• Home
  • »
  • News
  • »
  • lifestyle
  • »
  • Memory Loss: ಈ ಆಟಗಳನ್ನು ಆಡಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ; ಸಂಶೋಧನೆಯಲ್ಲಿ ಸಾಬೀತು

Memory Loss: ಈ ಆಟಗಳನ್ನು ಆಡಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ; ಸಂಶೋಧನೆಯಲ್ಲಿ ಸಾಬೀತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಆಟಗಳನ್ನು ನಿಯಮಿತವಾಗಿ ಆಡುವುದರಿಂದ ಸಣ್ಣ ವಿಷಯಗಳು ಬೇಗ ಮರೆತು ಹೋಗುವುದಿಲ್ಲ. ವಸ್ತುಗಳು ಎಲ್ಲಿವೆ, ಎಲ್ಲಿಟ್ಟಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ.

  • Share this:

ಮರೆವು (Forgetting) ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಸಮಸ್ಯೆ. ಹಾಗಂತ ಮರೆವು ಅತಿಯಾದರೆ ಅದು ಸಹಜವಲ್ಲ, ವಿಪರೀತ ಮರೆವು ಅಪಾಯಕಾರಿ ಲಕ್ಷಣವಾಗಿದೆ. ಕೆಲವರಿಗೆ ಶಾರ್ಟ್‌ ಮೆಮೊರಿ ಲಾಸ್‌ (Short Memory Loss) ಇರುತ್ತದೆ. ಅಂದರೆ ಇಟ್ಟ ವಸ್ತು, ಪ್ರೀತಿಪಾತ್ರರ ಜನ್ಮದಿನ ಹೀಗೆ ಚಿಕ್ಕ ವಿಷಯಗಳನ್ನು ಮರೆತು ಬಿಡುತ್ತಾರೆ. ಇನ್ನೂ ಕೆಲವರಂತೂ ಬೈಕ್‌, ಕಾರು ಕೀಗಳನ್ನು ಎಲ್ಲಿಯೋ ಇಟ್ಟು ಇನ್ನೇಲ್ಲಿಯೋ ಹುಡುಕಿ ಅಬ್ಬಾ ಅವರು ಮಾಡುವ ಅವಾಂತರ ಅಷ್ಟಿಷ್ಟಲ್ಲ. ಇದು ಸಹಜವಾಗಿ ಎಲ್ಲರ ಬದುಕಿನಲ್ಲೂ  (Memory loss Problem) ಇರುವಂತದ್ದೇ.


ಬುದ್ಧಿ ಚುರುಕುಗೊಳಿಸಿ ನೆನಪಿನ ಶಕ್ತಿ ಹೆಚ್ಚಿಸುತ್ತವೆ ಕೆಲ ಆಟಗಳು


ಮೆಮೊರಿ ಆಟಗಳು ಸ್ಮರಣೆಯನ್ನು ಸುಧಾರಿಸುವ ಒಂದು ಮೋಜಿನ ವಿಧಾನವಾಗಿದೆ. ನಮ್ಮ ದೇಹಗಳಂತೆ, ಮೆದುಳು ಆರೋಗ್ಯಕರವಾಗಿ ಮತ್ತು ತೀಕ್ಷ್ಣವಾಗಿರಲು ನಿಯಮಿತ ಬಳಕೆಯ ಅಗತ್ಯವಿದೆ.


ಮೆಮೊರಿ ಆಟಗಳು ಮನಸ್ಸಿಗೆ ಸವಾಲು ಹಾಕುತ್ತವೆ ಮತ್ತು ನಮ್ಮ ಮಿದುಳಿನಲ್ಲಿರುವ ಬೂದು ದ್ರವ್ಯವು-ಸ್ಮೃತಿಯ ಮೇಲೆ ಪರಿಣಾಮ ಬೀರುವ ಭಾಗ-ಬೆಳೆಯಲು ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ. ಪ್ರತಿ ದಿನ ಕೇವಲ 15 ನಿಮಿಷಗಳ ಮೆದುಳಿನ ತರಬೇತಿಯು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.


ಇಂತಹ ಚಿಕ್ಕ-ಪುಟ್ಟ ವಿಷಯಗಳನ್ನು ಮರೆಯುವುದನ್ನು ನಿಲ್ಲಿಸಲು ಸಹಾಯ ಮಾಡಲು ಕೆಲವು ಸರಳ ಮಾರ್ಗಗಳಿವೆ. ಇವು ನಿಮ್ಮ ಮೆಮೊರಿ ಪವರ್‌ ಅನ್ನು ಹೆಚ್ಚಿಸುತ್ತವೆ.


These Games You Can Play to Improve Your Memory mrq
ಸಾಂದರ್ಭಿಕ ಚಿತ್ರ


ಹೌದು, ಬುದ್ಧಿ ಚುರುಕಾಗಲು ಉತ್ತಮ ಆಹಾರ, ನಿದ್ದೆ ಸಹಕಾರಿಯಾಗುವುದರ ಜೊತೆ ಕೆಲ ಮೆದುಳಿಗೆ ಕೆಲಸ ಕೊಡುವ ಆಟಗಳು ಸಹ ನಮ್ಮನ್ನು ಮರೆಗುಳಿತನದಿಂದ ಬಚಾವ್‌ ಮಾಡುತ್ತವೆ ಎಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


ಮೆಮೊರಿ ಸುಧಾರಣೆ ಆಟಗಳು


ಕೊಲಂಬಿಯಾದಲ್ಲಿ ಮನೋವೈದ್ಯಶಾಸ್ತ್ರ ಮತ್ತು ನರವಿಜ್ಞಾನದ ಪ್ರಾಧ್ಯಾಪಕರು ನಡೆಸಿದ ಸಂಶೋಧನೆಗಳು, ಜನ ಚಿಕ್ಕ ವಿಷಯಗಳನ್ನು ಮರೆಯುವುದನ್ನು ತಡೆಯಲು ಸಹಾಯ ಮಾಡಲು ಸರಳವಾದ ಮೆಮೊರಿ ಸುಧಾರಣೆ ಆಟವನ್ನು ಉಲ್ಲೇಖಿಸಿದ್ದಾರೆ.‌


ಮುಖ್ಯವಾಗಿ ನಮ್ಮ ಮೆದುಳನ್ನು ಚುರುಕುಗೊಳಿಸಲು ಪದಬಂಧ, ಸುಡೋಕು, ಕ್ರಾಸ್‌ವರ್ಡ್‌, ಚೆಸ್ ಹೀಗೆ ಹಲವು ಸಣ್ಣ ಆಟಗಳು ಮೆದುಳನ್ನು ಚುರುಕುಗೊಳಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆಯಂತೆ.


ಈ ಹಿಂದೆ ಕೂಡ ಹಲವರು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ ಕೂಡ. ಈ ಆಟಗಳನ್ನು ಆಡಲು ಪ್ರತ್ಯೇಕ ಸಮಯವನ್ನು ಎತ್ತಿಡಬೇಕಂತಿಲ್ಲ, ನೀವು ಬೆಳಗ್ಗೆ ಕಾಫಿ ಕುಡಿಯೋ ಸಮಯದಲ್ಲಿ ಕೂಡ ಆಡಬಹುದು. ಈ ವಿಜ್ಞಾನ-ಬೆಂಬಲಿತ ಮೆಮೊರಿ ಸುಧಾರಣೆ ಆಟದೊಂದಿಗೆ ನೀವು ಸುಲಭವಾಗಿ ನಿಮ್ಮ ಸ್ಮರಣೆಯನ್ನು ಸುಧಾರಿಸಬಹುದು.


ಕಂಪ್ಯೂಟರ್ ಗೇಮ್‌ಗಿಂತ ಹೆಚ್ಚು ಪರಿಣಾಮಕಾರಿ ಈ ಪದಬಂಧ ಆಟ


ಕೊಲಂಬಿಯಾದಲ್ಲಿ ನಡೆದ ಕೆಲ ಪರೀಕ್ಷೆಗಳಲ್ಲಿ ಸಂಶೋಧಕರು ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಿದರು. ಮೊದಲ ಗುಂಪು ಕಂಪ್ಯೂಟರ್ ಆಟಗಳನ್ನು ಆಡಿದರೆ, ಎರಡನೇ ಗುಂಪು ಪದಬಂಧಗಳಲ್ಲಿ ಭಾಗವಹಿಸಿತು.


ಇದನ್ನೂ ಓದಿ:  Iron Rich Food: ಈ ಆಹಾರಗಳಲ್ಲಿ ಹೆಚ್ಚು ಕಬ್ಬಿಣಾಂಶ ಇರುತ್ತಂತೆ, ಮಿಸ್​ ಮಾಡದೇ ತಿನ್ನಿ


ಪದಬಂಧ ಆಡಿದವರಲ್ಲಿ ಕಂಪ್ಯೂಟರ್ ಆಟಗಳಲ್ಲಿ ಭಾಗವಹಿಸಿದವರಿಗಿಂತ ಮೆಮೊರಿ ಮತ್ತು ಅರಿವಿನ ಕಾರ್ಯಗಳ ವಿಷಯದಲ್ಲಿ ಉತ್ತಮವಾಗಿದೆ ಎಂದು ಸಂಶೋಧಕರು ಕಂಡುಕೊಂಡರು.


"ಗೃಹಾಧಾರಿತ ಕ್ರಾಸ್‌ವರ್ಡ್ ಪದಬಂಧ ತರಬೇತಿಗಾಗಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಪ್ರಯೋಜನಗಳನ್ನು ದಾಖಲಿಸಲು ಇದು ಮೊದಲ ಅಧ್ಯಯನವಾಗಿದೆ" ಎಂದು ಸಂಶೋಧನೆಯ ಲೇಖಕರಲ್ಲಿ ಒಬ್ಬರಾದ ಡಾ. ದೇವಾನಂದ್ ಹೇಳಿದರು.


These Games You Can Play to Improve Your Memory mrq
ಸಾಂದರ್ಭಿಕ ಚಿತ್ರ


ಈ ಮೆದುಳಿನ ಆಟಗಳು ಹೇಗೆ ಸಹಕಾರಿ?


ಈ ಆಟಗಳನ್ನು ನಿಯಮಿತವಾಗಿ ಆಡುವುದರಿಂದ ಸಣ್ಣ ವಿಷಯಗಳು ಬೇಗ ಮರೆತು ಹೋಗುವುದಿಲ್ಲ. ವಸ್ತುಗಳು ಎಲ್ಲಿವೆ, ಎಲ್ಲಿಟ್ಟಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ.


ಇದನ್ನೂ ಓದಿ:  Cold Remedy: ಈ ಎರಡು ವಸ್ತುಗಳನ್ನು ಬಳಸಿ ಶೀತಕ್ಕೆ ಮನೆಯಲ್ಲೇ ರೆಡಿ ಮಾಡಿ ಸಿರಪ್


ಸಹಜವಾಗಿ, ಈ ಅಧ್ಯಯನವು ಸ್ಮರಣೆಯ ಸಹಾಯದ ಅಗತ್ಯವಿರುವ ರೋಗಿಗಳಲ್ಲಿ ಸಂಪೂರ್ಣವಾಗಿ ಬಳಸಿದರೆ ಮೆಮೊರಿ ಸುಧಾರಣೆ ಖಂಡಿತ ಆಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆಲ್ಝೈಮರ್ನಂತಹ ನೆನಪುಗಳನ್ನು ಗುರಿಯಾಗಿಸುವ ಕಾಯಿಲೆಗಳೊಂದಿಗೆ ಹೋರಾಡುತ್ತಿರುವವರಿಗೆ ಅರಿವಿನ ಕಾರ್ಯವನ್ನು ಹೆಚ್ಚಿಸಲು ಈ ಆಟಗಳು ಸಹಾಯ ಮಾಡುತ್ತದೆ.

Published by:Mahmadrafik K
First published: