ಈ ಎಣ್ಣೆಗಳ ಬಳಕೆ ಕೂದಲು ಉದುರುವಿಕೆಗೆ ಕಾರಣವಾಗಬಹುದು..!

ಕೂದಲ ಬೆಳವಣೆಗಾಗಿ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿಶೇಷವಾಗಿ ಹೇರ್‌ ಆಯಿಲ್‌. ಆದರೆ ನೆನಪಿಡಿ ಪ್ರತಿ ಹೇರ್ ಆಯಿಲ್​ ನಿಮಗೆ ಸಹಾಯ ಮಾಡುವುದಿಲ್ಲ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನಾವೆಲ್ಲರೂ ದಟ್ಟವಾದ ಹಾಗೂ ಫಳ ಫಳ ಹೊಳೆಯುವ ಆರೋಗ್ಯಕರ ಕೇಶ ನಮ್ಮದಾಗಿರಬೇಕೆಂದು ಬಯಸುತ್ತೇವೆ. ಈ ಆಸೆ ಯಾರಿಗೆ ಇರುರುವುದಿಲ್ಲ ಹೇಳಿ. ಹೊಳೆಯುವ ಉದ್ದವಾದ ಕೂದಲು ಅನೇಕ ಜನರು ಅಸೂಯೆ ಪಡುವಂತೆ ಮಾಡುತ್ತದೆ. ಆದರೆ ನಾವೆಲ್ಲರೂ ತಿಳಿದಿರುವಂತೆ ಹೊಳೆಯುವ ಕೂದಲನ್ನು ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಕೂದಲು ಬೆಳವಣೆಗಾಗಿ ಹಲವು ಉತ್ಪನ್ನಗಳಿವೆ. ವಿಶೇಷವಾಗಿ ಹೇರ್‌ ಆಯಿಲ್‌. ಅದರೆ ನೆನಪಿಡಿ ಪ್ರತಿ ಕೂದಲಿನ ಎಣ್ಣೆ ನಿಮಗೆ ಸಹಾಯ ಮಾಡುವುದಿಲ್ಲ.

ಕೂದಲು ಉದುರುವಿಕೆಗೆ ಕಾರಣವಾಗುವ 5 ಹೇರ್ ಆಯಿಲ್​ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಜೊತೆಗೆ ಅವುಗಳಿಂದಾಗುವ ಪರಿಣಾಮದ ಬಗ್ಗೆಯೂ ವಿವರಿಸಲಾಗಿದೆ.

ಮಿನರಲ್(ಖನಿಜ) ಎಣ್ಣೆ

ಈ ಮೊದಲು ವಿದೇಶದಲ್ಲಿ ಮಾತ್ರ ಲಭ್ಯವಿರುತ್ತಿದ್ದ ಎಣ್ಣೆಗಳು, ಈಗ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಸುಲಭವಾಗಿ ಲಭ್ಯವಿದೆ. ಇದು ಉತ್ತಮವೆನಿಸಿದರೂ, ಖನಿಜ ತೈಲವನ್ನು ಸಾಮಾನ್ಯವಾಗಿ ಪೆಟ್ರೋಲಿಯಂ, ಬಿಳಿ ಪೆಟ್ರೋಲಿಯಂ, ಪ್ಯಾರಾಫಿನ್, ಲಿಕ್ವಿಡ್ ಪ್ಯಾರಾಫಿನ್ ಮತ್ತು ಪ್ಯಾರಾಫಿನ್ ವ್ಯಾಕ್ಸ್‌ನಿಂದ ತಯಾರಿಸಲಾಗುವುದು. ಈ ಅಂಶ ನಿಮ್ಮ ಕೂದಲಿಗೆ ಕೆಟ್ಟದಾಗಿದೆ. ಏಕೆಂದರೆ ಇದು ಕೂದಲಿನ ಎಳೆಗಳು ಮತ್ತು ನೆತ್ತಿಗೆ ಹಾನಿಯುಂಟುಮಾಡುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇದು ನಿಮ್ಮ ಕೂದಲನ್ನು ಮಂದಗೊಳಿಸುತ್ತದೆ. ಆದ್ದರಿಂದ, ಈ ಹೇರ್ ಆಯಿಲ್ ಖರೀದಿಸಬೇಡಿ.

ಇದನ್ನೂ ಓದಿ: Bigg Boss 8 Kannada: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಬಿಟ್ಟು ಉಳಿದವರೆಲ್ಲ ಮತ್ತೆ ನಾಮಿನೇಟ್ ಆದ್ರು..!

ನಿಂಬೆ ಎಣ್ಣೆ

ನಿಂಬೆ ಎಣ್ಣೆ ಕೂದಲಿಗೆ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳುವವರು ಹಲವರಿದ್ದಾರೆ, ಏಕೆಂದರೆ ಅದರ ಹೊಳಪು ಮತ್ತು ಪ್ರಕಾಶಮಾನ ಗುಣಗಳು. ಆದರೆ ಈ ಎಣ್ಣೆಯಿಂದ ದೂರವಿರಿ. ಏಕೆಂದರೆ, ಅದರ ಆಮ್ಲ ಮಟ್ಟ, ಕೂದಲಿನ ಸೌಮ್ಯತೆಯನ್ನು ಕಡಿಮೆ ಮಾಡುತ್ತದೆ. ನೀವು ಈಗಾಗಲೇ ಕೂದಲು ಉದುರುವಿಕೆ ಸಮಸ್ಯೆ ಹೊಂದಿದ್ದಾರೆ, ಈ ಎಣ್ಣೆ ಖಂಡಿತವಾಗಿಯೂ ನಿಮಗೆ ಸೂಕ್ತವಲ್ಲ. ಇದು ನಿಮ್ಮ ಕೂದಲನ್ನು ಇನ್ನಷ್ಟು ತೆಳ್ಳಗೆ, ನಿರ್ಜೀವ ಹಾಗೂ ಶುಷ್ಕ ಮಾಡುತ್ತದೆ.

ಇದನ್ನೂ ಓದಿ: Alia Bhatt: ರಣಬೀರ್ ಕಪೂರ್​ರನ್ನು ಮಿಸ್​ ಮಾಡಿಕೊಳ್ಳುತ್ತಿರುವ ಆಲಿಯಾ ಭಟ್​ ಮಾಡಿದ್ದೇನು ಗೊತ್ತಾ..?

ಆಲಿವ್ ಎಣ್ಣೆ

ಕೂದಲಿನ ಗಡುಸುತನವನ್ನು ಕಡಿಮೆ ಮಾಡಲು ಆಲಿವ್ ಎಣ್ಣೆ ಉಪಯುಕ್ತವಾಗಿದ್ದರೂ, ಅದು ನಿಮ್ಮ ಕೂದಲನ್ನು ತೆಳ್ಳಗೆ ಮತ್ತು ಅವುಗಳನ್ನು ಜಿಡ್ಡಿನಂತೆ ಮಾಡುತ್ತದೆ. ಆಲಿವ್ ಎಣ್ಣೆಯು ಮೊಡವೆಗಳಿಗೆ ಕಾರಣವಾಗಬಹುದು. ನಿಮ್ಮ ತಲೆಯಲ್ಲಿ ತುರಿಕೆಗೂ ಹಾಗೂ ಹೊಟ್ಟಿಗೆ ಕೂಡ ಕಾರಣವಾಗುತ್ತದೆ. ಅಂತಿಮವಾಗಿ ಕೂದಲನ್ನು ಹಾನಿಗೊಳಿಸುತ್ತದೆ ಮತ್ತು ತೆಳ್ಳಗೆ ಮಾಡುತ್ತದೆ.

ಕರ್ಪೂರ ಎಣ್ಣೆ

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ವಾಸ್ತವವಾಗಿ ಈ ಎಣ್ಣೆ ಅದಕ್ಕೆ ವಿರುದ್ಧವಾದ ಪರಿಣಾಮ ಹೊಂದಿದೆ. ಇದು ನಿಮ್ಮ ನೆತ್ತಿಯ ಒಣವಿಕೆಗೆ ಕಾರಣವಾಗಬಹುದು ಮತ್ತು ಕೆಲವೊಮ್ಮೆ ಮೊಡವೆಗಳು, ಚರ್ಮದ ದದ್ದುಗಳು ಮತ್ತು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Mouni Roy: ಹೈ ಸ್ಲಿಟ್​ ಡ್ರೆಸ್​ ತೊಟ್ಟು ಸ್ಮೋಕಿ ಲುಕ್​ನಲ್ಲಿ ಕಾಣಿಸಿಕೊಂಡ ಮೌನಿ ರಾಯ್​

ಹರಳೆಣ್ಣೆ

ಹರಳೆಣ್ಣೆಯ ಸೌಂದರ್ಯ ಮತ್ತು ಕೇಶ ವಿನ್ಯಾಸದ ಪ್ರಪಂಚವು ಅದರ ಪ್ರಯೋಜನಗಳನ್ನು ಎತ್ತಿ ತೋರುತ್ತವೆ. ನಿಮ್ಮ ಕೂದಲಿಗೆ ಈ ಎಣ್ಣೆಯನ್ನು ಬಳಸುವುದರಲ್ಲಿ ಸಮಸ್ಯೆ ಎಂದರೆ ಅದು ಕೂದಲಿನ ನೆತ್ತಿಯ ಒಣಗುವಿಕೆಗೆ ಕಾರಣವಾಗುತ್ತದೆ. ಇದು ಕೂದಲನ್ನು ಇನ್ನಷ್ಟು ಗೋಜಲು ಮಾಡುತ್ತದೆ. ಇದು ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ನಿಮ್ಮ ಕೂದಲು ಉದುರಿ ಹೋಗುತ್ತದೆ.
Published by:Anitha E
First published: