Male Infertility: ಪುರುಷರೇ! ನೀವು ಮಾಡುವ ಈ ತಪ್ಪುಗಳೇ ನಿಮ್ಮ ಬಂಜೆತನಕ್ಕೆ ಕಾರಣವಾಗಬಹುದು! ಎಚ್ಚರ

ಪುರುಷ ಬಂಜೆತನವು ವೀರ್ಯವನ್ನು ಉತ್ಪಾದಿಸಲು ಅಸಮರ್ಥತೆಗೆ ಕಾರಣವಾಗಬಹುದು ಅಥವಾ ಆರೋಗ್ಯಕರ ವೀರ್ಯಾಣುವನ್ನು ಉತ್ಪಾದಿಸಲು ಅಸಮರ್ಥತೆಗೆ ಕಾರಣವಾಗಬಹುದು. ಪುರುಷರಲ್ಲಿ ಬಂಜೆತನವು ಅನೇಕ ಆಂತರಿಕ ಮತ್ತು ಬಾಹ್ಯ ಅಂಶಗಳಿಂದ ಉಂಟಾಗಬಹುದು. ಪುರುಷ ಬಂಜೆತನಕ್ಕೆ ಕಾರಣವಾಗಬಹುದಾದ ಕೆಲವು ಸಮಸ್ಯೆಗಳನ್ನು ನಾವು ಇಲ್ಲಿ ನೀಡಿದ್ದೇವೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬಂಜೆತನ (Infertility) ಎಂಬುದು ಪುರುಷ ಮತ್ತು ಮಹಿಳೆ (Women) ಇಬ್ಬರೂ ಅನುಭವಿಸಬಹುದಾದ ಒಂದು ಸ್ಥಿತಿಯಾಗಿದೆ. ಒಬ್ಬ ವ್ಯಕ್ತಿಯು ಬಂಜೆಯಾಗಿದ್ದರೆ, ಅವನು ಅಥವಾ ಅವಳು ಮಕ್ಕಳನ್ನು (Children) ಹೊಂದಲು ಸಾಧ್ಯವಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಿಂತ ಪುರುಷರು (Men's) ಹೆಚ್ಚು ಬಂಜೆತನವನ್ನು ಅನುಭವಿಸುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಸಂಶೋಧನೆಗಳು ತೋರಿಸುತ್ತಿವೆ. ಪುರುಷ ಬಂಜೆತನವು ವೀರ್ಯವನ್ನು ಉತ್ಪಾದಿಸಲು ಅಸಮರ್ಥತೆಗೆ ಕಾರಣವಾಗಬಹುದು ಅಥವಾ ಆರೋಗ್ಯಕರ ವೀರ್ಯಾಣುವನ್ನು ಉತ್ಪಾದಿಸಲು ಅಸಮರ್ಥತೆಗೆ ಕಾರಣವಾಗಬಹುದು. ಪುರುಷರಲ್ಲಿ ಬಂಜೆತನವು ಅನೇಕ ಆಂತರಿಕ ಮತ್ತು ಬಾಹ್ಯ ಅಂಶಗಳಿಂದ ಉಂಟಾಗಬಹುದು. ಪುರುಷ ಬಂಜೆತನಕ್ಕೆ ಕಾರಣವಾಗಬಹುದಾದ ಕೆಲವು ಸಮಸ್ಯೆಗಳನ್ನು ನಾವು ಇಲ್ಲಿ ನೀಡಿದ್ದೇವೆ ನೋಡಿ.

1. ದೇಹದಲ್ಲಿ ಅತಿಯಾದ ಬೊಜ್ಜು

ವೀರ್ಯವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಪುರುಷರು ಸ್ಥೂಲಕಾಯದಿಂದಾಗಿ ಹಾರ್ಮೋನುಗಳ ಅಸಮತೋಲನದಿಂದ ಬಳಲಬಹುದು. ಕೊಬ್ಬು ಪ್ಯೂಬಿಕ್ ಪ್ರದೇಶದಲ್ಲಿ ಸಂಗ್ರಹವಾಗಬಹುದು ಮತ್ತು ವೃಷಣಗಳ ತಾಪಮಾನದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಲೈಂಗಿಕ ಕೋಶಗಳ ಉತ್ಪಾದನೆಗೆ ಅಡ್ಡಿಪಡಿಸುತ್ತದೆ.

2. ಸ್ಟೀರಾಯ್ಡ್ ಗಳ ಬಳಕೆ

ಹೆಚ್ಚಿನ ಜನರು ತಮ್ಮ ದೈಹಿಕ ನೋಟ ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸ್ಟೀರಾಯ್ಡ್ ಗಳನ್ನು ತೆಗೆದುಕೊಳ್ಳುತ್ತಾರೆ. ಅನಾಬೊಲಿಕ್ ಸ್ಟೀರಾಯ್ಡ್ ಎಂದು ಕರೆಯಲಾಗುವ ಒಂದು ನಿರ್ದಿಷ್ಟ ರೀತಿಯ ಸ್ಟೀರಾಯ್ಡ್ ಅನ್ನು ಲೈಂಗಿಕ ಹಾರ್ಮೋನುಗಳಿಂದ ಪಡೆಯಲಾಗುತ್ತದೆ. ಎಂದರೆ ಟೆಸ್ಟೋಸ್ಟೆರಾನ್ ಹಾರ್ಮೋನುಗಳು ಪುರುಷರಲ್ಲಿ ವೀರ್ಯಾಣು ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ವೀರ್ಯಾಣು ಉತ್ಪಾದನೆಯ ಕೊರತೆಯು ಬಂಜೆತನ ಅಥವಾ ಕಡಿಮೆ ಫಲವತ್ತತೆಗೆ ಕಾರಣವಾಗಬಹುದು.

ಇದನ್ನೂ ಓದಿ: Weight Loss: ಸುಲಭವಾಗಿ ತೂಕ ಕಳೆದುಕೊಳ್ಳಬೇಕಾ? ಈ ಗಿಡಮೂಲಿಕೆಗಳನ್ನು ಬಳಸಿ ಬೊಜ್ಜು ಕರಗಿಸಿ

3. ವಾಯುಮಾಲಿನ್ಯ

ವಾಯುಮಾಲಿನ್ಯವು ಹಲವಾರು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಮತ್ತು ಅವುಗಳಲ್ಲಿ ಒಂದು ಅದು ವೀರ್ಯಾಣುಗಳ ಚಲನಶೀಲತೆಯ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ.

4. ಮೈಕ್ರೋವೇವ್ ನಲ್ಲಿ ಬಿಸಿ ಮಾಡುವ ಪ್ಲಾಸ್ಟಿಕ್ ಕಂಟೆನರ್ ಬಳಕೆ

ನೀವು ಪ್ಲಾಸ್ಟಿಕ್ ಕಂಟೇನರ್ ಅನ್ನು ಮೈಕ್ರೋವೇವ್ ನಲ್ಲಿರಿಸಿದಾಗ, ಅದು ಬಿಸ್ಫೆನಾಲ್ (ಬಿಪಿಎ) ಅನ್ನು ಬಿಡುಗಡೆ ಮಾಡುತ್ತದೆ. ಬಿಸ್ಫೆನಾಲ್ ಎಂಬುದು ಎಂಡೋಕ್ರೈನ್ ಡಿಸ್ಟ್ರಪ್ಟರ್ ಆಗಿದ್ದು, ಇದು ವ್ಯಕ್ತಿಯ ಹಾರ್ಮೋನುಗಳಲ್ಲಿ ಏರಿಳಿತಗಳನ್ನು ಉಂಟು ಮಾಡಬಹುದು. ಮತ್ತೊಂದೆಡೆ ಹಾರ್ಮೋನುಗಳ ಬದಲಾವಣೆಗಳು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ವಿಶೇಷವಾಗಿ ಈ ಮೈಕ್ರೋವೇವ್ ಗಳಲ್ಲಿ ಬಳಸುವಂತಹ ಪ್ಲಾಸ್ಟಿಕ್ ಕಂಟೆನರ್ ಗಳ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು.

5. ನಿದ್ರೆಯ ಕೊರತೆ ಅಥವಾ ಅತಿಯಾದ ನಿದ್ರೆ

ನಿದ್ರೆಯು ಅನೇಕ ದೈಹಿಕ ಚಟುವಟಿಕೆಗಳಿಗೆ ಸಂಬಂಧಿಸಿದೆ. ಇದು ದೇಹದ ಸರಿಯಾದ ಕಾರ್ಯನಿರ್ವಹಣೆಯ ಮೂಲಭೂತ ಭಾಗವಾಗಿದೆ. ಇದು ಪುರುಷರಲ್ಲಿ ಬಂಜೆತನಕ್ಕೆ ಸಂಬಂಧಿಸಿದೆ. ಅತಿಯಾದ ನಿದ್ರೆ ಮತ್ತು ನಿದ್ರಾಹೀನತೆ ಎರಡೂ ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ನಿದ್ರೆಗೆ ಸೂಕ್ತವಾದ ಸಮಯದ ಮಿತಿ ಪ್ರತಿದಿನ ಏಳರಿಂದ ಎಂಟು ಗಂಟೆಗಳು. ಒಬ್ಬ ವ್ಯಕ್ತಿಯು ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡಿದರೆ ವೀರ್ಯಾಣು ಉತ್ಪಾದನೆಯಲ್ಲಿ ಶೇಕಡಾ 42 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ತೋರಿಸುತ್ತವೆ.

6. ಅತಿಯಾದ ಮದ್ಯ ಸೇವನೆ

ಕೆಟ್ಟ ಜೀವನಶೈಲಿ ಅಭ್ಯಾಸಗಳು ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರಬಹುದು. ಉದಾಹರಣೆಗೆ, ಅತಿಯಾದ ಮದ್ಯ ಸೇವನೆ ಮಾಡುವುದರಿಂದಲೂ ಸಹ ವೀರ್ಯಾಣು ಉತ್ಪಾದನೆಯ ಮೇಲೆ ಮಾತ್ರವಲ್ಲದೆ ವೀರ್ಯಾಣು ಡಿಎನ್ಎಯ ಸಮಗ್ರತೆಯ ಮೇಲೂ ಪರಿಣಾಮ ಬೀರುತ್ತದೆ. ಇದು ಭ್ರೂಣವನ್ನು ರೂಪಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

7. ತಂಬಾಕು ಸೇವನೆ

ಮದ್ಯದಂತೆಯೇ ಅತಿಯಾಗಿ ತಂಬಾಕನ್ನು ತಿನ್ನುವುದು ಮತ್ತು ಧೂಮಪಾನ ಮಾಡುವುದು ಸಹ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ತಂಬಾಕು ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯ ಪರಿಣಾಮಗಳು ಬೀರುತ್ತವೆ. ಈ ಕಾರಣದಿಂದಾಗಿಯೇ ತಂಬಾಕು ಸೇವನೆ ಮಾಡಲೇ ಬಾರದು. ಒಟ್ಟಾಗಿ ಹೇಳಬೇಕೆಂದರೆ ತಂಬಾಕು, ಮದ್ಯ ದಂತೆಯೇ ಪುರುಷ ಸಂತಾನೋತ್ಪತ್ತಿ ಪ್ರಕ್ರಿಯೆಯ ಮೇಲೆ ಪರಿಣಾಮವನ್ನು ಬೀರುತ್ತದೆ.

ಇದನ್ನೂ ಓದಿ: Uterine Fibroids: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇನು?

8. ಆನುವಂಶಿಕ ಸಮಸ್ಯೆಗಳು

ಪುರುಷ ಬಂಜೆತನಕ್ಕೆ ಸಂಬಂಧಿಸಿದ ಹಲವಾರು ಆನುವಂಶಿಕ ರೋಗಗಳಿವೆ, ಆದರೆ ಇದು ಸಮಸ್ಯೆಗೆ ಕಡಿಮೆ ಸಾಮಾನ್ಯ ಕಾರಣವಾಗಿದೆ. ಒಂದು ಉದಾಹರಣೆಯೆಂದರೆ ಕ್ಲೈನ್ಫೆಲ್ಟರ್ ಸಿಂಡ್ರೋಮ್, ಇದರಲ್ಲಿ ಪುರುಷನು ಹೆಚ್ಚುವರಿ ಎಕ್ಸ್ ಕ್ರೋಮೋಸೋಮ್ ಅನ್ನು ಹೊಂದಿರುತ್ತಾರೆ. ಇದು ಹಾರ್ಮೋನ್ ಟೆಸ್ಟೋಸ್ಟೆರಾನ್ ಉತ್ಪಾದನೆಯಲ್ಲಿ ಕೊರತೆಗೆ ಕಾರಣವಾಗುತ್ತದೆ ಮತ್ತು ಸಾಮಾನ್ಯ ವೀರ್ಯಾಣುವನ್ನು ತಡೆಯುತ್ತದೆ.
Published by:Ashwini Prabhu
First published: