• Home
 • »
 • News
 • »
 • lifestyle
 • »
 • Eyes Health: ನಿಮ್ಮ ಕಣ್ಣುಗಳಲ್ಲೇ ಅಡಗಿದೆ ನಿಮ್ಮ ಆರೋಗ್ಯ, ಈ ಲಕ್ಷಣಗಳು ಕೆಲ ಕಾಯಿಲೆಯ ಸಂಕೇತ!

Eyes Health: ನಿಮ್ಮ ಕಣ್ಣುಗಳಲ್ಲೇ ಅಡಗಿದೆ ನಿಮ್ಮ ಆರೋಗ್ಯ, ಈ ಲಕ್ಷಣಗಳು ಕೆಲ ಕಾಯಿಲೆಯ ಸಂಕೇತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನರಲ್ಲಿ ಅನೇಕ ಕಾರಣಗಳಿಂದ ದೃಷ್ಟಿ ಮಂದವಾಗಬಹುದು. ದೃಷ್ಟಿಯಲ್ಲಿ ತೊಂದರೆ, ಕಣ್ಣು ಉರಿಯುವುದು, ನೋವು ಮುಂತಾದ ಲಕ್ಷಣಗಳು ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಕಾಯಿಲೆಯ ಸಂಕೇತವಾಗಿರಬಹುದು.

 • Share this:

  ಮನುಷ್ಯನ ಕಣ್ಣುಗಳು (Eyes) ಎಂದಿಗೂ ಸುಳ್ಳು ಹೇಳುವುದಿಲ್ಲ ಎಂಬ ಮಾತಿದೆ. ಈ ಮಾತಿಗೂ ನಮ್ಮ ಆರೋಗ್ಯಕ್ಕೂ (Health) ಸಂಪೂರ್ಣವಾದ ಸಂಬಂಧವಿದೆ. ದೇಹಕ್ಕೆ (Body) ಬಂದಿರುವ ಅನಾರೋಗ್ಯ (Unhealthy) ಅಥವಾ ಕಾಯಿಲೆಯನ್ನು (Disease) ಮತ್ತು ಕಾರಣವನ್ನು ಕಂಡು ಹಿಡಿಯುವಾಗ ವೈದ್ಯರು ಮೊದಲು ಕಣ್ಣುಗಳನ್ನು ಪರೀಕ್ಷಿಸುತ್ತಾರೆ. ನಿಮ್ಮ ಕಣ್ಣುಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು (Changes) ಕಂಡು ಬಂದರೆ ಕೂಡಲೇ ವೈದ್ಯರನ್ನು (Doctor) ಸಂಪರ್ಕಿಸಿ ಎಂದು ತಜ್ಞರು ಹೇಳುತ್ತಾರೆ. ದೃಷ್ಟಿಯಲ್ಲಿ ತೊಂದರೆ, ಕಣ್ಣು ಉರಿಯುವುದು, ನೋವು ಮುಂತಾದ ಲಕ್ಷಣಗಳು ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಕಾಯಿಲೆಯ ಸಂಕೇತವಾಗಿರಬಹುದು. ಹಾಗಾಗಿ ನಿಮ್ಮ ಕಣ್ಣುಗಳು ಏನನ್ನು ಯಾವ ಕಾಯಿಲೆಯನ್ನು ಸೂಚಿಸುತ್ತವೆ ಎಂಬುದನ್ನು ಈ ಕೆಳಗೆ ನೋಡೋಣ.


  ಕಣ್ಣಿನಲ್ಲಿ ಅತಿಯಾದ ನೀರು ಬರುವುದು:


  ಕಣ್ಣಿನ ಮುಂದೆ ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದರೆ ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಕಣ್ಣುಗಳ ಮುಂದೆ ಗೋಚರಿಸುವ ಕಲೆಗಳು ಡಯಾಬಿಟಿಕ್ ಟಿನೋಪತಿಯ ಲಕ್ಷಣವಾಗಿರಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟದಿಂದ ಕಣ್ಣುಗಳ ಹಿಂಭಾಗದಲ್ಲಿರುವ ರಕ್ತನಾಳಗಳಿಗೆ ಹಾನಿಯಾಗಲು ಪ್ರಾರಂಭಿಸಿದಾಗ ಇದು ಸಂಭವಿಸುತ್ತದೆ. ಇದು ರಕ್ತನಾಳಗಳನ್ನು ದುರ್ಬಲಗೊಳಿಸುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ದೃಷ್ಟಿ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.


  ಹಾಗಾಗಿ ಒಬ್ಬ ವ್ಯಕ್ತಿಗೆ ಮಧುಮೇಹ ಇರುವುದು ಪತ್ತೆಯಾದ ತಕ್ಷಣ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇದರಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.


  ಕಣ್ಣು ಮಂಜಾಗುವುದು:


  ಜನರಲ್ಲಿ ಅನೇಕ ಕಾರಣಗಳಿಂದ ದೃಷ್ಟಿ ಮಂದವಾಗಬಹುದು. ನೀವು ಬೆಳಕಿನಲ್ಲಿ ಅಥವಾ ಕತ್ತಲೆಯಲ್ಲಿ ಅಸ್ಪಷ್ಟವಾಗಿ ವಸ್ತುಗಳು ಕಾಣುತ್ತಿದ್ದರೆ ಇದರ ಬಗ್ಗೆ ತುಂಬಾ ಗಮನಕೊಡಿ. ದೃಷ್ಟಿ ಮಂದ ಆಗುವುದನ್ನು ನಿರ್ಲಕ್ಷಿಸಬಾರದು. ಮೈಗ್ರೇನ್, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿದ್ದರೂ ಸಹ, ವ್ಯಕ್ತಿಯ ದೃಷ್ಟಿ ಮಂದವಾಗಲು ಪ್ರಾರಂಭಿಸುತ್ತದೆ.


  ಇದನ್ನೂ ಓದಿ: ನೋವು ನಿವಾರಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದೀರಾ? ಅಡ್ಡ ಪರಿಣಾಮಗಳ ಬಗ್ಗೆ ಇರಲಿ ಎಚ್ಚರ!


  ಕಣ್ಣುಗಳಲ್ಲಿ ಊತ ಮತ್ತು ಕಪ್ಪು ವರ್ತುಲಗಳು:


  ಹಲವು ಕಾರಣಗಳಿಂದ ಕಣ್ಣುಗಳಲ್ಲಿ ಊತ ಮತ್ತು ಕಪ್ಪು ವೃತ್ತಗಳ ಸಮಸ್ಯೆಯನ್ನು ಎದುರಿಸಬಹುದು. ಕೆಲವೊಮ್ಮೆ ಸೌಂದರ್ಯವರ್ಧಕಗಳ ಬಳಕೆ ಅಥವಾ ವಯಸ್ಸಾದ ಕಾರಣದಿಂದ ಈ ಸಮಸ್ಯೆಯನ್ನು ಎದುರಿಸಲಾಗುತ್ತದೆ. ಕಣ್ಣುಗಳ ಕೆಳಗೆ ಊತವು ನೀವು ಬಹಳಷ್ಟು ಉಪ್ಪನ್ನು ಸೇವಿಸುತ್ತಿದ್ದೀರಿ ಮತ್ತು ದೇಹದಲ್ಲಿ ನೀರಿನ ಕೊರತೆಯಿದೆ ಎಂದು ತೋರಿಸುತ್ತದೆ.


  ಇದರ ಪರಿಣಾಮ ಮುಖದ ಮೇಲೂ ಕಾಣುತ್ತದೆ. ಆದರೆ ಊತ ಮತ್ತು ಕಪ್ಪು ವರ್ತುಲಗಳ ಹಿಂದೆ ಹಾರ್ಮೋನುಗಳ ಬದಲಾವಣೆ, ರಕ್ತಹೀನತೆ, ಥೈರಾಯ್ಡ್ ಅಥವಾ ಮೂತ್ರಪಿಂಡದ ಕಾಯಿಲೆಯಂತಹ ಹಲವು ಕಾರಣಗಳಿವೆ. ನೀವು ಆಲ್ಕೋಹಾಲ್ ಅಥವಾ ಧೂಮಪಾನ ಮಾಡುತ್ತಿದ್ದರೆ ನಿದ್ರಾಹೀನತೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇದರಿಂದಾಗಿ ಕಣ್ಣುಗಳ ಕೆಳಗೆ ಕಪ್ಪು ವಲಯಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.


   ಕಣ್ಣುಗಳಲ್ಲಿ ಬಣ್ಣ ಬದಲಾವಣೆ:


  ಸ್ಕ್ಲೆರಾ ಎಂದು ಕರೆಯಲ್ಪಡುವ ಕಣ್ಣಿನ ಬಿಳಿ ಭಾಗವು ಆರೋಗ್ಯಕರವಾಗಿದ್ದಾಗ ಬಿಳಿ ಬಣ್ಣದ್ದಾಗಿರಬೇಕು. ಆದರೆ ನಿಮ್ಮ ಕಣ್ಣುಗಳು ತೆಳುವಾಗಿ ಅಥವಾ ತುಂಬಾ ದಣಿದಂತೆ ಕಾಣುತ್ತಿದ್ದರೆ ಅದು ಕಳಪೆ ಆಹಾರ ಮತ್ತು ನಿದ್ರೆಯ ಕೊರತೆಯನ್ನು ಸೂಚಿಸುತ್ತದೆ. ಕಣ್ಣುಗಳ ಬಿಳಿ ಭಾಗವು ಹಳದಿ ಬಣ್ಣದಲ್ಲಿ ಕಾಣಿಸಿಕೊಂಡಾಗ ಅದನ್ನು ಕಾಮಾಲೆ ಎಂದು ಕರೆಯಲಾಗುತ್ತದೆ. ಇದು ರಕ್ತಪ್ರವಾಹದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾದಾಗ ಉಂಟಾಗುತ್ತದೆ. ಅದೇ ಸಮಯದಲ್ಲಿ ಕಣ್ಣುಗಳ ಬಿಳಿ ಭಾಗದ ಕೆಂಪು ಬಣ್ಣವು ರಕ್ತನಾಳಗಳ ಒಡೆದ ಕಾರಣದಿಂದಾಗಿರಬಹುದು.


  ಇದನ್ನೂ ಓದಿ: ಏನ್​ ಮಾಡಿದ್ರೂ ತೂಕ ಇಳಿಸಲು ಆಗ್ತಿಲ್ವಾ? ಬೆಳ್ಳುಳ್ಳಿಯಿಂದ ಹೀಗೆ ಮಾಡಿ, 1 ವಾರದಲ್ಲೇ ಕರಗುತ್ತೆ ಬೊಜ್ಜು


  ಕಣ್ಣುಗಳಲ್ಲಿ ಶುಷ್ಕತೆ:


  ಕಣ್ಣುಗಳು ಒಣಗಲು ಹಲವು ಕಾರಣಗಳಿರಬಹುದು. ಉದಾಹರಣೆಗೆ ಕಂಪ್ಯೂಟರ್ ಪರದೆಯ ಮೇಲೆ ತಡರಾತ್ರಿಯಲ್ಲಿ ಕೆಲಸ ಮಾಡುವುದು, ಫೋನ್ ಅನ್ನು ಹೆಚ್ಚು ಬಳಸುವುದು ಅಥವಾ ಕಣ್ಣುಗಳಲ್ಲಿ ಧೂಳು ಮತ್ತು ಕೊಳಕು ಇತ್ಯಾದಿ. ಆದರೆ ನೀವು ದೀರ್ಘಕಾಲದವರೆಗೆ ಕಣ್ಣುಗಳಲ್ಲಿ ಶುಷ್ಕತೆ, ಸುಡುವಿಕೆ ಅಥವಾ ನೋವಿನಂತಹ ಇತರ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ ನೀವು ವೈದ್ಯರನ್ನು ಭೇಟಿ ಮಾಡಬೇಕು. ಸಾಕಷ್ಟು ಕಣ್ಣೀರು ಬರದೇ, ಕಣ್ಣೀರು ಬೇಗನೆ ಒಣಗುವುದು ಇದಕ್ಕೆ ಮುಖ್ಯ ಲಕ್ಷಣವಾಗಿದೆ. ವಯಸ್ಸಾದವರೂ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಇದು ಔಷಧಿಗಳ ಅಡ್ಡ ಪರಿಣಾಮಗಳಿಂದಲೂ ಸಂಭವಿಸಬಹುದು.

  Published by:renukadariyannavar
  First published: