Health Tips: ಶುಗರ್​ ಸಮಸ್ಯೆಗೆ ಹೆದರದಿರಿ, ಈ ನೈಸರ್ಗಿಕ ಮನೆಮದ್ದುಗಳಿಂದ ಡಯಾಬಿಟಿಸ್​ ಮಾಯ!

ಅಧಿಕ ರಕ್ತದ ಸಕ್ಕರೆಯನ್ನು ಹೈಪರ್ಗ್ಲೈಸೀಮಿಯಾ ಎಂದೂ ಕರೆಯುತ್ತಾರೆ, ಇದು ಮಧುಮೇಹ ಮತ್ತು ಪ್ರಿಡಿಯಾಬಿಟಿಸ್‌ಗೆ ಸಂಬಂಧಿಸಿದೆ. ಪ್ರಿಡಯಾಬಿಟಿಸ್ ಎಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆಯು ಅಧಿಕವಾಗಿರುತ್ತದೆ. ಈ ಕಾಯಿಲೆಗೆ ನೈಸರ್ಗಿಕ ಚಿಕಿತ್ಸೆಯಿಂದ ಗುಣ ಪಡಿಸಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮ ದೇಹದಲ್ಲಿನ ಸಕ್ಕರೆ (Sugar) ಅಂಶವು ಏನೆಲ್ಲಾ ಸಮಸ್ಯೆಗಳನ್ನು ತರುತ್ತದೆ ಎಂದು ಸಕ್ಕರೆ ಕಾಯಿಲೆ ಇರುವವರನ್ನು ಒಂದು ಸಲ ಕೇಳಿ ನೋಡಿ. ಈ ಸಕ್ಕರೆ ಕಾಯಿಲೆಯಿಂದ ಅವರು ಅನುಭವಿಸುತ್ತಿರುವ ಯಾತನೆ ಅಷ್ಟಿಷ್ಟಲ್ಲ. ಆದರೆ ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣ ಮಾಡಕ್ಕೆ ಆಗದೇ ಇದ್ದರೂ ನಮ್ಮ ಜೀವನಶೈಲಿಯನ್ನು (Lifestyle) ಸ್ವಲ್ಪ ಬದಲಾವಣೆ ಮಾಡಿಕೊಂಡರೆ ದೇಹದಲ್ಲಿನ ಸಕ್ಕರೆ ಅಂಶವು ಬಹಳಷ್ಟು ಕಡಿಮೆ ಆಗಿ ಸಕ್ಕರೆ ಕಾಯಿಲೆಯ ಪ್ರಮಾಣ ಕಡಿಮೆ ಆಗುತ್ತದೆ. ಈ ಸಕ್ಕರೆ ಕಾಯಿಲೆಗೆ ಮುಖ್ಯವಾಗಿ ಕಾರಣವಾಗುವುದು ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಅಂಶ. ಇದಕ್ಕೆ ಸಾಮಾನ್ಯವಾಗಿ ಇಂದು ಡಯಾಬಿಟಿಸ್ (Diabetes) ಕಾಯಿಲೆ ಎಂದು ಕರೆಯುತ್ತಾರೆ. ಈ ಡಯಾಬಿಟಿಸ್ ಗೆ ಮನೆಯಲ್ಲಿ ತಯಾರು ಆಗುವ ನೈಸರ್ಗಿಕ ಚಿಕಿತ್ಸೆಯಿಂದ (Natural treatment) ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬಹುದು.

ಅಧಿಕ ರಕ್ತದ ಸಕ್ಕರೆಯನ್ನು ಹೈಪರ್ಗ್ಲೈಸೀಮಿಯಾ ಎಂದೂ ಕರೆಯುತ್ತಾರೆ, ಇದು ಮಧುಮೇಹ ಮತ್ತು ಪ್ರಿಡಿಯಾಬಿಟಿಸ್‌ಗೆ ಸಂಬಂಧಿಸಿದೆ. ಪ್ರಿಡಯಾಬಿಟಿಸ್ ಎಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆಯು ಅಧಿಕವಾಗಿರುತ್ತದೆ. ಈ ಕಾಯಿಲೆಗೆ ನೈಸರ್ಗಿಕ ಚಿಕಿತ್ಸೆಯಿಂದ ಗುಣ ಪಡಿಸಬಹುದು.

ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುವ ನೈಸರ್ಗಿಕ ಮನೆಮದ್ದುಗಳು ಇಲ್ಲಿವೆ:

 1) ಪ್ರತಿದಿನ ವ್ಯಾಯಾಮ ಮಾಡಿ: 

ನಿಯಮಿತ ವ್ಯಾಯಾಮವು ತೂಕವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಮತ್ತು ಇನ್ಸುಲಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2) ನಿಮ್ಮ ಕಾರ್ಬೋಹೈಡ್ರೇಟ್ ಸೇವನೆ ಕಡೆ ಗಮನ ಹರಿಸಿ: 

ನಿಮ್ಮ ಕಾರ್ಬೊಹೈಡ್ರೆಟ್‌ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕಾರ್ಯ ನಿರ್ವಹಿಸುತ್ತದೆ. ನಿಮ್ಮ ದೇಹವು ಕಾರ್ಬೋಹೈಡ್ರೇಟ್‌ಗಳನ್ನು ಸಕ್ಕರೆಗಳಾಗಿ ವಿಭಜಿಸುತ್ತದೆ. ಮುಖ್ಯವಾಗಿ ಗ್ಲೂಕೋಸ್ ಅನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:  Healthy Nails: ಹೇಗಿದೆ ನಿಮ್ಮ ಆರೋಗ್ಯ, ಉಗುರುಗಳಿಂದಲೇ ಸಿಗುತ್ತೆ ಸುಳಿವು!

3) ಹೆಚ್ಚು ಫೈಬರ್ ಇರುವ ಆಹಾರ ಸೇವಿಸಿ: 

ಫೈಬರ್‌ ಇರುವ ಆಹಾರವನ್ನು ಹೆಚ್ಚು ಸೇವಿಸಿ. ಏಕೆಂದರೆ ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೆಚ್ಚಿನ ಫೈಬರ್ ಆಹಾರವು ನಿಮ್ಮ ದೇಹದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ತರಕಾರಿಗಳು, ಹಣ್ಣುಗಳು, ದ್ವಿದಳ ಧಾನ್ಯಗಳು ಇವು ಹೆಚ್ಚು ಫೈಬರ್‌ ಅನ್ನು ಹೊಂದಿರುವ ಆಹಾರಗಳು ಆಗಿವೆ.

4) ಹೆಚ್ಚು ನೀರು ಕುಡಿಯಿರಿ: 

ಸಾಕಷ್ಟು ನೀರು ಕುಡಿಯುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ಉಂಟಾಗುವ ನಿರ್ಜಲೀಕರಣವನ್ನು ತಡೆಗಟ್ಟುವುದರ ಜೊತೆಗೆ, ನಿಮ್ಮ ಮೂತ್ರಪಿಂಡಗಳು ಮೂತ್ರದ ಮೂಲಕ ಹೆಚ್ಚುವರಿ ಸಕ್ಕರೆ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹೈಡ್ರೆಟ್‌ ಆಗಿರುವುದು ಮುಖ್ಯವಾಗಿರುತ್ತದೆ.

5) ನೀವು ಸೇವಿಸುವ ಆಹಾರದ ಕ್ಯಾಲೋರಿ ಕಡೆ ಗಮನ ಹರಿಸಿ: 

ನೀವು ಸೇವಿಸುವ ಪ್ರತಿ ಆಹಾರದಲ್ಲಿರುವ ಕ್ಯಾಲೋರಿಗಳನ್ನು ಗಮನಿಸಿ. ನೀವು ತೆಗೆದುಕೊಳ್ಳುವ ಆಹಾರವು ನಿಮ್ಮ ದೇಹದ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.

6) ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಆರಿಸಿ: 

GI ಆಹಾರಗಳನ್ನು ಕಡಿಮೆ, ಮಧ್ಯಮ ಮತ್ತು ಹೆಚ್ಚಿನ GI ಎಂದು ವಿಭಜಿಸುತ್ತದೆ ಮತ್ತು ಅವುಗಳನ್ನು 0-100 ಪ್ರಮಾಣದಲ್ಲಿ ಶ್ರೇಣೀಕರಿಸುತ್ತದೆ. ನೀವು ಸೇವಿಸುವ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಮತ್ತು ಪ್ರಕಾರವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಹಾರವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸುತ್ತದೆ.

7) ನಿಮ್ಮ ಒತ್ತಡವನ್ನು ನಿರ್ವಹಿಸಲು ಪ್ರಯತ್ನಿಸಿ: 

ಒತ್ತಡವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮ ಬೀರಬಹುದು. ಒತ್ತಡಕ್ಕೆ ಒಳಗಾದಾಗ, ನಿಮ್ಮ ದೇಹವು ಗ್ಲುಕಗನ್ ಮತ್ತು ಕಾರ್ಟಿಸೋಲ್ ಎಂಬ ಹಾರ್ಮೋನ್‌ಗಳನ್ನು ಸ್ರವಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ವ್ಯಾಯಾಮ, ವಿಶ್ರಾಂತಿ ಮತ್ತು ಧ್ಯಾನವು ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Ash Gourd Benefits: ಬೂದು ಕುಂಬಳಕಾಯಿಯಲ್ಲಿದೆ ಆರೋಗ್ಯದ ಗುಟ್ಟು; ತಪ್ಪದೇ ನಿಮ್ಮ ಆಹಾರದಲ್ಲಿ ಸೇರಿಸಿ

8) ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ನಡೆಸುವುದು: 

ನಿಮ್ಮ ದೇಹದಲ್ಲಿನ ರಕ್ತದ ಗ್ಲೂಕೋಸ್ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ಅವುಗಳನ್ನು ಉತ್ತಮವಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

9)ಉತ್ತಮ ನಿದ್ದೆ: 

ನಿಮ್ಮ ಎಲ್ಲ ಸಮಸ್ಯೆಗಳಿಗೆ ಉತ್ತಮ ನಿದ್ದೆಯೇ ಪರಿಹಾರ. ಆದ್ದರಿಂದ ದಿನವೂ ಎಷ್ಟೆ ಕೆಲಸ ಇರಲಿ. ಉತ್ತಮವಾಗಿ ನಿದ್ದೆ ಮಾಡಿ.
Published by:Ashwini Prabhu
First published: