Breakfast Recipe: ಬೆಳಗ್ಗಿನ ಬ್ರೇಕ್ ಫಾಸ್ಟ್ ಫಟಾ ಪಟ್ ಅಂತಾ ಆಗ್ಬೇಕಾ? ಬರೀ ಎರಡೇ ನಿಮಿಷಲ್ಲಾಗುತ್ತೆ ಈ ರೆಸಿಪಿಗಳು

ನಿಮ್ಮ ಹೊಟ್ಟೆಯನ್ನು ತುಂಬಿಸಿ ಮತ್ತು ನೀವು ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಬೇಕು ಎಂದರೆ ಇಲ್ಲಿವೆ ನೋಡಿ ಕೆಲವು ತ್ವರಿತವಾಗಿ ಮಾಡಿಕೊಳ್ಳುವ ಉಪಹಾರಗಳು. ಇವುಗಳನ್ನು ನೀವೇ ಬರೀ ಎರಡು ನಿಮಿಷಗಳಲ್ಲಿಯೇ ಮಾಡಿಕೊಳ್ಳಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಳಿಗ್ಗೆ (Morning) ಎದ್ದ ತಕ್ಷಣ ಮಹಿಳೆಯರಿಗೆ (Women) ಕಾಡುವ ಒಂದು ದೊಡ್ಡ ಪ್ರಶ್ನೆ ಎಂದರೆ ‘ಏನಪ್ಪಾ ಇವತ್ತು ಉಪಾಹಾರ (Breakfast) ಮಾಡೋದು’ ಅಂತ. ರಾತ್ರಿಯೇ ದೋಸೆಗೊ ಅಥವಾ ಇಡ್ಲಿ ಮಾಡಲು ತಯಾರಿ ಮಾಡಿಕೊಂಡಿದ್ದರೆ ಕೊಂಚ ನಿರಾಳವಾಗಿರಬಹುದು. ಅದೇನು ಇಲ್ಲದೆ ಇದ್ದರೆ ತಕ್ಷಣಕ್ಕೆ ಮನೆಯವರಿಗೆ (Home) ಏನು ಉಪಾಹಾರ ಮಾಡಿ ಕೊಡುವುದು ಎಂಬುದೇ ಕೆಲವೊಮ್ಮೆ ದೊಡ್ಡ ಗೊಂದಲವಾಗಿ (Confusion) ಪರಿಣಮಿಸುತ್ತದೆ. ಏಕೆಂದರೆ ಮನೆಯವರಿಗೆಲ್ಲಾ ಇಷ್ಟವಾಗುವ ಉಪಹಾರವನ್ನು ಹುಡುಕಿ ಮಾಡಿಕೊಟ್ಟು ನಂತರ ಅವರು ಅದನ್ನು ತಿಂದು ಆಫೀಸಿಗೆ ಸರಿಯಾದ ಸಮಯಕ್ಕೆ (Time) ಹೋಗುವುದು ಒಂದು ಸಾಹಸದ ಕೆಲಸವೆ ಎಂದು ಹೇಳಬಹುದು.

ಈ ಬೆಳಿಗ್ಗೆಯ ಉಪಾಹಾರವನ್ನು ಬಿಟ್ಟು ಬಿಡುವಂತೆಯೂ ಇಲ್ಲ, ಏಕೆಂದರೆ ನಾವು ಮಾಡುವ ಉಪಾಹಾರ ನಮಗೆ ಉಳಿದ ದಿನಕ್ಕೆ ಬೇಕಾಗುವ ಶಕ್ತಿಯನ್ನು ಅದು ಒದಗಿಸುತ್ತದೆ. ಆದ್ದರಿಂದ, ದಿನವಿಡೀ ಚುರುಕಾಗಿರಲು ನಮಗೆ ನಿಜವಾಗಿಯೂ ಸ್ವಲ್ಪ ಶಕ್ತಿ ಮತ್ತು ಪೋಷಣೆಯ ಅಗತ್ಯವಿದೆ. ನಿಮ್ಮ ಹೊಟ್ಟೆಯನ್ನು ತುಂಬಿಸಿ ಮತ್ತು ನೀವು ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಬೇಕು ಎಂದರೆ ಇಲ್ಲಿವೆ ನೋಡಿ ಕೆಲವು ತ್ವರಿತವಾಗಿ ಮಾಡಿಕೊಳ್ಳುವ ಉಪಹಾರಗಳು. ಇವುಗಳನ್ನು ನೀವೇ ಬರೀ ಎರಡು ನಿಮಿಷಗಳಲ್ಲಿಯೇ ಮಾಡಿಕೊಳ್ಳಬಹುದು.

ಅವಸರದ ಬೆಳಗ್ಗಿನ ಉಪಾಹಾರಕ್ಕಾಗಿ 2 ನಿಮಿಷಗಳ ಉಪಾಹಾರ ಪಾಕವಿಧಾನಗಳು ಇಲ್ಲಿವೆ ನೋಡಿ:

1. ಮೊಟ್ಟೆಯ ಈ ಉಪಾಹಾರ ಮಾಡಿಕೊಳ್ಳಿರಿ
ಕೇವಲ ಎರಡು ನಿಮಿಷಗಳಲ್ಲಿಯೇ ಉಪಹಾರವನ್ನು ತಯಾರಿಸಿಕೊಳ್ಳಲು ನೀವು ಮೊಟ್ಟೆಯನ್ನು ತೆಗೆದುಕೊಂಡು ಬಾಣಲೆಯ ಮೇಲೆ ಒಡೆದು ಅದು ಕೆಳಗಡೆ ಬೇಯುತ್ತಿರುವಾಗ, ನಿಮ್ಮ ಬ್ರೆಡ್ ಅನ್ನು ಹೊರ ತೆಗೆಯಿರಿ ಮತ್ತು ಮೊಟ್ಟೆಯನ್ನು ಬ್ರೆಡ್ ಮೇಲೆ ಸ್ಲೈಡ್ ಮಾಡಿ, ನಿಮ್ಮ ಆಯ್ಕೆಯ ಮಸಾಲೆಗಳನ್ನು ಅದರ ಮೇಲೆ ಚಿಮುಕಿಸಿ ಮತ್ತು ಇದನ್ನು ಆನಂದಿಸಿರಿ.

ಇದನ್ನೂ ಓದಿ: Chicken Lababdar: ಚಿಕನ್ ಲಬಬ್ದರ್ ತಿಂದಿದ್ದೀರಾ? ಮನೆಯಲ್ಲಿ ಟ್ರೈ ಮಾಡಿ ನೋಡಿ

2. ಪೀನಟ್ ಬಟರ್ ಟೋಸ್ಟ್
ಪೀನಟ್ ಬಟರ್ ಕೇವಲ ಉತ್ತಮ ರುಚಿಯನ್ನು ನೀಡುವ ಇತರ ಸ್ಪ್ರೆಡ್ ಗಳಿಗಿಂತ ಭಿನ್ನವಾಗಿದೆ. ಪ್ರೋಟೀನ್ ಭರಿತ ಕಡಲೆಕಾಯಿಯಿಂದ ತಯಾರಿಸುವ ಈ ಸ್ಪ್ರೆಡ್ ನಿಮಗೆ ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳನ್ನು ನೀಡುತ್ತದೆ, ಅದು ನಿಮ್ಮ ಹೊಟ್ಟೆಯನ್ನು ದಿನವಿಡೀ ತುಂಬಿಸಿಡುತ್ತದೆ. ನೀವು ಮಾಡಬೇಕಾಗಿರುವುದು ಮನೆಯಲ್ಲಿ ತಯಾರಿಸಿದ ಅಥವಾ ಅಂಗಡಿಯಲ್ಲಿ ಖರೀದಿಸಿದ ಕಡಲೆಕಾಯಿ ಬೆಣ್ಣೆಯನ್ನು ಸಾದಾ ಮತ್ತು ಟೋಸ್ಟ್ ಮಾಡಿದ ಬ್ರೆಡ್ ಸ್ಲೈಸ್ ಗಳ ಮೇಲೆ ಹರಡುವುದು.

3. ಸಿರಿಧಾನ್ಯದ ಬಾಲ್
ಹಾಲು, ಹಣ್ಣುಗಳು, ಬೀಜಗಳು, ಸ್ವಲ್ಪ ಜೇನುತುಪ್ಪದೊಂದಿಗೆ ಏಕದಳ ಧಾನ್ಯಗಳನ್ನು (ಓಟ್ಸ್, ಕಾರ್ನ್ ಫ್ಲೇಕ್ಸ್, ಮ್ಯೂಸ್ಲಿ ಇತ್ಯಾದಿ) ಸಂಯೋಜಿಸುವ ಮೂಲಕ ನೀವು ನಿಮ್ಮ ತ್ವರಿತ ಮತ್ತು ಪೋಷಕಾಂಶಯುಕ್ತ ಉಪಹಾರವನ್ನು ಮುಗಿಸಬಹುದು. ಇದು ರುಚಿಕರ ಮತ್ತು ಸಂತೃಪ್ತಿದಾಯಕವೂ ಆಗಿರುತ್ತದೆ.

4. ಪನೀರ್ ಸ್ಯಾಂಡ್ವಿಚ್
ಇದು ಅಡುಗೆ ಮಾಡುವ ಯೋಚನೆ ಇಲ್ಲ, ಇದು ಕೇವಲ ಜೋಡಿಸುವುದು ಮಾತ್ರ. ಹೌದು.. ನಿಮ್ಮ ಬ್ರೆಡ್ ಸ್ಲೈಸ್ ಗಳ ಮೇಲೆ ಸ್ವಲ್ಪ ಹಸಿರು ಚಟ್ನಿಯನ್ನು ಹರಡಿ, ಕೆಲವು ಟೊಮೆಟೊ ಗಳನ್ನು ಕತ್ತರಿಸಿಕೊಂಡು ಇರಿಸಿ ಮತ್ತು ಪನ್ನೀರ್ ಸ್ಲೈಸ್ ಗಳನ್ನು ಇರಿಸಿ, ಅದನ್ನು ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ ಮತ್ತು ಚಾಟ್ ಮಸಾಲಾದೊಂದಿಗೆ ಸೀಸನ್ ಮಾಡಿ ಮತ್ತು ಈ ರುಚಿಕರವಾದ ಪನ್ನೀರ್ ಸ್ಯಾಂಡ್ವಿಚ್ ಅನ್ನು ತಿನ್ನಿರಿ.

ಇದನ್ನೂ ಓದಿ: Non-Veg Recipe: ರುಚಿಕರವಾದ ಮಂಗಳೂರು ಶೈಲಿಯ ಮೀನಿನ ಕರಿ

5. ಆವಕಾಡೊ ಟೋಸ್ಟ್
ಈ ಖಾದ್ಯವು ಭಾರತದಲ್ಲಿ ಬೆಳಗಿನ ಉಪಾಹಾರಕ್ಕೆ ಇನ್ನೂ ಸಾಮಾನ್ಯವಲ್ಲದಿರಬಹುದು ಆದರೆ ಇದನ್ನು ಸಹ ನೀವು ಟ್ರೈ ಮಾಡಬಹುದು. ಆರೋಗ್ಯಕರ ಮತ್ತು ರುಚಿಕರವಾದ ಉಪಾಹಾರವನ್ನು ನೀಡುವ ಈ ತ್ವರಿತ ಪಾಕವಿಧಾನವು ನಿಮ್ಮ ಉಪಾಹಾರ ಮೆನುವಿನಲ್ಲಿರಲು ಅರ್ಹವಾಗಿದೆ. ಆವಕಾಡೊವನ್ನು ಮ್ಯಾಶ್ ಮಾಡಿ ಮತ್ತು ಅದನ್ನು ನಿಮ್ಮ ಬ್ರೆಡ್ ನ ಮೇಲೆ ಲೇಪಿಸಿ. ನಿಮ್ಮ ಆಯ್ಕೆಯ ಚೀಸ್ ಮತ್ತು ಮಸಾಲೆಗಳೊಂದಿಗೆ ಅದನ್ನು ಅಲಂಕರಿಸಿಕೊಂಡು ತಿನ್ನಿರಿ.
Published by:Ashwini Prabhu
First published: