Heart Disease: ಯುವಕರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗಲು ಈ ಅಂಶಗಳೇ ಕಾರಣ

ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಅತಿ ಹೆಚ್ಚು ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ. ಅಮೆರಿಕದಲ್ಲಿ ಹೃದಯಾಘಾತದ ಒಟ್ಟು ಸಂಖ್ಯೆ ಹಿಂದೆಂದಿಗಿಂತಲೂ ಕಡಿಮೆಯಾಗಿದ್ದರೂ, ಯುವ ವಯಸ್ಕರಲ್ಲಿ ಹೃದಯಾಘಾತ ಹೆಚ್ಚುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಅತಿ ಹೆಚ್ಚು ಜನ ಹೃದಯಾಘಾತದಿಂದ (Heart Attack) ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ವಯಸ್ಕರು (Youths) ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ. ಅಮೆರಿಕದಲ್ಲಿ (America) ಹೃದಯಾಘಾತದ ಒಟ್ಟು ಸಂಖ್ಯೆ ಹಿಂದೆಂದಿಗಿಂತಲೂ ಕಡಿಮೆಯಾಗಿದ್ದರೂ, ಯುವ ವಯಸ್ಕರಲ್ಲಿ ಹೃದಯಾಘಾತ ಹೆಚ್ಚುತ್ತಿದೆ. 20 ಮತ್ತು 30 ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ತೀವ್ರ ಕಳವಳಕಾರಿ ಸಂಗತಿ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಈ ಹಿನ್ನೆಲೆ ಯುವ ವಯಸ್ಕರಲ್ಲಿ ಈ ರೀತಿ ಹೃದಯಾಘಾತ ಹೆಚ್ಚಳಕ್ಕೆ ಕಾರಣವೇನು? ಹೃದಯಾಘಾತ ತಡೆಯಲು ಮನುಷ್ಯ (Man) ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು? ಹೃದಯದ ಆರೋಗ್ಯ (Health) ಹೇಗಿರಬೇಕು? ಎಂಬ ಅಂಶಗಳ ಬಗ್ಗೆ ಗಮನಹರಿಸಬೇಕಾದ ಅಗತ್ಯ ಇದೆ. ಈ ಬಗ್ಗೆ ಕಾರ್ಡಿಯೋ ಮೆಟಾಬಾಲಿಕ್ ಇನ್‌ಸ್ಟಿಟ್ಯೂಟ್‌ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರ ಮಾಹಿತಿ ಈ ಕೆಳಗಿನಂತೆ ಇದೆ.

20-30 ವರ್ಷ ವಯಸ್ಸಿನವರಲ್ಲಿ ಹೃದಯಾಘಾತ ಹೆಚ್ಚಳ!
ಸಾಮಾನ್ಯವಾಗಿ ಈ ಹಿಂದೆ ಹೃದಯಾಘಾತ ಎಂಬುದು ವಯಸ್ಸಾದವರು ಎದುರಿಸುವ ಸಮಸ್ಯೆಯಾಗಿತ್ತು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತವಾಗುವುದು ಅಪರೂಪ ಆಗಿತ್ತು. ಆದರೆ, ಹೃದಯಾಘಾತ ಸಂಭವಿಸುವ 5 ರೋಗಿಗಳಲ್ಲಿ ಒಬ್ಬರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇರುತ್ತಾರೆ. ನೀವು ಯುವಕರು ಎಂಬ ಕಾರಣಕ್ಕೆ ಮಾತ್ರ ಹೃದಯಾಘಾತ ನಿಮ್ಮತ್ರ ಸುಳಿಯುವುದಿಲ್ಲ ಎಂದುಕೊಳ್ಳಬೇಡಿ.

ಈಗ 20 ರಿಂದ 30ರ ಆಸುಪಾಸಿನ ವಯಸ್ಸಿನವರಲ್ಲಿ ಹೃದಯಾಘಾತವು ಸಾಮಾನ್ಯವಾಗಿದೆ. ಒಂದು ಸಮೀಕ್ಷೆಯ ಪ್ರಕಾರ 2000 ರಿಂದ 2016ರ ನಡುವೆ 20 ರಿಂದ 30 ವರ್ಷ ವಯಸ್ಸಿನವರಲ್ಲಿನ ಹೃದಯಾಘಾತದ ಪ್ರಮಾಣ ಪ್ರತಿ ವರ್ಷ ಶೇ.2ರಷ್ಟು ಹೆಚ್ಚಾಗುತ್ತಿರುವುದು ಆತಂಕಕಾರಿ ಅಂಶ.

ಮಧುಮೇಹ ಪ್ರಮುಖ ಕಾರಣ
ಯುವ ವಯಸ್ಕರಲ್ಲಿ ಹೃದಯಾಘಾತ ಹೆಚ್ಚಾಗಲು ಮಧುಮೇಹ ಪ್ರಮುಖ ಕಾರಣವಾಗಿರುತ್ತದೆ. ನೀವು ಸಕ್ಕರೆ ಖಾಯಿಲೆಯನ್ನು ಹೊಂದಿದ್ದರೆ ನೀವು ಹೃದ್ರೋಗದಿಂದ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಪ್ರಮಾಣ ಮಧುಮೇಹ ಹೊಂದಿರದ ವಯಸ್ಕರಿಗೆ ಹೋಲಿಸಿದರೆ 2 ರಿಂದ 4 ಪಟ್ಟು ಹೆಚ್ಚಿರುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಆರೋಗ್ಯಕರ ವ್ಯಾಪ್ತಿಯಲ್ಲಿ ಇರಿಸಿಕೊಳ್ಳಲು ಆಗದಿದ್ದಾಗ ಸಮಸ್ಯೆ ಸೃಷ್ಟಿಯಾಗುತ್ತದೆ. ರಕ್ತದಲ್ಲಿರುವ ಅಧಿಕ ಸಕ್ಕರೆಯ ಪ್ರಮಾಣ ನಿಮ್ಮ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದು ನಿಮ್ಮ ಹೃದಯದ ಅಪಧಮನಿಗಳಲ್ಲಿ ಕೊಬ್ಬು ಹೆಚ್ಚಿಸುವ ಸಾಧ್ಯತೆಯೇ ಹೆಚ್ಚು.

ಇದನ್ನೂ ಓದಿ:  Health Tips: ಅತಿಯಾಗಿ ನಿದ್ರಿಸುವ ಅಭ್ಯಾಸ ನಿಮಗಿದೆಯಾ? ಆದರೆ ತಪ್ಪದೇ ಈ ಲೇಖನ ಓದಿ ನೋಡಿ

ಸಕ್ಕರೆ ಖಾಯಿಲೆಯ ರೋಗಿಗಳು ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸೇರಿ ಹೃದಯಾಘಾತದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುವ ಇತರ ದೀರ್ಘಕಾಲದ ಆರೋಗ್ಯ ಕಾಯಿಲೆಗಳನ್ನು ಹೊಂದಿರುತ್ತಾರೆ. ಇದು ಕೂಡ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಯುವಕರಲ್ಲಿನ ಅಧಿಕ ರಕ್ತದೊತ್ತಡ
ಅಧಿಕ ರಕ್ತದ ಒತ್ತಡವು ಹೃದಯ ರಕ್ತನಾಳದ ಕಾಯಿಲೆಗೆ ದೊಡ್ಡ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ದುರದೃಷ್ಟವಶಾತ್ ವಯಸ್ಸಾದವರಿಗಿಂತ ಯುವಕರಲ್ಲಿ ಅಧಿಕ ರಕ್ತದ ಒತ್ತಡ ಹೆಚ್ಚಾಗುತ್ತಿದೆ. ಅಧಿಕ ರಕ್ತದೊತ್ತಡವು ನಿಮ್ಮ ಹೃದಯ ಸ್ನಾಯುಗಳನ್ನು ದಪ್ಪವಾಗಿಸುತ್ತದೆ, ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.

ಅಧಿಕ ತೂಕ ಮತ್ತು ಬೊಜ್ಜು!
ನೀವು ಹೊಂದಿರುವ ಅಧಿಕ ತೂಕವು ಹಲವಾರು ಕಾರಣಗಳಿಂದ ನಿಮ್ಮ ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೆಚ್ಚು ತೂಕ ಹೊಂದಿದ್ದರೆ ಹೃದಯದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ನೀವು ಆರೋಗ್ಯವಂತರಾಗಿದ್ದರೂ ಸ್ಥೂಲಕಾಯತೆ ಕೂಡ ನಿಮಗೆ ಹೃದಯಾಘಾತವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವ ರೋಗಿಗಳು ಸಾಮಾನ್ಯವಾಗಿ ತಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳನ್ನು ಹೊಂದಿರುತ್ತಾರೆ.

ಧೂಮಪಾನ ಹೃದಯದ ಆರೋಗ್ಯಕ್ಕೆ ಹಾನಿಕರ!
ಯುವಕರಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಮತ್ತೊಂದು ಪ್ರಮುಖ ಅಂಶವೆಂದರೆ ಧೂಮಪಾನ. ನಿಮ್ಮ ಹೃದಯಾಘಾತದ ಅಪಾಯವು ನೀವು ಸೇದುವ ಸಿಗರೇಟುಗಳ ಸಂಖ್ಯೆಯನ್ನು ಅವಲಂಭಿಸಿದ್ದು, ಅದು ನೇರ ಅನುಪಾತದಲ್ಲಿ ಹೆಚ್ಚಾಗುತ್ತದೆ. ಧೂಮಪಾನ ಮಾಡದವರಿಗೆ ಹೋಲಿಸಿದರೆ ದಿನಕ್ಕೆ ಒಂದು ಪ್ಯಾಕ್ ಸಿಗರೇಟ್‌ ಸೇದುವುದು ಹೃದಯಾಘಾತದ ಅಪಾಯವನ್ನು ದ್ವಿಗುಣಗೊಳಿಸುತ್ತದೆ.

ಇದನ್ನೂ ಓದಿ:  Migraine Attack: ಮಹಿಳೆಯರನ್ನು ಹೆಚ್ಚು ಬಾಧಿಸುವ ಮೈಗ್ರೇನ್ ಗೆ ಕಾರಣಗಳು ಮತ್ತು ಪರಿಹಾರ ಹೇಗೆ?

ಹುಕ್ಕಾ ಸೇದುವುದಕ್ಕಿಂತ ಸಿಗರೇಟ್‌ ಸೇದುವುದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಹುಕ್ಕಾ ಕೂಡ ಆರೋಗ್ಯಕ್ಕೆ ಅಪಾಯಕಾರಿಯೇ. ಇ-ಸಿಗರೇಟ್‌ಗಳು ನಿಕೋಟಿನ್ ಮತ್ತು ಇತರ ವಿಷಕಾರಿ ಸಂಯುಕ್ತಗಳನ್ನು ಒಳಗೊಂಡಿದ್ದು, ನಿಮ್ಮ ಹೃದಯದ ಬಡಿತವನ್ನು ವೇಗಗೊಳಿಸುತ್ತದೆ ಮತ್ತು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನ ಮಾಡುವವರಲ್ಲಿ ಹೃದಯಾಘಾತವಾಗುವ ಸಾಧ್ಯತೆ ಶೇ.34ರಷ್ಟು ಹೆಚ್ಚು ಎಂದು ಇತ್ತೀಚಿನ ಅಧ್ಯಯನ ಹೇಳಿದೆ.

ಮಾದಕ ವಸ್ತು ಕೂಡ ಹೃದಯಕ್ಕೆ ಹಾನಿಕರ!
ನಿಮ್ಮ ಹೃದಯದ ಮೇಲೆ ಗಾಂಜಾದ ಪರಿಣಾಮವೇನು ಎಂಬುದನ್ನು ತಜ್ಞರು ಅಧ್ಯಯನ ನಡೆಸಿದ್ದು, ಗಾಂಜಾದ ನಶೆಯಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಕೊಕೇನ್‌ ಕೂಡ ನಿಮ್ಮ ಹೃದಯದ ಬಡಿತವನ್ನು ಹೆಚ್ಚಿ, ನಿಮ್ಮ ರಕ್ತನಾಳಗಳನ್ನು ಬಿಗಿಗೊಳಿಸತ್ತದೆ. ಅದಲ್ಲದೇ ಮಾದಕ ವಸ್ತುಗಳ ಸೇವನೆಯಿಂದ ರಕ್ತದೊತ್ತಡ ಕೂಡ ಹೆಚ್ಚುತ್ತದೆ. ಇವೆಲ್ಲವೂ ಹೃದಯಾಘಾತ ಹೆಚ್ಚಿಸುತ್ತವೆ.

ಜೀವನಶೈಲಿಯಲ್ಲಿ ಬದಲಾವಣೆ ಬೇಕೇ ಬೇಕು!
ಅನೇಕ ಹೃದಯಾಘಾತಗಳನ್ನು ನಾವು ತಡೆಗಟ್ಟಬಹುದಾಗಿದೆ. ಆದರೆ, ಅದಕ್ಕೆ ನಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ಜೊತೆಗೆ ಅಗತ್ಯವಿದ್ದಲ್ಲಿ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಂಡು, ಅಪಾಯಕಾರಿ ಅಂಶಗಳಿಂದ ದೂರವಿರಬಹುದಾಗಿದೆ. ಇನ್ನು, ನಿಯಮಿತವಾದ ಆಹಾರ ಸೇವನೆ, ದೈನಂದಿನ ವ್ಯಾಯಾಮ, ಯೋಗ, ಧ್ಯಾನಗಳು ಹೃದಯಾಘಾತದ ಸಂಭವನಿಯತೆಯನ್ನು ಕಡಿಮೆ ಮಾಡುತ್ತದೆ.
Published by:Ashwini Prabhu
First published: