ಯುವಿ(UV) ಕಿರಣಗಳಿಂದ ತ್ವಚೆಯನ್ನು ರಕ್ಷಿಸಲು ಈ ಹಣ್ಣುಗಳನ್ನು ಸೇವಿಸಿ

news18
Updated:June 6, 2018, 12:08 PM IST
ಯುವಿ(UV) ಕಿರಣಗಳಿಂದ ತ್ವಚೆಯನ್ನು ರಕ್ಷಿಸಲು ಈ ಹಣ್ಣುಗಳನ್ನು ಸೇವಿಸಿ
news18
Updated: June 6, 2018, 12:08 PM IST
ನ್ಯೂಸ್ 18 ಕನ್ನಡ

ಬೇಸಿಗೆಯ ತಾಪದಿಂದ ದೇಹವನ್ನು ರಕ್ಷಿಸಲು ನಾನಾ ರೀತಿಯ ಕಸರತ್ತು ಮಾಡುತ್ತೇವೆ. ಅದರಲ್ಲೂ ಸೂರ್ಯನ ಅಲ್ಟ್ರಾ ವೈಲೆಟ್ (UV) ಕಿರಣಗಳಿಂದ ಉಂಟಾಗುವ ಚರ್ಮದ ರೋಗದ ಸಮಸ್ಯೆ ದೊಡ್ಡ ತಲೆನೋವು. ಯುವಿ ಕಿರಣಗಳಿಂದ ಸೌಂದರ್ಯವನ್ನು ರಕ್ಷಿಸಲು ಸಾಮಾನ್ಯವಾಗಿ ಬಟ್ಟೆಯ ಮೊರೆ ಹೋಗುತ್ತೇವೆ. ಅದರೂ ಕೂಡ ಕೆಲ ಬಾರಿ ತ್ವಚೆಯ ಮೇಲೆ ಸೂರ್ಯನ ಕಿರಣಗಳು ಕೆಟ್ಟ ಪರಿಣಾಮ ಬೀರುತ್ತದೆ. ಹೀಗೆ ಉಂಟಾಗುವ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಕೆಲ ಹಣ್ಣುಗಳು ಸಹಕಾರಿಯಾಗಿದೆ. ಅಲ್ಟ್ರಾ ವೈಲೆಟ್ ಕಿರಣಗಳಿಂದ ತ್ವಚೆಯನ್ನು ಕಾಪಾಡಲು ತಿನ್ನಬೇಕಾದ ಕೆಲ ಹಣ್ಣುಗಳ ಪಟ್ಟಿ ಹೀಗಿದೆ.

ಸ್ಟ್ರಾಬೆರಿ: ಸೂರ್ಯನ ಕಿರಣಗಳಿಂದ ಉಂಟಾಗುವ ತ್ವಚೆಯ ತೊಂದರೆಗಳಿಗೆ ಸ್ಟ್ರಾಬೆರಿ ಹಣ್ಣು ಉತ್ತಮ ಪರಿಹಾರ. ಈ ಹಣ್ಣಿನಲ್ಲಿ ವಿಟಮಿನ್ ಮತ್ತು ಅಂಥೋಸ್ಯಾನಿನ್ ಅಂಶಗಳು ಹೇರಳವಾಗಿರುತ್ತದೆ. ಇವು ಯುವಿ ಕಿರಣಗಳಿಂದ ನಿಮ್ಮ ಚರ್ಮಕ್ಕೆ ಉಂಟಾಗುವ ತೊಂದರೆಗಳನ್ನು ತಪ್ಪಿಸುತ್ತದೆ.

ರೆಡ್ ಕ್ಯಾಪ್ಸಿಕಂ ಅಥವಾ ಕೆಂಪು ಶಿಮ್ಲಾ ಮಿರ್ಚ್: ಕೆಂಪು ಕ್ಯಾಪ್ಸಿಕಂ ನೋಡಲು ಎಷ್ಟು ಸುಂದರವಾಗಿರುತ್ತದೆಯೋ, ಅಷ್ಟೇ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಸಲಾಡ್, ಸ್ಯಾಂಡ್ವಿಚ್ ಹಾಗೂ ಇತರೆ ಪದಾರ್ಥಗಳಲ್ಲಿ ಕ್ಯಾಪ್ಸಿಕಂ ಅನ್ನು ಬಳಸಲಾಗುತ್ತದೆ. ಆದರೆ ಇನ್ನು ಮುಂದೆ ಇದರ ಬಳಕೆಯನ್ನು ಹೆಚ್ಚಿಸಿ. ಇದರಲ್ಲಿ ಬೀಟಾ-ಕ್ಯಾರೊಟಿನ್ ಎಂಬ ಅಂಶವಿದ್ದು, ಇದು ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವ ಕೆಲಸ ಮಾಡುತ್ತದೆ.

ಡಾರ್ಕ್ ಚಾಕೊಲೇಟ್: ಚಾಕೊಲೇಟ್​ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಕಿರಿಯದಿಂದ ಹಿರಿಯರವರೆಗೂ ಚಾಕೊಲೇಟ್ ಮೆಲ್ಲುವವರೇ ಹೆಚ್ಚು. ಯುವಿ ಕಿರಣಗಳಿಂದ ಚರ್ಮದ ರಕ್ಷಣೆಗೆ ಡಾರ್ಕ್ ಚಾಕೊಲೇಟ್ ತಿನ್ನುವುದು ಉತ್ತಮ ಎಂದಿರುವುದು ಚಾಕೊಲೇಟ್​ ಪ್ರಿಯರಿಗೆ ಸಿಹಿ ಸುದ್ದಿ. ಡಾರ್ಕ್​ ಚಾಕೊಲೇಟ್​ನಲ್ಲಿ 70 % ರಷ್ಟು ಕೋಕೊವನ್ನು ಬಳಸಲಾಗುತ್ತದೆ. ಕೋಕೊನಲ್ಲಿ ಫಾವನೊಲ್ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಕ್ಷ ಕಿರಣಗಳಿಂದ ತ್ವಚೆಯನ್ನು ಕಾಪಾಡುವಲ್ಲಿ ನೆರವಾಗುತ್ತದೆ.

ದಾಳಿಂಬೆ: ದಾಳಿಂಬೆಯನ್ನು ನೂರು ರೋಗಗಳ ಮನೆಮದ್ದು ಎನ್ನುತ್ತಾರೆ. ದಾಳಿಂಬೆಯಲ್ಲಿ ಆಂಥೋಸಯನಿನ್, ಟೈನಿನ್​ ,ಆ್ಯಂಟಿಆಕ್ಸಿಡೆಂಟ್​ಗಳು, ಆ್ಯಂಟಿ-ಇಂಫ್ಲೆಮೆಟರಿ ಅಂಶಗಳು ಸಮೃದ್ಧವಾಗಿರುತ್ತದೆ. ಈ ಅಂಶಗಳು ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಟೊಮ್ಯಾಟೊ: ಟೊಮ್ಯಾಟೊನಲ್ಲಿ ಲಿಹಿಕೊಪಿನ್ ಅಂಶವು ಹೇರಳವಾಗಿರುತ್ತದೆ. ಇದು ತ್ವಚೆಯನ್ನು ಸುಂದರವಾಗಿ ಕಾಣುವಂತೆ ಮಾಡುವುದಲ್ಲದೆ, ಸೂರ್ಯನ ಕಿರಣಗಳಿಂದ ಚರ್ಮದ ಹಾನಿಯನ್ನು ತಪ್ಪಿಸುತ್ತದೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ