Health Tips: ನಿದ್ರೆ ಸರಿಯಾಗಿ ಬರ್ತಿಲ್ವ ಹಾಗಾದ್ರೆ ಇವುಗಳನ್ನು ಮಿಸ್ ಮಾಡ್ದೇ ಬಳಸಿ

Foods For Sleeping Problem: ಸಾಮಾನ್ಯವಾಗಿ ಜೇನುತುಪ್ಪ ಎಷ್ಟು ಆರೋಗ್ಯಕರ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಇದನ್ನ ಸಕ್ಕರೆಯ ಬದಲಾಗಿ ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್, ಉರಿಯೂತದ ಮತ್ತು ಆ್ಯಂಟಿ ಆಕ್ಸಿಡೆಂಟ್​ ಗುಣಗಳನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಹವನ್ನು ಆರೋಗ್ಯಕರವಾಗಿ ನಿಯಂತ್ರಿಸುವಲ್ಲಿ ಆಹಾರವು (Food) ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ದೇಹದ ಪ್ರಮುಖ ಅವಶ್ಯಕತೆಯಾದ ನಿದ್ರೆಯ (Sleep) ಮೇಲೆ ನಿಮ್ಮ ಆಹಾರ ಪರಿಣಾಮ ಬೀರಬಹುದು ಎಂದು ನಿಮಗೆ ಗೊತ್ತಾ? ಸರಿಯಾಗಿ ನಿದ್ರೆ ಬರದೆ ಸಮಸ್ಯೆಯನ್ನು ಅನುಭವಿಸುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಈ ಸಮಸ್ಯೆಗೆ ವಿವಿಧ ದೈಹಿಕ, ಮಾನಸಿಕ (Mental) ಅಥವಾ ಪರಿಸರ ಅಂಶಗಳು ಕಾರಣವಾಗುತ್ತದೆ. ಕೆಲವು ಔಷಧಿಗಳು (Medicine) ದೇಹಕ್ಕೆ ಪರಿಹಾರ ಮತ್ತು ವಿಶ್ರಾಂತಿಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂಬುದು ನಿಜವಾಗಿದ್ದರೂ, ಔಷಧಿಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ನಿಮ್ಮ ನಿದ್ರೆಯ ಸಮಸ್ಯೆಗೆ (Sleepin Problem) ಆಹಾರ ಪರಿಹಾರ ನೀಡುತ್ತದೆ ಎಂಬುದು ಸತ್ಯ. ನಿದ್ರೆಯ ಸಮಸ್ಯೆಗೆ ಪರಿಹಾರ ಪಡೆಯಲು ಆಹಾರ ಮತ್ತು ಜೀವನಶೈಲಿಯ (Lifestyle) ನಿಯಂತ್ರಣದಂತಹ ಇತರ ಚಿಕಿತ್ಸಾ ವಿಧಾನಗಳನ್ನು ಸಹ ಅನುಸರಿಸಬೇಕು ಎನ್ನಲಾಗುತ್ತದೆ.  

ಉತ್ತಮ ನಿದ್ರೆಗೆ ಸಹಾಯ ಮಾಡುವ ಕೆಲವು ಆಹಾರ ಮತ್ತು ಪಾನೀಯಗಳ ಪಟ್ಟಿ ಇಲ್ಲಿದೆ 

ಜೇನುತುಪ್ಪ:

ಸಾಮಾನ್ಯವಾಗಿ ಜೇನುತುಪ್ಪ (Honey) ಎಷ್ಟು ಆರೋಗ್ಯಕರ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಇದನ್ನ ಸಕ್ಕರೆಯ ಬದಲಾಗಿ ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್, ಉರಿಯೂತದ ಮತ್ತು ಆ್ಯಂಟಿ ಆಕ್ಸಿಡೆಂಟ್​ ಗುಣಗಳನ್ನು ಹೊಂದಿದೆ. ಮಲಗುವ ಮುನ್ನ ಈ ಸಿಹಿ ಜೇನನ್ನ ಸೇವನೆಯು ನಿದ್ರೆಯ ಸಮಸ್ಯೆ ನಿವಾರಿಸುತ್ತದೆ. ನೀವು ಮಾಡಬೇಕಾಗಿರುವುದು ಒಂದು ಲೋಟ ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಒಂದು ಟೀ ಚಮಚ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ , ಪ್ರತಿದಿನ ಕುಡಿಯುವುದು ಉತ್ತಮ ಎನ್ನಲಾಗುತ್ತದೆ. ಇದನ್ನ ರಾತ್ರಿ ಮಲಗುವ ಮುನ್ನ ಕುಡಿಯುವುದು ನಿದ್ರೆ ಚನ್ನಾಗಿ ಬರಲು ಕಾರಣವಾಗುತ್ತದೆ.

ಹಾಲು:

ಇದನ್ನೂ ಓದಿ: ಆರೋಗ್ಯಕ್ಕೆ ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಸಮಸ್ಯೆಗೆ ರಾಮಬಾಣ ಈ ಏಲಕ್ಕಿ

ಒಳ್ಳೆಯ ನಿದ್ರೆಗಾಗಿ ಜನರು ಮಲಗುವ ಮುನ್ನ ಬೆಚ್ಚಗಿನ ಹಾಲನ್ನು (Milk) ಕುಡಿಯುವುದು ಬಹಳ ಉತ್ತಮ ಎನ್ನಲಾಗುತ್ತದೆ. ಹಾಲು ನಿಮ್ಮ ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಿ, ಒಳ್ಳೆಯ ನಿದ್ರೆ ಬರಲು ಕಾರಣವಾಗುತ್ತದೆ.  ನಿದ್ರೆಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಹಾಲಿನ ಪ್ರಭಾವವನ್ನು ಹಲವಾರು ಅಧ್ಯಯನಗಳು ಸಾಬೀತು ಮಾಡಿದೆ. ಇದಲ್ಲದೆ, ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯುವುದು ಸಹ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ ಎನ್ನಲಾಗುತ್ತದೆ.

ನಟ್ಸ್​ಗಳು:

ಚೆನ್ನಾಗಿ ನಿದ್ದೆ ಮಾಡಲು  ನಿಮಗೆ ಈ ನಟ್ಸ್​ಗಳು (Nuts) ಹೆಚ್ಚು ಸಹಾಯ ಮಾಡುತ್ತದೆ. ಬೆರಳೆಣಿಕೆಯಷ್ಟು ನಟ್ಸ್​ಗಳನ್ನು ತಿನ್ನುವುದು ನಿಮ್ಮ ನಿದ್ರೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಆರೋಗ್ಯಕರ ಕೊಬ್ಬುಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಸಮೃದ್ಧವಾಗಿ ಹೊಂದಿರುವುದರ ಜೊತೆಗೆ  ಕೆಲವು ನಟ್ಸ್​ಗಳು ಮೆಲಟೋನಿನ್‌ನಲ್ಲಿ ಸಮೃದ್ಧವಾಗಿವೆ ಮತ್ತು ನಿಮ್ಮ ಮನಸ್ಥಿತಿ ಮತ್ತು ನಿದ್ರೆಯ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕೊಬ್ಬಿನ ಮೀನು:

ನೀವು ಸಮುದ್ರಾಹಾರವನ್ನು ಇಷ್ಟಪಡುವವರಾಗಿದ್ದರೆ ನಿಮ್ಮ ನಿದ್ದೆಯ ಸಮಸ್ಯೆಗೆ ಪರಿಹಾರ ಅದರಲ್ಲಿದೆ. ರಾತ್ರಿಯ ಊಟದಲ್ಲಿ ಸ್ವಲ್ಪ ಪ್ರಮಾಣದ ಸಮುದ್ರಾಹಾರವನ್ನು ಸೇವಿಸುವುದರಿಂದ ನಿಮ್ಮ ನಿದ್ರೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಸಾಲ್ಮನ್, ಮ್ಯಾಕೆರೆಲ್, ಆಂಚೊವಿ ಮುಂತಾದ ಕೊಬ್ಬಿನ ಮೀನುಗಳು ಒಮೆಗಾ 3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶವು ಅದರ ಉತ್ತೇಜಿಸುವ ಗುಣಲಕ್ಷಣಗಳಿಗೆ ಜನಪ್ರಿಯವಾಗಿದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಚಹಾ:

ಇದನ್ನೂ ಓದಿ: ಮೂಲವ್ಯಾಧಿಗೆ ಮದ್ದು ಈ ಮೂಲಂಗಿ ಸೊಪ್ಪು- ಇದರಲ್ಲಿಎಷ್ಟೆಲ್ಲಾ ಪ್ರಯೋಜನವಿದೆ ನೋಡಿ

ಒಂದು ಕಪ್ ಚಹಾವಿಲ್ಲದೆ ಕೆಲವರ ದಿನ ಪ್ರಾರಂಭವಾಗಿವುದಿಲ್ಲ. ಹಾಗೆಯೇ ಒಂದು ಕಪ್ ಚಹಾದಿಂದ ನಿಮ್ಮ ದಿನವನ್ನು ಸಹ ಕೊನೆಗೊಳಿಸಬಹುದು. ಲ್ಯಾವೆಂಡರ್ ಚಹಾ, ಹಸಿರು ಚಹಾ, ಕ್ಯಾಮೊಮೈಲ್ ಚಹಾ, ಡಾರ್ಜಿಲಿಂಗ್ ಚಹಾಗಳು ಸಹ ನಿಮ್ಮ ನಿದ್ರೆಯ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಅವುಗಳ ಉರಿಯೂತ ಮತ್ತು ಆ್ಯಂಟಿ ಆಕ್ಸಿಡೆಂಟ್​ಗಳ ಕಾರಣದಿಂದ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅತಿಯಾದ ಕೆಫೀನ್ ಅನ್ನು ಹೊಂದಿರುವ ಟೀಗಳನ್ನು ಮಲಗುವ ಮುನ್ನ ಸೇವಿಸಬಾರದು.
Published by:Sandhya M
First published: