Health Care: ಧೂಮಪಾನದಷ್ಟೇ ಅಪಾಯಕಾರಿ ಈ 5 ವ್ಯಸನಗಳು; ಎಚ್ಚರ!

ಧೂಮಪಾನದಷ್ಟೇ ಅಪಾಯಕಾರಿ ಅಭ್ಯಾಸಗಳನ್ನು ನಾವು ಗೊತ್ತಿಲ್ಲದಂತೆ ರೂಢಿಸಿಕೊಂಡಿರುತ್ತೇವೆ. ಅವು ಧೂಮಪಾನದಂತೆಯೇ ನಮಗೆ ಹಾನಿಯನ್ನುಂಟು ಮಾಡಬಹುದು ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವದಲ್ಲಿ ಭಾರತವು 12% ಕ್ಕಿಂತ ಹೆಚ್ಚು ಧೂಮಪಾನಿಗಳನ್ನು ಹೊಂದಿದೆ. ಧೂಮಪಾನ ಅಪಾಯಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಭಾರತದಲ್ಲಿ ಮಾತ್ರ ಪ್ರತಿವರ್ಷ 10 ಮಿಲಿಯನ್ ಜನರು ಧೂಮಪಾನದಿಂದ ಸಾಯುತ್ತಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ, ಧೂಮಪಾನವು ಯುವಜನರಿಗೆ ಒಂದು ಅಭ್ಯಾಸವಾಗಿದೆ. ಈ ಅಭ್ಯಾಸಗಳು ಜೀವನದಲ್ಲಿ ಎಷ್ಟು ಪರಿಣಾಮ ಬೀರುತ್ತವೆ ಎಂದರೆ ಕೆಲವು ಜನರಿಗೆ ಅದನ್ನು ಜೀವನದ ಅಂತ್ಯದವರೆಗೂ ಬಿಡಲು ಸಾಧ್ಯವಾಗುವುದಿಲ್ಲ. ಆದರೆ ಧೂಮಪಾನದಷ್ಟೇ ಅಪಾಯಕಾರಿ ಹೆಚ್ಚು ಅಭ್ಯಾಸಗಳಿವೆ. ನಾವು ಆದರೆ ಆ ಅಭ್ಯಾಸಗಳನ್ನು ನಿರ್ಲಕ್ಷಿಸುತ್ತೇವೆ, ಆದರೆ ಅವು ಧೂಮಪಾನದಂತೆಯೇ ನಮಗೆ ಹಾನಿಯನ್ನುಂಟು ಮಾಡಬಹುದು ಎಚ್ಚರ!

ಒನ್‌ಅಬೊವ್ ಹೆಲ್ತ್‌ಕೇರ್‌ನ ಸಹ-ಸಂಸ್ಥಾಪಕ ನೇಹಾ ಮಿತ್ತಲ್ ಅವರು ಧೂಮಪಾನದಂತೆಯೇ ಅಪಾಯಕಾರಿಯಾದ 5 ಅಭ್ಯಾಸಗಳನ್ನು ಹಂಚಿಕೊಂಡಿದ್ದಾರೆ: ಬನ್ನಿ ನೋಡೋಣ:

ಒಂಟಿತನ: ದೀರ್ಘಕಾಲದ ಒಂಟಿತನವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಸಾಬೀತುಪಡಿಸಿದೆ. ಇದರ ಪರಿಣಾಮವು ಮೆದುಳಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.  ಬುದ್ಧಿಮಾಂದ್ಯತೆ ಕಾಯಿಲೆಗಳಿಗೆ ಒಂಟಿತನ ಕಾರಣವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಭಾರತದಲ್ಲಿ, ಸುಮಾರು 22% ಹಿರಿಯರು ಏಕಾಂಗಿಯಾಗಿರುತ್ತಾರೆ. ಯುವಕರಲ್ಲಿ, ದೀರ್ಘಕಾಲದ ಒಂಟಿತನವನ್ನು ನಿರ್ಲಕ್ಷಿಸಲಾಗುತ್ತದೆ ಆದರೆ ಯುವಕರು ಎಚ್ಚರ ವಹಿಸುವುದು ಉತ್ತಮ.

ಕಳಪೆ ಆಹಾರ: ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂದು ನಮಗೆಲ್ಲರಿಗೂ ತಿಳಿದಿದೆ ಆದರೆ ನಮ್ಮಲ್ಲಿ ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ. ನಮ್ಮಲ್ಲಿ ಹಲವರು ಸಂಸ್ಕರಿಸಿದ ಆಹಾರಗಳು, ಜಂಕ್ ಫುಡ್‌ಗಳು ಮತ್ತು ಉಪ್ಪು ಮತ್ತು ಸಕ್ಕರೆಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುತ್ತಾರೆ. ಅವು ಮಾತ್ರವಲ್ಲ, ನಾವು ಹೆಚ್ಚಾಗಿ ತರಕಾರಿಗಳು ಮತ್ತು ಹಣ್ಣುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದಿಲ್ಲ. ಈ ಅಭ್ಯಾಸವು ಬೊಜ್ಜು, ಮಧುಮೇಹ ಮುಂತಾದ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ.

ಇದನ್ನು ಓದಿ: ಮರೆಯದಿರಿ! ಅಡುಗೆ ಮಾಡುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳಿವು

ನಿಷ್ಕ್ರಿಯ ಜೀವನಶೈಲಿ: ಇಂದಿನ ಜಗತ್ತಿನಲ್ಲಿ, ನಾವೆಲ್ಲರೂ ಸಿಸ್ಟಮ್‌ ಮುಂದೆ ದೀರ್ಘಕಾಲದವರೆಗೆ ಕುಳಿತುಕೊಳ್ಳುತ್ತೇವೆ. ಜರ್ಮನಿಯ ರೆಜೆನ್ಸ್‌ಬರ್ಗ್ ವಿಶ್ವವಿದ್ಯಾಲಯದ 2014 ರ ಅಧ್ಯಯನವು ಒಬ್ಬ ವ್ಯಕ್ತಿಯು ಪ್ರತಿ 2 ಗಂಟೆಗಳ ಸಿಸ್ಟಮ್‌ ಮುಂದೆ ಕುಳಿತುಕೊಳ್ಳುವುದರಿಂದ, ಕರುಳಿನ ಕ್ಯಾನ್ಸರ್ ಅಪಾಯವು 8% ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯವು 6% ರಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದೆ.

ನಿದ್ರಾಹೀನತೆ: ಸಿಸ್ಟಮ್‌ ಪರದೆಯ ಮುಂದೆ ದೀರ್ಘಕಾಲ ಕುಳಿತುಕೊಳ್ಳುವುದು ನಿದ್ರೆಯ ಅಭಾವಕ್ಕೂ ಕಾರಣವಾಗುತ್ತದೆ. ಪರದೆಯಿಂದ ಬರುವ ನೀಲಿ ಬೆಳಕು ಕಣ್ಣಿನ ಆಯಾಸ, ದೃಷ್ಟಿ ಮಂದವಾಗುವುದು ಮತ್ತು ಕಣ್ಣಿನ ಪೊರೆಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಶದ ಸುಮಾರು 33% ವಯಸ್ಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ, ಮತ್ತು ದೊಡ್ಡ ಸಮಸ್ಯೆ ಎಂದರೆ ಅದು ಸಾಮಾನ್ಯವೆಂದು ಅವರು ಭಾವಿಸುತ್ತಾರೆ.

ನಿರಾಶಾವಾದಿ ವರ್ತನೆ: ನಕಾರಾತ್ಮಕ ವರ್ತನೆ ನಿಮ್ಮ ಜೀವನವನ್ನು ಹಾಳುಮಾಡುತ್ತವೆ. ಆದರೆ ನಕಾರಾತ್ಮಕ ವರ್ತನೆಗಳು ಮತ್ತು ನಿರಾಶಾವಾದವು ಈಗ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಯೋಜನೆಗಳು ತಪ್ಪದಾಗ ಅಥವಾ ಅವುಗಳು ಸರಿಯಾದ ಸಮಯಕ್ಕೆ ಕಾರ್ಯರೂಪಕ್ಕೆ ಬರದಿದ್ದಾಗ ನಿಮಗೆ ನಿರಾಶೆಯಾಗುತ್ತದೆ. ಇದು ಖಿನ್ನತೆ ಮತ್ತು ಅನಗತ್ಯ ಒತ್ತಡಕ್ಕೆ ಕಾರಣವಾಗಬಹುದು.

ಧೂಮಪಾನದಷ್ಟೇ ಅಪಾಯಕಾರಿಯಾದ 5 ಅಭ್ಯಾಸಗಳು ಇವು. ಆದ್ದರಿಂದ, ನಕಾರಾತ್ಮಕ ಮನೋಭಾವವನ್ನು ಬಿಟ್ಟುಬಿಡಿ, ಚೆನ್ನಾಗಿ ನಿದ್ರೆ ಮಾಡಿ, ನಿಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಸಕ್ರಿಯರಾಗಿರಿ, ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ಸಂತೋಷವಾಗಿರಿ. ಒಮ್ಮೆ ನೀವು ಈ 5 ಅಭ್ಯಾಸಗಳನ್ನು ದೂರ ಮಾಡಿದರೆ, ನಿಮ್ಮ ಮನಸ್ಸು, ದೇಹ ಮತ್ತು ಆತ್ಮದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀವು ನೋಡಬಹುದು ಎಂದು ನೇಹಾ ಮಿತ್ತಲ್ ಹೇಳಿದ್ದಾರೆ.
First published: