HOME » NEWS » Lifestyle » THESE FOOD MAY HELP TO BEAT DEPRESSION STG SESR

Depression : ಖಿನ್ನತೆಯನ್ನು ದೂರ ಮಾಡಬಲ್ಲದು ಈ 5 ಆಹಾರಗಳು

ಖಿನ್ನತೆಯನ್ನು ನಿವಾರಿಸಲು ಆಹಾರದ ನಿಯಂತ್ರಣ ಕೂಡ ಅತ್ಯಗತ್ಯ ಈ ಹಿನ್ನಲೆಯಲ್ಲಿ ಇವುಗಳ ಸೇವನೆ ಅತ್ಯಗತ್ಯ.

Trending Desk
Updated:June 19, 2021, 10:25 PM IST
Depression : ಖಿನ್ನತೆಯನ್ನು ದೂರ ಮಾಡಬಲ್ಲದು ಈ 5 ಆಹಾರಗಳು
ಖಿನ್ನತೆಯನ್ನು ನಿವಾರಿಸಲು ಆಹಾರದ ನಿಯಂತ್ರಣ ಕೂಡ ಅತ್ಯಗತ್ಯ ಈ ಹಿನ್ನಲೆಯಲ್ಲಿ ಇವುಗಳ ಸೇವನೆ ಅತ್ಯಗತ್ಯ.
  • Share this:

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಖಿನ್ನತೆ, ವಿಶ್ವದಾದ್ಯಂತ ಅಶಕ್ತತೆಗೆ ಪ್ರಮುಖ ಕಾರಣವಾಗಿದೆ ಮತ್ತು ಅದು ವಿಶ್ವದ ಅಸ್ವಸ್ಥತೆಯ ಹೊರೆಗೆ ಗಮನಾರ್ಹ ಕೊಡುಗೆಯನ್ನು ಕೂಡ ನೀಡುತ್ತಿದೆ.ಅದು ನಿದ್ದೆ ಮತ್ತು ಹಸಿವಿನ ಮೇಲೆಯೂ ಪರಿಣಾಮ ಬೀರುವ ಮೂಲಕ ನಿಮ್ಮನ್ನು ದಣಿಸಬಹುದು ಹಾಗೂ ಯಾವುದರ ಮೇಲೂ ಗಮನ ಕೇಂದ್ರೀಕರಿಸದಂತೆ ಮಾಡಬಹುದು. ಖಿನ್ನತೆಗೆ ಮಾನಸಿಕ ಮತ್ತು ಔಷಧಿಯ ಚಿಕಿತ್ಸೆಗಳು ಲಭ್ಯ ಇವೆ. ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಅಂತಹ ಚಿಕಿತ್ಸೆಗಳು ಸಿಗುತ್ತಿಲ್ಲ ಅಥವಾ ಅಸಮರ್ಪಕವಾಗಿವೆ. ಖಿನ್ನತೆಯನ್ನು ನಿವಾರಿಸಲು ಆಹಾರದ ನಿಯಂತ್ರಣವನ್ನು ಸೂಚಿಸಲಾಗುತ್ತದೆ. ಅದರಿಂದ ಚಿಕಿತ್ಸೆಗೆ ಸಹಾಯ ಆಗಬಹುದು.


ಖಿನ್ನತೆಯನ್ನು ನಿವಾರಿಸಲು ಆಹಾರದ ನಿಯಂತ್ರಣ ಕೂಡ ಅತ್ಯಗತ್ಯ ಈ ಹಿನ್ನಲೆಯಲ್ಲಿ ಇವುಗಳ ಸೇವನೆ ಅತ್ಯಗತ್ಯ. ಖಿನ್ನತೆಯನ್ನು ಹೊಡೆದೋಡಿಸಬಲ್ಲ ಕೆಲವು ಪದಾರ್ಥಗಳ ಮಾಹಿತಿ ಇಲ್ಲಿದೆ1. ಹಾಲು:ಖಿನ್ನತೆಗೆ ವಿಟಮಿನ್ ಡಿ ಕೊರತೆ ಕೂಡ ಕಾರಣ ಎನ್ನಲಾಗುತ್ತದೆ. ವಿಟಮಿನ್ ಡಿಯ ಕೊರತೆಯ ಪರಿಣಾಮಗಳನ್ನು ತಿಳಿಯಲು, ಪಬ್‍ಮೆಡ್ ಸೆಂಟ್ರಲ್‍ನ “ವಿಟಮಿನ್ ಡಿ ಅಂಡ್ ಡಿಪ್ರೆಶನ್: ವೆರ್ ಇಸ್ ಆಲ್ ದ ಸನ್‍ಶೈನ್?” ಎಂಬ ಅಧ್ಯಯನ ಸೇರಿದಂತೆ ಹಲವಾರು ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಹಾಲು ಒಂದೊಳ್ಳೆಯ ಆಹಾರ ಮಾತ್ರವಲ್ಲ, ವಿಟಮಿನ್ ಡಿಯನ್ನು ಕೂಡ ಇದು ಹೊಂದಿದೆ. ಅದನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಅತ್ಯಂತ ಸುಲಭ.


ಇದನ್ನು ಓದಿ: ನವ ದಂಪತಿಗಳಿಗೆ ಉಂಗುರದಾಟ ಅಲ್ಲ, ಫ್ಲಿಪ್ ದ ಬಾಟಲ್ ಚಾಲೆಂಜ್

2. ಒಣ ಬೀಜಗಳು/ನಟ್ಸ್:ಒಣ ಬೀಜಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ, ನಿಮ್ಮ ದೇಹಕ್ಕೆ ಹೇರಳವಾದ ಆ್ಯಂಟಿ ಆಕ್ಸಿಡೆಂಟ್‍ಗಳು ಸಿಗುತ್ತವೆ ಮಾತ್ರವಲ್ಲ, ನಿಮ್ಮ ಮನಸ್ಥಿತಿಯ ಸುಧಾರಣೆಗೂ ಸಹಾಯಕ. ಅವು ಆರೋಗ್ಯಕರ ಕೊಬ್ಬಿನ ಆಗರವಾಗಿದ್ದು, ನಮ್ಮ ಸಂಪೂರ್ಣ ಆರೋಗ್ಯಕ್ಕೆ ಲಾಭ ತರುತ್ತವೆ.


3. ಸಮುದ್ರದ ಆಹಾರ:ಸಮುದ್ರದ ಆಹಾರ ಅಂದರೆ ಸೀಫುಡ್ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಒಮೆಗಾ-3 ಫ್ಯಾಟಿ ಆ್ಯಸಿಡ್ಸ್ ಸಿಗುತ್ತವೆ. ಜರ್ನಲ್ ನೇಚರ್‍ನಲ್ಲಿ ಪ್ರಕಟವಾದ “ಒಮೆಗಾ-3 ಪಾಲಿ ಅನ್‍ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ಸ್ ಪ್ರೊಟೆಕ್ಟ್ ಅಗೆನಿಸ್ಟ್ ಇನ್‍ಫ್ಲಾಮೇಶನ್ ತ್ರೂ ದ ಪ್ರೊಡಕ್ಷನ್ ಆಫ್ ಎಲ್‍ಒಎಕ್ಸ್ ಮತ್ತು ಸಿವೈಪಿ450 ಲಿಪಿದ ಮೀಡಿಯೇಟರ್ಸ್: ರಿಲೆವೆನ್ಸ್ ಫಾರ್ ಮೇಜರ್ ಡಿಪ್ರೆಶನ್ ಅಂಡ್ ಫಾರ್ ಹ್ಯೂಮನ್ ಹಿಪ್ಪೊಕ್ಯಾಂಪಲ್ ನ್ಯೂರೋಜೆನಿಸಿನಸ್” ಎಂಬ ಶೀರ್ಷಿಕೆಯುಳ್ಳ ಅಧ್ಯಯನ ವರದಿಯ ಪ್ರಕಾರ, ಖಿನ್ನತೆಯನ್ನು ನಿವಾರಿಸುವಲ್ಲಿ ಒಮೆಗಾ-3 ಫ್ಯಾಟಿ ಆ್ಯಸಿಡ್ಸ್‍ಗಳ ಪಾತ್ರ ತರ್ಕಿಸುವಂತದ್ದು.


ಇದನ್ನು ಓದಿ: ಮಳೆಗಾಲದಲ್ಲಿ ಕೂದಲು, ಚರ್ಮದ ಆರೈಕೆ ಈ ರೀತಿ ಮಾಡಿ

4. ಕೋಳಿ ಮಾಂಸ:ಪಬ್‍ಮೆಡ್ ಸೆಂಟ್ರಲ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿ, “ಡಯೆಟರಿ ಸೆಲೆನಿಯಂ ಅಂಡ್ ಮೇಜರ್ ಡಿಪ್ರೆಶನ್ : ಅ ನೆಸ್ಟೆಡ್ ಕೇಸ್ ಕಂಟ್ರೋಲ್ ಸ್ಟಡಿ”ಯ ಪ್ರಕಾರ, ಸೆಲೇನಿಯಂ ಸೇವನೆಯ ಕೊರತೆಯುವ ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಚಿಕನ್ ಮತ್ತು ಇತರ ಕಡಿಮೆ ಕೊಬ್ಬಿನ ಮಾಂಸವನ್ನು ಸೇವಿಸುವ ಮೂಲಕ ನೀವು ಸೆಲೇನಿಯಂ ಸೇವನೆಯನ್ನು ಸರಿದೂಗಿಸಬಹುದು.


5. ಬೆರ್ರಿಗಳು:ಈ ರಸಯುಕ್ತ ಪುಟಾಣಿ ಹಣ್ಣುಗಳು ಆ್ಯಂಟಿ ಆಕ್ಸಿಡೆಂಟ್‍ಗಳ ಆಗರ. ಅವು ತಿನ್ನಲು ಅತ್ಯಂತ ರುಚಿಕರ ಮಾತ್ರವಲ್ಲ, ನಮ್ಮ ಆಹಾರಕ್ರಮದಲ್ಲಿ ಸುಲಭವಾಗಿ ಸೇರಿಸಿಕೊಳ್ಳಲು ಸಾಧ್ಯವಾಗುವಂತವು. ಅವುಗಳ ಆ್ಯಂಟಿ ಆಕ್ಸಿಡೆಂಟ್‍ಗಳು ಅತ್ಯಂತ ಲಾಭದಾಯಕ, ಏಕೆಂದರೆ ಜರ್ನಲ್ ಆಫ್ ನ್ಯೂಟ್ರಿಶಿನಲ್ ಅಂಡ್ ಎನ್ವಿರಾನ್‍ಮೆಂಟಲ್ ಮೆಡಿಸಿನ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿ “ಇಂಪ್ಯಾಕ್ಟ್ ಆಫ್ ಆ್ಯಂಟಿ ಆಕ್ಸಿಡೆಂಟ್ ಥೆರಪಿ ಆನ್ ಸಿಂಪ್ಟಮ್ಸ್ ಆಫ್ ಆ್ಯಂಕ್ಸೈಟಿ ಅಂಡ್ ಡಿಪ್ರೆಶನ್. ಎ ರ್ಯಾಂಡಮೈಸ್‍ಡ್ ಕಂಟ್ರೋಲ್‍ಡ್ ಟ್ರಯಲ್ ಇನ್ ಪೇಶಂಟ್ಸ್ ವಿತ್ ಪೆರಿಪೆರಲ್ ಅರ್ಟೆರಿಯಲ್ ಡಿಸೀಸ್” ಪ್ರಕಾರ, ಆ್ಯಂಟಿ ಆಕ್ಸಿಡೆಂಟ್‍ಗಳ ಸೇವನೆಯಿಂದ ಮನಸ್ಥಿತಿ ಸುಧಾರಣಾ ಪರಿಣಾಮಗಳು ಕಂಡು ಬಂದಿವೆ.


First published: June 19, 2021, 10:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories