Travel Tips: ಫ್ರೆಂಡ್​ ಮದುವೆ ಫಿಕ್ಸ್ ಆಯ್ತಾ? ಹಾಗಾದ್ರೆ Bachelorette Party ಮಾಡಲು ಈ ಸ್ಥಳಗಳಿಗೆ ಟ್ರಿಪ್ ಹೋಗಿ

Best Place For Bachelorette Bash: ನಮ್ಮ ದೇಶದಲ್ಲಿ ಮಜವಾಗಿ ಪಾರ್ಟಿ ಮಾಡಿಕೊಂಡು , ಸುಂದರ ಸಮಯಗಳನ್ನು ಕಳೆಯಬಹುದಾದಂತಹ ಅತ್ಯುತ್ತಮ ಪ್ರವಾಸಿ ತಾಣಗಳು ಇವೆ. ನೀವೆಲ್ಲಾ ಗೆಳತಿಯರು ಒಟ್ಟು ಸೇರಿ ಮದುವೆಯಾಗುತ್ತಿರುವ ಸ್ನೇಹಿತೆಯ ಜೊತೆ ಪ್ರವಾಸಕ್ಕೆ ಹೋಗಬಲ್ಲ, ಕೆಲವು ತಾಣಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಆತ್ಮೀಯ ಸ್ನೇಹಿತೆ(Friend) ಈ ವರ್ಷ ಮದುವೆ(Wedding) ಆಗುತ್ತಿದ್ದಾಳೆಯೇ? ಹಾಗಾದರೆ, ಒಬ್ಬ ಒಳ್ಳೆಯ ಸ್ನೇಹಿತೆಯಾಗಿ ನೀವು ನಿಮ್ಮ ಕರ್ತವ್ಯವನ್ನು ಮಾಡಲೇಬೇಕು! ಅದೇನು ಅಂತೀರಾ? ಆಕೆಗೆ ಜೀವನಪೂರ್ತಿ ನೆನಪಿರುವಂತಹ ಒಂದು ಮಜವಾದ ಪ್ರವಾಸವನ್ನು ಆಯೋಜಿಸಿ. ಜೀವನಪೂರ್ತಿ ನೆನಪಿರುವಂತಹ ಒಂದೊಳ್ಳೆಯ ಪ್ರವಾಸ ಎಂದಾಕ್ಷಣದ, ಓಹ್, ಹಾಗಾದರೆ ಹೊರ ದೇಶಕ್ಕೆ ಪ್ರವಾಸ ಹೋಗಬೇಕಷ್ಟೆ ಎಂದು ಭಾವಿಸಿಕೊಳ್ಳಬೇಡಿ. ನಮ್ಮ ದೇಶದಲ್ಲಿ ಮಜವಾಗಿ ಪಾರ್ಟಿ ಮಾಡಿಕೊಂಡು , ಸುಂದರ ಸಮಯಗಳನ್ನು ಕಳೆಯಬಹುದಾದಂತಹ ಅತ್ಯುತ್ತಮ ಪ್ರವಾಸಿ ತಾಣಗಳು ಇವೆ. ನೀವೆಲ್ಲಾ ಗೆಳತಿಯರು ಒಟ್ಟು ಸೇರಿ ಮದುವೆಯಾಗುತ್ತಿರುವ ಸ್ನೇಹಿತೆಯ ಜೊತೆ ಪ್ರವಾಸಕ್ಕೆ ಹೋಗಬಲ್ಲ, ಕೆಲವು ತಾಣಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ನಾಸಿಕ್‍ನ ಸೊಗಸಾದ ದ್ರಾಕ್ಷಿ ತೋಟಗಳು
ಭಾವಿ ವಧುವಾಗಿರುವ ನಿಮ್ಮ ಸ್ನೇಹಿತೆ ಪಾರ್ಟಿ ಮಾಡುವುದರ ಜೊತೆಗೆ ಕೊಂಚ ವಿಶ್ರಾಂತಿಯನ್ನು ಪಡೆಯಲು ಇಚ್ಚಿಸುತ್ತಾರೆ ಎಂದಾದದಲ್ಲಿ, ನಾಸಿಕ್‍ನಲ್ಲಿರುವ ಸುಲಾ ವೈನ್‍ಯಾಡ್ರ್ಸ್ ಅಂತಹ ಪ್ರವಾಸಕ್ಕೆ ಹೇಳಿದ ಮಾಡಿಸಿದ ಸ್ಥಳ. ನೀವು ಉಳಿದುಕೊಳ್ಳಲು ಅಲ್ಲಿ ಕೋಣೆಗಳಿವೆ ಮತ್ತು ತರಾವರಿ ಖಾದ್ಯಗಳ ರಸದೌತಣ ನೀಡುವ ರೆಸ್ಟೊರೆಂಟ್ ಕೂಡ ಇದೆ. ನೀಲಿ ಬಿಸಿಲಿನ ಆಕಾಶ, ಹಸಿರು ದ್ರಾಕ್ಷಿ ತೋಟ ಮತ್ತು ಸುಂದರ ಹೂವಿನ ಹಾಸಿಗೆಗಳು. ನಿಮ್ಮ ಇನ್‍ಸ್ಟಾ ಫೋಟೋಗಳಿಗೆ ಸುಂದರ ಹಿನ್ನೆಲೆಯನ್ನು ಒದಗಿಸುವುದಂತೂ ಖಂಡಿತಾ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮ್ಮೋಹಕ ಮತ್ಸ್ಯ ಕನ್ಯೆಯರು
ನೀವು ಮತ್ತು ಭಾವಿ ವಧುವಾಗಿರುವ ನಿಮ್ಮ ಆತ್ಮೀಯ ಸ್ನೇಹಿತೆ ಇಬ್ಬರೂ ಸಾಗರವನ್ನು ಇಷ್ಟ ಪಡುವವರಾಗಿದ್ದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅತ್ಯುತ್ತಮ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ದ್ವೀಪಗಳು ಬಹಳ ಸುಂದರವಾಗಿದ್ದು, ಅಲ್ಲಿನ ಸ್ವಚ್ಚ ಕಡಲ ತೀರಗಳು ನೀವು ದಿನವಿಡೀ ಅಲ್ಲಿಯೇ ಸಮಯ ಕಳೆಯಲು ಬಯಸುವುದು ಖಚಿತ. ಆದರೆ, ಅಲ್ಲಿ ಲಭ್ಯವಿರುವ ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್ ಮತ್ತಿತರ ವಿಭಿನ್ನ ರೀತಿಯ ಜಲ ಕ್ರೀಡೆಗಳನ್ನು ಪ್ರಯತ್ನಿಸದೆ ಇರಬೇಡಿ.

ಇದನ್ನೂ ಓದಿ: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

ಋಷಿಕೇಶದಲ್ಲಿ ಸಾಹಸ
ನಿಮ್ಮ ಸ್ನೇಹಿತೆ ಜಂಕಿಯೆ? ಹಾಗಾದರೆ ಋಷಿಕೇಶಕ್ಕೆ ಪ್ರವಾಸ ಕೈಗೊಳ್ಳಿ. ಅಲ್ಲಿ ನೀವು ಅನೇಕ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಬಹುದು. ಅದು ಖಂಡಿತವಾಗಿಯೂ ಮೈ ಜುಮ್ಮೆನಿಸುವ ಸಾಹಸದ ಅನೂಭೂತಿಯನ್ನು ನೀಡುತ್ತದೆ. ಎಫರ್ ರ್ಯಾಫ್ಟಿಂಗ್, ಟ್ರೆಕ್ಕಿಂಗ್‍ನಿಂದ ಜಿಪ್‍ಲೈನಿಂಗ್ ವರಗೆ ಎಲ್ಲಾ ಅನೇಕ ರೀತಿಯ ಸಾಹಸ ಕ್ರೀಡೆಗಳನ್ನು ಪ್ರಯತ್ನಿಸಿ.

ಉದಯಪುರ , ರಾಜಸ್ಥಾನದ ರಾಜವೈಭವ
ನಿಮ್ಮ ಆತ್ಮೀಯ ಸ್ನೇಹಿತೆಗೆ ರಾಜಕುಮಾರಿಯಂತೆ ಉಪಚರಿಸಿಕೊಳ್ಳಬೇಕೆಂಬ ಬಯಕೆಯಿದ್ದರೆ, ಅರಮನೆಯಿಂದ ಹೊಟೇಲ್‍ಗಳಾಗಿ ಪರಿವರ್ತಿಸಲ್ಪಟ್ಟಿರುವ ಸ್ಥಳಗಳಲ್ಲಿ ಕಾಲ ಕಳೆಯಬಹುದು. ಈ ನಗರದಲ್ಲಿ ಶಾಪಿಂಗ್‍ಗೆ ಸಾಕಷ್ಟು ಆಯ್ಕೆಗಳಿವೆ, ಹಾಗಾಗಿ ಖುಷಿಯಾಗಿ ಕಾಲ ಕಳೆಯಲು ಯಾವುದೇ ಅಡ್ಡಿ ಇಲ್ಲ.

ಪುದುಚೇರಿಯ ಇತಿಹಾಸ - ಸಂಸ್ಕೃತಿ

ಇದನ್ನೂ ಓದಿ: ಸಾಕುಪ್ರಾಣಿಗಳ ಆರೈಕೆಯಲ್ಲಿ ಕೊನೆಯ ಸ್ಥಾನದಲ್ಲಿ ಭಾರತ- ಅಗ್ರ ಸ್ಥಾನದಲ್ಲಿ ಜರ್ಮನಿ

ಭಾವಿ ವಧುವಾಗಿರುವ ನಿಮ್ಮ ಆತ್ಮೀಯ ಸ್ನೇಹಿತೆಗೆ ಇತಿಹಾಸ ಮತ್ತು ಸಂಸ್ಕøತಿಯ ಬಗ್ಗೆ ಆಸಕ್ತಿ ಇದ್ದರೆ, ಪ್ರವಾಸ ಹೋಗಲು ಪುದುಚೇರಿಗಿಂತ ಅತ್ಯುತ್ತಮ ಸ್ಥಳ ಇನ್ನೊಂದಿಲ್ಲ. ಮರಗಳಿಂದ ಆವೃತವಾಗಿರುವ ಹಾದಿಗಳು ಮತ್ತು ಕಾಲು ಹಾದಿಗಳು, ಚರ್ಚುಗಳು ಮತ್ತು ಚರ್ಚುಗಳು ನಿಮ್ಮ ಕಣ್ಣಿಗೆ ಹಬ್ಬ ನೀಡುವುದು ಮಾತ್ರವಲ್ಲ, ನೀವು ಅಲ್ಲಿಂದ ಮರಳುವಾಗ ಖಂಡಿತವಾಗಿಯೂ ಸುಂದರ ಫೋಟೋಗಳು ಮತ್ತು ಮಧುರ ನೆನಪುಗಳೊಂದಿಗೆ ಮರಳುತ್ತೀರಿ.
First published: