಯಂತ್ರಿಸಬಹುದು.

Published by:Sandhya M
First published: