Foods For UTI: ಈ ಆಹಾರಗಳನ್ನು ಸೇವಿಸಿ ಮೂತ್ರದ ಸೋಂಕಿನಿಂದ ಮುಕ್ತಿ ಪಡೆಯಿರಿ ..

Foods For Urinary Track Infection: ಮೂತ್ರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವಲ್ಲಿ ನೀರು  ಬಹಳ ಅತ್ಯಗತ್ಯ. ನಿರ್ಜಲೀಕರಣವು  ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ, ಆದ್ದರಿಂದ ಉತ್ತಮ ಪ್ರಮಾಣದ ನೀರನ್ನು ಕುಡಿಯುವುದು ಒಂದು  ಉತ್ತಮ  ಮಾರ್ಗವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬ್ಯಾಕ್ಟೀರಿಯಾವು ಮೂತ್ರಕೋಶದ ಯಾವುದೇ ಭಾಗವನ್ನು ಆಕ್ರಮಿಸಿದಾಗ ಮೂತ್ರದ ಸೋಂಕು (UTI)  ಉಂಟಾಗುತ್ತದೆ. ಹೆಚ್ಚಿನ UTI ಮೂತ್ರಕೋಶ ಮತ್ತು ಮೂತ್ರನಾಳವನ್ನು ಒಳಗೊಂಡಿರುತ್ತದೆ. ಪುರುಷರಿಗಿಂತ ಮಹಿಳೆಯರಿಗೆ ಈ  ಸೋಂಕಿನ ಅಪಾಯ ಹೆಚ್ಚು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ದೇಹವದಲ್ಲಿನ  ಬ್ಯಾಕ್ಟೀರಿಯಾವನ್ನು  ಹೊರಹಾಕಿ ಮೂತ್ರದ ಸೋಂಕಿನಿಂದ ಮುಕ್ತಿ ಪಡೆಯುವಲ್ಲಿ ನಾವು ಸೇವಿಸುವ ಆಹಾರ ಪ್ರಮುಖ ಪಾತ್ರವಹಿಸುತ್ತದೆ.  

ಮೂತ್ರದ ಸೋಂಕಿನ ಲಕ್ಷಣಗಳು:

ಮೂತ್ರ ವಿಸರ್ಜಿಸುವಾಗ ನೋವು

ಆಗಾಗ್ಗೆ ಮೂತ್ರ ವಿಸರ್ಜನೆಯ ಮಾಡಬೇಕು ಅನಿಸಿದರೂ ಕೂಡ ಅಲ್ಪ ಪ್ರಮಾಣದ ಮೂತ್ರ ಹೊರಬರುತ್ತದೆ

ವಾಂತಿ ಮತ್ತು ಜ್ವರ.

ನಿಮ್ಮ ಪಕ್ಕೆಲುಬುಗಳ ಕೆಳಗೆ ಬೆನ್ನಿನ ಒಂದು ಬದಿಯಲ್ಲಿ ನೋವು

ಸೋಂಕು ಕಡಿಮೆ ಮಾಡಲುಯಾವ ಆಹಾರಗಳನ್ನು ಸೇವಿಸಬೇಕು ಎಂಬುದು ಇಲ್ಲಿದೆ..

ಕ್ರ್ಯಾನ್ಬೆರಿ ಜ್ಯೂಸ್

ಇದನ್ನೂ ಓದಿ: ಚಕ್ಕೋತ ಹಣ್ಣು ಹುಳಿ ಅಂತ ತಿನ್ನದೇ ಇರಬೇಡಿ- ಇದರಲ್ಲಿದೆ ಹಲವಾರು ಆರೋಗ್ಯಕರ ಪ್ರಯೋಜನಗಳು ..

ಶುದ್ಧ  ಹಾಗೂ ಸಿಹಿ ಹಾಕದ  ಕ್ರ್ಯಾನ್ಬೆರಿ ಜ್ಯೂಸ್  ಫೈಟೊಕೆಮಿಕಲ್ಸ್, ಪ್ರೊಅಂಟೊಸಯಾನಿಡಿನ್ಗಳಲ್ಲಿ ಸಮೃದ್ಧವಾಗಿದೆ ಎಂದು ಅಧ್ಯಯನಗಳು  ಸಾಬೀತು ಮಾಡಿವೆ. ಇದು ಇ.ಕೋಲಿ ಬ್ಯಾಕ್ಟೀರಿಯಾವು ಮೂತ್ರನಾಳಕ್ಕೆ ಹೋಗುವುದನ್ನ ತಡೆಯಲು ಸಹಾಯ ಮಾಡುತ್ತದೆ. ಕ್ರ್ಯಾನ್ಬೆರಿ  ಜ್ಯೂಸ್ ನಿಯಮಿತವಾಗಿ ಸೇವಿಸುವುದರಿಂದ ಬ್ಯಾಕ್ಟೀರಿಯಾವನ್ನು ಹೊರಹಾಕಲು ಮತ್ತು  ಸೋಂಕು ತಡೆಯಲು ಸುಲಭವಾಗುತ್ತದೆ.

ಪ್ರೋಬಯಾಟಿಕ್‌ ಆಹಾರಗಳು

ಮೊಸರು, ಕೆಫಿರ್, ಕೆಂಪ್ ಮತ್ತು  ಮುಂತಾದ  ಪ್ರೋಬಯಾಟಿಕ್‌ ಉತ್ಪನ್ನಗಳು ಉತ್ತಮ ಬ್ಯಾಕ್ಟೀರಿಯಾಗಳಾದ ಲ್ಯಾಕ್ಟೋಬಾಸಿಲಸ್ ಮತ್ತು ಬಿಫಿಡೊಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ.  ಈ ಬ್ಯಾಕ್ಟೀರಿಯಾವು ನಿಮ್ಮ ಮೂತ್ರನಾಳವನ್ನು ಬಲಪಡಿಸಲು ಸಹಾಯ ಮಾಡುತ್ತದೆ, ನಿಮ್ಮ ಯೋನಿಯಿಂದ ಗಾಳಿಗುಳ್ಳೆಯ ಪ್ರದೇಶಕ್ಕೆ ರಕ್ಷಣಾತ್ಮಕ ತಡೆಗಳನ್ನು ರೂಪಿಸುತ್ತದೆ, ಇದು  ಮೂತ್ರದ ಸೋಂಕು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ವಿಟಮಿನ್ ಸಿ

ಆಹಾರಗಳು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳು  ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇ.ಕೋಲಿ ಬೆಳವಣಿಗೆಯನ್ನು ತಡೆಯುತ್ತದೆ, ಮೂತ್ರವನ್ನು ಕಡಿಮೆ ಆಮ್ಲೀಯವಾಗಿಸುತ್ತದೆ ಮತ್ತು  ಮೂತ್ರಸೋಂಕು ಮರುಕಳಿಸವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಆಹಾರಗಳ ಉತ್ತಮ ಮೂಲಗಳೆಂದರೆ  ಕಿತ್ತಳೆ, ಎಲೆಕೋಸು, ಹೂಕೋಸು, ಟೊಮ್ಯಾಟೊ, ನೆಲ್ಲಿಕಾಯಿ, ಕೆಂಪು ಹಣ್ಣುಗಳು, ಕಿವಿ, ಕೋಸುಗಡ್ಡೆ, ಪಾಲಕ ಮತ್ತು ಪೇರಲ, ನಿಂಬೆ ಹೀಗೆ ಅನೇಕವಿದೆ. ಹಾಗಾಗಿ ವಿಟಮಿನ್ ಸಿ ಅಂಶವಿರುವ ಆಹಾರಗಳನ್ನು ಸೇವಿಸುವುದು ಉತ್ತಮ ಪ್ರಯೋಜನ ನೀಡುತ್ತದೆ.

ವಿಟಮಿನ್ ಎ ಮತ್ತು ಜಿಂಕ್ ಸಮೃದ್ಧವಾಗಿರುವ ಆಹಾರಗಳು

ವಿಟಮಿನ್ ಎ ಸಮೃದ್ಧವಾಗಿರುವ ಆಹಾರವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸತು ಸಮೃದ್ಧವಾಗಿರುವ ಆಹಾರಗಳು ಬಿಳಿ ರಕ್ತಕಣಗಳನ್ನು ಉತ್ಪಾದಿಸಿ ಬ್ಯಾಕ್ಟೀರಿಯಾವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಜಿಂಕ್‌ನ ಉತ್ತಮ ಮೂಲಗಳೆಂದರೆ ಬ್ರೂವರ್ಸ್ ಯೀಸ್ಟ್, ಶುಂಠಿ, ಅಗಸೆ ಬೀಜಗಳು, ಸೂರ್ಯಕಾಂತಿ ಬೀಜಗಳು, ಬ್ರೆಜಿಲ್ ಬೀಜಗಳು, ಮೊಟ್ಟೆಯ ಹಳದಿ, ಕಡಲೆಕಾಯಿ, ಓಟ್ಸ್, ಬಾದಾಮಿ ಮುಂತಾದವು. ನಿಮ್ಮ ಆರೋಗ್ಯದಲ್ಲಿ ಸಾಧ್ಯವಾದಷ್ಟು ಈ ಆಹಾರಗಳನ್ನು ಸೇರಿಸಿ ಸೇವಿಸಿ.

ಸಾಕಷ್ಟು ನೀರು ಕುಡಿಯಿರಿ

ಮೂತ್ರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವಲ್ಲಿ ನೀರು  ಬಹಳ ಅತ್ಯಗತ್ಯ. ನಿರ್ಜಲೀಕರಣವು  ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ, ಆದ್ದರಿಂದ ಉತ್ತಮ ಪ್ರಮಾಣದ ನೀರನ್ನು ಕುಡಿಯುವುದು ಒಂದು  ಉತ್ತಮ  ಮಾರ್ಗವಾಗಿದೆ. ಸಾಕಷ್ಟು  ನೀರನ್ನು ಸೇವನೆ ಮಾಡುವುದು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರ ವಿಸರ್ಜನೆಯನ್ನು ಉತ್ತೇಜಿಸುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹಲ್ಲು ನೋವು ಹೆಚ್ಚಾಗ್ತಿದೆಯಾ? ಹಾಗಾದ್ರೆ ಇದನ್ನು ಟ್ರೈ ಮಾಡಿ..

ಈ ಆಹಾರಗಳ ಸೇವನೆ ಕಡಿಮೆ ಮಾಡಿ.  ಸಕ್ಕರೆ ಇರುವ ಆಹಾರ ಮತ್ತು ಪಾನೀಯಗಳ ಸೇವನೆಯನ್ನು ತಡೆಯಿರಿ. ಸಕ್ಕರೆ ಇರುವ ಆಹಾರವನ್ನು ಸೀಮಿತಗೊಳಿಸುವುದರಿಂದ ನಿಮ್ಮ ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ.
Published by:Sandhya M
First published: