Weight Loss: ನಿಮ್ಮ ದೇಹದ ತೂಕ ಕಡಿಮೆ ಆಗ್ತಿಲ್ಲ ಅಂತ ಚಿಂತೆನಾ? ಹಾಗಿದ್ರೆ ಇವುಗಳ ಬಗ್ಗೆ ಸ್ವಲ್ಪ ಗಮನ ಕೊಡಿ

ನಿಮ್ಮ ದೇಹದ ಚಯಾಪಚಯ ಕುಂಠಿತಕೊಳ್ಳಲು ಏನು ಕಾರಣ ಎಂಬುದನ್ನು ನೀವು ಅರಿತುಕೊಳ್ಳುವುದು ಬಹಳ ಮುಖ್ಯ. ಆ ಮೂಲಕ ಅದಕ್ಕೆ ಸಂಬಂಧಿಸಿದಂತೆ ನಾವು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಚಯಪಚಯ ಕ್ಷೀಣಿಸಲು ಕಾರಣವಾಗುವ ಕೆಲವು ಅಂಶಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನೀವು ಸರಿಯಾದ ಆಹಾರ ಕ್ರಮವನ್ನು (Diet Plan) ಅನುಸರಿಸುತ್ತಿದ್ದರೂ, ದಿನದ ಅಂತ್ಯದ ವೇಳೆಗೆ ದೇಹದ ಶಕ್ತಿ (Power of the body) ಕುಂಠಿತವಾದಂತೆ ಅನುಭವ ಆಗುತ್ತದೆಯೇ? ದೇಹದ ತೂಕ (Body weight) ಬೇಗ ಹೆಚ್ಚುತ್ತದೆ ಆದರೆ, ಆದೇ ಪ್ರಮಾಣದಲ್ಲಿ ತೂಕವನ್ನು ಇಳಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ ಹಾಗಾದರೆ, ನಿಮ್ಮ ದೇಹದ ಚಯಾಪಚಯ (Metabolism) ಸರಿ ಇಲ್ಲದೇ ಇರುವುದೇ ಈ ಸಮಸ್ಯೆಗಳಿಗೆ ಕಾರಣ ಇರಬಹುದು? ಏನಿದು ಚಯಾಪಚಯ? ಅದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಒಂದು ಪ್ರಕ್ರಿಯೆ (Process). ನಿಮ್ಮ ಚಯಾಪಚಯ ದರವು ತುಂಬಾ ಕಡಿಮೆ ಆಗಿದ್ದರೆ, ಅದು ದೇಹದ ತೂಕದ ಹೆಚ್ಚಳಕ್ಕೆ (Weight Gain) ಕಾರಣ ಆಗಬಹುದು ಮತ್ತು ನಿಮ್ಮ ದೇಹಕ್ಕೆ ಯಾವಾಗಲೂ ದಣಿವಿನ ಅನುಭವ ಆಗುತ್ತದೆ ಕೂಡ.

ಚಯಾಪಚಯವನ್ನು ಹೆಚ್ಚಿಸಲು ಏನು ಮಾಡಬೇಕು ಎಂಬುದಕ್ಕೆ ನಾನಾ ರೀತಿಯ ಸಲಹೆಗಳು ಸಿಗಬಹುದು. ಆದರೆ ನಿಮ್ಮ ದೇಹದ ಚಯಾಪಚಯ ಕುಂಠಿತಕೊಳ್ಳಲು ಏನು ಕಾರಣ ಎಂಬುದನ್ನು ನೀವು ಅರಿತುಕೊಳ್ಳುವುದು ಬಹಳ ಮುಖ್ಯ. ಆ ಮೂಲಕ ಅದಕ್ಕೆ ಸಂಬಂಧಿಸಿದಂತೆ ನಾವು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಚಯಪಚಯ ಕ್ಷೀಣಿಸಲು ಕಾರಣವಾಗುವ ಕೆಲವು ಅಂಶಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಕ್ಯಾಲೋರಿ ಕೊರತೆ
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ನಾವು ಕ್ಯಾಲೋರಿಗಳ ಸೇವನೆಯಲ್ಲಿ ಕಡಿಮೆ ಮಾಡುತ್ತೇವೆ. ಆದರೆ ಇದು ಸರಿಯಾದ ಕ್ರಮವೇ? ನೀವು ತಿನ್ನುವ ಆಹಾರದ ಪ್ರಮಾಣವನ್ನು ಹಠಾತ್ತನೆ ಕಡಿಮೆ ಮಾಡಿದರೆ, ನಿಮ್ಮ ದೇಹವು ಅದನ್ನು ಗ್ರಹಿಸುತ್ತದೆ ಮತ್ತು ಕ್ಯಾಲೋರಿಗಳನ್ನು ಕಡಿಮೆ ದರದಲ್ಲಿ ಕರಗಿಸಲು ಪ್ರಾರಂಭಿಸುತ್ತದೆ. ನೀವು ತೂಕ ಇಳಿಸಬೇಕು ಎಂದಿದ್ದದ್ದರೆ ಕ್ಯಾಲೋರಿ ಸೇವನೆ ಕಡಿಮೆ ಮಾಡಬೇಕು ಎಂಬುದೇನೋ ಸರಿ, ಆದರೆ ಅದು ನಿಮ್ಮ ವ್ಯವಸ್ಥೆಯ ಜೊತೆ ಆಟವಾಡಲು ಸಾಧ್ಯವಾಗುವ ಮಟ್ಟಿಗೆ ಕಡಿಮೆ ಮಾಡುವುದು ಸರಿಯಲ್ಲ.

ಇದನ್ನೂ ಓದಿ:  Weight Loss: ಎಷ್ಟು ದಿನ ವಾಕಿಂಗ್ ಮಾಡಿದ್ರೆ ತೂಕವನ್ನು ಸುಲಭವಾಗಿ ಇಳಿಸಬಹುದು ಗೊತ್ತಾ?

ಸಾಕಷ್ಟು ಪ್ರೊಟೀನ್‍ನ ಸೇವನೆ ಮಾಡದೇ ಇರುವುದು
ಆರೋಗ್ಯಕರ ತೂಕವನ್ನು ಹೊಂದುವುದು ನಿಮ್ಮ ಉದ್ದೇಶವಾಗಿದ್ದಲ್ಲಿ, ಪ್ರೊಟೀನ್‍ನ ಸೇವನೆ ಬಹಳ ಅತ್ಯಗತ್ಯ. ಅತ್ಯಧಿಕ ಪ್ರೊಟೀನ್ ಉಳ್ಳ ಆರೋಗ್ಯ ಕ್ರಮವು ನಿಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚು ಮಾಡುತ್ತದೆ ಮತ್ತು ಚಯಾಪಚಯ ದರವನ್ನು ಅಧಿಕಗೊಳಿಸುತ್ತದೆ.

ವ್ಯಾಯಾಮದ ಕೊರತೆ
ನೀವು ಒಂದು ಸೋಮಾರಿತನ ಜೀವನವನ್ನು ನಡೆಸುತ್ತಿದ್ದಲ್ಲಿ, ಖಂಡಿತವಾಗಿ ನಿಮ್ಮ ದೇಹವು ಕೂಡ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುತ್ತದೆ. ವ್ಯಾಯಾಮ ಅಥವಾ ಇನ್ನಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೇ ಇದ್ದಾಗ, ಚಯಾಪಚಯ ದರವು ಕುಂಠಿತವಾಗುತ್ತದೆ, ಆಗ ಯಾವುದೇ ಕೆಲಸ ಮಾಡದೇ ಇದ್ದರೂ ನಿಮ್ಮ ದೇಹಕ್ಕೆ ದಣಿವಿನ ಅನುಭವ ಆಗುತ್ತದೆ. ಅದ್ದರಿಂದ ನೀವು ಯಾವುದಾದರೂ ರೀತಿಯ ದೈಹಿಕ ಚಟುವಟಿಕೆಯಲ್ಲಿ, ಅಂದರೆ ಓಟ, ಸೈಕಲ್ ಸವಾರಿ, ನಡಿಗೆ ಅಥವಾ ಜಿಮ್ ಇತ್ಯಾದಿಗಳಲ್ಲಿ ನಿರತರಾಗುವುದು ಬಹಳ ಅಗತ್ಯ.

ನಿದ್ರೆಯ ಅಭಾವ
ನಿದ್ರೆಯ ಅಭಾವ ಅಥವಾ ನಿದ್ರಾಹೀನತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ನೀವು ನಿತ್ಯವೂ 8 ಗಂಟೆಗಳ ಕಾಲ ಸುಖವಾಗಿ ನಿದ್ರೆ ಮಾಡಲಿಲ್ಲ ಎಂದಾದರೆ, ಅದು ನಿಮ್ಮ ದೇಹದಲ್ಲಿ ಚಯಾಪಚಯ ಕುಂಠಿತವಾಗಿಲು ಒಂದು ಮುಖ್ಯ ಕಾರಣವಾಗುತ್ತದೆ. ಹಾಗಾಗಿ ದೇಹದ ಅಗತ್ಯಕ್ಕೆ ತಕ್ಕಷ್ಟು ನಿದ್ರೆಯನ್ನು ಮಾಡಲು ಪ್ರಯತ್ನಿಸಿ. ಹಾಗೆ ಮಾಡಿದ್ದಲ್ಲಿ, ಮರುದಿನ ಎದ್ದಾಗ ನಿಮ್ಮ ದೇಹ ಮತ್ತು ಮನಸ್ಸು ಎರಡೂ ಕೂಡ ಲವಲವಿಕೆಯಿಂದ ಇರುತ್ತದೆ.

ಇದನ್ನೂ ಓದಿ:  Weight Loss: ಹೆಚ್ಚುತ್ತಿರುವ ಬೊಜ್ಜು ನಿಯಂತ್ರಣ ಮತ್ತು ತೂಕ ಇಳಿಸಲು ಆಯುರ್ವೇದ ಸಲಹೆ ಹೀಗಿದೆ

ಸಂಸ್ಕರಿಸಿದ ಆಹಾರಗಳ ಸೇವೆನೆ
ದೇಹದ ಆರೋಗ್ಯವನ್ನು ಕಾಪಾಡಲು, ಅತಿಯಾಗಿ ತಿನ್ನಬಾರದು, ಅಗತ್ಯಕ್ಕೆ ತಕ್ಕಷ್ಟು ಆಹಾರವನ್ನು ಮಾತ್ರ ಸೇವಿಸಬೇಕು ಎಂಬುದೇನೋ ಸರಿ, ಹಾಗಂತ ಸಂಸ್ಕರಿಸಿದ ಆಹಾರವನ್ನು ಸೇವಿಸುವುದಲ್ಲ. ಬದಲಿಗೆ ದೇಹಕ್ಕೆ ಶಕ್ತಿ ನೀಡುವ ಮತ್ತು ಕಾಯಿಲೆಗಳಿಂದ ನಮ್ಮನ್ನು ಕಾಪಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಸಂಸ್ಕರಿತ ಆಹಾರದಿಂದ ಕೇವಲ ನಿಮ್ಮ ದೇಹಕ್ಕೆ ಹೆಚ್ಚುವರಿ ಕೊಬ್ಬು ಸೇರಿಕೊಳ್ಳುತ್ತದೆ. ಅದಲ್ಲದೆ, ಸಕ್ಕರೆ ಅಥವಾ ಉಪ್ಪು ಅನೇಕ ಕಾಯಿಲೆಗಳ ಆಗಮನಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.
Published by:Ashwini Prabhu
First published: