Winter Health Tips: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇವುಗಳನ್ನು ಮಿಸ್​ ಮಾಡ್ದೇ ಕುಡಿಯಿರಿ

Winter Health Drinks: ನಿಮ್ಮ ಅಡುಗೆಮನೆಯಲ್ಲಿರುವ ಪದಾರ್ಥಗಳೊಂದಿಗೆ ನೀವು ಸುಲಭವಾಗಿ ಇದನ್ನು ತಯಾರಿಸಬಹುದು.  ಈ ಚಳಿಗಾಲದಲ್ಲಿ ಬೆಚ್ಚಗಾಗಲು ಆರೋಗ್ಯಕರ ಪಾನೀಯಗಳು ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಳಿಗಾಲದ(Winter) ಆರಂಭವಾಗಿದೆ. ಶೀತ ಹವಾಮಾನವನ್ನು ಪರಿಣಾಮಕಾರಿಯಾಗಿ  ಎದುರಿಸಲು ಆಹಾರ ಮತ್ತು ಜೀವನಶೈಲಿಯಲ್ಲಿ(Lifestyle) ಅಗತ್ಯ ಬದಲಾವಣೆಗಳನ್ನು ಮಾಡುವ ಸಮಯ ಇದು. ಬೇಸಿಗೆ ಕಾಲದಲ್ಲಿ, ಹಣ್ಣಿನ ಜ್ಯೂಸ್​ಗಳು(Fruits Juice), ಶೇಕ್‌ಗಳು, ಮಜ್ಜಿಗೆ, ಜಲ್ಜೀರಾ ಅಥವಾ ಎಳನೀರು ಮುಂತಾದ ರಿಫ್ರೆಶ್ ಪಾನೀಯಗಳು ಸೆಖೆಯ ಅನುಭವದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಈಗ ತಾಪಮಾನವು ಗಣನೀಯವಾಗಿ ಕುಸಿದಿರುವುದರಿಂದ, ನಿಮ್ಮನ್ನು ಬೆಚ್ಚಗೆ ಇಡುವ ಪಾನೀಯಗಳಿಗೆ ಬದಲಾಗುವ ಸಮಯ. ನಿಮ್ಮ ಸಾಮಾನ್ಯ ಚಹಾ ಮತ್ತು ಕಾಫಿ ಹೊರತುಪಡಿಸಿ ಕೆಲವು ವಿಭಿನ್ನ ಆಯ್ಕೆಯನ್ನು ಹುಡುಕುತ್ತಿದ್ದರೆ, ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ.

ನಿಮ್ಮ ಅಡುಗೆಮನೆಯಲ್ಲಿರುವ ಪದಾರ್ಥಗಳೊಂದಿಗೆ ನೀವು ಸುಲಭವಾಗಿ ಇದನ್ನು ತಯಾರಿಸಬಹುದು.  ಈ ಚಳಿಗಾಲದಲ್ಲಿ ಬೆಚ್ಚಗಾಗಲು ಆರೋಗ್ಯಕರ ಪಾನೀಯಗಳು ಇಲ್ಲಿದೆ.

1. ಗಿಡಮೂಲಿಕೆಗಳ ಚಹಾ

ನಿಮ್ಮ ಸಾಮಾನ್ಯ ಚಹಾವನ್ನು ಗಿಡಮೂಲಿಕೆ ಚಹಾಗಳೊಂದಿಗೆ ಬದಲಾಯಿಸಿದರೆ ಉತ್ತಮ ಎನ್ನಲಾಗುತ್ತದೆ. ಇವುಗಳನ್ನು ಮನೆಯಲ್ಲಿಯೇ ತಯಾರಿಸಬಹುದು ಕೆಫೀನ್‌ನ ಅತಿಯಾಗಿ ದೇಹಕ್ಕೆ ಸೇರುವುದಿಲ್ಲ. ಸಾಕಷ್ಟು ಗಿಡಮೂಲಿಕೆ ಚಹಾಗಳು ಲಭ್ಯವಿದೆ. ಕೆಲವು ಉತ್ತಮ ಆಯ್ಕೆಗಳೆಂದರೆ, ಕ್ಯಾಮೊಮೈಲ್ ಟೀ, ಶುಂಠಿ ಟೀ, ತುಳಸಿ ಟೀ, ಬ್ಲೂ ಟೀ, ಗ್ರೀನ್ ಟೀಗಳು.

2. ಅರಿಶಿನ ಹಾಲು

ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸೂಪರ್ ಜ್ಯೂಸ್​ಗಳು

ಅರಿಶಿನ ಹಾಲನ್ನು ಗೋಲ್ಡನ್ ಮಿಲ್ಕ್ ಎಂದೂ ಕರೆಯುತ್ತಾರೆ. ಈ ಪಾನೀಯವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅರಿಶಿನವು ಆ್ಯಂಟಿ ಆಕ್ಸಿಡೆಂಟ್​, ಉರಿಯೂತದ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಂದ ತುಂಬಿರುತ್ತದೆ. ಅರಿಶಿನದ ಹಾಲನ್ನು ಕುಡಿಯುವುದು ಮಧುಮೇಹಿಗಳಿಗೆ, ಹೃದಯದ ಆರೋಗ್ಯ, ಮೂಳೆಗಳು, ಚರ್ಮ ಮತ್ತು ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ.

3. ಬಿಸಿ ನಿಂಬೆ ನೀರು

ನಿಂಬೆ ಸಿಟ್ರಸ್ ಕುಟುಂಬಕ್ಕೆ ಸೇರಿದೆ. ಇದು ವಿಟಮಿನ್ ಸಿ ಯಿಂದ ತುಂಬಿರುತ್ತದೆ, ಇದು ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಧ್ಯಯನಗಳ ಪ್ರಕಾರ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನೀವು ಬಿಸಿ ನಿಂಬೆ ನೀರನ್ನು ಕುಡಿಯಬಹುದು. ಇದು ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹ ಸಹಾಯ ಮಾಡುತ್ತದೆ.

 4. ಬಾದಾಮಿ ಹಾಲು

ನಿಮ್ಮ ತಾಯಿ ಅಥವಾ ಅಜ್ಜಿ ಆಗಾಗ್ಗೆ ಬಾದಾಮ್ ಹಾಲನ್ನು ಕುಡಿಯುವಂತೆ ಹೇಳುವುದನ್ನ ಕೇಳಿರುತ್ತಾರೆ. ಪುಡಿಮಾಡಿದ ಬಾದಾಮಿಯನ್ನು ಹಾಲಿಗೆ ಬೆರೆಸಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಬಾದಾಮಿಯು ವಿಟಮಿನ್ ಇ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಈ ಪಾನೀಯಕ್ಕೆ ಏಲಕ್ಕಿ ಮತ್ತು ಕೇಸರಿಯನ್ನೂ ಸೇರಿಸಬಹುದು. ಇದು ಆರೋಗ್ಯಕರವಾಗಲು ಸಕ್ಕರೆ ಸೇರಿಸಬೇಡಿ.

5. ದಾಲ್ಚಿನ್ನಿ ಹಾಲು

ದಾಲ್ಚಿನ್ನಿ ಆಹಾರ ಮತ್ತು ಪಾನೀಯಗಳಿಗೆ ಪರಿಮಳವನ್ನು ಸೇರಿಸಲು ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದೆ. ಈ ಮಸಾಲೆಯು ಬಲವಾದ ಔಷಧೀಯ ಗುಣಗಳನ್ನು ಹೊಂದಿದೆ. ದಾಲ್ಚಿನ್ನಿ  ಆ್ಯಂಟಿ ಆಕ್ಸಿಡೆಂಟ್​ ಮತ್ತು ಉರಿಯೂತದ ಗುಣಲಕ್ಷಣಗಳಿಂದ ತುಂಬಿರುತ್ತದೆ. ಇದು ನಿಮ್ಮ ಹೃದಯಕ್ಕೆ ಸಹ ಪ್ರಯೋಜನಕಾರಿಯಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ದಾಲ್ಚಿನ್ನಿ ಹಾಲಿನೊಂದಿಗೆ ಬೆರೆಸಿ ಸೇವನೆ ಮಾಡುವುದು ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

 6. ಅಲೋವೆರಾ ಜ್ಯೂಸ್

ಇದನ್ನೂ ಓದಿ: ಪದೇ ಪದೇ ತಲೆನೋವು ಕಾಡ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ ತಲೆನೋವು ಮಂಗಮಾಯವಾಗುತ್ತೆ

ಅಲೋವೆರಾವನ್ನು ಸೂಪರ್ ಫುಡ್ ಎಂದೂ ಕರೆಯುತ್ತಾರೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಸೌಂದರ್ಯವರ್ಧಕಗಳಲ್ಲಿ, ಅಲೋವೆರಾವನ್ನು ಚರ್ಮದ ಆರೈಕೆಗಾಗಿಯೂ ಬಳಸಲಾಗುತ್ತದೆ. ಇದು ಆ್ಯಂಟಿ ಆಕ್ಸಿಡೆಂಟ್​ಗಳನ್ನು ಸಮೃದ್ಧವಾಗಿ ಹೊಂದಿದೆ. ಇದರ ತಿರುಳಿನಿಂದ ತಯಾರಿಸಿದ ಜ್ಯೂಸ್​ ಅನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಅಲೋವೆರಾ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.  ಅಲ್ಲದೇ ಇದು ದೇಹದಲ್ಲಿ ಶೇಖರಣೆಯಾಗುವ ಕಲ್ಮಶಗಳನ್ನು ಹೊರಹಾಕಿ ಆರೋಗ್ಯವನ್ನು ಕಾಪಾಡುತ್ತದೆ.
Published by:Sandhya M
First published: