Oily Hair Protection: ಬೇಸಿಗೆಯಲ್ಲಿ ಕಾಡುವ ಎಣ್ಣೆಯುಕ್ತ ನೆತ್ತಿ ಸಮಸ್ಯೆ ನಿವಾರಣೆಗೆ ಈ ಪದಾರ್ಥಗಳು ಪ್ರಯೋಜನಕಾರಿ

ಇಂದಿನ ದಿನಗಳಲ್ಲಿ ನೀವು ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕೂದಲಿನ ಆರೈಕೆ ಮಾಡುವ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈಗ ಜನರು ತಮ್ಮ ಕೂದಲನ್ನು ಹೆಚ್ಚು ಆರೈಕೆ ಮಾಡಲು ಬಯಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಉರಿ ಬಿಸಿಲ ಧಗೆ ಚರ್ಮಕ್ಕೆ (Skin) ಮಾತ್ರ ಹಾನಿಕಾರಕವಲ್ಲ. ಬಿಸಿಲ ಬಿಸಿ ನಿಮ್ಮ ಕೂದಲಿನ (Hair) ಮೇಲೆ ತುಂಬಾ ಕೆಟ್ಟ ಪರಿಣಾಮ (Bad Effects) ಬೀರುತ್ತದೆ. ಸೂರ್ಯನ (Sun) ಶಾಖವು ಕೂದಲಿಗೆ ಆಕ್ಸಿಡೇಟಿವ್ ಒತ್ತಡ (Stress) ಉಂಟು ಮಾಡುತ್ತದೆ. ಇದರಿಂದಾಗಿ ನಿಮ್ಮ ಕೂದಲು ಒಣಗುವುದು ಮತತು ಗಟ್ಟಿಯಾಗುತ್ತದೆ. ಕೆಲವೊಮ್ಮೆ ಕೂದಲು ಮತ್ತು ನೆತ್ತಿಯು ಎಣ್ಣೆಯುಕ್ತವಾಗಿ ಕಾಣುತ್ತದೆ. ಹೀಗಾಗಿ ಇಂದಿನ ದಿನಗಳಲ್ಲಿ ನೀವು ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕೂದಲಿನ ಆರೈಕೆ ಮಾಡುವ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈಗ ಜನರು ತಮ್ಮ ಕೂದಲನ್ನು ಹೆಚ್ಚು ಆರೈಕೆ ಮಾಡಲು ಬಯಸುತ್ತಾರೆ.

  ಕೂದಲಿನ ಆರೋಗ್ಯ ಕಾಪಾಡಲು ಕೆಲವು ಪದಾರ್ಥಗಳು ಹೀಗಿವೆ

  ಕೂದಲು ಚೆನ್ನಾಗಿ ಕಾಣುವಂತೆ ಮಾಡುವುದು ಮಾತ್ರವಲ್ಲದೇ ಆರೋಗ್ಯವಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ನೆತ್ತಿಯಲ್ಲಿ ಕೂದಲು ಉದುರುವುದು, ಎಣ್ಣೆಯುಕ್ತವಾಗುವುದು, ಹೊಟ್ಟಿನ ಸಮಸ್ಯೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ.

  ಹಾಗಾಗಿ ಕೂದಲಿನ ಆರೋಗ್ಯ ಕಾಪಾಡುವ ಕೆಲವು ಆಹಾರ ಪದಾರ್ಥಗಳನ್ನು ಬಳಸುವುದು ಮುಖ್ಯ. ತಜ್ಞರು ಹೇಳುವ ಪ್ರಕಾರ, ನಿಮ್ಮ ನೆತ್ತಿಯು ಆರೋಗ್ಯಕರವಾಗಿಲ್ಲದಿದ್ದರೆ, ನಿಮ್ಮ ಕೂದಲು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತವೆ.

  ಇದನ್ನೂ ಓದಿ: ಚಿಕನ್, ಫಿಶ್ ತಿನ್ನಲ್ವಾ? ಹಾಗಿದ್ದರೆ ಪ್ರೋಟೀನ್​​ಗಾಗಿ ಈ ಕೆಲವು ಆಹಾರ ಮಿಸ್ ಮಾಡಲೇಬೇಡಿ

  ಇಂತಹ ಸಂದರ್ಭದಲ್ಲಿ ಕೂದಲಿಗೆ ಉತ್ತಮ ಗುಣಮಟ್ಟದ ಪದಾರ್ಥಗಳ ಚಿಕಿತ್ಸೆ ನೀಡುವುದು, ಕೂದಲ ಆರೋಗ್ಯಕ್ಕೆ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಸಹಕಾರಿ. ಇಲ್ಲಿ ನಾವು ನಿಮಗೆ ಎಣ್ಣೆಯುಕ್ತ ನೆತ್ತಿಯನ್ನು ಹೊಡೆದೋಡಿಸುವ ಪದಾರ್ಥಗಳ ಬಗ್ಗೆ ಹೇಳಲಾಗಿದೆ. ಇದು ಎಲ್ಲಾ ರೀತಿಯ ಕೂದಲಿನ ಸಮಸ್ಯೆ ತೆಗೆದು ಹಾಕಲು ಸಹಾಯ ಮಾಡುತ್ತದೆ.

  ಆರೋಗ್ಯಕರ ಕೂದಲಿಗೆ ಲೋಳೆಸರ

  ಆರೋಗ್ಯಕರ ಕೂದಲಿಗೆ ಅಲೋವೆರಾ ಉತ್ತಮ ಆಯ್ಕೆ ಆಗಿದೆ. ಇದು ನೈಸರ್ಗಿಕ ಕಂಡಿಷನರ್ ಆಗಿದೆ. ಬೇಸಿಗೆಯಲ್ಲಿ ಬೆವರು ಮತ್ತು ಅತಿಯಾದ ಎಣ್ಣೆಯುಕ್ತ ತ್ವಚೆಯಿಂದಾಗಿ ನಿಮ್ಮ ರಂಧ್ರಗಳು ಮುಚ್ಚಿ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಅಲೋವೆರಾ ಬಳಕೆ ಮಾಡುವುದು ಉತ್ತಮ ಆಯ್ಕೆ ಆಗಿದೆ.

  ರಂಧ್ರಗಳನ್ನು ತೆರೆಯಲು ಮತ್ತು ನೆತ್ತಿಯನ್ನು ಆಳವಾಗಿ ಹೈಡ್ರೇಟ್ ಮಾಡಲು ಅಲೋವೆರಾ ಒಳ್ಳೆಯದು. ಅಷ್ಟೇ ಅಲ್ಲ ಶಾಖ ಮತ್ತು ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನೆತ್ತಿಯ ಮೇಲೆ ಉರಿಯುವ ಸಂವೇದನೆ ಶಾಂತಗೊಳಿಸಲು ಇದು ಸಹಾಯ ಮಾಡುತ್ತದೆ.

  ಎಣ್ಣೆಯುಕ್ತ ನೆತ್ತಿಗೆ ಜೇನು

  ಜೇನುತುಪ್ಪವು ನಿಮ್ಮ ನೆತ್ತಿಯನ್ನು ಎಣ್ಣೆಯುಕ್ತ ಮತ್ತು ಜಿಡ್ಡಿನ ತೊಂದರೆಯನ್ನು ನಿವಾರಿಸುತ್ತದೆ. ಜಲಸಂಚಯನ ಮಟ್ಟ ಕಾಪಾಡುವ ಒಂದು ನೈಸರ್ಗಿಕ ಅಂಶ ಆಗಿದೆ. ಬೇಸಿಗೆಯಲ್ಲಿ, ಜೇನುತುಪ್ಪವು ನಿಮ್ಮ ನೆತ್ತಿಯಲ್ಲಿ ಕಳೆದು ಹೋದ ತೇವಾಂಶ ಮತ್ತು ಪೋಷಕಾಂಶ ಸರಿದೂಗಿಸಲು ಮತ್ತು ಅದನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.

  ಜೇನುತುಪ್ಪ ಕೂದಲನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದರ ಉರಿಯೂತ ನಿವಾರಕ ಪ್ರಯೋಜನಗಳು ನೆತ್ತಿಯ ಮೇಲಿನ ಕಿರಿಕಿರಿ ಮತ್ತು ಸೂಕ್ಷ್ಮತೆಯನ್ನು ನಿಯಂತ್ರಣದಲ್ಲಿಡಲು ಕೆಲಸ ಮಾಡುತ್ತವೆ.

  ಕೂದಲ ರಕ್ಷಣೆಗಾಗಿ ಬೇವು

  ಆಯುರ್ವೇದ ಗುಣಗಳಿಂದ ಬೇವು ಕೂಡಿದೆ. ಅನಾದಿ ಕಾಲದಿಂದಲೂ ಚಳಿಗಾಲದಲ್ಲಿ ಕೂದಲ ರಕ್ಷಣೆಗಾಗಿ ಬೇವನ್ನು ಬಳಸಲಾಗುತ್ತಿದೆ. ಆದರೆ ಬೇಸಿಗೆಯಲ್ಲೂ ಕೂದಲ ರಕ್ಷಣೆಗೆ ಇದು ಪರಿಪೂರ್ಣ ನಿರ್ವಿಶೀಕರಣ ಏಜೆಂಟ್. ಇದು ನಿಮ್ಮ ನೆತ್ತಿಯ ಸ್ಥಿತಿ ಕಾಪಾಡುತ್ತದೆ. ಕೂದಲಿನ ಹೆಚ್ಚುವರಿ ಎಣ್ಣೆಯ ಉತ್ಪಾದನೆ ತೊಡೆದು ಹಾಕುತ್ತದೆ.

  ಕೂದಲ ರಕ್ಷಣೆಯ ದಿನಚರಿಯಲ್ಲಿ ಟಿ ಟ್ರಿ ಬಳಸಿ

  ಎಣ್ಣೆಯುಕ್ತ ತಲೆಹೊಟ್ಟು ಬೇಸಿಗೆಯಲ್ಲಿ ಸಾಮಾನ್ಯ ಸಮಸ್ಯೆ. ಇದರಿಂದ ಕೂದಲು ಕೆಟ್ಟದಾಗಿ ಕಾಣುತ್ತದೆ ಮತ್ತು ಕೆಟ್ಟ ವಾಸನೆ ಬರುತ್ತದೆ. ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಚಹಾ ಮರವನ್ನು ಸೇರಿಸುವುದು ನೆತ್ತಿಯ ತೇವಾಂಶ ತೆಗೆದು ಹಾಕದೆ ಸ್ವಚ್ಛವಾಗಿಡಲು ಸರಳವಾದ ಮಾರ್ಗವಾಗಿದೆ.

  ಟಿ ಟ್ರಿ ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದಾಗಿ ನೆತ್ತಿಯ ಸೋಂಕಿನ ವಿರುದ್ಧ ಹೋರಾಡುವ ಉತ್ತಮ ಸಾಮರ್ಥ್ಯ ಹೊಂದಿದೆ. ಡ್ಯಾಂಡ್ರಫ್ ಹೋಗಲಾಡಿಸಲು ಇದೊಂದು ಉತ್ತಮ ರೆಸಿಪಿ.

  ಇದನ್ನೂ ಓದಿ: ಮದುವೆ ಸಮಾರಂಭಕ್ಕೆ ಹೋಗುವ ಮೊದಲು ಗ್ಲಾಸಿ ಮೇಕಪ್ ಮತ್ತು ಗೋಲ್ಡನ್ ಮೇಕಪ್ ಹೀಗೆ ಮಾಡಿಕೊಳ್ಳಿ

  ನೆತ್ತಿಗೆ ಕೂಲಿಂಗ್ ಸೆನ್ಸೇಷನ್ ನೀಡಲು ಮೆಂತ್ಯೆ

  ಬೇಸಿಗೆಯ ಕೂದಲ ರಕ್ಷಣೆಯ ದಿನಚರಿಯಲ್ಲಿ ಮೆಂತ್ಯೆ ಉತ್ತಮ ಅಂಶ. ಇದು ನಿಮ್ಮ ನೆತ್ತಿಗೆ ಕೂಲಿಂಗ್ ಸೆನ್ಸೇಷನ್ ನೀಡುತ್ತದೆ. ಇದರ ಬಳಕೆಯಿಂದ ಬೇಸಿಗೆಯಲ್ಲಿ ಕೂದಲಿನಿಂದ ಬೆವರಿನ ವಾಸನೆ ಬರುವುದಿಲ್ಲ. ನೆತ್ತಿಯ ಮೇಲೆ ರಕ್ತ ಪರಿಚಲನೆ, ಕೂದಲು ಉದುರುವಿಕೆ ತಡೆಯಲು ಮತ್ತು ಕೂದಲಿನ ಬೆಳವಣಿಗೆ ಉತ್ತೇಜಿಸಲು ಮೆಂತೆಕಾಳು ಉತ್ತಮ.
  Published by:renukadariyannavar
  First published: