Weight Loss Tips: ತೂಕ ಹೆಚ್ಚಿಸಿಕೊಳ್ಳದೇ ರುಚಿ ರುಚಿಯಾದ ಈ ಆಹಾರಗಳನ್ನು ಸೇವಿಸಿ..

Foods For Weight Loss: ದೇಹದ ತೂಕವನ್ನು ಹೆಚ್ಚಿಸಿಕೊಳ್ಳದೆ ನಮಗೆ ಬೇಕಾದ ಆಹಾರ ಸೇವನೆ ಮಾಡುವುದು ಸುಲಭದ ಮಾತಲ್ಲ. ಆದರೆ ಕೆಲವೊಂದು ಆಹಾರಗಳನ್ನು ಅದೆಷ್ಟೇ ಸೇವಿಸಿದರೂ ಸಹ ತೂಕ ಹೆಚ್ಚಾಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ನಿಮ್ಮ ದೇಹದ ತೂಕ ಇಳಿಸಲು(Weight  Loss)ಅಥವಾ ದೇಹದ ಆಕಾರವನ್ನು ಕಾಪಾಡಿಕೊಳ್ಳುವ ಕಾರಣದಿಂದ ಕೆಲ ಆಹಾರಗಳನ್ನು ಸೇವನೆ ಮಾಡುವುದಿಲ್ಲ. ಅವುಗಳನ್ನು ಸೇವೆನ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬ ಭಯ ಕಾಡುತ್ತದೆ. ಆದರೆ ಅದರಲ್ಲೂ  ನೀವು ಮಿತಿಗಳಿಲ್ಲದೆ ತಿನ್ನಬಹುದಾದ ಆಹಾರಗಳು ಇನ್ನೂ ಇವೆ. ಅವು ಕಡಿಮೆ ಕ್ಯಾಲೋರಿ ಇದ್ದು ಇದರಲ್ಲಿ  ಫೈಬರ್‌ (Fiber)ಸಮೃದ್ಧವಾಗಿವೆ, ತೂಕ ಹೆಚ್ಚಾಗುವ ಅಪಾಯವಿಲ್ಲದೆ  ಇದನ್ನು ನೀವು ಸೇವನೆ ಮಾಡಬಹುದು.  

ಅಮರ್ನಾಥ್ ಹಿಟ್ಟು

ಇದನ್ನು ರಾಜ್ ಗಿರಾ ಅಥವಾ ರಾಮದಾನ ಎಮದು ಸಹ ಕರೆಯುತ್ತಾರೆ. ಇವುಗಳಲ್ಲಿ ಗ್ಲುಟೇನ್ ಅಂಶ ಇರುವುದಿಲ್ಲ ಹಾಗೂ ಕ್ಯಾಲೋರಿಗಳು ಕೂಡ ಕಡಿಮೆ ಇರುತ್ತದೆ. ಹಾಗಾಗಿ ಇದರ  ಸೇವನೆ ಮಾಡುವುದು ತೂಕ ಹೆಚ್ಚು ಮಾಡುವುದಿಲ್ಲ. ಇದರಲ್ಲಿ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಗಳು ಹೆಚ್ಚಾಗಿದೆ. ಈ ಹಿಟ್ಟನ್ನು ಉಪಯೋಗಿಸಿಕೊಂಡು ರೊಟ್ಟಿ ಅಥವಾ ಪ್ಯಾನ್ ಕೇಕ್ ಮಾಡಿ ಸೇವನೆ ಮಾಡಬಹುದು.

ಮಖಾನ

ಫಾಕ್ಸ್ ನೆಟ್ ಅಥವಾ ಮಖಾನ ನಮ್ಮ ದೇಹಕ್ಕೆ ಅಗತ್ಯವಿರುವ  ಪೋಷಕಾಂಶಗಳನ್ನು ಹೊಂದಿದೆ. ಇವು ತಿನ್ನಲು ಬಹು ಲಘುವಾಗಿದ್ದು, ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವುದಿಲ್ಲ. ಇದರಲ್ಲಿ ಹೇರಳವಾದ ಕ್ಯಾಲ್ಸಿಯಂ, ನಾರಿನಾಂಶ ಇದೆ. ಹೆಚ್ಚಾದ ನಾರಿನಂಶ ಇರುವುದರಿಂದ ಬೇಗ ನಿಮಗೆ ಹಸಿವಾಗುವುದಿಲ್ಲ. ಹಾಗೂ ಇದು ನಿಮ್ಮ ದೇಹದ ತೂಕ ಹೆಚ್ಚಾಗುವ ಯಾವುದೇ ಅಪಾಯವಿರುವುದಿಲ್ಲ.

ಇದನ್ನೂ ಓದಿ: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

ಪಾಪ್ಕಾರ್ನ್

ಪಾಪ್ಕಾರ್ನ್ ತಿಂದರೆ ಪ್ರತಿಯೊಬ್ಬರು ದೇಹದ ತೂಕ ಹೆಚ್ಚಾಗುತ್ತದೆ ಎಂದು ಭಾವಿಸಿದ್ದಾರೆ, ಆದೆ ಅದರ ಸೇವನೆ  ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂಬ ಆಶ್ಚರ್ಯಕರ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ. ಹೌದು, ಪಾಪ್ಕಾರ್ನ್ ಅಲ್ಲಿ ಅಧಿಕವಾದ ನಾರಿನಂಶವಿದೆ. ಹಾಗಾಗಿ ಇದು ಕೂಡ ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದನ್ನು ತಯಾರಿಸುವಾಗ ಯಾವುದೇ ಎಣ್ಣೆ ಅಥವಾ ಬೆಣ್ಣೆಗಳನ್ನು  ಬಳಕೆ ಮಾಡಬಾರದು.ಇದನ್ನು ತಿಂದಾಗಲೂ ಕೂಡ ದೀರ್ಘಕಾಲದವರೆಗೆ ನಿಮಗೆ ಹಸಿವಾಗುವುದಿಲ್ಲ.

ಕುಂಬಳಕಾಯಿ ಮತ್ತು ಸೂರ್ಯಕಾಂತಿ ಬೀಜಗಳು

ಕುಂಬಳಕಾಯಿ ಹಾಗೂ ಸೂರ್ಯಕಾಂತಿಯ ಬೀಜಗಳು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುವ ಪದಾರ್ಥಗಳು ಎಂದರೆ ತಪ್ಪಾಗಲಾರದು.  ಬೆಳಿಗ್ಗೆ ಅಥವಾ ನಿಮ್ಮ ಸಂಜೆಯ ತಿಂಡಿಗಳ ಜೊತೆಗೆ ಇವುಗಳನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೂ ಉತ್ತಮ, ಹಾಗೂ ದೇಃದ ತೂಕ ಕಡಿಮೆ ಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಇವುಗಳನ್ನು ತಿಂದಾಗ  ನಿಮಗೆ ಬೇಗನೆ ಹಸಿವಾಗುವುದಿಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ ಇದರಲ್ಲಿ ಹೆಚ್ಚು ಕ್ಯಾಲೋರಿಗಳು ಇರುವುದಿಲ್ಲ. ದೇಹಕ್ಕೆ ಅವಶ್ಯಕತೆಯಿರುವ ಹಲವಾರು ಪೋಷಕಾಂಶಗಳನ್ನು ಕೂಡ ಇದು ನಮಗೆ ನೀಡುತ್ತದೆ.

ಕಡಲೇಕಾಯಿ ಬೆಣ್ಣೆ

ಇದರ ಹೆಸರನ್ನು ಕೇಳಿದ ತಕ್ಷಣ ಸಾಮಾನ್ಯವಾಗಿ ಇದರಲ್ಲಿ ಕೊಬ್ಬಿನ ಅಂಶಗಳು ಹೆಚ್ಚಿರುತ್ತದೆ , ತೂಕ ಹೆಚ್ಚಳವಾಗುತ್ತದೆ ಎಂದು ಅನಿಸುತ್ತದೆ. ಆದರೆ ಅದು ಸುಳ್ಳು. ಈ ಬೆಣ್ಣೆ ನಿಮ್ಮ ತೂಕವನ್ನು ಹೆಚ್ಚಿಸುವ ಬದಲಾಗಿ ಇಳಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಸ್ ಇದ್ದು,  ಪ್ರೊಟೀನ್ ಅಂಶಗಳು ಹೆಚ್ಚಿವೆ. ಕಡಲೆಕಾಯಿ ಬೆಣ್ಣೆಯು ನಿಮಗೆ ತೂಕ ಇಳಿಸಲು ಮಾತ್ರವಲ್ಲದೆ  ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಓಟ್ಸ್​ನಿಂದ ಏನೆಲ್ಲಾ ತಿಂಡಿ ಮಾಡ್ಬೋದು ಗೊತ್ತಾ?

ಇದು ನಿಮ್ಮ ಹಸಿವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ನಿಮ್ಮ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹಿಗಳಿಗೆ ಸಹ  ಉತ್ತಮ ಪ್ರಯೋಜನವನ್ನು ನೀಡುತ್ತದೆ. ಊಟಕ್ಕಿಂತ ಮೊದಲು ಈ  ಬೆಣ್ಣೆಯನ್ನು ಸೇವಿಸುವುದರಿಂದ  ನಿಮಗೆ ಹೆಚ್ಚಿನ ಆಹಾರ ಸೇವನೆ ಮಾಡಲಾಗುವುದಿಲ್ಲ.ನಿಮಗೆ ಹೊಟ್ಟೆ ತುಂಬಿದಂತಾಗುತ್ತದೆ.
Published by:Sandhya M
First published: