• Home
 • »
 • News
 • »
 • lifestyle
 • »
 • World Heart Day: ನೋಟದಲ್ಲೇ ಹೃದಯಕ್ಕೆ ಲಗ್ಗೆಯಿಡುವ ಹೂಗಳು, ಹೃದಯದ ಆರೋಗ್ಯವನ್ನೂ ಕಾಪಾಡುತ್ತವಂತೆ!

World Heart Day: ನೋಟದಲ್ಲೇ ಹೃದಯಕ್ಕೆ ಲಗ್ಗೆಯಿಡುವ ಹೂಗಳು, ಹೃದಯದ ಆರೋಗ್ಯವನ್ನೂ ಕಾಪಾಡುತ್ತವಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೂವಿನ ದಳಗಳನ್ನು ಚಹಾ ಕಷಾಯ ಹೂವಿನ ದಳಗಳ ಎಣ್ಣೆಯ ರೂಪದಲ್ಲಿಯೂ ಸೇವನೆ ಮಾಡಬಹುದು. ಹೂವಿನ ದಳಗಳು ಹೃದಯದ ಆರೋಗ್ಯ ಕಾಪಾಡುತ್ತದೆ. ಇಲ್ಲಿ ಹೇಳಿರುವ 3 ಹೂವುಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಂಬಲಾಗಿದೆ.

 • Share this:

  ಹೂವುಗಳ ಸೌಂದರ್ಯ (Flowers Beauty) ಮತ್ತು ಪರಿಮಳ (Flavor) ಕಂಡ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಎಲ್ಲರೂ ಹೂವಿನ ಕಂಪು (Aroma), ಅಂದಕ್ಕೆ ಮಾರು ಹೋಗುವವರೆ. ಹೂಗಳ ತೋಟವೇ ಇರಲಿ, ಮಾರುಕಟ್ಟೆಯಲ್ಲಿ (Market) ಸಿಗುವ ಹೂಗಳೇ ಇರಲಿ ಮಾಧುರ್ಯ ಪ್ರತಿಯೊಬ್ಬರನ್ನೂ ಸೆಳೆಯುತ್ತದೆ. ಮನಸ್ಸಿನ ದುಗುಡ, ಚಿಂತೆ, ಒತ್ತಡ ಹೂಗಳನ್ನು ಕಂಡ ಕೂಡಲೇ ಮಾರುದ್ದ ಓಡಿ ಹೋಗುತ್ತದೆ. ಪ್ರಶಾಂತ ಮತ್ತು ಸುಂದರ, ಮಧುರವಾಗಿರುವ ಹೂಗಳು ನಿಮ್ಮ ಹೃದಯವನ್ನು (Heart) ಆರೋಗ್ಯವಾಗಿರಿಸುತ್ತವೆ ಎಂಬ ವಿಷಯ ನಿಮಗೆ ಗೊತ್ತಾ? ನಿಮಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಇದ್ದರೆ ಅದನ್ನೂ ಗುಣಪಡಿಸಬಹುದು. ಹೂವಿನ ದಳಗಳನ್ನು ನೇರವಾಗಿ ಸಲಾಡ್‌ಗಳಲ್ಲಿ ಅಥವಾ ಮೌತ್ ಫ್ರೆಶ್‌ನರ್ ಆಗಿ ಸೇವನೆ ಮಾಡಬಹುದಂತೆ.


  ಹೂವಿನ ದಳಗಳು ಹೃದಯದ ಆರೋಗ್ಯ ಕಾಪಾಡುತ್ತವೆ


  ಹೂವಿನ ದಳಗಳನ್ನು ಚಹಾ, ಕಷಾಯ, ಹೂವಿನ ದಳಗಳ ಎಣ್ಣೆಯ ರೂಪದಲ್ಲಿಯೂ ಸೇವನೆ ಮಾಡಬಹುದು. ಹೂವಿನ ದಳಗಳು ಹೃದಯದ ಆರೋಗ್ಯ ಕಾಪಾಡುತ್ತದೆ. ಇಲ್ಲಿ ಹೇಳಿರುವ 3 ಹೂವುಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಂಬಲಾಗಿದೆ.


  ರಕ್ತದೊತ್ತಡ ನಿಯಂತ್ರಿಸಲು ಹೂವುಗಳು ಸಹಾಯ ಮಾಡುತ್ತವೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಆರೋಗ್ಯ ಬಲಪಡಿಸುತ್ತದೆ. ಮಲ್ಲಿಗೆ ಮತ್ತು ಮಾರಿಗೋಲ್ಡ್ ನಂತಹ ಕೆಲವು ಹೂವುಗಳು ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತವೆ.


  ಇದನ್ನೂ ಓದಿ: ತೂಕ ಇಳಿಕೆಯ ಜರ್ನಿಯಲ್ಲಿ ಈ ಪಾನೀಯ ಸೇರಿಸಿ ಹೊಟ್ಟೆ ಕೊಬ್ಬನ್ನು ವೇಗವಾಗಿ ಕರಗಿಸಿ!


  ಆದಾಗ್ಯೂ ಹೂವುಗಳು ದೇಹದ ಭಾಗಗಳ ಮೇಲೆ ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಇಲ್ಲಿ ಹೇಳಲಾಗಿರುವ ಮೂರು ಹೂವುಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಂಶೋಧನೆಯೊಂದು ಸಾಬೀತು ಪಡಿಸಿದೆ.


  ಕಣಿವೆಯ ಲಿಲ್ಲಿ


  ಕಣಿವೆಯ ಬೆಲ್ ಆಕಾರದ ಬಿಳಿ ಲಿಲ್ಲಿ ಹೂವು ಮುಖ್ಯವಾಗಿ ಯುರೇಷಿಯಾ ಮತ್ತು ಉತ್ತರ ಅಮೆರಿಕಾದಲ್ಲಿ ಕಂಡು ಬರುತ್ತದೆ. ಕಣಿವೆಯ ಲಿಲ್ಲಿ ಹೂವನ್ನು ನೆರಳಿರುವ ಸ್ಥಳಗಳಲ್ಲಿ ಬೆಳೆಯುತ್ತಾರೆ. ಹೃದಯದ ವಿವಿಧ ಸಮಸ್ಯೆಗಳ ರೋಗ ನಿರ್ಣಯದಲ್ಲಿ ಇದರ ಬಳಕೆ ಮಾಡಲಾಗುತ್ತದೆ.


  ಕಣಿವೆ ಲಿಲ್ಲಿ ಹೂವು ಡ್ರಾಪ್ಸಿ ಚಿಕಿತ್ಸೆಯಲ್ಲಿ ಸಹ ಸಹಾಯ ಮಾಡುತ್ತದೆ. ವಿಶ್ವ ಸಮರ I ರ ಸಮಯದಲ್ಲಿ ವಿಷಕಾರಿ ಅನಿಲಗಳಿಂದ ಮೂರ್ಛೆಹೋದ ಸೈನಿಕರನ್ನು ಗುಣಪಡಿಸಲು ಕಣಿವೆ ಲಿಲ್ಲಿ ಹೂವನ್ನು ಬಳಕೆ ಮಾಡಲಾಗಿತ್ತಂತೆ.


  ಜರ್ನಲ್ ಆಫ್ ನ್ಯೂರಾಲಜಿ, ನ್ಯೂರೋ ಸರ್ಜರಿ ಮತ್ತು ಸೈಕಿಯಾಟ್ರಿಯಲ್ಲಿ ಪ್ರಕಟವಾದ 1995 ರ ಸಂಶೋಧನಾ ಲೇಖನದ ಪ್ರಕಾರ, ಕಣಿವೆ ಲಿಲ್ಲಿ ಹೂವು ಔಷಧ ತಯಾರಿಸಲು ಬೇರು, ಕಾಂಡ ಮತ್ತು ಒಣಗಿದ ಹೂವನ್ನು ಬಳಕೆ ಮಾಡ್ತಾರೆ.


  ಇದು ಮುಖ್ಯವಾಗಿ ಹೃದಯ ಸ್ನಾಯುಗಳ ಮೇಲೆ ಕೆಲಸ ಮಾಡುತ್ತದೆ. ಇದು ಹೆಚ್ಚಿದ ಹೃದಯ ಬಡಿತ ನಿಯಂತ್ರಿಸುತ್ತದೆ. ಹಾಗೂ ಹೃದಯದ ಆರೋಗ್ಯ ಕಾಪಾಡುತ್ತದೆ.


  ಲ್ಯಾವೆಂಡರ್ ಹೂವು


  ಪಬ್‌ಮೆಡ್ ಸೆಂಟ್ರಲ್‌ನಲ್ಲಿ ಪ್ರಕಟವಾದ 2012 ರ ಸಂಶೋಧನಾ ವರದಿ ಪ್ರಕಾರ, ಲ್ಯಾವೆಂಡರ್ ಸಾರಭೂತ ತೈಲ ಉಸಿರಾಡುವುದು ಕೇಂದ್ರ ನರಮಂಡಲ, ಸ್ವನಿಯಂತ್ರಿತ ನರಮಂಡಲ ಮತ್ತು ಮನಸ್ಥಿತಿಯ ಪ್ರತಿಕ್ರಿಯೆ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.


  ಈ ಸಂಶೋಧನೆಯಲ್ಲಿ ಇಪ್ಪತ್ತು ಮಂದಿ ಭಾಗಿಯಾಗಿದ್ದರು. ಇದರಲ್ಲಿ ಭಾಗವಹಿಸಿದವರಿಗೆ ಲ್ಯಾವೆಂಡರ್ ಹೂವಿನ ಎಣ್ಣೆಯಿಂದ ಮಸಾಜ್ ಮಾಡಲಾಯಿತು. ಈ ಎಣ್ಣೆಯನ್ನು ಮಣಿಕಟ್ಟು ಮತ್ತು ಕುತ್ತಿಗೆಗೆ ಅನ್ವಯಿಸಲಾಯಿತು.


  ಇದು ಆತಂಕದಿಂದ ಕಂಡು ಬರುವ ಪ್ರಚೋದನೆ ಕಡಿಮೆ ಮಾಡಿತು. ರಕ್ತದೊತ್ತಡ ಮತ್ತು ಹೆಚ್ಚಿದ ಹೃದಯ ಬಡಿತವು ಸಾಮಾನ್ಯ ಸ್ಥಿತಿಗೆ ಮರಳಿತು. ಲ್ಯಾವೆಂಡರ್ ಎಣ್ಣೆಯ ಅದ್ಭುತಗಳು ಚರ್ಮದ ತಾಪಮಾನ ನಿಯಂತ್ರಿಸುತ್ತವೆ.


  ಗುಲಾಬಿ ಹೂವು


  ವಿಜ್ಞಾನಿ ಡೌಗ್ಲಾಸ್ ಜಿ ಮ್ಯಾನುಯೆಲ್ ಮತ್ತು ಸಂಶೋಧನಾ ಸಂಯೋಜಕ ಜೆನ್ನಿ ಲಿಮ್ ಹೇಳುವ ಪ್ರಕಾರ, ಗುಲಾಬಿ ಹೂವುಗಳಲ್ಲಿ ವಿಟಮಿನ್ ಸಿ ಇದೆ. ಉರಿಯೂತದ ಗುಣಲಕ್ಷಣ ಹೊಂದಿದೆ. ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳ ನಿಯಂತ್ರಣಕ್ಕೆ ಗುಲಾಬಿ ದಳಗಳು ಪ್ರಯೋಜನಕಾರಿ.


  ಇದನ್ನೂ ಓದಿ: ನವರಾತ್ರಿ ಹಬ್ಬದಲ್ಲಿ ಈ ಪಾಕವಿಧಾನ ಮಾಡಿ ಸೇವಿಸಿ ಹೆಲ್ದೀ ಆಗಿರಿ!


  ಗುಲಾಬಿಯಲ್ಲಿರುವ ಫ್ಲೇವನಾಯ್ಡ್‌ಗಳು, ಬಯೋಫ್ಲೇವನಾಯ್ಡ್‌ಗಳು, ಸಿಟ್ರಿಕ್ ಆಮ್ಲ, ಫ್ರಕ್ಟೋಸ್, ಮಾಲಿಕ್ ಆಮ್ಲ, ಟ್ಯಾನಿನ್ ಮತ್ತು ಸತುವು ನಮ್ಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಗುಲಾಬಿಯ ಎಲೆಗಳನ್ನು ಅರ್ಜುನ ಮರದ ತೊಗಟೆ ಜೊತೆ ಕುದಿಸಿ ದಿನವೂ ಅರ್ಧ ಕಪ್ ಕಷಾಯ ಸೇವನೆ ಹೃದಯದ ಆರೋಗ್ಯ ಕಾಪಾಡುತ್ತದೆ.

  Published by:renukadariyannavar
  First published: