ಸಾಮಾನ್ಯವಾಗಿ ತಿನ್ನಲು ಫ್ರೆಶ್ ಆಗಿರುವ ಆಹಾರವನ್ನು ಮಾತ್ರ ನೀಡಲಾಗುತ್ತದೆ. ಏಕೆಂದರೆ ಫ್ರೆಶ್ ಆಗಿರುವ ಫುಡ್ (Fresh Food) ತಿನ್ನುವುದರಿಂದ ವ್ಯಕ್ತಿ ಯಾವಾಗಲೂ ರೋಗಗಳಿಂದ ಮುಕ್ತನಾಗಿರುತ್ತಾನೆ ಎಂದು ವೈದ್ಯರು ಭಾವಿಸುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಎರಡು ಬಾರಿ ಅಡುಗೆ ಮಾಡಲು ಯಾರಿಗೂ ಕೂಡ ಸಮಯವಿಲ್ಲ. ಹಾಗಾಗಿ ಸಾಕಷ್ಟು ಮಂದಿ ಬೆಳಗ್ಗೆ ತಯಾರಿಸಿದ ಆಹಾರವನ್ನೇ ಸಂಜೆ ತಿನ್ನುತ್ತಾರೆ. ಅಲ್ಲದೇ ಕೆಲವು ಬಾರಿ ಸಂಜೆ ತಯಾರಿಸಿದ ಆಹಾರವನ್ನು ಬೆಳಗ್ಗೆ ಬಿಸಿ (Reheat) ಮಾಡಿ ತಿನ್ನುತ್ತಾರೆ. ನೀವು ಇದೇ ರೀತಿ ಮಾಡುತ್ತಿದ್ದರೆ ಎಚ್ಚರದಿಂದ ಇರಿ. ತಜ್ಞರ ಪ್ರಕಾರ, ಅನ್ನ ಸೇರಿದಂತೆ ಈ ಸೇರಿದಂತೆ 4 ಆಹಾರಗಳನ್ನು (Food) ಮರೆತು ಮರುದಿನ ಮತ್ತೆ ಬಿಸಿ ಮಾಡಬಾರದು. ಏಕೆಂದರೆ, ಮತ್ತೆ ಬಿಸಿ ಮಾಡಿದ ತಕ್ಷಣ ಅವು ವಿಷವಾಗುವ (Food Poison) ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಇದು ಗಂಭೀರ ಅನಾರೋಗ್ಯವನ್ನು (Healthly) ಉಂಟುಮಾಡಬಹುದು.
ಡೈಲಿ ಮೇಲ್ ವರದಿಯ ಪ್ರಕಾರ, ಈ ಹಿಂದೆ ಟಿಕ್‌ಟಾಕ್‌ನಲ್ಲಿ ಅನೇಕ ಮಂದಿ ಪ್ರಶ್ನೆಯೊಂದನ್ನು ಎತ್ತಿದ್ದರು. ಅನ್ನ ತಿಂದ ನಂತರ ಫುಡ್ ಪಾಯ್ಸನ್ ಆಗಿದೆ ಎಂದು ದೂರಿದ್ದರು. ಸಕ್ಕರೆ ತಿಂದ ಅನೇಕರಿಗೆ ಸಮಸ್ಯೆಗಳು ಎದುರಾಯಿರು. ಇದಾದ ನಂತರ ತಜ್ಞರ ಸಲಹೆ ಪಡೆಯಲಾಯಿತು. ಆಸ್ಟ್ರೇಲಿಯಾದ ಆಹಾರ ತಜ್ಞ ಕಿಮ್ ಲಿಂಡ್ಸೆ ಅವರು, ಈ 4 ಆಹಾರವನ್ನು ತಪ್ಪಾಗಿಯೂ ಬಿಸಿ ಮಾಡಬಾರದು ಎಂದಿದ್ದಾರೆ. ಮರುದಿನ ಬಿಸಿಮಾಡಿದ ನಂತರ ತಿಂದರೆ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಅಷ್ಟಕ್ಕೂ ಆ ಆಹಾರಗಳು ಯಾವುದು ಎಂದು ತಿಳಿದರೆ, ಖಂಡಿತವಾಗಿಯೂ ನೀವು ಆಶ್ಚರ್ಯಕ್ಕೊಳಗಾಗುತ್ತೀರಿ.
ಮೊಟ್ಟೆಗಳಲ್ಲಿ ವೇಗವಾಗಿ ಹರಡುತ್ತೆ ಬ್ಯಾಕ್ಟೀರಿಯಾ
ಮೊದಲನೆಯದಾಗಿ ನಾವು ಮೊಟ್ಟೆಯನ್ನು ಮತ್ತೆ ಬಿಸಿ ಮಾಡಬಾರದು. ಮೊಟ್ಟೆಗಳನ್ನು ಬಿಸಿ ಮಾಡಿದ ತಕ್ಷಣ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ಪ್ರಾರಂಭಿಸುತ್ತವೆ. ಇದು ಫುಡ್ ಪಾಯ್ಸನ್ಗೆ ಬಹುದೊಡ್ಡ ಕಾರಣ. ಈ ಬ್ಯಾಕ್ಟೀರಿಯಾವು 20 ಡಿಗ್ರಿಯಿಂದ 73 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಹಳ ವೇಗವಾಗಿ ಹರಡುತ್ತದೆ. ಮೊಟ್ಟೆಗಳನ್ನು ಅಥವಾ ಮೊಟ್ಟೆಯಿಂದ ತಯಾರಿಸಿದ ಆಹಾರವನ್ನು ರೆಫ್ರಿಜರೇಟರ್‌ನಿಂದ 2 ಗಂಟೆಗಳಿಗಿಂತ ಹೆಚ್ಚು ಕಾಲ ಅಥವಾ ಬಿಸಿ ವಾತಾವರಣದಲ್ಲಿ ಒಂದು ಗಂಟೆಗಿಂತ ಹೆಚ್ಚು ಕಾಲ ಬಿಡಬಾರದು.
ಅನ್ನ: ಬೇಯಿಸಿದ ಅನ್ನದಲ್ಲಿ ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಾ ಬೆಳೆಯುತ್ತದೆ, ಅದು ಅನ್ನದಲ್ಲಿ ಅಡಗಿರುತ್ತದೆ. ಇವು ಸಾಮಾನ್ಯವಾಗಿ ಮಣ್ಣು ಮತ್ತು ತರಕಾರಿಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳಾಗಿವೆ. ಇದು ಆಲೂಗಡ್ಡೆ, ಬಟಾಣಿ, ಬೀನ್ಸ್ ಮತ್ತು ಕೆಲವು ಮಸಾಲೆಗಳಲ್ಲಿಯೂ ಕಂಡುಬರುತ್ತದೆ. ಕಿಮ್ ಲಿಂಡ್ಸೆ ಪ್ರಕಾರ, ಈ ಬ್ಯಾಕ್ಟೀರಿಯಾವು ಶಾಖ ನಿರೋಧಕವಾಗಿದೆ. ನೀವು ಇದನ್ನು ಬಿಸಿ ಮಾಡಿದಾಗ, ಅದು ಹೆಚ್ಚು ವೇಗವಾಗಿ ವಿಸ್ತರಿಸುತ್ತದೆ ಮತ್ತು ಫುಡ್ ಪಾಯ್ಸನ್ ಅನ್ನು ಉಂಟುಮಾಡಬಹುದು. ಅಕ್ಕಿಯನ್ನು ಸ್ವಚ್ಛಗೊಳಿಸಲು ನೀವು ಅದನ್ನು ತೊಳೆಯುತ್ತೀರಿ. ಆದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ಅಡಗಿರುತ್ತವೆ. ಅದಕ್ಕಾಗಿಯೇ ಅದನ್ನು ಬಿಸಿ ಮಾಡಬಾರದು.
ಪಾಲಕ್ ಸೊಪ್ಪನ್ನು ಬಿಸಿ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ
ಕಿಮ್ ಲಿಂಡ್ಸೆ ಅವರು ಪಾಲಕ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಪಾಲಕ್ ನಂತಹ ಹಸಿರು ಎಲೆಗಳ ತರಕಾರಿಗಳು ನೈಟ್ರೇಟ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತವೆ. ನೈಟ್ರೇಟ್‌ಗಳನ್ನು ಬಿಸಿ ಮಾಡಿದಾಗ, ಅವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಇತರ ಸಂಯುಕ್ತಗಳಾಗಿ ವಿಭಜಿಸುತ್ತವೆ. ನೈಟ್ರೇಟ್‌ಗಳು ಸ್ವತಃ ನಿರುಪದ್ರವವಾಗಿವೆ. ಆದರೆ ಈಗಾಗಲೇ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ದೇಹದಲ್ಲಿನ ಕಿಣ್ವಗಳೊಂದಿಗೆ ಬೆರೆಸಿದ ನಂತರ, ಅದು ಕ್ಯಾನ್ಸರ್‌ಗೆ ಮುಖ್ಯ ಕಾರಣವಾದ ನೈಟ್ರೊಸಮೈನ್‌ಗಳಾಗಿ ಪರಿವರ್ತನೆಗೊಳ್ಳುತ್ತದೆ.
ಇದನ್ನೂ ಓದಿ: Egg: ಮೊಟ್ಟೆಯನ್ನು ಈ ರೀತಿಯಾಗಿ ಸೇವನೆ ಮಾಡ್ಬೇಕಂತೆ, ಸಂಶೋಧನೆ ಏನು ಹೇಳುತ್ತೆ?
ಆಲೂಗಡ್ಡೆಯನ್ನು ಬಿಸಿ ಮಾಡಬೇಡಿ: ಆಲೂಗಡ್ಡೆಯನ್ನು ಮತ್ತೆ ಬಿಸಿ ಮಾಡಬಾರದು. ಕೋಣೆಯ ಉಷ್ಣಾಂಶದಲ್ಲಿಯೂ ಸಹ 2 ಗಂಟೆಗಳಿಗಿಂತ ಹೆಚ್ಚು ಕಾಲ ಇರಿಸಿದಾಗ, ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಎಂಬ ಬ್ಯಾಕ್ಟೀರಿಯಾವು ಆಲೂಗಡ್ಡೆಯಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಇದು ನೇರವಾಗಿ ದೇಹದ ನರಗಳ ಮೇಲೆ ದಾಳಿ ಮಾಡುತ್ತದೆ. ಉಸಿರಾಟಕ್ಕೆ ತೊಂದರೆಯನ್ನೂ ಉಂಟು ಮಾಡುತ್ತದೆ. ವಾಂತಿ, ವಾಕರಿಕೆ, ಹೊಟ್ಟೆ ನೋವು ಹೀಗೆ ಹತ್ತಾರು ಸಮಸ್ಯೆಗಳಲ್ಲಿ ಒಂದರಲ್ಲಿ ಸಾವು ಸಹ ಸಂಭವಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ