• Home
  • »
  • News
  • »
  • lifestyle
  • »
  • Pigmentation Problem: ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ತೊಡೆದು ಹಾಕಲು ಈ ತೈಲಗಳು ಸಹಕಾರಿ!

Pigmentation Problem: ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ತೊಡೆದು ಹಾಕಲು ಈ ತೈಲಗಳು ಸಹಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೈಪರ್ ಪಿಗ್ಮೆಂಟೇಶನ್ ಕೂಡ ಒಂದು ತ್ವಚೆಯ ಸಮಸ್ಯೆ ಆಗಿದೆ. ಸಮಯಕ್ಕೆ ಸರಿಯಾಗಿ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆಗೆ ಚಿಕಿತ್ಸೆ ನೀಡದಿದ್ದರೆ ಅದು ನಿಮ್ಮ ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ. ಆದರೆ ಕಾಡುವ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ನಿವಾರಿಸಲು ಮನೆಮದ್ದು ಹೀಗಿದೆ.

  • Share this:

    ಚಳಿಗಾಲದಲ್ಲಿ (Winter) ತ್ವಚೆಯ ಆರೈಕೆ (Skin Care) ಮಾಡುವುದು ಸವಾಲಿನ ಕೆಲಸವೇ ಸರಿ. ಯಾಕಂದ್ರೆ ಯಾವ ರೀತಿ ಯಾವ ಉತ್ಪನ್ನಗಳನ್ನು (Products) ತ್ವಚೆಯ ಆರೈಕೆಗೆ ಬಳಕೆ ಮಾಡ್ಬೇಕು ಎಂಬುದು ಗೊತ್ತಾಗಲ್ಲ. ಯಾವುದೇ ತ್ವಚೆಯ ಉತ್ಪನ್ನ ಬಳಸಿದ್ರೂ ತ್ವಚೆಯ ಸಮಸ್ಯೆ ಮಾತ್ರ ಕಡಿಮೆ ಆಗಲ್ಲ. ಗುಳ್ಳೆ, ಕಲೆ, ತ್ವಚೆ ಬಿರಿಯುವುದು ಹೀಗೆ ಹಲವು ಸಮಸ್ಯೆ ಕಾಡುತ್ತವೆ. ಹೈಪರ್ ಪಿಗ್ಮೆಂಟೇಶನ್ ಕೂಡ ಒಂದು ತ್ವಚೆಯ ಸಮಸ್ಯೆ ಆಗಿದೆ. ಸಮಯಕ್ಕೆ ಸರಿಯಾಗಿ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆಗೆ ಚಿಕಿತ್ಸೆ ನೀಡದಿದ್ದರೆ ಅದು ನಿಮ್ಮ ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ. ಆದರೆ ಕಾಡುವ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆಯನ್ನು ಶಾಶ್ವತವಾಗಿ ತೆಗೆದು ಹಾಕಬಹುದು.


    ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ತೊಡೆದು ಹಾಕುವುದು ಹೇಗೆ?


    ಅನೇಕ ಜನರು ಮುಖದ ಮೇಲಿನ ಕಲೆ, ನಸುಕಂದು ಮಚ್ಚೆ ಸಮಸ್ಯೆಯಿಂದ ಹೈರಾಣಾಗಿರುತ್ತಾರೆ. ಅದನ್ನು ಶಾಶ್ವತವಾಗಿ ತೊಡೆದು ಹಾಕಲು ಸರಿಯಾದ ಮಾರ್ಗ ಕಾಣದೇ, ಅತೃಪ್ತರಾಗಿದ್ದಾರೆ. ಹಾಗಾದ್ರೆ ಇಂತಹ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ನಿವಾರಣೆಗೆ ಮನೆಮದ್ದು ಯಾವುದು ಅಂತಾ ನೋಡೋಣ.


    ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಪುರುಷರು ಮತ್ತು ಮಹಿಳೆಯರು ಎದುರಿಸುತ್ತಿರುವ ತ್ವಚೆಯ ಸಮಸ್ಯೆಯಾಗಿದೆ. ಇದು ಚರ್ಮವನ್ನು ಕಪ್ಪಾಗಿಸುತ್ತದೆ. ಮೆಲನಿನ್, ಸೂರ್ಯನ ಕಿರಣಗಳು, ಅನುವಂಶಿಕತೆ, ಹಾರ್ಮೋನು ಬದಲಾವಣೆ, ವಯಸ್ಸು, ಚರ್ಮದ ಗಾಯ, ಮೊಡವೆ, ಗರ್ಭಧಾರಣೆ, ಔಷಧ ಸೇವನೆ, ಚರ್ಮದ ಉರಿಯೂತ ಸೇರಿದಂತೆ ಹಲವು ಕಾರಣಗಳಿಂದ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಉಂಟಾಗುತ್ತದೆ.




    ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಸಾಮಾನ್ಯವಾಗಿ ಮುಖದ ಮೇಲೆ ಸಂಭವಿಸುತ್ತದೆ. ದೇಹದ ಇತರೆ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ಮಚ್ಚೆ, ಕಲೆ, ಮೆಲಸ್ಮಾ ಉಂಟಾಗುತ್ತದೆ.


    ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ತೊಡೆದು ಹಾಕಲು ತೈಲ


    ನೆರೋಲಿ ಅಥವಾ ಸಿಹಿ ಕಿತ್ತಳೆ ಎಣ್ಣೆ


    ನೆರೋಲಿ ಅಥವಾ ಸಿಹಿ ಕಿತ್ತಳೆ ಎಣ್ಣೆ ಸಿಟ್ರಸ್-ಆಧಾರಿತ ಎಣ್ಣೆ ಆಗಿದೆ. ಇದು ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಹಗುರಗೊಳಿಸುತ್ತದೆ. ವಿಟಮಿನ್ ಸಿ ಹೀರಿಕೊಳ್ಳುವಲ್ಲಿ ಚರ್ಮಕ್ಕೆ ಸಹಕಾರಿ. ವಿಟಮಿನ್ ಸುಕ್ಕು, ಕಪ್ಪು ವಲಯ, ವಯಸ್ಸಾದ ಚಿಹ್ನೆ, ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ.


    ಸಾಂದರ್ಭಿಕ ಚಿತ್ರ


    ಶ್ರೀಗಂಧದ ಎಣ್ಣೆ


    ಶ್ರೀಗಂಧದ ತೈಲವು ತ್ವಚೆಗೆ ಹಿತವಾದ ಮತ್ತು ಪೋಷಣೆ ನೀಡುತ್ತದೆ. ಮುಖದ ಮೊಡವೆ ಕಲೆ ಸರಿಪಡಿಸುತ್ತದೆ. ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡುವ ನಂಜು ನಿರೋಧಕವಾಗಿ ಕೆಲಸ ಮಾಡುತತ್ದೆ. ಆಂಟಿಫಂಗಲ್ ಮತ್ತು ಉರಿಯೂತದ ಗುಣಲಕ್ಷಣಗಳು ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ನಿವಾರಿಸಲ ಸಹಕಾರಿ ಆಗಿದೆ.


    ಜೆರೇನಿಯಂ ಎಣ್ಣೆ


    ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಕಡಿಮೆ ಮಾಡಲು ಜೆರೇನಿಯಂ ಎಣ್ಣೆಯು ಸಹಾಯ ಮಾಡುತ್ತದೆ. ಜೆರೇನಿಯಂ ಎಣ್ಣೆ ಮೊಡವೆ, ಕಲೆ ಹೋಗಲಾಡಿಸಲು ಸಹಕಾರಿ. ಇದು ನೈಸರ್ಗಿಕ ಸಂಕೋಚಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶ ಹೊಂದಿದೆ. ಉರಿಯೂತ ಕಡಿಮೆ ಮಾಡಿ,


    ಚರ್ಮದ ವಿನ್ಯಾಸ ಸುಧಾರಿಸುತ್ತದೆ. ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಕಾರಿ. ಜೊತೆಗೆ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಕಡಿಮೆ ಮಾಡಲು, ತ್ವಚೆಯ ಆರೈಕೆಗೆ ಸಹಕಾರಿ ಆಗಿದೆ.


    ಕ್ಯಾರೆಟ್ ಬೀಜದ ಎಣ್ಣೆ


    ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಕಡಿಮೆ ಮಾಡಲು ಕ್ಯಾರೆಟ್ ಬೀಜದ ಎಣ್ಣೆ ಸಹಕಾರಿ ಆಗಿದೆ. ಕ್ಯಾರೆಟ್ ಬೀಜದ ಎಣ್ಣೆಯು ತ್ವಚೆಯ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿಯಾಗಿದೆ. ಹಾಗೂ ಚರ್ಮವನ್ನು ಹಗುರಗೊಳಿಸುತ್ತದೆ. ಕ್ಯಾರೆಟ್ ಬೀಜದ ಎಣ್ಣೆಯು ಬೀಟಾ-ಕ್ಯಾರೋಟಿನ್‌ ಹೊಂದಿದೆ. ಇದು ಯುವಿ ಕಿರಣಗಳಿಂದ ಉಂಟಾಗುವ ಹಾನಿಯಿಂದ ರಕ್ಷಣೆ ನೀಡುತ್ತದೆ. ಸನ್‌ಸ್ಕ್ರೀನ್‌ಗಳಲ್ಲಿ ಹೆಚ್ಚು ಬಳಸಲಾಗುತ್ತದೆ.


    ಇದನ್ನೂ ಓದಿ: ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಕಡಿಮೆ ಮಾಡಲು ಯಾವ ಭಂಗಿಯಲ್ಲಿ ಮಲಗಬೇಕು?


    ನಿಂಬೆ ಎಣ್ಣೆ


    ಹೈಪರ್ ಪಿಗ್ಮೆಂಟೇಶನ್ ಕಲೆ ಸಮಸ್ಯೆ ನಿವಾರಿಸಲು ನಿಂಬೆ ಎಣ್ಣೆ ಸಹಾಯ ಮಾಡುತ್ತದೆ. ಚರ್ಮದ ಮೇಲಿನ ಕಪ್ಪು ಕಲೆ ತೆಗೆದು ಹಾಕುತ್ತದೆ. ನಿಂಬೆ ಎಣ್ಣೆಯು ಚರ್ಮದ ಟೋನ್ ಅನ್ನು ಹಗುರಗೊಳಿಸುತ್ತದೆ.

    Published by:renukadariyannavar
    First published: