ವೀರ್ಯಾಣು ಕೊರತೆಗೆ ಕಾರಣವಾಗುತ್ತಿದೆ ನಿಮ್ಮ ದೈನಂದಿನ ಚಟುವಟಿಕೆ..!

news18
Updated:July 10, 2018, 7:08 PM IST
ವೀರ್ಯಾಣು ಕೊರತೆಗೆ ಕಾರಣವಾಗುತ್ತಿದೆ ನಿಮ್ಮ ದೈನಂದಿನ ಚಟುವಟಿಕೆ..!
news18
Updated: July 10, 2018, 7:08 PM IST
-ನ್ಯೂಸ್ 18 ಕನ್ನಡ

ಇತ್ತೀಚಿನ ಜೀವನ ಶೈಲಿ ಮತ್ತು ಆಹಾರ ಕ್ರಮಗಳಿಂದ ಉಂಟಾಗುವ ಸಮಸ್ಯೆಗಳಲ್ಲಿ ವೀರ್ಯಾಣುಗಳ ಕೊರತೆ ಕೂಡ ಒಂದು. ಪುರುಷರಲ್ಲಿ ನಪುಂಸಕತ್ವ ಉಂಟಾಗಲು ವಿರ್ಯಾಣುಗಳ ಕೊರತೆ ಮುಖ್ಯ ಕಾರಣವಾಗುತ್ತಿದೆ.  ನಾವು ಮಾಡುವ ಪ್ರತಿನಿತ್ಯದ ಕೆಲಸ ಕಾರ್ಯಗಳು ಕೂಡ ವೀರ್ಯದ ಗುಣಮಟ್ಟ ಕ್ಷೀಣಿಸಲು ಕಾರಣವಾಗುತ್ತದೆ. ಈ ಸಮಸ್ಯೆಗೆ ಕಾರಣವಾಗುವ ಮತ್ತು ಇದಕ್ಕಿರುವ ಪರಿಹಾರ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

1- ಪ್ರತಿನಿತ್ಯ ಯೋಗ ಮಾಡುವುದರಿಂದ ವೀರ್ಯಾಣುಗಳ ಸಂಖ್ಯೆ ವೃದ್ದಿಸುತ್ತದೆ. ಭಾಸ್ತ್ರಿಕಾ ಪ್ರಾಣಾಯಾಮ, ಹಲಾಸನ್, ಸೂರ್ಯನಮಸ್ಕಾರ್, ಸೇತುಭಂಗಾಸನ್ ಮತ್ತು ಧನುರಾಸಾನ ಮುಂತಾದ ಯೋಗಾಸನಗಳನ್ನು ನಿರ್ವಹಿಸಿದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು.

2- ಒತ್ತಡದ ಜೀವನ ಕೂಡ ವೀರ್ಯಾಣುಗಳನ್ನು ಕಡಿಮೆಗೊಳಿಸುತ್ತದೆ. ನಿರಂತರ ಒತ್ತಡದಿಂದ ವೀರ್ಯಾಣು ಉತ್ಪತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

3- ಮದ್ಯಪಾನ ಮತ್ತು ಧೂಮಪಾನ ಸೇವನೆಯಿಂದ ಕೂಡ ವಿರ್ಯಾಣುಗಳ ಕೊರತೆ ಉಂಟಾಗುತ್ತದೆ. ಈ ಚಟಗಳಿಂದ ದೂರ ಉಳಿದರೆ ವೀರ್ಯದ ಗುಣಮಟ್ಟ ಹೆಚ್ಚಿಸಬಹುದು.

4- ತುಂಬ ಬಿಗಿಯಾದ ಒಳ ಉಡುಪನ್ನು ಧರಿಸಬೇಡಿ. ರಾತ್ರಿ ನಿದ್ರಿಸುವ ವೇಳೆ ಜೀನ್ಸ್ ಅಥವಾ ಬಿಗಿಯಾದ ವಸ್ತ್ರ ಧರಿಸಿ ಮಲಗಬೇಡಿ. ಬದಲಾಗಿ ಪೈಜಾಮ ರೀತಿಯ ಉಡುಪನ್ನು ಧರಿಸಿ ಮಲಗುವ ಅಭ್ಯಾಸ ಮಾಡಿಕೊಳ್ಳಿ.

5- ಲ್ಯಾಪ್​ಟಾಪ್ ಅನ್ನು ತೊಡೆಯ ಮೇಲಿಟ್ಟು ಬಳಸಬೇಡಿ. ಇದರಿಂದ ಕೂಡ ವೀರ್ಯಾಣುಗಳ ಕೊರತೆ ಉಂಟಾಗುತ್ತದೆ.
Loading...

6- ಮೊಬೈಲ್​ಗಳನ್ನು ಪ್ಯಾಂಟ್​​ ಪಾಕೆಟ್​ನಲ್ಲಿಡುವುದನ್ನು ನಿಲ್ಲಿಸಿ. ಮೊಬೈಲ್​ನಿಂದ ಹೊರ ಸೂಸುವ ರೇಡಿಯೋ ತರಂಗಗಳು ವೀರ್ಯಾಣು ಉತ್ಪತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

7- ಲೈಂಗಿಕ ಕ್ರಿಯೆಯಲ್ಲಿ ಅತಿಯಾದ ಲೂಬಿಕ್ರಂಟ್​​ ಆಯಿಲನ್ನು ಬಳಸಬೇಡಿ. ಇದು ಕೂಡ ವೀರ್ಯ ಉತ್ಪತಿಯನ್ನು ಕಡಿಮೆ ಮಾಡುತ್ತದೆ.

8- ಸೋಯಾ ಮಿಲ್ಕ್​​ ಪಾನೀಯ ಸೇವನೆಯನ್ನು ಕಡಿಮೆ ಮಾಡಿ. ಸೋಯಾ ಪಾನೀಯದಿಂದ ವೀರ್ಯಾಣುಗಳ ಸಂಖ್ಯೆ ಕ್ಷೀಣಿಸುತ್ತದೆ.

9- ಪ್ರತಿನಿತ್ಯ ಮೂರಕ್ಕಿಂತ ಹೆಚ್ಚಿನ ಬಾರಿ ಕಾಫಿ ಸೇವಿಸಿದರೂ ಪುರುಷರ ವೀರ್ಯಾಣುಗಳ ಸಂಖ್ಯೆ ಕುಂಠಿತವಾಗುತ್ತದೆ.

10- ಸ್ಟೀಮ್ ಬಾತ್ ಅಥವಾ ಹಬೆ ಸ್ನಾನವನ್ನು ಕಡಿಮೆಗೊಳಿಸಿ. ವಾರಕ್ಕೊಮ್ಮೆ ಸ್ಟೀಮ್ ಬಾತ್ ಮಾಡುವುದು ಉತ್ತಮ. ಹಾಗೆಯೇ 40 ಡಿಗ್ರಿಗಿಂತ ಹೆಚ್ಚಿನ ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ ವೀರ್ಯಾಣು ಕೊರತೆಯ ಸಮಸ್ಯೆಗೆ ಪರಿಹಾರ ಕಾಣಬಹುದು.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ