• Home
  • »
  • News
  • »
  • lifestyle
  • »
  • Heart Health: ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತೆ ಎಚ್ಚರ

Heart Health: ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತೆ ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Heart Health: ಹೃದಯ ರಕ್ತನಾಳದ ಕಾಯಿಲೆ ಅಥವಾ ಹೃದಯ ರೋಗಗಳು ಹೃದಯ ಹಾಗೂ ರಕ್ತನಾಳಗಳ ಸಮೂಹ ಆಕ್ರಮಿಸುವ ಕಾಯಿಲೆಯಾಗಿದೆ. ಈ ಕಾಯಿಲೆಗಳು ನಮ್ಮ ಪ್ರಾಣಪಕ್ಷಿಯನ್ನೇ ಹಾರಿಸಿ ಬಿಡುತ್ತದೆ. ಹೀಗಾಗಿ ಆರೋಗ್ಯವಂತ ಹೃದಯ ಕಾಪಾಡಿಕೊಳ್ಳುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಉತ್ತಮ.

ಮುಂದೆ ಓದಿ ...
  • Share this:

ಹೃದಯರಕ್ತನಾಳದ ಕಾಯಿಲೆ ಹೆಚ್ಚು ಪ್ರಮಾಣದಲ್ಲಿ ಜನರನ್ನು ಬಲಿ ಪಡೆದುಕೊಳ್ಳುತ್ತಿರುವ ಮಾರಕ ಕಾಯಿಲೆಯಾಗಿದೆ. WHO ಅಂದಾಜಿನ ಪ್ರಕಾರ, ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಜೀವಗಳು ಹೃದಯರಕ್ತನಾಳದ ಕಾಯಿಲೆಗಳಿಂದ ಬಲಿಯಾಗುತ್ತಿದ್ದಾರೆ ಎಂದು ಹೇಳಿದೆ. ಹೃದಯ (Heart)  ಅತಿ ಮುಖ್ಯವಾದ ಅಂಗವಾಗಿದ್ದು ಇದರ ಆರೋಗ್ಯ (Health) ಕಾಪಾಡಲು ನಮ್ಮ ಕೆಲವು ಜೀವನಕ್ರಮದ ಅಭ್ಯಾಸಗಳು ಪೂರಕವಾಗಿವೆ. ಇವುಗಳನ್ನು ನಿತ್ಯವೂ ಅನುಸರಿಸಿ ಅನಾರೋಗ್ಯ ಅಭ್ಯಾಸಗಳನ್ನು ತ್ಯಜಿಸುವ ಮೂಲಕ ಆರೋಗ್ಯಕರ ಹೃದಯ ಮತ್ತು ಆಯಸ್ಸನ್ನು ಪಡೆಯಬಹುದು.


ಜೀವನಶೈಲಿ ಮತ್ತು ಆಹಾರಕ್ರಮ ಸೇರಿ ಎರಡು ಪ್ರಮುಖ ಅಂಶಗಳ ಜೊತೆಗೆ CVD ಗಳ ಬೆಳವಣಿಗೆಗೆ ವಿವಿಧ ಅಂಶಗಳು ಕಾರಣವಾಗುತ್ತಿವೆ. ನಿಮಗಾಗಿ ರಕ್ತವನ್ನು ಪಂಪ್ ಮಾಡಲು ಮತ್ತು ನಿಮ್ಮನ್ನು ಜೀವಂತವಾಗಿರಿಸಲು ನಿಮ್ಮ ಹೃದಯವು ತುಂಬಾ ತೊಂದರೆಗಳನ್ನು ಅನುಭವಿಸುತ್ತದೆ.


ನಿಮಗೆ ಉಸಿರು ಕೊಟ್ಟು ಬದುಕಿಸುತ್ತಿರುವ ಹೃದಯವನ್ನು ನೀವೆಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಿ ಎಂಬುವುದರ ಬಗ್ಗೆ ಗಮನ ಹರಿಸಿ ನೋಡಿ. ಹೃದಯಕ್ಕೆ ಹಾನಿ ಮಾಡುವ ಕೆಲವು ದುಶ್ಚಟಗಳಿಂದ ದೂರವಿರಿ, ಜೀವನ ಶೈಲಿಯ ಬದಲಾವಣೆ ಅಗತ್ಯವಾಗಿ ಆಗಲಿ. ಹೀಗಿದ್ದಲ್ಲಿ ಮಾತ್ರ ಆರೋಗ್ಯವಂತ ಹೃದಯ ನಿಮ್ಮದಾಗುತ್ತದೆ.


ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ಈ ಆಹಾರಗಳು ಪರಿಹಾರವಂತೆ


ಹೃದಯದ ಆರೋಗ್ಯವನ್ನು ಹಾಳು ಮಾಡುವ ಕೆಲವು ತಪ್ಪುಗಳು ಇಲ್ಲಿವೆ.


1) ಅತಿಯಾದ ಆಲ್ಕೋಹಾಲ್ ಸೇವನೆ
ಧೂಮಪಾನ, ಮದ್ಯಪಾನಗಳಂತಹ ವ್ಯಸನಗಳು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಈ ವ್ಯಸನಗಳು ಹೃದಯದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆಯು ಹೃದಯದ ಸ್ನಾಯುವಿನ ಕಾಯಿಲೆಯಾದ ಆಲ್ಕೋಹಾಲಿಕ್ ಕಾರ್ಡಿಯೋಮಯೋಪತಿ (ACM)ಗೆ ಕಾರಣವಾಗಬಹುದು.


2) ರೋಗಲಕ್ಷಣಗಳ ಬಗ್ಗೆ ಅಲಕ್ಷ್ಯ
ಹೃದಯ ಸಂಬಂಧಿ ಕಾಯಿಲೆಗಳಿದ್ದರೆ, ಹೃದಯವು ಆಗಾಗ್ಗೆ ತೊಂದರೆಯ ಲಕ್ಷಣಗಳನ್ನು ನೀಡುತ್ತದೆ. ಈ ಲಕ್ಷಣಗಳು ಪ್ರಾಥಮಿಕವಾಗಿದ್ದು ಅಲಕ್ಷ್ಯ ಮಾಡಿದ್ದಲ್ಲಿ ದೊಡ್ಡ ತೊಂದರೆ ಅನುಭವಿಸಬೇಕಾಗುತ್ತದೆ. ಎದೆನೋವು, ನಿರಂತರವಾಗಿ ಅಧಿಕ ಹೃದಯ ಬಡಿತ ಇಂಥ ಲಕ್ಷಣ ಕಂಡು ಬಂದರೆ ತಕ್ಷಣ ಜಾಗರೂಕರಾಗಿ ವೈದ್ಯರ ಭೇಟಿ ಮಾಡಿ. ಹಲವು ಕಾಯಿಲೆಗಳು ನಮ್ಮ ನಿರ್ಲಕ್ಯದಿಂದಲೇ ಹೆಚ್ಚು ಉಲ್ಬಣವಾಗುತ್ತವೆ. ಆರೋಗ್ಯಕ್ಕೆ ಸಂಬಂಧ ಪಟ್ಟ ವಿಷಯದಲ್ಲಿ ನೀವೇ ಡಾಕ್ಟರ್ ಆಗದೇ ತಕ್ಷಣ ತಜ್ಞರ ಸಲಹೆ ಪಡೆಯುವುದು ಉತ್ತಮ.


3) ಸಾಕಷ್ಟು ವಿಶ್ರಾಂತಿ ಪಡೆಯದಿರುವುದು
ನಿಮ್ಮ ಮೆದುಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಿದ್ರೆಯ ಅಗತ್ಯವಿರುವ ಏಕೈಕ ಅಂಗವಲ್ಲ. ಜೊತೆಗೆ ನಿಮ್ಮ ಹೃದಯವು ಆರೋಗ್ಯವಾಗಿರಲು ಸಹ ವಿಶ್ರಾಂತಿಯ ಅಗತ್ಯವಿದೆ. ವಿಶ್ರಾಂತಿಯ ಕೊರತೆಯು ಅಧಿಕ ರಕ್ತದೊತ್ತಡ, ಅಸಮರ್ಪಕ ತೂಕ ಇತ್ಯಾದಿಗಳಿಗೆ ಕಾರಣವಾಗಬಹುದು. ಇದು ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು. ಹಾಗಾಗಿ ಕೆಲಸದ ಜೊತೆ ಜೊತೆ ಹೃದಯಕ್ಕೂ ವಿಶ್ರಾಂತಿ ನೀಡಿ. ಹೆಚ್ಚು ಟೆನ್ಷನ್ ಮಾಡಿಕೊಳ್ಳದೇ ಆರಾಮಾಗಿರಿ.


4) ಒತ್ತಡವನ್ನು ತಪ್ಪಾಗಿ ನಿರ್ವಹಿಸುವುದು
ನಿಮ್ಮ ಒತ್ತಡವನ್ನು ನಿರ್ವಹಿಸಲು ಪ್ರಯತ್ನಿಸದೆ ನೀವು ದಿನಗಳನ್ನು ಕಳೆಯುತ್ತೀರಾ? ಈ ಅಭ್ಯಾಸವು ನಿಮ್ಮ ಹೃದಯಕ್ಕೆ ಅನಾರೋಗ್ಯಕರವಾಗಿದೆ. ಒತ್ತಡವು ಹೃದಯ ವೈಫಲ್ಯಕ್ಕೆ ಕಾರಣವಾಗುವ ಅಂಶಗಳಲ್ಲಿ ಒಂದಾಗಿದೆ. ವಿವಿಧ ಒತ್ತಡದ ಸಂದರ್ಭಗಳಲ್ಲಿ ನಿಮ್ಮನ್ನು ಈ ಪರಿಸ್ಥಿತಿಗೆ ನೂಕಬಹುದು. ಆದರೆ ಅದರಿಂದ ಹೊರಬರಲು ಯಾವಾಗಲೂ ಪ್ರಯತ್ನಿಸಬೇಕು. ಯೋಗಾಭ್ಯಾಸ, ಧ್ಯಾನ ಮೊದಲಾದ ಕ್ರಮಗಳಿಂದ ಮಾನಸಿಕ ಒತ್ತಡವನ್ನು ನಿರ್ವಹಿಸಲು ಯತ್ನಿಸಿ.


5) ಧೂಮಪಾನ
ಆರೋಗ್ಯದ ಮೇಲೆ ಧೂಮಪಾನದ ಹಾನಿಕಾರಕ ಪರಿಣಾಮಗಳು ಎಲ್ಲರಿಗೂ ತಿಳಿದಿವೆ. ಆದಾಗ್ಯೂ, ವಿಜ್ಞಾನ-ಬೆಂಬಲಿತ ಸತ್ಯಗಳನ್ನು ನಿರ್ಲಕ್ಷಿಸುವುದು ನಿಮ್ಮ ಆರೋಗ್ಯವನ್ನು ಕಳೆದುಕೊಳ್ಳುವ ತಪ್ಪು. ಧೂಮಪಾನವು ಹೃದಯರಕ್ತನಾಳದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ.


ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ಈ ಆಹಾರಗಳು ಪರಿಹಾರವಂತೆ


ಹೃದಯ ರಕ್ತನಾಳದ ಕಾಯಿಲೆ ಅಥವಾ ಹೃದಯ ರೋಗಗಳು ಹೃದಯ ಹಾಗೂ ರಕ್ತನಾಳಗಳ ಸಮೂಹ ಆಕ್ರಮಿಸುವ ಕಾಯಿಲೆಯಾಗಿದೆ. ಈ ಕಾಯಿಲೆಗಳು ನಮ್ಮ ಪ್ರಾಣಪಕ್ಷಿಯನ್ನೇ ಹಾರಿಸಿ ಬಿಡುತ್ತದೆ. ಹೀಗಾಗಿ ಆರೋಗ್ಯವಂತ ಹೃದಯ ಕಾಪಾಡಿಕೊಳ್ಳುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಉತ್ತಮ.

Published by:Sandhya M
First published: