ಇತ್ತೀಚಿನ ದಿನಗಳಲ್ಲಿ (Now a Days) ಅನೇಕ ಜನರು (People) ಸ್ಥೂಲಕಾಯ (Obesity) ಸಮಸ್ಯೆಯಿಂದ (Problem) ಬಳಲುತ್ತಿದ್ದಾರೆ. ಮತ್ತು ತ್ವರಿತವಾಗಿ ತೂಕ ಇಳಿಸಿಕೊಳ್ಳಲು (Weight Loss) ಬಯಸುತ್ತಾರೆ. ತೂಕ ಕಳೆದುಕೊಳ್ಳುವುದು ಸುಲಭದ ಕೆಲಸವಲ್ಲ ಎಂದು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಹೆಚ್ಚಿದ ತೂಕ ಇಳಿಸಲು ಸಾಕಷ್ಟು ಹರಸಾಹಸ ಮಾಡಬೇಕಾಗುತ್ತದೆ. ತೂಕ ಇಳಿಸಲು ಆಹಾರ ಕ್ರಮ, ಜೀವನಶೈಲಿ, ಜಿಮ್ನಲ್ಲಿ ಗಂಟೆಗಟ್ಟಲೆ ಬೆವರಿಳಿಸಬೇಕಾಗುತ್ತದೆ. ಮತ್ತು ಎಲ್ಲಾ ರೀತಿಯ ದುಬಾರಿ ಆಹಾರ ಯೋಜನೆ ಕ್ರಮ ಫಾಲೋ ಮಾಡುವುದು ಎಲ್ಲರಿಗೂ ಮಾಡಲು ಸಾಧ್ಯವಾಗುವ ವಿಷಯವಲ್ಲ. ಈ ದಿನಗಳಲ್ಲಿ ಪ್ರತಿಯೊಬ್ಬರೂ ಸುಲಭ ಮಾರ್ಗದ ಮೂಲಕ ತೂಕ ಇಳಿಸಲು ಕಸರತ್ತು ಮಾಡುತ್ತಾರೆ.
ನೈಸರ್ಗಿಕ ಹಸಿರು ಎಲೆಗಳ ಪದಾರ್ಥಗಳಿಂದ ತೂಕ ಇಳಿಕೆ
ಪುದೀನಾ, ಕೊತ್ತಂಬರಿ ಸೊಪ್ಪು ಹಾರ್ಮೋನುಗಳ ಸಮತೋಲನ ಕಾಪಾಡಲು ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸಲು, ಗ್ಯಾಸ್ ಸಮಸ್ಯೆ ನಿವಾರಿಸಲು ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ತೂಕ ಇಳಿಸಲು ಹಲವು ಗಿಡಮೂಲಿಕೆಗಳಿವೆ.
ಫ್ಯಾಟ್ ಟು ಸ್ಲಿಮ್ ಡೈರೆಕ್ಟರ್ ಮತ್ತು ನ್ಯೂಟ್ರಿಷಿಯನ್ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ ನೈಸರ್ಗಿಕ ಹಸಿರು ಎಲೆಗಳು ತೂಕ ಇಳಿಕೆಗೆ ತುಂಬಾ ಸಹಕಾರಿ ಆಗಿದೆ.
ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಈ ಪದಾರ್ಥಗಳಿದ್ದರೆ ಹೃದಯದ ಆರೋಗ್ಯಕ್ಕೆ ಬೆಸ್ಟ್ ಅಂತೆ!
ಸ್ಥೂಲಕಾಯಕ್ಕೆ ಪಾರ್ಸ್ಲಿ ರಾಮಬಾಣ
ನಿಮ್ಮ ತೂಕ ನಷ್ಟ ಪ್ರಯತ್ನಗಳಲ್ಲಿ ಪಾರ್ಸ್ಲಿ ಉತ್ತಮ ಗಿಡಮೂಲಿಕೆ ಆಗಿದೆ. ಪಾರ್ಸ್ಲಿ ಫೈಬರ್ ಅಂಶವನ್ನು ತುಂಬಾ ಹೇರಳವಾಗಿದೆ. ಇದು ಪರಿಪೂರ್ಣ ತೂಕ ನಷ್ಟ ಗಿಡಮೂಲಿಕೆ ಆಗಿದೆ. ಇದು ಯುಜೆನಾಲ್ ಹೊಂದಿದೆ. ಮತ್ತು ಹೈಪರ್ಗ್ಲೈಸೀಮಿಯಾಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ.
ಪುದೀನ ಎಲೆಗಳು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ
ಹಸಿರು ಬಣ್ಣದ ಮತ್ತು ಸುಗಂಧ ಭರಿತ ಪುದೀನಾ ಎಲೆಗಳು ಆಹಾರ ಪದಾರ್ಥಗಳ ರುಚಿ ಹೆಚ್ಚಿಸುತ್ತವೆ. ಪುದೀನಾ ಹಸಿವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಕಡುಬಯಕೆ ಕಡಿಮೆಯಾಗಲು ನೀವು ಕಡಿಮೆ ಕ್ಯಾಲೊರಿ ಸೇವನೆ ಮಾಡಿ.
ಪುದೀನಾ ಜೀರ್ಣಕ್ರಿಯೆ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಅನಿಲ ಮತ್ತು ಆಮ್ಲೀಯತೆ ಸರಾಗಗೊಳಿಸುತ್ತದೆ. ಉತ್ತಮ ಜೀರ್ಣಕ್ರಿಯೆ ತೂಕ ಕಳೆದುಕೊಳ್ಳುವ ಪ್ರಾಥಮಿಕ ಹಂತ ಆಗಿದೆ.
ಸೆಲರಿ ಎಲೆಗಳು ತೂಕ ಕಡಿಮೆ ಮಾಡುತ್ತದೆ
ಈ ಮೂಲಿಕೆ ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್ ಜೈವಿಕ ಸಕ್ರಿಯ ಸಂಯುಕ್ತಗಳ ಉಗ್ರಾಣ ಆಗಿದೆ. ಈ ಎರಡೂ ಕಿಣ್ವಗಳು ಇನ್ಸುಲಿನ್ ಕಾರ್ಯಕ್ಕೆ ಪ್ರಮುಖವಾಗಿವೆ. ಮಧುಮೇಹ ನಿಯಂತ್ರಿಸುವ ಸಾಮರ್ಥ್ಯ ಅಜವೈನ್ ಹೊಂದಿದೆ. ಇದು ಚಯಾಪಚಯ ದರ ಸುಧಾರಿಸುತ್ತದೆ ಮತ್ತು ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.
ತೂಕ ನಷ್ಟಕ್ಕೆ ರೋಸ್ಮರಿ ಎಲೆಗಳು
ರೋಸ್ಮರಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಉರಿಯೂತದ ಗುಣಲಕ್ಷಣ ಹೊಂದಿದೆ. ಈ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ ಹಾನಿ ತಡೆಯುತ್ತದೆ. ಮತ್ತು ನಿಮ್ಮ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ.
ಈ ಎಲ್ಲಾ ಗುಣಲಕ್ಷಣ ರೋಸ್ಮರಿ ತೂಕ ನಷ್ಟಕ್ಕೆ ಅತ್ಯುತ್ತಮ ಮೂಲಿಕೆ ಆಗಿದೆ. ರೋಸ್ಮರಿ ಕಾರ್ನೋಸಿಕ್ ಆಮ್ಲವು ಸ್ಥೂಲಕಾಯತೆ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಬೆಟ್ಟದ ಪುದೀನಾ
PCOS ನಂತಹ ಕೆಲವು ಹಾರ್ಮೋನುಗಳ ಅಸಮತೋಲನದಿಂದಾಗಿ ನೀವು ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ, ಪುದೀನಾ ನಿಮಗೆ ಸಹಾಯ ಮಾಡಬಹುದು. ಪುದೀನಾ ಈಸ್ಟ್ರೊಜೆನ್ ಮಟ್ಟ ಹೆಚ್ಚಿಸುವ ಮೂಲಕ ಸಹಾಯ ಮಾಡುತ್ತದೆ. ಕಡಿಮೆ ಮಟ್ಟದ ಈಸ್ಟ್ರೊಜೆನ್ ಋತುಬಂಧ ಸಮಯದಲ್ಲಿ ತೂಕ ಹೆಚ್ಚಾಗುವುದಕ್ಕೆ ಸಂಬಂಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ