ಸಮಾಜದ (Society) ಉನ್ನತಿ ಹಾಗೂ ಪರಿಸರದ (Environment) ಸಮತೋಲನಕ್ಕೆ ಮರ ಗಿಡಗಳು (Trees) ಬೇಕು. ಮನುಷ್ಯನ (Human) ಅಸ್ತಿತ್ವಕ್ಕೆ ಸಸ್ಯಗಳು ಬಹಳ ಮುಖ್ಯವಾಗಿ ಬೇಕು. ಎಲ್ಲಿ ಹೆಚ್ಚು ಮರ ಗಿಡಗಳು ಇರುತ್ತವೆಯೋ, ಅಲ್ಲಿಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ. ಮತ್ತು ಆ ಪರಿಸರದಲ್ಲಿ ವಾಸಿಸುವ ಜನರು ಸಹ ಆರೋಗ್ಯವಂತರಾಗಿರುತ್ತಾರೆ. ಉತ್ತಮ ಪರಿಸರದಲ್ಲಿ ಜನರು ಆರೋಗ್ಯವಾಗಿ ಇರಲು ಕಾರಣ ಶುದ್ಧ ಮತ್ತು ಮಾಲಿನ್ಯ ಮುಕ್ತ ಗಾಳಿ. ಆದರೆ ಇತ್ತೀಚಿನ ದಿನಗಳಲ್ಲಿ ಗಿಡ ಮರಗಳನ್ನು ನಾಶ ಮಾಡಿ, ಆಕಾಶದೆತ್ತರಕ್ಕೆ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು, ಮನುಷ್ಯ ಸಂಕುಲವನ್ನು ಹಲವು ಕಾಯಿಲೆಗಳಿಗೆ ತುತ್ತಾಗುವಂತೆ ಮಾಡಿದೆ. ಈ ನಡುವೆ ಸಸ್ಯ ಸಂಕುಲದ ಅಸ್ತಿತ್ವ ಕುಗ್ಗುತ್ತಿದೆ.
ಪರಿಸರದ ನಾಶದಿಂದ ಕಾಯಿಲೆಗಳ ಉತ್ಪತ್ತಿ
ಜರ್ನಲ್ ಎನ್ವಿರಾನ್ಮೆಂಟಲ್ ರಿಸರ್ಚ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಲುಷಿತ ಗಾಳಿಯಿಂದ ವಿಶ್ವದ ಐದು ಜನರಲ್ಲಿ ಒಬ್ಬರು ಸಾವನ್ನಪ್ಪುತ್ತಾರೆ.
ಕೆಲವು ಸಸ್ಯಗಳನ್ನು ಔಷಧಗಳಲ್ಲಿ ಬಳಕೆ ಮಾಡಲಾಗುತ್ತದೆ. ಅಂತಹ ಮರ ಮತ್ತು ಗಿಡಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರದ್ದೂ ಆಗಿದೆ. ಇಂದು ನಾವು ಇಲ್ಲಿ ಅಂತಹ ಕೆಲವು ಪ್ರಮುಖ ಸಸ್ಯಗಳ ಬಗ್ಗೆ ತಿಳಿಯೋಣ. ಅವು ನಿಮ್ಮ ಸುತ್ತಲಿನ ಗಾಳಿಯನ್ನು ಶುದ್ಧೀಕರಿಸುವುದಿಲ್ಲ. ಆದರೆ ಮಾರಣಾಂತಿಕ ಕಾಯಿಲೆಯಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುತ್ತವೆ.
ಇದನ್ನೂ ಓದಿ: ನೀವು ಪ್ರತಿದಿನ ಅನುಭವಿಸುವ ನೋವು, ಸಂತೋಷಕ್ಕೆ ದೇಹದಲ್ಲುಂಟಾಗುವ ಇದೇ ಕಾರಣ!
ಬೇವು
ಬೇವು ರುಚಿಯಲ್ಲಿ ಕಹಿ. ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ವಾತಾವರಣವನ್ನು ಶುದ್ಧವಾಗಿಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್, ಆಂಟಿಆಕ್ಸಿಡೆಂಟ್ ಮತ್ತು ಆಂಟಿವೈರಲ್ ಗುಣ ಹೊಂದಿದೆ. ಅಧಿಕ ಬಿಪಿ, ಅಲ್ಸರ್, ಅಸ್ತಮಾ, ಉಸಿರಾಟದ ಕಾಯಿಲೆಗಳು ಮತ್ತು ಮಧುಮೇಹ ಸಮಸ್ಯೆ ನಿಯಂತ್ರಿಸಲು ಕೆಲಸ ಮಾಡುತ್ತದೆ.
ತುಳಸಿ
ತುಳಸಿ ಗಿಡ ಹಿಂದೂಗಳಿಗೆ ಧಾರ್ಮಿಕವಾಗಿ ಬಹಳ ಮುಖ್ಯ. ಇದು ಆಂಟಿಸ್ಟ್ರೆಸ್, ಇಮ್ಯುನೊಮಾಡ್ಯುಲೇಟರಿ, ಆಂಟಿಮೈಕ್ರೊಬಿಯಲ್, ಕಾರ್ಡಿಯೋಪ್ರೊಟೆಕ್ಟಿವ್, ರೇಡಿಯೊಪ್ರೊಟೆಕ್ಟಿವ್ ಮುಂತಾದ ಹಲವಾರು ಔಷಧೀಯ ಗುಣ ಹೊಂದಿದೆ. ಸಾಮಾನ್ಯ ಕೆಮ್ಮಿನಿಂದ ದೇಹದಲ್ಲಿ ಕ್ಯಾನ್ಸರ್ ಗೆಡ್ಡೆಯ ಕೋಶಗಳಿಂದ ರಕ್ಷಿಸುತ್ತದೆ. ಕೀಟಗಳನ್ನು ದೂರವಿಡುತ್ತದೆ. 2009 ರ ಅಧ್ಯಯನವು ಸೊಳ್ಳೆ ಲಾರ್ವಾಗಳಿಗೆ ತುಳಸಿ ಎಣ್ಣೆಯು ವಿಷದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ತೋರಿಸಿದೆ.
ಆಲಿವ್
ಆಲಿವ್ ಹಲವು ರೋಗಗಳನ್ನು ತಡೆಯುವ ಗುಣ ಹೊಂದಿವೆ. ಔಷಧೀಯ ಗುಣಗಳ ಉಗ್ರಾಣವಾಗಿದೆ. ಹೈಡ್ರಾಕ್ಸಿಟೈರೋಸೋಲ್ ಎಂಬ ಅಂಶವನ್ನು ಹೊಂದಿದೆ. ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಹಾನಿಕಾರಕ ಕೊಲೆಸ್ಟ್ರಾಲ್ ಮಟ್ಟಗಳೊಂದಿಗೆ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡದಿಂದ ಉಂಟಾಗುವ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಕ್ಯಾನ್ಸರ್, ಹೃದ್ರೋಗ, ಮಧುಮೇಹ, ಪಾರ್ಕಿನ್ಸನ್, ಅಲ್ಝೈಮರ್ಸ್ ಮತ್ತು ಕಣ್ಣಿನ ಪೊರೆ ಅಪಾಯ ಕಡಿಮೆ ಮಾಡುತ್ತದೆ.
ಅರಿಶಿನ
ಅರಿಶಿನದ ಔಷಧೀಯ ಗುಣಗಳು ಉರಿಯೂತದ, ಉತ್ಕರ್ಷಣ ನಿರೋಧಕ, ಆಂಟಿಟ್ಯೂಮರ್, ನಂಜುನಿರೋಧಕ, ಆಂಟಿವೈರಲ್, ಕಾರ್ಡಿಯೋಪ್ರೊಟೆಕ್ಟಿವ್, ಹೆಪಟೊಪ್ರೊಟೆಕ್ಟಿವ್ ಮತ್ತು ನೆಫ್ರೋಪ್ರೊಟೆಕ್ಟಿವ್ ಗುಣಲಕ್ಷಣ ಒಳಗೊಂಡಿವೆ. ಇದು ಯಕೃತ್ತು, ಹೃದಯ ಮತ್ತು ಮೂತ್ರಪಿಂಡ, ಕ್ಯಾನ್ಸರ್ ವಿರೋಧಿ ಗುಣ, ಪ್ರಾಸ್ಟೇಟ್, ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯದಿಂದ ರಕ್ಷಿಸುತ್ತದೆ.
ರೋಸ್ಮರಿ
ರೋಸ್ಮರಿಯ ಔಷಧೀಯ ಎಣ್ಣೆಯಲ್ಲಿ ಫ್ಲೇವೊನೈಡ್ಗಳು, ಡೈಟರ್ಪೀನ್ಗಳು, ಪಾಲಿಫಿನಾಲ್ಗಳು ಮತ್ತು ಇತರ ಅನೇಕ ಪರಿಣಾಮಕಾರಿ ಅಂಶಗಳನ್ನು ಹೊಂದಿದೆ. ಇದು ದೇಹದ ದುರ್ವಾಸನೆ, ಕೀಲು ನೋವು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಜೊತೆಗೆ ಲಿವರ್ ಡಿಟಾಕ್ಸ್ ಮಾಡುತ್ತದೆ. ರೋಸ್ಮರಿನಿಕ್ ಆಮ್ಲವು ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ತಡೆಯುತ್ತದೆ.
ಇದನ್ನೂ ಓದಿ: ನಿಮ್ಮ ಜ್ಞಾಪಕಶಕ್ತಿ ಹೆಚ್ಚಿಸಲು ಮತ್ತು ಹೃದಯದ ಆರೋಗ್ಯ ಸುಧಾರಿಸಲು ಈ ಹಣ್ಣು ಸೇವಿಸಿ!
ನಿಂಬೆ ಹುಲ್ಲು
ಇದು ನಿಂಬೆಯಂತಹ ಪರಿಮಳ ಹೊಂದಿರುವ ಒಂದು ರೀತಿಯ ಹುಲ್ಲು. ಇದನ್ನು ಶುಂಠಿ ಚಹಾದಲ್ಲಿ ಬಳಸುತ್ತಾರೆ. ಹಲವು ಔಷಧೀಯ ಗುಣ ಹೊಂದಿದೆ. ಇದು ಬ್ಯಾಕ್ಟೀರಿಯಾ ಸೋಂಕು, ಉರಿಯೂತ, ಶಿಲೀಂಧ್ರ ನಿವಾರಿಸುವ ಗುಣ ಹೊಂದಿದೆ. ಕೊಲೆಸ್ಟ್ರಾಲ್, ಮೂತ್ರಪಿಂಡ ಕಾಯಿಲೆ, ಕ್ಯಾನ್ಸರ್, ಬೊಜ್ಜು ಸಮಸ್ಯೆ ನಿವಾರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ