• Home
  • »
  • News
  • »
  • lifestyle
  • »
  • Men's Health: ಪುರುಷರಲ್ಲಿ ವೀರ್ಯ ಉತ್ಪಾದನೆ ಹೆಚ್ಚಿಸುವುದು ಹೇಗೆ? ಈ ಐದು ಟಿಪ್ಸ್ ​ಫಾಲೋ ಮಾಡಿ

Men's Health: ಪುರುಷರಲ್ಲಿ ವೀರ್ಯ ಉತ್ಪಾದನೆ ಹೆಚ್ಚಿಸುವುದು ಹೇಗೆ? ಈ ಐದು ಟಿಪ್ಸ್ ​ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬಂಜೆತನಕ್ಕೆ ಕೇವಲ ಹೆಣ್ಣು ಮಾತ್ರ ಕಾರಣವಾಗಲ್ಲ, ಕೆಲವೊಮ್ಮೆ ಗಂಡಿನ ಪಾತ್ರವೂ ಇರುತ್ತದೆ. ಪುರುಷರಲ್ಲಿ ಸಂತಾನೋತ್ಪತ್ತಿಯ ಪ್ರಕ್ರಿಯೆಯು ಸರಿಯಾಗಿ ಇರಬೇಕಾಗಿದ್ದರೆ, ಆಗ ಅವರಲ್ಲಿ ವೀರ್ಯದ ಉತ್ಪತ್ತಿ, ಸಂಖ್ಯೆ, ಗಣತಿ, ಗುಣಮಟ್ಟ ಇತ್ಯಾದಿಗಳು ಸರಿಯಾಗಿ ಇರಬೇಕು.

  • Share this:

    ಬಂಜೆತನಕ್ಕೆ (Infertility) ಕೇವಲ ಹೆಣ್ಣು (Girl) ಮಾತ್ರ ಕಾರಣವಾಗಲ್ಲ, ಕೆಲವೊಮ್ಮೆ ಗಂಡಿನ (Men) ಪಾತ್ರವೂ ಇರುತ್ತದೆ. ಪುರುಷರಲ್ಲಿ ಸಂತಾನೋತ್ಪತ್ತಿಯ (Breeding) ಪ್ರಕ್ರಿಯೆಯು ಸರಿಯಾಗಿ ಇರಬೇಕಾಗಿದ್ದರೆ, ಆಗ ಅವರಲ್ಲಿ ವೀರ್ಯದ (Sperm) ಉತ್ಪತ್ತಿ, ಸಂಖ್ಯೆ, ಗಣತಿ, ಗುಣಮಟ್ಟ ಇತ್ಯಾದಿಗಳು ಸರಿಯಾಗಿ ಇರಬೇಕು. ಪುರುಷರು ಮಗುವನ್ನು ಹೊತ್ತು, ಹೆರುವುದಿಲ್ಲವಾದರೂ, ಪುರುಷನ ಆರೋಗ್ಯ (Men's Health), ವಿಶೇಷವಾಗಿ ಅವರ ವೀರ್ಯದ ಸ್ಥಿತಿ ಸಂತಾನೋತ್ಪತ್ತಿಗೆ ಪ್ರಮುಖವಾಗಿ ಕಾರಣವಾಗುತ್ತದೆ.


    ಸ್ತ್ರೀರೋಗತಜ್ಞ ಮತ್ತು IVF ಸಲಹೆಗಾರರಾದ ಡಾ. ಮಾಧುರಿ ರಾಯ್, ಈ ಬಗ್ಗೆ ಮಾತನಾಡಿದ್ದು, "ಕಡಿಮೆ ವೀರ್ಯ ಹೊಂದಿರುವುದು ಸಹ ಮಕ್ಕಳಾಗದೇ ಇರುವುದಕ್ಕೆ ನೇರವಾಗಿ ಸಂಬಂಧ ಪಟ್ಟಿದೆ.


    ಕಡಿಮೆ ವೀರ್ಯ ಎಣಿಕೆಯು ಪುರುಷರ ವೀರ್ಯದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ವೀರ್ಯವನ್ನು ಸೂಚಿಸುತ್ತದೆ. ಪ್ರತಿ ಮಿಲಿಲೀಟರ್ ವೀರ್ಯಕ್ಕೆ 15 ಮಿಲಿಯನ್ ನಿಂದ 200 ಮಿಲಿಯನ್ ವೀರ್ಯವನ್ನು ಸಾಮಾನ್ಯ ವೀರ್ಯ ಎಣಿಕೆ ಎಂದು ಪರಿಗಣಿಸಲಾಗುತ್ತದೆ.


    ಪುರುಷನ ವೀರ್ಯಾಣು ಸಂಖ್ಯೆ 15 ಮಿಲಿಯನ್‌ಗಿಂತ ಕಡಿಮೆಯಿದ್ದರೆ ಕಡಿಮೆ ವೀರ್ಯಾಣು ಎಂದು ಹೇಳಲಾಗುತ್ತದೆ" ಎಂದು ಅವರು ಹೇಳಿದ್ದಾರೆ.


    These five ways to increase sperm production in men
    ಸಾಂಕೇತಿಕ ಚಿತ್ರ


    ಇನ್ನೂ ಪುರುಷರಲ್ಲಿ ಕಡಿಮೆ ವೀರ್ಯ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಸಲಹೆಯನ್ನು ಸಹ ಮಾಧುರಿ ರಾಯ್‌ ನೀಡಿದ್ದಾರೆ.


    1. ವ್ಯಾಯಾಮ
    ನಿಮ್ಮ ವೀರ್ಯ ಸಂಖ್ಯೆಯನ್ನು ಹೆಚ್ಚಿಸುವ ಅತ್ಯುತ್ತಮ ವಿಧಾನವೆಂದರೆ ಅದು ವ್ಯಾಯಾಮ. ನಿಯಮಿತವಾದ ವ್ಯಾಯಾಮದಿಂದ ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟಗಳು ಮತ್ತು ನಿಮ್ಮ ವೀರ್ಯದ ಗುಣಮಟ್ಟ ಎರಡನ್ನೂ ಹೆಚ್ಚಿಸಬಹುದು.


    ಸಂಶೋಧನೆಯ ಪ್ರಕಾರ, ವಾರದಲ್ಲಿ ಕನಿಷ್ಠ ಮೂರು ಬಾರಿ ಸುಮಾರು ಒಂದು ಗಂಟೆ ಕಾಲ ವರ್ಕ್ ಔಟ್ ಮಾಡುವ ಪುರುಷರು ಹೆಚ್ಚು ವೀರ್ಯವನ್ನು ಹೊಂದಿರುತ್ತಾರೆ ಎಂದು ಹೇಳಿದೆ.


    2. ಆರೋಗ್ಯಕರ, ಪೋಷಕಾಂಶ-ಭರಿತ ಆಹಾರ ಸೇವನೆ
    ಆರೋಗ್ಯಕಾರಿ ವಿರ್ಯದ ಉತ್ಪತ್ತಿಯಲ್ಲಿ ಜೀವನಶೈಲಿ, ಪೋಷಕಾಂಶಗಳು ತುಂಬಾ ಪ್ರಮುಖ ಪಾತ್ರ ವಹಿಸುವುದು. ಆರೋಗ್ಯಕಾರಿ ಆಹಾರ ಕ್ರಮದಿಂದ ಪುರುಷರು ಕಡಿಮೆ ಸಂಖ್ಯೆ ವೀರ್ಯಗಳನ್ನು ಹೆಚ್ಚಿನ ಸಂಖ್ಯೆಗೆ ಹೆಚ್ಚಿಸಬಹುದು.


    ಸಂಶೋಧನೆಯ ಪ್ರಕಾರ, ತಂದೆಯಾಗ ಬಯಸುವ ಪುರುಷರಿಗೆ ಬಹಳಷ್ಟು ವಿಟಮಿನ್ ಸಿ ಮತ್ತು ಇ, ಸತು ಮತ್ತು ಫೋಲಿಕ್ ಆಮ್ಲದ ಅಗತ್ಯವಿರುತ್ತದೆ, ಇದು ಹೆಚ್ಚಾಗಿ ತರಕಾರಿಗಳು, ಹಣ್ಣುಗಳು, ಧಾನ್ಯಗಳಲ್ಲಿ ಲಭಿಸುತ್ತದೆ. .


    ವಾಲ್‌ನಟ್ಸ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಹೆಚ್ಚಿನ ಇತರ ಆಹಾರಗಳಾದ ಹಣ್ಣುಗಳು ಮತ್ತು ತರಕಾರಿಗಳು ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ.


    ಹೆಚ್ಚುವರಿಯಾಗಿ, ವಿಟಮಿನ್ ಸಿ, ಡಿ ಮತ್ತು ಇ, ಸತು, ಸೆಲೆನಿಯಮ್, ಫೋಲಿಕ್ ಆಮ್ಲ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಉತ್ತಮ ಕೊಬ್ಬುಗಳ ಕೊರತೆಯು ವೀರ್ಯದ ಪ್ರಮಾಣ ಮತ್ತು ಗುಣಮಟ್ಟದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.


    ಇದನ್ನೂ ಓದಿ: Health Tips: ದಾಲ್​ ತಿಂದ ಬಳಿಕ ಹೊಟ್ಟೆ ಉಬ್ಬರಿಸಿದರೆ ಹೀಗೆ ಮಾಡಿ- ಆರಾಮಾಗುತ್ತೆ!


    3. ಕಡಿಮೆ ಒತ್ತಡ
    ಪುರುಷರು ಕಡಿಮೆ ಒತ್ತಡ ಮತ್ತು ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಹೆಚ್ಚು ವೀರ್ಯವನ್ನು ಉತ್ಪಾದಿಸಲು ಮತ್ತು ಲೈಂಗಿಕತೆಯನ್ನು ಹೆಚ್ಚು ಆನಂದದಾಯಕವಾಗಿಸಲು ಸಹಾಯವಾಗುತ್ತದೆ.


    ಯಾವುದೇ ವಿಚಾರದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗದೇ ಧ್ಯಾನದಂತಹ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿಕೊಂಡಲ್ಲಿ ಈ ಸಮಸ್ಯೆ ದೂರವಾಗುತ್ತದೆ. ಹೆಚ್ಚಿನ ಒತ್ತಡದ ಜೀವನ ಪುರುಷರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.


    4. ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ
    ಪುರುಷರು ಹೆಚ್ಚಿನ ಬಿಗಿ ಒಳಉಡುಪು ಅಥವಾ ಬಟ್ಟೆಗಳನ್ನು ಧರಿಸಿದ್ದಲ್ಲಿ ವೃಷಣಗಳು ಬಿಸಿಯಾಗಬಹುದು. ಈ ಸ್ಥಿತಿ ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಆದಷ್ಟು ಸಡಿಲವಾದ ಬಟ್ಟೆಗಳನ್ನು ಹೆಚ್ಚಿನ ವೀರ್ಯ ಉತ್ಪಾದನೆಗೆ ಸಹಕಾರಿ.


    5. ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಿ
    ಆಲ್ಕೋಹಾಲ್ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವುದು. ಇದರಿಂದ ವೀರ್ಯದ ಗಣತಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುವುದು.


    ಹೀಗಾಗಿ ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ. ಇನ್ನೂ ಧೂಮಪಾನ ಮಾಡುವ ಪುರುಷರು ದುರ್ಬಲ ಕಾಮಾಸಕ್ತಿಗಳನ್ನು ಹೊಂದಿರುತ್ತಾರೆ ಮತ್ತು ಕಡಿಮೆ ಸಂಭೋಗದಲ್ಲಿ ತೊಡಗುತ್ತಾರೆ ಎಂದು ಸಂಶೋಧನೆ ಸೂಚಿಸುತ್ತದೆ.

    Published by:Gowtham K
    First published: