Breakfast Tips: ಸಣ್ಣಗಾಗುವ ಭರದಲ್ಲಿ ಬೆಳಗ್ಗೆ ತಿಂಡಿ ತಿನ್ನದೇ ಇರಬೇಡಿ, ಇನ್ನೂ ದಪ್ಪಗಾಗ್ತೀರಾ ಎಚ್ಚರ!

Weight Loss Tips: ಬೆಳಗಿನ ತಿಂಡಿಯನ್ನು ತಿನ್ನದಿರುವುದು ನಿಮ್ಮ ಕ್ಯಾಲೋರಿಗಳನ್ನು ಸುಡಲು ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅನೇಕ ಜನರು ತಿಳಿದಿದ್ದಾರೆ. ಆದರೆ ಇದು ನಿಜವಲ್ಲ. ವಾಸ್ತವವಾಗಿ, ಬೆಳಿಗ್ಗೆ ಉಪಾಹಾರ ಸೇವಿಸದವರು, ಬೆಳಗಿನ ಉಪಾಹಾರ ಸೇವಿಸುವವರಿಗಿಂತ ವೇಗವಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಹೌದು, ಬೆಳಗಿನ ತಿಂಡಿ ಸೇವನೆ ಮಾಡದಿದ್ದಲ್ಲಿ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಹದ ತೂಕ (Weight Lossಹೆಚ್ಚಿದ್ದರೆ ಅದು ಮನುಷ್ಯ ನಮ್ಮ ಶಾಂತಿಯನ್ನು ಹಾಳು ಮಾಡುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಮತ್ತು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿರುವುದು ಮುಂತಾದ ಅಂಶಗಳು ತೂಕ ಹೆಚ್ಚಿಸಲು ಕಾರಣವಾಗಬಹುದು. ಆದರೂ, ಈ ಅಧಿಕ ತೂಕವು ದೈಹಿಕ ಕಾಯಿಲೆಗಳು (Diseases) ಉಂಟಾಗಲು ಕಾರಣವಾಗುತ್ತದೆ. ಅದಕ್ಕಾಗಿಯೇ ತೂಕ ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ, ಕೆಲವರಿಗೆ ಆ ಸಮಯವೂ ಇಲ್ಲ. ತೂಕ ಇಳಿಸಿಕೊಳ್ಳಲು ಆಹಾರ ಕೂಡ ಉತ್ತಮ ಮಾರ್ಗ(Food for weight balance). ಹೌದು, ಹೆಚ್ಚು ಆಹಾರವನ್ನು ಸೇವನೆ ಮಾಡುವುದನ್ನು ನಿಲ್ಲಿಸಿ. ಸಾಮಾನ್ಯವಾಗಿ ಪ್ರತಿಯೊಬ್ಬರು ತೂಕ ಇಳಿಸುವ ಕಾರಣದಿಂದ ವ್ಯಾಯಾಮವನ್ನು (Exercise) ಮಾಡುತ್ತಾರೆ. ಆದರೆ ಕೇವಲ ವ್ಯಾಯಾಮ ಮಾಡುವುದರಿಂದ ತೂಕ ಕಡಿಮೆಯಾಗುವುದಿಲ್ಲ.  

ಬೆಳಗಿನ ತಿಂಡಿಯನ್ನು ತಿನ್ನದಿರುವುದು 

ಬೆಳಗಿನ ತಿಂಡಿಯನ್ನು ತಿನ್ನದಿರುವುದು ನಿಮ್ಮ ಕ್ಯಾಲೋರಿಗಳನ್ನು ಸುಡಲು ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅನೇಕ ಜನರು ತಿಳಿದಿದ್ದಾರೆ. ಆದರೆ ಇದು ನಿಜವಲ್ಲ. ವಾಸ್ತವವಾಗಿ, ಬೆಳಿಗ್ಗೆ ಉಪಾಹಾರ ಸೇವಿಸದವರು, ಬೆಳಗಿನ ಉಪಾಹಾರ ಸೇವಿಸುವವರಿಗಿಂತ ವೇಗವಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಹೌದು, ಬೆಳಗಿನ ತಿಂಡಿ ಸೇವನೆ ಮಾಡದಿದ್ದಲ್ಲಿ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಏಕೆಂದರೆ ಬೆಳಗಿನ ತಿಂಡಿಯನ್ನು ಸೇವಿಸದೇ ಇರುವುದು ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಷ್ಟೇ ಅಲ್ಲ, ಹೆಚ್ಚಿನ ಹಸಿವಿನಿಂದಾಗಿ ಮಧ್ಯಾಹ್ನದ ಸಮಯದಲ್ಲಿ ಹೆಚ್ಚಿನ ಊಟ ಸೇವನೆ ಮಾಡುವಂತಾಗುತ್ತದೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಅದಕ್ಕಾಗಿಯೇ ತೂಕ ಇಳಿಸಿಕೊಳ್ಳಬಯಸುವವರು ಬೆಳಗಿನ ತಿಂಡಿ ತಿನ್ನುವುದು ಬಹಳ ಮುಖ್ಯ.

ಟೈಪ್ 2 ಮಧುಮೇಹದ ಅಪಾಯ

ಇದನ್ನೂ ಓದಿ: ಕ್ಯಾನ್ಸರ್ ಗೆ ಗಾಂಜಾ ಎಣ್ಣೆ ರಾಮಬಾಣ, ಎಲ್ಲಿ ಸಿಗುತ್ತೆ? ಹೇಗೆ ಬಳಸೋದು? ಫುಲ್ ಡೀಟೆಲ್ಸ್

ಬೆಳಿಗ್ಗೆ ಉಪಾಹಾರ ಸೇವಿಸದಿರುವುದು ಟೈಪ್ 2 ಮಧುಮೇಹದ ಅಪಾಯವನ್ನು 54%ಹೆಚ್ಚಿಸುತ್ತದೆ. ಹಾರ್ವರ್ಡ್ ವಿಶ್ವವಿದ್ಯಾಲಯವು ಸಂಶೋಧನೆ ನಡೆಸಿದ್ದು, ಅದರ ಪ್ರಕಾರ ಬೆಳಗಿನ ಉಪಾಹಾರ ಸೇವಿಸುವ ಅಭ್ಯಾಸವಿಲ್ಲದವರಲ್ಲಿ ಮಧುಮೇಹದ ಅಪಾಯ ಹೆಚ್ಚಿರುವುದು ಕಂಡುಬಂದಿದೆ. ಅನಗತ್ಯ ತೂಕ ಹೆಚ್ಚಾಗುವುದನ್ನು ತಡೆಯಲು ನೀವು ನಿಮ್ಮ ಆಹಾರದಲ್ಲಿ ಕಡಲೆಕಾಯಿ ಬೆಣ್ಣೆಯನ್ನು ಬಳಸಬಹುದು. ಕಡಲೆಕಾಯಿ ಬೆಣ್ಣೆಯನ್ನು ತಿನ್ನುವುದರಿಂದ ನಿಮ್ಮಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇವುಗಳು ಹಸಿವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಕಡಲೆಕಾಯಿ ಬೆಣ್ಣೆಯಂತಹ ಆಹಾರಗಳಿಂದ ಸಾಕಷ್ಟು ಪ್ರೋಟೀನ್  ದೇಹವನ್ನು ಸೇರುತ್ತದೆ. ಇದು ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ಡಯಟ್ ಮಾಡುವವರು ಕಡಲೆಕಾಯಿ ಬೆಣ್ಣೆಯನ್ನು ತಿನ್ನುವುದಿಲ್ಲ ಏಕೆಂದರೆ ಇದರಲ್ಲಿ ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳಿರುತ್ತದೆ.

ಇನ್ನು ಬೆಳಗಿನ ತಿಂಡಿಯಲ್ಲಿ ಉತ್ತಮ ಕೊಬ್ಬಿನ ಆಹಾರಗಳನ್ನು ಸೇವನೆ ಮಾಡಬೇಕು. ಆದರೆ ಹೆಚ್ಚಿನ ಜನರು ಕೊಬ್ಬು ಎಂದರೆ ತೂಕ ಹೆಚ್ಚಳವಾಗುತ್ತದೆ ಎಂದೇ ಯೋಚನೆ ಮಾಡ್ತಾರೆ. ಆದರೆ ಅದು ತಪ್ಪು ನಮ್ಮ ಆಹಾರದಲ್ಲಿ ಉತ್ತಮ ಕೊಬ್ಬಿನ ಅಂಶಗಳನ್ನು ಹೊಂದಿರುವ ಆಹಾರ ಬಹಳ ಮುಖ್ಯವಾಗುತ್ತದೆ. ಇಲ್ಲದಿದ್ದಲ್ಲಿ ದೇಹದ ತೂಕ ಕಡಿಮೆಯಾಗುವ ಬದಲಾಗಿ ಹೆಚ್ಚಾಗುತ್ತದೆ. ಇದರ ಜೊತೆಗೆ ಹೆಚ್ಚು ಪ್ರೋಟೀನ್ ಅಂಶಗಳಿರುವ  ಆಹಾರವನ್ನು ಸೇವನೆ ಮಾಡುವುದು ಮುಖ್ಯವಾಗುತ್ತದೆ.

 ನೀವು ಕುಡಿಯುವ ಪ್ಯಾಕ್ಡ್ ಜ್ಯೂಸ್

ಇದನ್ನೂ ಓದಿ:ಸಣ್ಣಗಾಗ್ಬೇಕು ಅಂತ ಅನ್ನ ತಿನ್ನೋದು ಬಿಡ್ಬೇಡಿ, ಇನ್ನೂ ದಪ್ಪಗಾಗ್ತೀರಾ ಅಷ್ಟೇ

ನಿಮಗೆ ಬೆಳಗ್ಗೆ ಜ್ಯೂಸ್ ಕುಡಿಯುವುದು ಆರೋಗ್ಯಕರವೆನಿಸಬಹುದು. ಆದರೆ ಅದು ನಾವು ಮಾಡುವ ದೊಡ್ಡ ತಪ್ಪು. ನಾವು ಸಾಮಾನ್ಯವಾಗಿ ಸೂಪರ್‌ ಮಾರ್ಕೆಟ್‌ನಿಂದ ಪ್ಯಾಕ್ ಮಾಡಿದ ಜ್ಯೂಸ್ ಅನ್ನು ಸೇವಿಸುತ್ತೇವೆ, ಮತ್ತು ಇವುಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಸಕ್ಕರೆಯನ್ನು ಸೇರಿಸಲಾಗುತ್ತದೆ, ಇದು ಪೌಷ್ಟಿಕಾಂಶ ತುಂಬಾ ಕಡಿಮೆ ಇರುತ್ತದೆ. ಇದು ನಿಮ್ಮ ತೂಕವನ್ನು ಹೆಚ್ಚು ಮಾಡುತ್ತದೆ.
Published by:Sandhya M
First published: