Health Tips: 50ರ ಪ್ರಾಯದಲ್ಲಿ ಕಾಡುತ್ತೆ ಹಲವು ಸಮಸ್ಯೆಗಳು, ಸದೃಢ ಆರೋಗ್ಯಕ್ಕೆ ಈ ಟಿಪ್ಸ್​ ಫಾಲೋ ಮಾಡಿ

ವಯಸ್ಸಾಗುತ್ತಿದ್ದಂತೆ ಹೊಟ್ಟೆ ಬೆಳೆಯುವುದು ಚರ್ಮದ ಮೇಲೆ ಸುಕ್ಕು ದೇಹದ ದೌರ್ಬಲ್ಯ, 50 ರ ನಂತರ ಕಾಡುತ್ತದೆ. ಈ ಕಾಟವನ್ನು ತಪ್ಪಿಸಲು ಈ 4 ಆರೋಗ್ಯಕರ ಸಲಹೆಗಳನ್ನು ಪಾಲಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮನುಷ್ಯನ ದೇಹ (Body) 50 ರ ನಂತರ ತನ್ನ ಆಕಾರವನ್ನು (Shape) ಕಳೆದುಕೊಳ್ಳುತ್ತ ಹೋಗುತ್ತದೆ. ವೃದ್ಧಾಪ್ಯ (Old Age) ಬರುತ್ತಲೇ ವ್ಯಕ್ತಿಯ ದೇಹದ ಕಾರ್ಯ ಚಟುವಟಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತ ಹೋಗುತ್ತದೆ. ಬೆನ್ನು ಬಾಗುವುದು, ಮುಖ (Face), ಕೈ ಚರ್ಮ (Skin) ನೆರಿಗೆಗಟ್ಟುವುದು (Wrinkles), ಹಲ್ಲುಗಳು ಮುರಿಯುವುದು, ಬಿಳಿ ಕೂದಲು (White Hair) ಹೀಗೆ ಸಾಕಷ್ಟು ಸಮಸ್ಯೆಗಳು ಆವರಿಸಿಕೊಳ್ಳುತ್ತ ಹೋಗುತ್ತವೆ. ಹೀಗೆ ದೇಹದ ಆಕಾರವು ಶೀಘ್ರವಾಗಿ ಕೆಡುತ್ತ ಹೋಗುತ್ತದೆ. ಹಾಗಾದರೆ ದೇಹ ಮತ್ತು ಮನಸ್ಸನ್ನು 50 ರ ಪ್ರಾಯದಲ್ಲೂ ಸದೃಢವಾಗಿ ಇರಿಸುವುದು ಹೇಗೆ..? ನಿಮ್ಮನ್ನು ಸದಾ ಯೌವ್ವನಸಹಿತರಾಗಿ ಇರಿಸಲು ಈ ನಾಲ್ಕು ಅಂಶಗಳನ್ನು ಪಾಲಿಸಿ. ನೀವು 50ರ ಪ್ರಾಯದಲ್ಲೂ ಫಿಟ್ ಆ್ಯಂಡ್ ಫೈನ್ ಆಗಿರುತ್ತೀರಿ.

  ವಯಸ್ಸಾಗುತ್ತಿದ್ದಂತೆ ಹೊಟ್ಟೆ ಬೆಳೆಯುವುದು, ಚರ್ಮದ ಮೇಲೆ ಸುಕ್ಕು ಉಂಟಾಗುವುದು, ದೇಹದ ದೌರ್ಬಲ್ಯ, 50 ರ ನಂತರ ಕಾಡುತ್ತದೆ. ಈ ಕಾಟವನ್ನು ತಪ್ಪಿಸಲು ಈ 4 ಆರೋಗ್ಯಕರ ಸಲಹೆಗಳನ್ನು ಪಾಲಿಸಿ ನೋಡಿ..

  ಬೆಳಗಿನ ಉಪಾಹಾರ:

  ಖ್ಯಾತ ಆಹಾರ ತಜ್ಞ ಪಾನಿ ಲಾರಿಯರ್ ಪ್ರಕಾರ, ಬೆಳಗಿನ ಉಪಾಹಾರ ಸೇವನೆ ಮಾಡದೇ ಇರುವುದು ವ್ಯಕ್ತಿಯ ತೂಕ ಇಳಿಕೆಯ ಗುರಿಯನ್ನು ಹಾಳು ಮಾಡುತ್ತದೆ ಎಂದು ಹೇಳುತ್ತಾರೆ. ವಯಸ್ಸಾದಂತೆ, ದೇಹದಲ್ಲಿ ಪ್ರೋಟೀನ್ ಕೊರತೆಯಾಗುತ್ತದೆ. ಇದು ನಮ್ಮ ಚಯಾಪಚಯ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿದಿನ ಬೆಳಗಿನ ಉಪಾಹಾರ ಮಾಡಿ. ಇದರಿಂದ ದೇಹವು ಸಾಕಷ್ಟು ಪ್ರೋಟೀನ್ ಪಡೆಯುತ್ತದೆ. ಆದ್ದರಿಂದ ಬೆಳಗಿನ ಉಪಾಹಾರವನ್ನು ಮರೆಯಬೇಡಿ ಮತ್ತು ಬೆಳಗಿನ ಆಹಾರದಲ್ಲಿ ಫೈಬರ್, ಪ್ರೋಟೀನ್ ಮತ್ತು ಕಡಿಮೆ ಸಕ್ಕರೆ ಸೇರಿಸಿಕೊಳ್ಳಿ.

  ಇದನ್ನೂ ಓದಿ: ಹೃದಯದ ಆರೋಗ್ಯಕ್ಕಾಗಿ ದಿನನಿತ್ಯದ ಜೀವನದಲ್ಲಿ ಇವು ಬದಲಾಗಲೇಬೇಕು..! 

  ಸಂಸ್ಕರಿಸಿದ ಆಹಾರ:

  ವೃದ್ಧರು ಸಂಸ್ಕರಿಸಿದ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಇದು ಹೆಚ್ಚಿನ ಸಕ್ಕರೆ, ಅನಾರೋಗ್ಯಕರ ಕೊಬ್ಬು ಮತ್ತು ಅತಿಯಾದ ಉಪ್ಪನ್ನು ಹೊಂದಿರುತ್ತದೆ. ಅಂತಹ ಸಂಸ್ಕರಿಸಿದ ಆಹಾರ ಸೇವನೆ ಮಾಡದೇ ಇರುವುದು ನಿಮ್ಮ ದೇಹದ ಹೆಚ್ಚಿನ ಕ್ಯಾಲೊರಿಯನ್ನು ತ್ವರಿತವಾಗಿ ಕಡಿಮೆ ಮಾಡಲು ಸಾಧ್ಯ. 50 ರ ನಂತರವೂ ನೀವು ಸದೃಢವಾಗಿರಲು ನಿಮ್ಮ ಆಹಾರ ಪದ್ಧತಿ ಮುಖ್ಯ ಕಾರಣವಾಗುತ್ತದೆ. ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಂಸ್ಕರಿಸಿದ ಆಹಾರವು ತೂಕ ಹೆಚ್ಚಾಗಲು ಮಾತ್ರವಲ್ಲ, ಅಧಿಕ ರಕ್ತದೊತ್ತಡ, ಪರಿಧಮನಿಯ ಹೃದಯ ಕಾಯಿಲೆ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ಉತ್ತೇಜಿಸುತ್ತದೆ.

   ಹಣ್ಣುಗಳು ಮತ್ತು ತರಕಾರಿಗಳು:

  ನಿಮ್ಮ ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇರಿಸಿಕೊಳ್ಳಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳು 50 ರ ನಂತರ ತೂಕವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ. ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಆಹಾರಗಳು ನಮ್ಮ ಹಸಿವನ್ನು ದೀರ್ಘಕಾಲದವರೆಗೆ ನಿಯಂತ್ರಣದಲ್ಲಿಡುತ್ತವೆ. ಕೆಲವು ತಜ್ಞರ ಪ್ರಕಾರ, ಹಣ್ಣುಗಳು ಮತ್ತು ತರಕಾರಿಗಳ ರಸವನ್ನು ಕುಡಿಯುವ ಬದಲು, ಅವುಗಳನ್ನು ಸಂಪೂರ್ಣವಾಗಿ ತಿನ್ನುವುದು ದೇಹಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

  ಇದನ್ನೂ ಓದಿ: ಹಾರರ್​​​ ಸಿನಿಮಾಗಳನ್ನು ನೋಡಿದ್ರೆ ಬೇಗನೆ ಸಣ್ಣಗೆ ಆಗತ್ತಾರಂತೆ.. ! 

  ಆರೋಗ್ಯಕರ ತಿಂಡಿ:

  ಖ್ಯಾತ ಆಹಾರ ತಜ್ಞ ಬ್ಲಾಂಕಾ ಗಾರ್ಸಿಯಾ ಪ್ರಕಾರ, ಆರೋಗ್ಯಕರ ತಿಂಡಿಗಳು ಮತ್ತು ಸಸ್ಯ ಆಧಾರಿತ ಪ್ರೋಟೀನ್‌ಗಳನ್ನು ತಿನ್ನುವುದು ಆರೋಗ್ಯಕರ ಎಂದು ಸಲಹೆ ನೀಡುತ್ತಾರೆ. ಬಾದಾಮಿ ಬೀಜಗಳು ಮತ್ತು ಬೀನ್ಸ್‌ನಂತಹ ಸಸ್ಯ ಆಧಾರಿತ ತಿಂಡಿಗಳನ್ನು ತಿನ್ನುವುದು ಪ್ರಾಣಿ ಪ್ರೋಟೀನ್‌ನ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದು ದೇಹದ ಕೊಲೆಸ್ಟ್ರಾಲ್ ಮತ್ತು ಉರಿಯೂತದ ಪ್ರತಿಕ್ರಿಯೆಯನ್ನು ತಡೆಗಟ್ಟುತ್ತದೆ.
  Published by:renukadariyannavar
  First published: