Health Tips: ಈ ಆಹಾರಗಳಲ್ಲಿದೆ ನಿಮ್ಮ ರೋಗ ನಿರೋಧಕ ಶಕ್ತಿಯ ಗುಟ್ಟು

Immunity Power: ನಾವು ಸೇವಿಸುವ ಆಹಾರದ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗಬೇಕು ಎಂದಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Food Habits: ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ ಎಂಬುದು ಅಕ್ಷರಶಃ ಸತ್ಯ. ನಮ್ಮ ಆಹಾರ ಪದ್ದತಿ ಮತ್ತು  ನಮ್ಮ ದಿನಿತ್ಯದ ಜೀವನ ಶೈಲಿ ನಮ್ಮ ಆರೋಗ್ಯವನ್ನು ನಿರ್ಧಾರ ಮಾಡುತ್ತದೆ. ಅದರಲ್ಲೂ ಸಧ್ಯದ ಪರಿಸ್ಥಿತಿ ವಿಭಿನ್ನವಾಗಿದೆ. ಕೊರೊನಾ ಸೋಂಕು ಹೆಚ್ಚಿದೆ. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ನಮಗೆ ಯಾವುದೇ ತೊಂದೆರೆ ಆಗುವುದಿಲ್ಲ. ಆದರೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಕರ್ತವ್ಯ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಣ್ಣುಗಳ ಸೇವನೆ ಮತ್ತು ಪೋಷಕಾಂಶಯುಕ್ತ ಆಹಾರ ಅತಿ ಮುಖ್ಯ. ಆರೊಗ್ಯ ತಜ್ಞರ ಪ್ರಕಾರ ಈ ಕೆಳಗಿನ ಹಣ್ಣುಗಳು ಮತ್ತು ಆಹಾರ ಪದಾರ್ಥಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾಷಿವ್ ಆಪಲ್
ಈ ಹಣ್ಣಿನಲ್ಲಿ ಕಿತ್ತಳೆಗಿಂತ ಐದು ಪಟ್ಟು ವಿಟಮಿನ್ ಸಿ ಸಮೃದ್ಧವಾಗಿದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಕ್ಯಾಷಿವ್ ಆಪಲ್ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌, ಸಮೃದ್ಧವಾಗಿರುವುದರಿಂದ, ಈ ಹಣ್ಣು ಅತ್ಯುತ್ತಮ ಆಂಟಿಟ್ಯುಮರ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪೌಷ್ಟಿಕ ತಜ್ಞರು ಸಲಹೆ ನೀಡಿದ್ದಾರೆ.

ಕ್ಯಾರೆಟ್ ಹಲ್ವಾ
ಪ್ರತಿಯೊಬ್ಬರೂ ಇಷ್ಟಪಡುವ, ಈ ಸಿಹಿತಿಂಡಿ ಸಾಮಾನ್ಯವಾಗಿ ಅದರ ಆರೋಗ್ಯಕರ ಪ್ರಯೋಜನಕಾರಿ ಅಂಶಗಳಿಗೆ ಹೆಚ್ಚು ಹೆಸರುವಾಸಿ. ಆದರೆ ಮಧುಮೇಹಿಗಳಿಗೆ ಮಾತ್ರ ಇದು ಆರೋಗ್ಯ ತೊಂದರೆಗಳನ್ನು ತರುವ ಆಹಾರ. ಇದರಲ್ಲಿನ ಸುವಾಸನೆ ಮತ್ತು ಪೋಷಕಾಂಶಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಎಳ್ಳುಂಡೆ
ಈ ಸ್ವೀಟ್ ನಲ್ಲಿ ದೇಹಕ್ಕೆ ಅಗತ್ಯವಿರುವ ಕೊಬ್ಬಿನಾಮ್ಲನ ಅಂಶಗಳಿವೆ. ಅಲ್ಲದೇ ಇದರಲ್ಲಿ , ತಾಮ್ರ, ಮೆಗ್ನೀಸಿಯಮ್ ಮತ್ತು ಸತು ಕೂಡ ಸಮೃದ್ಧವಾಗಿದ್ದು, ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚು ಪ್ರಯೋಜನಕಾರಿ. ಇದರ ಸಾರ ಕೀಲು ನೋವಿಗೆ ಪರಿಪೂರ್ಣ ಪರಿಹಾರ. ಇದರ ಸೇವನೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸ್ನಾಯು ಸಂಬಂಧಿತ ರೋಗಗಳಿಗೆ ಪರಿಹಾರ ನೀಡುತ್ತದೆ.

ಇದನ್ನೂ ಓದಿ: ನಿಮ್ಮ ಒತ್ತಡ ನಿವಾರಣೆಗೆ ಆಯುರ್ವೇದದಲ್ಲಿದೆ ಉಪಾಯ

ನೆಲ್ಲಿಕಾಯಿ
ನೆಲ್ಲಿಕಾಯಿ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಕಬ್ಬಿಣದ ಅಂಶ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ ಸತ್ವಗಳ ಹೆಚ್ಚಿವೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನೆಲ್ಲಿಕಾಯಿಯ ಸೇವನೆ ತಲೆನೋವು, ತಲೆಸುತ್ತು, ನರ ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ತೊಂದರೆಗಳಿಗೆ ಪರಿಹಾರ ನೀಡುತ್ತದೆ.

ಮಾವು
ಪೌಷ್ಟಿಕತಜ್ಞರ ಪ್ರಕಾರ, ಈ ಸರಿಯಾದ ಸಮಯದಲ್ಲಿ ಮಾನಿವ ಹಣ್ಣಿನ ಸೇವನೆ
ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಮಾವಿನ ಹಣ್ಣಿನಲ್ಲಿರುವ ಅಂಶಗಳು ನಮ್ಮ ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೇ, ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ನೀಡುತ್ತದೆ.

ಕೇವಲ ಇದಿಷ್ಟೇ ಮಾತ್ರವಲ್ಲದೇ, ಇನ್ನು ಹಲವಾರು ಆಹಾರ ಪದಾರ್ಥಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ನಾವು ಕಾಲ ಕಾಲಕ್ಕೆ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಬಹು ಮುಖ್ಯವಾಗುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: