HOME » NEWS » Lifestyle » THESE FOODS MAKE YOUR HAIR GROW FASTER AND LONGER STG AE

ದಟ್ಟವಾದ ಆರೋಗ್ಯಕರ ಕೇಶರಾಶಿ ನಿಮ್ಮದಾಗಬೇಕಾದರೆ ಈ ಆಹಾರಗಳನ್ನು ಸೇವಿಸಿ..!

ಆಹಾರ ಕ್ರಮದಲ್ಲಿ ಸತ್ವಭರಿತ ಆಹಾರವನ್ನು ಸೇರಿಸಿ, ಸೇವಿಸಿ. ಇದರ ಸತ್ಪರಿಣಾಮ ನಿಮ್ಮ ಆರೋಗ್ಯದ ಜತೆ ಕೂದಲಿನ ಮೇಲೂ ಆಗದಿದ್ದರೆ ಹೇಳಿ. ಯಾವ ಆಹಾರ ನಿಮ್ಮ ಕೂದಲು ಶೀಘ್ರವಾಗಿ ಬೆಳೆಯಲು ಪೂರಕ ಎಂಬ ಮಾಹಿತಿ ಇಲ್ಲಿದೆ.

Trending Desk
Updated:June 10, 2021, 1:05 PM IST
ದಟ್ಟವಾದ ಆರೋಗ್ಯಕರ ಕೇಶರಾಶಿ ನಿಮ್ಮದಾಗಬೇಕಾದರೆ ಈ ಆಹಾರಗಳನ್ನು ಸೇವಿಸಿ..!
ಪ್ರಾತಿನಿಧಿಕ ಚಿತ್ರ
  • Share this:
ಆರೋಗ್ಯದಿಂದಿರುವ ಕಾಂತಿಯುತವಾಗಿ ಇರುವ ದಪ್ಪ, ಕಪ್ಪು, ನೀಳ ಕೇಶರಾಶಿಯನ್ನು ಯಾರಾದರೂ ಬೇಡ ಎನ್ನುವರೇ? ಇಂಥ ಕೂದಲು ಬೇಕು ಎನ್ನುವ ಹಂಬಲ ಬಹುತೇಕರಲ್ಲಿ ಇರುತ್ತದೆ. ಕೆಲವೊಮ್ಮೆ ಕೂದಲು ಉದ್ದ ಬೆಳೆಯಲು ಸುದೀರ್ಘ ಸಮಯ ತೆಗೆದುಕೊಳ್ಳುವುದನ್ನು ಗಮನಿಸಿರಬಹುದು. ಇದು ನಿಮಗೆ ನಿರಾಶೆಯನ್ನೂ ಉಂಟುಮಾಡಿರಬಹುದು. ಆದರೆ ಆರೋಗ್ಯವಂತ ಕೂದಲು ಅನುವಂಶೀಯವಾಗಿ ಲಭ್ಯವಾಗುತ್ತದೆ. ಕೆಲವೊಮ್ಮೆ ಗುಣಮಟ್ಟದ ಆಹಾರ ಹಾಗೂ ನಿಮ್ಮ ಕೂದಲಿನ ಆರೈಕೆಯನ್ನು ನೀವು ಹೇಗೆ ಮಾಡುವಿರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಕೆಲವರು ಜಂಕ್ ಫುಡ್​ ಅನ್ನು ಹೆಚ್ಚಾಗಿ ಸೇವಿಸುತ್ತಾರೆಯೇ ಹೊರತು ಪೋಷಕಾಂಶ ಭರಿತ ಆಹಾರಕ್ಕೆ ಆದ್ಯತೆ ನೀಡುವುದಿಲ್ಲ. ಈ ಅನಾರೋಗ್ಯಕರ ಆಹಾರ ಕ್ರಮ ಕೂಡ ದೇಹದ ಮೇಲೆ ಮಾತ್ರವಲ್ಲ ಕೂದಲಿನ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಅದರ ಪರಿಣಾಮವಾಗಿ ಕೂದಲಿಗೆ ಹಾನಿಯಾಗಬಹುದು. ಕೆಲವೊಮ್ಮೆ ಕೂದಲು ಉದುರಲು ಆರಂಭಿಸಲೂಬಹುದು.

ಹಾಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಸತ್ವಭರಿತ ಆಹಾರವನ್ನು ಸೇರಿಸಿ, ಸೇವಿಸಿ. ಇದರ ಸತ್ಪರಿಣಾಮ ನಿಮ್ಮ ಆರೋಗ್ಯದ ಜತೆ ಕೂದಲಿನ ಮೇಲೂ ಆಗದಿದ್ದರೆ ಹೇಳಿ. ಯಾವ ಆಹಾರ ನಿಮ್ಮ ಕೂದಲು ಶೀಘ್ರವಾಗಿ ಬೆಳೆಯಲು ಪೂರಕ ಎಂದು ನೋಡೋಣ ಬನ್ನಿ.


  1. ನಟ್ಸ್:


ನಿಮ್ಮ ಆಹಾರದಲ್ಲಿ ಸಾಕಷ್ಟು ನಟ್ಸ್‌ಗಳು ಇರುವಂತೆ ನೋಡಿಕೊಳ್ಳಿ. ವಾಲ್‌ನಟ್‌ ಹಾಗೂ ಬಾದಾಮಿ ಸಮೃದ್ಧ ಬಯೋಟಿನ್ ಹೊಂದಿದೆ. ಅದು ನಿಮ್ಮ ಕೂದಲಿನ ಕೋಶಗಳ ಕೋಶ ವಿಭಜನೆಗೆ ನೆರವಾಗುತ್ತದೆ. ಕೂದಲು ಉದ್ದ ಹಾಗೂ ಹೊಳಪು ಪಡೆಯುತ್ತದೆ. ವೈದ್ಯಕೀಯ ಪ್ರಯೋಗಗಳಲ್ಲಿ, ಬೆಕ್ಕುಗಳು ಹಾಗೂ ನಾಯಿಗಳು ಬಯೋಟಿನ್ ಚುಚ್ಚು ಮದ್ದು ಪಡೆದಾಗ ಉತ್ತಮ ಬೆಳವಣಿಗೆ ಸಾಧಿಸಿದ್ದು ಕಂಡುಬಂದಿದೆ.

ಪ್ರಾತಿನಿಧಿಕ ಚಿತ್ರ
ಸಿಹಿ ಆಲೂಗೆಡ್ಡೆ(ಸಿಹಿ ಗೆಣಸು):

ಸಿಹಿ ಆಲೂಗೆಡ್ಡೆ ಅಂದರೆ ಸಿಹಿ ಗೆಣಸಿನಲ್ಲಿರುವ ಸಮೃದ್ಧ ಬೀಟಾ - ಕ್ಯಾರೊಟಿನ್‌ ಕೂಡ ನಿಮ್ಮ ಕೂದಲಿಗೆ ಭಾರಿ ಉತ್ತಮ. ಅದು ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಇರಿಸುವುದಲ್ಲದೆ, ಸುಲಭವಾಗಿ ಒಡೆಯದಂತೆ ಹಾಗೂ ಒಣಗದಂತೆ ತಡೆಯುತ್ತದೆ. ಕೂದಲು ವೇಗವಾಗಿ, ಆರೋಗ್ಯಯುತವಾಗಿ ಬೆಳೆಯಲು ಸಹಕರಿಸುತ್ತದೆ.

ಇದನ್ನೂ ಓದಿ: Varun Dhawan: ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮಳೆಯಲ್ಲಿ ಎಂಜಾಯ್ ಮಾಡಿದ ನಟ ವರುಣ್​ ಧವನ್​

ಮೊಟ್ಟೆ ಮತ್ತು ಹಳದಿ ಮೆಣಸು:

ಮೊಟ್ಟೆಯ ಹಳದಿ ಲೋಳೆಯು ಅತಿ ಹೆಚ್ಚು ಬಯೋಟಿನ್, ಒಮೆಗಾ-3 ಹಾಗೂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಈ ಅಂಶಗಳು ನಮ್ಮ ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸುತ್ತದೆ, ಕೂದಲಿನ ಗುಣಮಟ್ಟ ಸುಧಾರಿಸುತ್ತದೆ ಹಾಗೂ ಕೋಶ ವಿಭಜನೆಯನ್ನು ಸುಧಾರಿಸುತ್ತದೆ. ಹಳದಿ ಮೆಣಸಿನಲ್ಲಿ ವಿಟಮಿನ್ ಸಿ ಹೆಚ್ಚಿದ್ದು, ಇದು ಉತ್ಕರ್ಷಣ ನಿರೋಧಕವಾಗಿದೆ. ಇದು ಕೂದಲಿನ ಫಾಲಿಕಲ್ ಹಾಗೂ ಶಾಫ್ಟ್ಗಳನ್ನು ಶಕ್ತಿಶಾಲಿಯಾಗಿ ಮಾಡಿ ಕೂದಲು ಒಡೆಯುವುದನ್ನು ತಡೆಯುತ್ತದೆ.

ಸೂರ್ಯಕಾಂತಿ ಬೀಜಗಳು:

ಈ ಬೀಜಗಳಲ್ಲಿ ವಿಟಮಿನ್ ಇ ಅತ್ಯಧಿಕವಾಗಿದ್ದು, ನೆತ್ತಿ ಹಾಗೂ ಚರ್ಮದಲ್ಲಿ ಉತ್ತಮ ರಕ್ತ ಪರಿಚಲನೆ ಆಗುವಂತೆ ಮಾಡುತ್ತದೆ. ಅಲ್ಲದೆ ಇವು ನಮ್ಮ ಕೂದಲಿನ ಬೇರಿಗೆ ಮುಖ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಜತೆಗೆ ಕೂದಲಿನ ತ್ವರಿತ ಬೆಳವಣಿಗೆ ಹಾಗೂ ಆರೋಗ್ಯವಾಗಿ ಇರಲು ನೆರವಾಗುತ್ತದೆ.

ಮೀನು:

ಉತ್ತಮ ಕೇಶಕ್ಕಾಗಿ ಅತಿ ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ಮಾಧ್ಯಮವೆಂದರೆ ಅದು ಮೀನು. ಇದರಲ್ಲಿ ಸಾರಭೂತ ಎಣ್ಣೆ, ವಿಟಮಿನ್ ಗಳು, ಖನಿಖಗಳು ಹಾಗೂ ಒಮೆಗಾ-3 ಕೊಬ್ಬಿನ ಆಮ್ಲ ಇರುತ್ತದೆ. ಈ ಅಂಶಗಳು ನಿಮ್ಮ ನೆತ್ತಿಯ ಆರೋಗ್ಯಕ್ಕೆ ಹಾಗೂ ಆರಂಭಿಕ ಕೋಶ ವಿಭಜನೆಗೆ ಪೂರಕವಾಗಿರುತ್ತದೆ. ಮೀನು ಸೇವನೆಯಿಂದ ಕೂದಲು ಬೇಗನೇ ಬೆಳೆಯಲು ಹಾಗೂ ಕೂದಲು ಉದುರದಂತೆ ತಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ರಸ್ತೆ ಮೇಲೆ ಲ್ಯಾಂಡ್​ ಆದ ಪುಟ್ಟ ವಿಮಾನ: ವಿಡಿಯೋ ಹಂಚಿಕೊಂಡ ನಟಿ ಪ್ರೀತಿ ಜಿಂಟಾ..!

ಸಿಂಪಿ:

ನೀವು ಸಾಗರದ ಆಹಾರ ಪ್ರಿಯರಾಗಿದ್ದರೆ, ಸಿಂಪಿ ನೀವು ಮೆಚ್ಚುವ ಆಹಾರದ ಪಟ್ಟಿಯಲ್ಲಿ ಇರಬಹುದು. ಸತುವು ಸಮೃದ್ಧವಾಗಿರುವ ಸಿಂಪಿಯು ಆರೋಗ್ಯಕರ ಹಾಗೂ ದಪ್ಪ ಕೂದಲು ಬೆಳೆಯಲು ನೆರವಾಗುತ್ತದೆ. ನಿಮ್ಮ ಆಹಾರದಲ್ಲಿ ಸತುವಿನ ಕೊರತೆಯಾದರೆ ಕೂದಲು ಹಾನಿಗೊಳಗಾಗುವುದು ಇಲ್ಲವೇ ಉದುರುವುದು ಆರಂಭವಾಗುತ್ತದೆ. ಕನಿಷ್ಠ 15 ದಿನಕ್ಕೊಮ್ಮೆಯಾದರೂ ಸಿಂಪಿ ತಿಂದರೆ ಸಾಕಷ್ಟು ಸತು ನಿಮ್ಮ ದೇಹದೊಳಗೆ ಸೇರುತ್ತದೆ. ನಿಮ್ಮ ಕೂದಲಿಗೆಷ್ಟು ಸತು ಬೇಕು ಎಂಬ ಬಗ್ಗೆ ನಿಮ್ಮ ವೈದ್ಯರ ಜತೆ ಚರ್ಚಿಸಬಹುದು.

ಅವಕಾಡೊ ಅಥವಾ ಬೆಣ್ಣೆ ಹಣ್ಣು:

ನಮ್ಮ ದೇಹಕ್ಕೆ ಅವಶ್ಯಕವಾಗಿರುವ ಕೊಬ್ಬಿನ ಅಂಶಗಳನ್ನು ಯಥೇಚ್ಛವಾಗಿ ಹೊಂದಿರುವ ಅವಕಾಡೊ ಕೂದಲು ಉದುರುವುದನ್ನು ತಡೆಯುತ್ತದೆ. ಬೆಣ್ಣೆ ಹಣ್ಣನ್ನು ದಿನವೂ ತಿನ್ನುವುದರಿಂದ ನಿಮ್ಮ ನೆತ್ತಿ ಹಾಗೂ ಚರ್ಮದ ಪೋಷಣೆಯನ್ನು ನೀವು ಆರಾಮವಾಗಿ ಮಾಡಬಹುದು.

ಕೂದಲಿನ ಸರಿಯಾದ ಪೋಷಣೆಗೆ ಉತ್ತಮ ಆಹಾರ ಮಾತ್ರವಲ್ಲ, ಪೂರಕವಾಗಿ ಒಂದಿಷ್ಟು ವ್ಯಾಯಾಮಗಳು ಕೂಡ ಅಗತ್ಯ. ನಿಮ್ಮ ವೈದ್ಯರೊಂದಿಗೆ ಚರ್ಚಿಸಿ, ಒಂದು ಚಾರ್ಟ್ ಮಾಡಿಕೊಂಡು ಅದರ ಪ್ರಕಾರ, ಸೂಕ್ತ ಹಾಗೂ ಸಮತೋಲಿತ ಆಹಾರ ಸೇವಿಸಿ. ನಿಮಗೆ ಯಾವುದಾದರೂ ಆಹಾರ ಅಲರ್ಜಿ ಆಗುವುದಿದ್ದರೆ ಪರೀಕ್ಷಿಸಿಕೊಳ್ಳಿ. ದೀರ್ಘಾವಧಿಗೆ ಆರೋಗ್ಯಕರ ಆಹಾರ ಸೇವನೆಯಿಂದ ಸಹಜವಾಗಿಯೇ ಕೂದಲಿನ ಆರೋಗ್ಯವೂ ವೃದ್ಧಿಸುತ್ತದೆ.
Published by: Anitha E
First published: June 10, 2021, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories