Hypertension Problem: ನೀವೆಷ್ಟೇ ಔಷಧ ಸೇವಿಸಿದರೂ ಅಧಿಕ ರಕ್ತದೊತ್ತಡ ನಿವಾರಣೆ ಆಗದಿರುವುದಕ್ಕೆ ಈ ಅಂಶಗಳು ಕಾರಣವಾಗಿರಬಹುದು!

ವಿಶ್ವದ ಜನಸಂಖ್ಯೆಯ ಶೇಕಡಾ 30 ಕ್ಕಿಂತ ಹೆಚ್ಚು ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಪ್ರಭಾವಿತರಾಗಿದ್ದಾರೆಂದು ನಂಬಲಾಗಿದೆ. ರಕ್ತದೊತ್ತಡ ನಿಯಂತ್ರಿಸಲು ಹಲವು ವಿಧಾನ ಮತ್ತು ಔಷಧಿಗಳಿವೆ. ಇದು ತುಂಬಾ ಪರಿಣಾಮಕಾರಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಧಿಕ ರಕ್ತದೊತ್ತಡವು (High Blood Pressure) ಗಂಭೀರ ಆರೋಗ್ಯ ಸಮಸ್ಯೆ (Health Issue) ಆಗಿದೆ. ಪಾರ್ಶ್ವವಾಯು, ಹೃದಯಾಘಾತ (Heart Attack) ಮತ್ತು ಮೂತ್ರಪಿಂಡದ ಕಾಯಿಲೆಯಂತಹ (Disease) ಅನೇಕ ಆರೋಗ್ಯ ಸಮಸ್ಯೆಗಳು ಬೆನ್ನು ಹತ್ತಲು ಅಧಿಕ ರಕ್ತದೊತ್ತಡ ಪ್ರಮುಖ ಕಾರಣವಾಗಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಅನೇಕ ಜನರಿಗೆ ತಾವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತೇ ಆಗುವುದಿಲ್ಲ. ಏಕೆಂದರೆ ಅಧಿಕ ರಕ್ತದೊತ್ತಡ ಕಾಯಿಲೆಯ ರೋಗ ಲಕ್ಷಣಗಳು ಅತ್ಯಂತ ಸೌಮ್ಯವಾಗಿರುತ್ತವೆ. ಸಾಮಾನ್ಯವಾಗಿ ಜನರು ಹೃದಯಾಘಾತ ಅಥವಾ ಪಾರ್ಶ್ವವಾಯು ನಂತರ ಮಾತ್ರ ಅಧಿಕ ರಕ್ತದೊತ್ತಡದ ಬಗ್ಗೆ ಕಂಡು ಹಿಡಿಯುತ್ತಾರೆ. ಅಂದಹಾಗೆ ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ.

  ಅಧಿಕ ರಕ್ತದೊತ್ತಡ ಸಮಸ್ಯೆ

  ವಿಶ್ವ ಅಧಿಕ ರಕ್ತದೊತ್ತಡ ದಿನದಂದು ಮೂಕ ಕೊಲೆಗಾರ ಎಂದೇ ಕರೆಯಿಸಿಕೊಳ್ಳುವ ಅಧಿಕ ರಕ್ತದೊತ್ತಡ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ವಿಶ್ವ ಅಧಿಕ ರಕ್ತದೊತ್ತಡ ದಿನ-2022 ರ ಥೀಮ್ 'ನಿಮ್ಮ ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ. ಮತ್ತು ಅದನ್ನು ನಿಯಂತ್ರಿಸಿ. ಹೆಚ್ಚು ಕಾಲ ಬದುಕಿ'. ಎಂಬುದು ಆಗಿತ್ತು.

  ವಿಶ್ವದ ಜನಸಂಖ್ಯೆಯ ಶೇಕಡಾ 30 ಕ್ಕಿಂತ ಹೆಚ್ಚು ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಪ್ರಭಾವಿತರಾಗಿದ್ದಾರೆಂದು ನಂಬಲಾಗಿದೆ. ರಕ್ತದೊತ್ತಡ ನಿಯಂತ್ರಿಸಲು ಹಲವು ವಿಧಾನ ಮತ್ತು ಔಷಧಿಗಳಿವೆ. ಇದು ತುಂಬಾ ಪರಿಣಾಮಕಾರಿಯಾಗಿದೆ. ಕೆಲವೊಮ್ಮೆ ಔಷಧಗಳು ಮತ್ತು ಇತರ ಕ್ರಮಗಳ ಮೂಲಕವೂ ರಕ್ತದೊತ್ತಡ ನಿಯಂತ್ರಣ ಸಾಧ್ಯವಾಗುವುದಿಲ್ಲ.

  ಇದನ್ನೂ ಓದಿ: ಮಹಿಳೆಯರಲ್ಲಿ ಹೆಚ್ಚುತ್ತಿದೆ ಫಿಟ್ ನೆಸ್ ಟ್ರೆಂಡ್, ಯಾವ ವ್ಯಾಯಾಮವನ್ನು ಎಷ್ಟು ಹೊತ್ತು ಮಾಡಬೇಕು?

  ದೆಹಲಿಯ ಆಕಾಶ್ ಹೆಲ್ತ್‌ಕೇರ್‌ನಲ್ಲಿ ಇಂಟರ್ನಲ್ ಮೆಡಿಸಿನ್ ಸಲಹೆಗಾರರಾದ ಡಾ ಪ್ರಭಾತ್ ರಂಜನ್ ಸಿನ್ಹಾ ಅವರ ಪ್ರಕಾರ, ರಕ್ತದೊತ್ತಡ ಔಷಧಿಗಳು ದೇಹದಲ್ಲಿ ಕೆಲಸ ಮಾಡಲು ಸಾಧ್ಯವಾದೇ ಇರುವುದಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಅನೇಕ ಕಾರಣಗಳು ಇರಬಹುದು.

  ಒಂದೇ ಸಮಯದಲ್ಲಿ ಹಲವು ಔಷಧಿ ಸೇವನೆ

  ವೈದ್ಯರ ಪ್ರಕಾರ ನೀವು ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳದೇ ಇರುವುದು. ಅಥವಾ ನೀವು ಅನೇಕ ಇತರ ಕಾಯಿಲೆ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದು. ಇದು ರಕ್ತದೊತ್ತಡದ ಔಷಧದ ಪರಿಣಾಮವನ್ನು ತಡೆಯುತ್ತದೆ.

  ಒಂದಕ್ಕಿಂತ ಹೆಚ್ಚು ಕಾಯಿಲೆಯ ಔಷಧಿಯನ್ನು ಸೇವಿಸುವ ಜನರು ಕೆಲವೊಮ್ಮೆ ತಮ್ಮ ಔಷಧಿ ತೆಗೆದುಕೊಳ್ಳಲು ಅಥವಾ ತಪ್ಪಾದ ಔಷಧಿ ತೆಗೆದುಕೊಳ್ಳುವುದನ್ನು ಮರೆತು ಬಿಡುತ್ತಾರೆ. ಈ ಕಾರಣದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ತುಂಬಾ ಕಡಿಮೆಯಾಗುತ್ತದೆ.

  ಯಂತ್ರ ವೈಫಲ್ಯದಿಂದ

  ನಿಮ್ಮ ವೈದ್ಯರು ರಕ್ತದೊತ್ತಡ ತಪ್ಪಾಗಿ ಅಳೆಯುತ್ತಿರಬಹುದು. ಇದು ಯಂತ್ರದ ವೈಫಲ್ಯದಿಂದಲೂ ಸಂಭವಿಸಿರಬಹುದು. ರಕ್ತದೊತ್ತಡ ಅಳೆಯುವ ವಿಧಾನ ತಪ್ಪಾಗಿರಬಹುದು.

  ಜಂಕ್ ಫುಡ್ ಅತಿಯಾದ ಬಳಕೆ

  ಹೆಚ್ಚು ಜಂಕ್ ಫುಡ್ ಅಥವಾ ಸಂಸ್ಕರಿಸಿದ ಆಹಾರ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ರಕ್ತದೊತ್ತಡ ಹೆಚ್ಚಿರಬಹುದು ಅಥವಾ ಕಡಿಮೆಯಾಗಬಹುದು.

  ಅಧಿಕ ಉಪ್ಪು ಸೇವನೆ

  ಉಪ್ಪನ್ನು ಆಹಾರದಲ್ಲಿ ಅನೇಕ ಸ್ಥಳಗಳಲ್ಲಿ ಬಳಸಬಹುದು. ತಯಾರಿಸಿದ ಅಥವಾ ಪ್ಯಾಕೇಜಿಂಗ್‌ನಲ್ಲಿ ಬರುವ ಆಹಾರ, ಕೆಲವು ತರಕಾರಿಗಳು, ರೆಸ್ಟಾರೆಂಟ್ ಆಹಾರಗಳಲ್ಲಿ ಹೆಚ್ಚಿನ ಉಪ್ಪನ್ನು ಹೊಂದಿರಬಹುದು. ಇದು ಅಧಿಕ ರಕ್ತದೊತ್ತಡ ಇರುವವರು ಉಪ್ಪಿನ ಸೇವನೆ ಕಡಿಮೆ ಮಾಡಬೇಕು.

  ಇದನ್ನೂ ಓದಿ: ಮಲಗಿದಾಗ ಅತಿಯಾಗಿ ಗೊರಕೆ ಹೊಡೆಯುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ!

  ವ್ಯಾಯಾಮ ಮಾಡದೇ ಇರುವುದು

  ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಬಹಳ ಮುಖ್ಯ. ತೂಕ ಕಳೆದುಕೊಳ್ಳಲು, ದೈಹಿಕವಾಗಿ ವ್ಯಾಯಾಮ ಮಾಡಿ, ಆಲ್ಕೊಹಾಲ್ ಸೇವನೆ ಕಡಿಮೆ ಮಾಡಿ. ಇದು ನಿಮ್ಮ ರಕ್ತದೊತ್ತಡ ಕಡಿಮೆ ಮಾಡುತ್ತದೆ. ನೀವು ಧೂಮಪಾನ ತ್ಯಜಿಸುವುದು ಒಳ್ಳೆಯದು. ಇತರ ಕಾಯಿಲೆಗಳಿಂದಾಗಿ ನಿಮ್ಮ ರಕ್ತದೊತ್ತಡವೂ ಹೆಚ್ಚಾಗಬಹುದು.
  Published by:renukadariyannavar
  First published: