Weight Loss Tips: ಈ ಸಲಾಡ್​ಗಳನ್ನು ತಿಂದ್ರೆ ಕೇವಲ 3 ವಾರದಲ್ಲಿ ತೂಕ ಕಡಿಮೆಯಾಗುತ್ತೆ

Salads For weight Loss: ಸಲಾಡ್ ಮಾಡುವಾಗ ನೀವು ಒಮ್ಮೆಗೆ 6-8 ಹಣ್ಣುಗಳು ಮತ್ತು ತರಕಾರಿಗಳನ್ನು ಮಿಶ್ರಣ ಮಾಡಬಹುದು.   ಆದರೆ ಸಲಾಡ್ ತಯಾರಿಸಲು ಹಣ್ಣುಗಳು ಮತ್ತು ತರಕಾರಿಗಳನ್ನು ಆಯ್ಕೆಮಾಡುವಾಗ ಬಹಳ ಜಾಗರೂಕರಾಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ತೂಕ ಇಳಿಸಿಕೊಳ್ಳಲು(weight Loss) ಪ್ರಯತ್ನಿಸುತ್ತಿದ್ದರೆ, ಸಲಾಡ್‌ಗಳು(Salad) ನಿಮ್ಮ ಜೀವನದ ಒಂದು ಭಾಗವಾಗಿರುತ್ತದೆ. ನಿಮ್ಮ ಆಹಾರವನ್ನು ಕಡಿಮೆ ಮಾಡಿ ಕ್ಯಾಲೋರಿಗಳ(Calories) ಕಡಿಮೆ ಮಾಡಲು ಬದಲು ಅನಾರೋಗ್ಯಕರ ಆಹಾರಗಳನ್ನು ಆರೋಗ್ಯಕರವಾಗಿ ಬದಲಿಸಲು ಪ್ರಯತ್ನಿಸಬೇಕು. ಅದಕ್ಕೆ ಸಲಾಡ್ ಬೆಸ್ಟ್. ಸಲಾಡ್‌ಗಳು ಆರೋಗ್ಯಕರ ಮತ್ತು ಟೇಸ್ಟಿ ಊಟಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಏಕೆಂದರೆ ಅವುಗಳನ್ನು ವಿವಿಧ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ(Vegetables) ತಯಾರಿಸಬಹುದು, ನಿಮಗೆ ವೈವಿಧ್ಯತೆಯನ್ನು ನೀಡುತ್ತದೆ ಮತ್ತು ಪ್ರತಿದಿನ ಒಂದೇ ಊಟವನ್ನು ತಿನ್ನುವ ಬೇಸರ ಇರುವುದಿಲ್ಲ. ಆದ್ದರಿಂದ, ಸಲಾಡ್‌ಗಳನ್ನು ತಯಾರಿಸಲು ಸುಲಭ ಮತ್ತು ನಿಮ್ಮ ತೂಕವನ್ನು ಇಳಿಸಲು ಸಹಕಾರಿಯಾಗಿದೆ.   

ನೀವು ತೂಕ ಇಳಿಸುವ ಪ್ರಕ್ರಿಯೆಯಲ್ಲಿದ್ದರೆ, ಯಾವುದೇ ರೀತಿಯ ಉತ್ತಮ ಫಲಿತಾಂಶ ಪಡೆಯಲು ನೀವು ದಿನಕ್ಕೆ ಒಮ್ಮೆಯಾದರೂ ಸಲಾಡ್ ಅನ್ನು ತಿನ್ನಬೇಕು. ಸಲಾಡ್‌ಗಳು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ದಿನಕ್ಕೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ನೀಡುತ್ತದೆ. ಸಾಮಾನ್ಯವಾಗಿ ದಿನಕ್ಕೆ 6 ರಿಂದ 7 ಹಣ್ಣುಗಳನ್ನು  ತಿನ್ನಬೇಕು ಎಂದು ಹೇಳುತ್ತಾರೆ. ಆದರೆ ಅದು ಸುಲಭವಲ್ಲ.  ಆ ಸಂದರ್ಭದಲ್ಲಿ ಸಲಾಡ್ಗಳು ಸಹಾಯಕ್ಕೆ ಬರುತ್ತವೆ.

ಸಲಾಡ್ ಮಾಡುವಾಗ ನೀವು ಒಮ್ಮೆಗೆ 6-8 ಹಣ್ಣುಗಳು ಮತ್ತು ತರಕಾರಿಗಳನ್ನು ಮಿಶ್ರಣ ಮಾಡಬಹುದು.   ಆದರೆ ಸಲಾಡ್ ತಯಾರಿಸಲು ಹಣ್ಣುಗಳು ಮತ್ತು ತರಕಾರಿಗಳನ್ನು ಆಯ್ಕೆಮಾಡುವಾಗ ಬಹಳ ಜಾಗರೂಕರಾಗಿರಬೇಕು. ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ನಿರ್ವಹಿಸಲು ಪೋಷಕಾಂಶ-ದಟ್ಟವಾದ ಪದಾರ್ಥಗಳನ್ನು ಆಯ್ಕೆಮಾಡಿ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಸಲಾಡ್‌ಗಳು ನಿಮಗೆ ಅಗತ್ಯವಿರುವ ಪೌಷ್ಟಿಕಾಂಶವನ್ನು ನೀಡುವಾಗ ನಿಮ್ಮ ಕ್ಯಾಲೋರಿ ಸೇವನೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ಚಳಿಗಾಲದಲ್ಲಿ ಚರ್ಮದ ಅಂದ ಕಾಪಾಡಲು ಇಲ್ಲಿದೆ ಬೆಸ್ಟ್ ಟಿಪ್ಸ್

ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವನೆ ಮಾಡಿ ಅದು ನಿಮ್ಮನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಉತ್ತಮ ಪ್ರಮಾಣದ ಫೈಬರ್ ಅನ್ನು ಒದಗಿಸುತ್ತದೆ. ಹಸಿವನ್ನು ನಿಗ್ರಹಿಸುವ ಸಲಾಡ್ ಜೊತೆಗೆ ಸ್ವಲ್ಪ ಪ್ರೋಟೀನ್ ತೆಗೆದುಕೊಳ್ಳಬೇಕು. ಚಳಿಗಾಲದಲ್ಲಿ ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಸಲಾಡ್​ಗಳು ಇಲ್ಲಿದೆ.

ಸಿಹಿ ಆಲೂಗಡ್ಡೆ ಸಲಾಡ್ 

ಈ ಸಲಾಡ್ ನಿಮ್ಮ ಹಸಿವನ್ನು ತಗ್ಗಿಸಿ ದೀರ್ಘಕಾಲದವರೆಗೆ  ಹಸಿವಾಗದಂತೆ ನೋಡಿಕೊಳ್ಳುತ್ತದೆ. ಸಿಹಿ ಆಲೂಗೆಡ್ಡೆ ಚಳಿಗಾಲದಲ್ಲಿ ಸುಲಭವಾಗಿ ಲಭ್ಯವಿರುತ್ತದೆ ಮತ್ತು ರುಚಿಕರವಾದ ಸಲಾಡ್  ತ್ವರಿತವಾಗಿ ತಯಾರಿಸಲು ಸಾಧ್ಯ. ಸಿಹಿ ಗೆಣಸನ್ನು ಕುದಿಸಿ ಮತ್ತು ಸ್ವಲ್ಪ ರಾತ್ರಿ ನೆನೆಸಿದ ಹೆಸರು ಬೇಳೆಯನ್ನು ಮತ್ತು ಕೆಲವು ಹೊಸದಾಗಿ ಬೀಟ್ರೂಟ್ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡಿ. ರುಚಿಯನ್ನು ಹೆಚ್ಚಿಸಲು ಕೆಲವು ಹನಿ ನಿಂಬೆ ಮತ್ತು ಚಾಟ್ ಮಸಾಲವನ್ನು ಸೇರಿಸಬಹುದು.

ಪಾಲಕ ಮತ್ತು ತರಕಾರಿ ಸಲಾಡ್ 

ತರಕಾರಿಗಳು ಆರೋಗ್ಯಕರ ಮತ್ತು ತೂಕ ಇಳಿಸಿಕೊಳ್ಳಲು ಸಹಾಯಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಪಾಲಕ್ ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ಕೂಡಿದೆ. ನೀವು ಟೊಮೆಟೊ, ಸೌತೆಕಾಯಿ, ಕ್ಯಾಪ್ಸಿಕಂ, ಎಲೆಕೋಸು, ಸ್ಪ್ರಿಂಗ್ ಈರುಳ್ಳಿ ಜೊತೆಗೆ ಆಲಿವ್ ಎಣ್ಣೆ, ಉಪ್ಪು ಮತ್ತು ಮೆಣಸು ಸೇರಿಸಿದರೆ ರುಚಿ ಹೆಚ್ಚಾಗುತ್ತದೆ. ಈ ಸಲಾಡ್ ಅನ್ನು ನಿಮ್ಮ ಸಂಜೆಯ ತಿಂಡಿಯಾಗಿ ಸೇವಿಸಬಹುದು.

ಸೇಬು, ಪಿಯರ್ ಮತ್ತು ಕಿತ್ತಳೆ ಸಲಾಡ್ 

ಇದನ್ನೂ ಓದಿ: ತೂಕ ಇಳಿಸಲು ವ್ಯಾಯಾಮ ಮಾಡ್ತೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಕಿತ್ತಳೆ ಮತ್ತು ಪೇರಳೆ ಚಳಿಗಾಲದ ಹಣ್ಣುಗಳು ಮತ್ತು ಸೇಬು ವರ್ಷವಿಡೀ ಲಭ್ಯವಿರುತ್ತದೆ. ಈ ಸಲಾಡ್ ರುಚಿಕರವಾಗಿದೆ ಮತ್ತು ತಯಾರಿಸಲು ಸುಲಭ ಎಂಬುದು ಮುಖ್ಯ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಅನ್ನು ಸಹ ದೇಹಕ್ಕೆ ಒದಗಿಸುತ್ತದೆ. ಈ ಸಲಾಡ್ ಮಾಡಲು, ಎಲ್ಲಾ ಹಣ್ಣುಗಳನ್ನು ಕತ್ತರಿಸಿ ಒಟ್ಟಿಗೆ ಮಿಶ್ರಣ ಮಾಡಿ. ನಿಂಬೆ ರಸ, ಉಪ್ಪು ಮತ್ತು ಮೆಣಸು ಸೇರಿಸಿ ಸೇವಿಸಿ.
Published by:Sandhya M
First published: