ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ, ಶ್ವಾಸಕೋಶ ಕಾಯಿಲೆಯಿಂದ ದೂರವಿರಿ..!

ಬೆಳ್ಳುಳ್ಳಿ ಮಾರಣಾಂತಿಕ ಶ್ವಾಸಕೋಶದ ಸೋಂಕಿನಿಂದ ರಕ್ಷಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು (ಆ್ಯಂಟಿ ಆಕ್ಸಿಡೆಂಟ್ಸ್​) ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

news18-kannada
Updated:July 21, 2020, 3:09 PM IST
ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ, ಶ್ವಾಸಕೋಶ ಕಾಯಿಲೆಯಿಂದ ದೂರವಿರಿ..!
ಸಾಂದರ್ಭಿಕ ಚಿತ್ರ
  • Share this:
ಜಂಕ್ ಫುಡ್ ಇಂದಿನ ಪೀಳಿಗೆಯ ಪ್ರಿಯ ಆಹಾರಗಳಲ್ಲಿ ಒಂದು. ಈ ಆಹಾರ ಬಾಯಿ ರುಚಿ ಹೆಚ್ಚಿಸಿದರೂ, ದೇಹಕ್ಕೆ ಅಗತ್ಯವಾದ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವುದಿಲ್ಲ. ಬದಲಾಗಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದರಲ್ಲೊಂದು ಶ್ವಾಸಕೋಶದ ಸಮಸ್ಯೆ. ಅತಿಯಾದ ಜಂಕ್ ಫುಡ್ ಸೇವನೆ ಬೊಜ್ಜು ಹೆಚ್ಚಿಸುವುದಲ್ಲದೆ, ತೀವ್ರ ಕೆಮ್ಮು, ಉಸಿರಾಟದ ತೊಂದರೆ, ಹೆಚ್ಚುವರಿ ಲೋಳೆಯ, ಉಬ್ಬಸ, ಎದೆ ನೋವು ಮುಂತಾದ ತೊಂದರೆಗಳಿಗೂ ಕಾರಣವಾಗುತ್ತದೆ.

ಇದೀಗ ಇಡೀ ಪ್ರಪಂಚ ಕೊರೋನಾ ವೈರಸ್​ನಿಂದ ತತ್ತರಿಸಿದೆ. ಇಂತಹ ಸಮಯದಲ್ಲಿ ನಾವು ಶ್ವಾಸಕೋಶದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಬಹಳ ಮುಖ್ಯ. ಅಸ್ತಮಾ, ಬ್ರಾಂಕೈಟಿಸ್, ಶ್ವಾಸಕೋಶದ ಕ್ಯಾನ್ಸರ್, ಸಿಸ್ಟಿಕ್ ಫೈಬ್ರೋಸಿಸ್, ಅಲರ್ಜಿ, ಸೂಪ್ಡ್ ಮುಂತಾದ ರೋಗಗಳು ಶ್ವಾಸಕೋಶಕ್ಕೆ ಸಂಬಂಧಿಸಿವೆ ಎಂದು ಡಾ.ಲಕ್ಷ್ಮಿದತ್ತ ಶುಕ್ಲಾ ಹೇಳುತ್ತಾರೆ. ಶ್ವಾಸಕೋಶವನ್ನು ಆರೋಗ್ಯವಾಗಿಡಲು ಆರೋಗ್ಯಕರವಾಗಿ ತಿನ್ನುವುದು ಸಹ ಮುಖ್ಯವಾಗಿದೆ. ಅಂತಹ ಕೆಲವೊಂದು ಆಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಮಾರಣಾಂತಿಕ ಶ್ವಾಸಕೋಶದ ಸೋಂಕಿನಿಂದ ರಕ್ಷಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು (ಆ್ಯಂಟಿ ಆಕ್ಸಿಡೆಂಟ್ಸ್​) ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಇದರ ಸೇವನೆಯಿಂದ ಕಫ ಕೂಡ ದೂರವಾಗುತ್ತದೆ. ಆದ್ದರಿಂದ, ಆಹಾರವನ್ನು ಸೇವಿಸಿದ ನಂತರ ಬೆಳ್ಳುಳ್ಳಿಯನ್ನು ಸೇವಿಸಿದರೆ ಎದೆಯನ್ನು ಸ್ವಚ್ಛವಾಗಿರಿಸುತ್ತದೆ. ಹಾಗೆಯೇ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅರಿಶಿನ: ಅರ್ಧ ಟೀಸ್ಪೂನ್ ಅರಿಶಿನ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿಯುವುದರಿಂದ ಸಹ ಶ್ವಾಸಕೋಶವು ಆರೋಗ್ಯವಾಗಿಸಬಹುದು. ಅರಿಶಿನವು ಕರ್ಕ್ಯುಮಿನ್ ಎಂಬ ವಸ್ತುವನ್ನು ಹೊಂದಿರುತ್ತದೆ. ಇದು ಶಿಶುಗಳ ಶ್ವಾಸಕೋಶಕ್ಕೆ ಮಾರಕವಾಗುವ ಹಾನಿಯಿಂದ ರಕ್ಷಿಸುತ್ತದೆ.

ಕ್ಯಾರೆಟ್: ಕ್ಯಾರೆಟ್‌ಗಳಲ್ಲಿ ಅನೇಕ ರೀತಿಯ ಆ್ಯಂಟಿ-ಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಕ್ಯಾರೆಟ್ ಅನ್ನು ಕ್ಯಾರೊಟಿನಾದ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಕ್ಯಾರೊಟಿನಾಯ್ಡ್​ ಶ್ವಾಸಕೋಶದ ಕ್ಯಾನ್ಸರ್ ಕಡಿಮೆಯಾಗುವ ಗುಣ ಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆಯಿಂದ ಬಹಿರಂಗಗೊಂಡಿದೆ.

ಪೇರಲೆ ಅಥವಾ ಸೀಬೆ ಹಣ್ಣು: ಪೇರಲೆಯ ನಿಯಮಿತ ಸೇವನೆಯು ಇದು ಉಸಿರಾಟದ ಪ್ರದೇಶದ ಸೋಂಕನ್ನು ಕಡಿಮೆ ಮಾಡುತ್ತದೆ. ಇದರ ಆ್ಯಂಟಿ ವೈರಸ್ ಗುಣವು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗೆಯೇ ಸೀಬೆ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಕೂಡ ಆರೋಗ್ಯವನ್ನು ವೃದ್ಧಿಸುತ್ತದೆ.

ಸೇಬು: ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಶ್ವಾಸಕೋಶದ ಆರೋಗ್ಯಕ್ಕೆ ಪ್ರಯೋಜನಕಾರಿ. ಅವುಗಳಲ್ಲಿ ಸೇಬು ಅಥವಾ ಆ್ಯಪಲ್ ಕೂಡ ಒಂದು. ಇದು ಉತ್ಕರ್ಷಣ ನಿರೋಧಕಗಳಿಂದ ಕೂಡಿರುವುದರಿಂದ ಇದರ ಸೇವನೆ ಆರೋಗ್ಯಕ್ಕೆ ಉತ್ತಮ.ಕುಂಬಳಕಾಯಿ: ಕುಂಬಳಕಾಯಿ ಕೂಡ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಪೊಟ್ಯಾಸಿಯಮ್, ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ವಿವಿಧ ಕ್ಯಾರೊಟಿನಾಯ್ಡ್​ಗಳ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ನಿದ್ರೆ ಬಾರದ ಸಮಸ್ಯೆಗೆ ಇಲ್ಲಿದೆ ಸರಳ ಮದ್ದು..!

ಶುಂಠಿ: ಶುಂಠಿಯ ಸೇವನೆಯಿಂದ ಶ್ವಾಸಕೋಶಕ್ಕೆ ಹಾನಿಯಾಗುವ ವಿಷವನ್ನು ಬಿಡುಗಡೆ ಮಾಡುತ್ತವೆ. ಅದರಲ್ಲೂ ಉರಿಯೂತದ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು ಶುಂಠಿಯಲ್ಲಿದ್ದು, ಇದು ಶ್ವಾಸಕೋಶವನ್ನು ಸುರಕ್ಷಿತವಾಗಿರಿಸುತ್ತವೆ. ಈ ಆಹಾರಗಳನ್ನು ನಿಮ್ಮ ದಿನನಿತ್ಯ ಆಹಾರ ಪದ್ದತಿಗಳಲ್ಲಿ ಹೆಚ್ಚಾಗಿ ಅಳವಡಿಸಿಕೊಳ್ಳುವ ಮೂಲಕ ಶ್ವಾಸಕೋಶದ ಕಾಯಿಲೆಗಳಿಂದ ದೂರವಿರಬಹುದು.
Published by: zahir
First published: July 21, 2020, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading