Hairfall: ಮಳೆಗಾಲದಲ್ಲಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಈ ತೈಲಗಳಿಂದ ನೆತ್ತಿಯನ್ನು ಮಸಾಜ್ ಮಾಡಿ

ನಾವು ಸೇವಿಸುವ ಆಹಾರ ಮತ್ತು ನಮ್ಮ ಜೀವನಶೈಲಿ ಕೂದಲಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆಯೋ ಅದೇ ರೀತಿ , ಬದಲಾಗುವ ಹವಮಾನ ಕೂಡ ಸಮಾನ ಪರಿಣಾಮವನ್ನು ಬೀರುತ್ತದೆ. ನಿಮಗೆ ಈಗಾಗಲೇ ಕೂದಲು ಉದುರುವಿಕೆಯ ಸಮಸ್ಯೆ ಇದ್ದರೆ, ಮಳೆಗಾಲದಲ್ಲಿ ಅದು ಇಮ್ಮಡಿಸುವುದು ಖಚಿತ. ಕೆಲವು ತೈಲಗಳನ್ನು ಬಳಸುವುದರಿಂದ ಮಳೆಗಾಲದಲ್ಲಿ ಕೂದಲಿಗೆ ಅಗತ್ಯ ಪೋಷಣೆಯನ್ನು ನೀಡಲು ಸಾಧ್ಯ. ಅಂತಹ ಕೆಲವು ತೈಲಗಳ ಕುರಿತ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲ (Monsoon) ಬಂತೆಂದರೆ ನಮ್ಮ ತಲೆ ಕೂದಲ ಆರೈಕೆಯ ಬಗ್ಗೆ ವಿಶೇಷ ಗಮನ ಹರಿಸುವುದು ಅತ್ಯಂತ ಅಗತ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ, ಮಳೆಗಾಲದಲ್ಲಿ ಗಾಳಿಯಲ್ಲಿ (Air) ಇರುವ ತೇವಾಂಶವು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಗೆ (Hair Fall) ಕಾರಣವಾಗುತ್ತದೆ. ನಾವು ಸೇವಿಸುವ ಆಹಾರ ಮತ್ತು ನಮ್ಮ ಜೀವನಶೈಲಿ ಕೂದಲಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆಯೋ ಅದೇ ರೀತಿ, ಬದಲಾಗುವ ಹವಾಮಾನ  ಕೂಡ ಸಮಾನ ಪರಿಣಾಮವನ್ನು ಬೀರುತ್ತದೆ. ನಿಮಗೆ ಈಗಾಗಲೇ ಕೂದಲು ಉದುರುವಿಕೆಯ ಸಮಸ್ಯೆ ಇದ್ದರೆ, ಮಳೆಗಾಲದಲ್ಲಿ ಅದು ಇಮ್ಮಡಿಸುವುದು ಖಚಿತ. ಕೆಲವು ತೈಲಗಳನ್ನು ಬಳಸುವುದರಿಂದ ಮಳೆಗಾಲದಲ್ಲಿ ಕೂದಲಿಗೆ ಅಗತ್ಯ ಪೋಷಣೆಯನ್ನು ನೀಡಲು ಸಾಧ್ಯ. ಅಂತಹ ಕೆಲವು ತೈಲಗಳ (Oil) ಕುರಿತ ಮಾಹಿತಿ ಇಲ್ಲಿದೆ.

ಈರುಳ್ಳಿ ತೈಲ
ಕೆಂಪು ಈರುಳ್ಳಿ ತೈಲದ ಬಳಕೆಯಿಂದ ಹಲವು ರೀತಿಯ ಉಪಯೋಗಳಿದ್ದು, ಈ ತೈಲದ ಬಳಕೆ ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಕೆಂಪು ಈರುಳ್ಳಿ ಎಣ್ಣೆಯು ನೆತ್ತಿಯ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಜೊತೆಗೆ ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ಮಳೆಗಾಲದ ಋತುವಿನಲ್ಲಿ ತಲೆ ಹೊಟ್ಟಿನ ಸಮಸ್ಯೆ ಮತ್ತು ಕೂದಲು ಉದುರುವುದು ಸಾಮಾನ್ಯ. ಹೆಚ್ಚಿನ ಜನರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಈರುಳ್ಳಿ ತೈಲ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ.

ಭೃಂಗರಾಜ ತೈಲ
ಕೂದಲು ಉದುರುವಿಕೆಯನ್ನು ತಡೆಯಲು ಆಯುರ್ವೇದದಲ್ಲಿ ಕೆಲವು ಅತ್ಯುತ್ತಮ ಪರಿಹಾರಗಳಿವೆ. ತಲೆ ಕೂದಲಿನ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಚಿಕಿತ್ಸೆ ನೀಡಲು ಬಳಸುವ ಹಲವಾರು ಪ್ರಮುಖ ಗಿಡಮೂಲಿಕೆಗಳ ಪೈಕಿ, ಭೃಂಗರಾಜ್ ಕೂಡ ಒಂದು. ನಮ್ಮ ಹಿರಿಯರು ಕೂಡ ಭೃಂಗರಾಜ್ ತೈಲವನ್ನು ಕೇಶದ ಆರೈಕೆಗೆ ಬಳಸುತ್ತಿದ್ದರು.

ಇದನ್ನೂ ಓದಿ:  Health Tips: ಆರೋಗ್ಯಯುತ ತ್ವಚೆ ಮತ್ತು ಕೂದಲು ನಿಮ್ಮದಾಗಬೇಕೆ? ಹಾಗಿದ್ದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ನೋಡಿ

ಭೃಂಗರಾಜದಲ್ಲಿರುವ ಉಪಯುಕ್ತ ಅಂಶಗಳು, ಕೂದಲು ತೆಳುವಾಗುವುದು ಮತ್ತು ಕೂದಲು ಉದುರಿ , ಬೊಕ್ಕ ತಲೆಯಾಗುವ ಸಮಸ್ಯೆಗಳನ್ನು ತಡೆಯುತ್ತದೆ. ಭೃಂಗರಾಜ್ ಕೂದಲಿನ ಫಾಲಿಕಲ್ಸ್ ಗಳಿಗೆ ಪೋಷಣೆ ನಿಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಭೃಂಗರಾಜ ತೈಲ ಒತ್ತಡ ನಿವಾರಣೆಗೂ ಹೆಸರುವಾಸಿಯಾಗಿದೆ ಮತ್ತು ಸೂಕ್ತ ರಕ್ತಪರಿಚಲನೆಗೂ ಸಹಾಯ ಮಾಡುತ್ತದೆ. ಅದರಿಂದ ಹೊಸ ಕೂದಲಿನ ಬೆಳವಣಿಗೆಗೆ ಉತ್ತೇಜನ ಸಿಗುತ್ತದೆ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆ ಕೂದಲಿನ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಕೂದಲ ಉದುರುವಿಕೆಯನ್ನು ಕಡಿಮೆ ಮಾಡುವ ನೈಸರ್ಗಿಕ ಎಣ್ಣೆಗಳಲ್ಲಿ ಇದು ಕೂಡ ಒಂದು. ತೆಂಗಿನ ಎಣ್ಣೆಯಲ್ಲಿ ಕೊಬ್ಬಿನ ಆಮ್ಲಗಳು ಅತ್ಯಧಿಕ ಪ್ರಮಾಣದಲ್ಲಿವೆ ಹಾಗೂ ನೆತ್ತಿಗೆ ಆಳವಾಗಿ ಪೋಷಣೆ ಒದಗಿಸಲು ಸಹಾಯ ಮಾಡುವ ಪ್ರೊಟೀನ್ ಕೂಡ ಇದೆ. ಪೌಷ್ಟಿಕಾಂಶ ನೆತ್ತಿಯನ್ನು ತಲುಪಿದರೆ, ಅದು ಕೂದಲನ್ನು ಸದೃಢವಾಗಿಸುತ್ತದೆ. ಅಷ್ಟೇ ಅಲ್ಲ, ತೆಂಗಿನ ಎಣ್ಣೆ ಸಿಕ್ಕಾದ ಮತ್ತು ಒಣ ಕೂದಲಿನ ಸಮಸ್ಯೆಗೂ ಪರಿಹಾರ ನೀಡುತ್ತದೆ.

ಲ್ಯಾವೆಂಡರ್ ತೈಲ
ಲ್ಯಾವೆಂಡರ್ ತೈಲದ ಸುಗಂಧಕ್ಕೆ ಮಾರು ಹೋಗದವರಿಲ್ಲ. ಆದರೆ, ಇದು ಮಳೆಗಾಲದ ತಿಂಗಳುಗಳಲ್ಲಿ ನಿಮ್ಮ ಕೂದಲಿಗೆ ಅತ್ಯುತ್ತಮ ಪೋಷಣೆ ನೀಡಬಲ್ಲ ತೈಲ ಕೂಡ ಹೌದು ಎಂಬುವುದು ನಿಮಗೆ ತಿಳಿದಿದೆಯೇ? ಲ್ಯಾವೆಂಡರ್ ತೈಲದಲ್ಲಿ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್ ಮತ್ತು ಉರಿಯೂತ ನಿವಾರಕ ಅಂಶಗಳು ಇವೆ. ಈ ಅಂಶಗಳು ನೆತ್ತಿ ಒಣಗದಂತೆ ಮತ್ತು ನೆತ್ತಿಯಲ್ಲಿ ತುರಿಕೆ ಉಂಟಾಗದಂತೆ ತಡೆಯುತ್ತವೆ. ಈ ಲ್ಯಾವೆಂಡರ್ ಎಣ್ಣೆಯನ್ನು ನೇರವಾಗಿ ಬಳಸುವುದಕ್ಕಿಂತ, ಬೇರೆ ಎಸೆನ್ಶಿಯಲ್ ತೈಲಗಳ ಜೊತೆ ಮಿಶ್ರ ಮಾಡಿ ಬಳಸಿದರೆ ಹೆಚ್ಚಿನ ಉಪಯೋಗವನ್ನು ಪಡೆಯಲು ಸಾಧ್ಯವಿದೆ.

ಇದನ್ನೂ ಓದಿ:  Yoga for Pregnant: ಗರ್ಭಿಣಿಯರಿಗೆ ಯೋಗ ಎಷ್ಟು ಮುಖ್ಯ? ಯೋಗಾಭ್ಯಾಸದಿಂದ ಏನೆಲ್ಲಾ ಪ್ರಯೋಜನವಿದೆ?

ಸಾಸಿವೆ ತೈಲ
ಮಳೆಗಾಲ ಮಾತ್ರವಲ್ಲ, ಯಾವುದೇ ಋತುವಿರಲಿ, ಸಾಸಿವೆ ಎಣ್ಣೆಯ ಪ್ರಯೋಜನಗಳು ಸರ್ವಕಾಲಿಕ. ಸಾಸಿವೆ ಎಣ್ಣೆಯಿಂದ ನೆತ್ತಿಗೆ ಮಸಾಜ್ ಮಾಡುವುದರಿಂದ ಮನಸ್ಸಿಗೆ ರಿಲ್ಯಾಕ್ಸ್ ಆಗುತ್ತದೆ ಮತ್ತು ಒತ್ತಡದಿಂದ ಮುಕ್ತಿ ಹೊಂದುವಿರಿ. ಸಾಸಿವೆ ಎಣ್ಣೆ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ, ಹಾಗಾಗಿ ಪೋಷಕಾಂಶಗಳು ಕೂದಲಿನ ಬೇರುಗಳ ವರೆಗೆ ಹರಿಯಲು ಸಹಾಯವಾಗುತ್ತದೆ. ಅದರಲ್ಲೂ ಮಳೆಗಾಲದ ಬಳಕೆಗಂತೂ ಇದು ಅತ್ಯುತ್ತಮ ತೈಲ. ಏಕೆಂದರೆ ಸಾಸಿವೆ ಎಣ್ಣೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಫಂಗಲ್ ಅಂಶಗಳಿವೆ.
Published by:Ashwini Prabhu
First published: