Children Height: ನಿಮ್ಮ ಮಗುವಿನ ಎತ್ತರ ಹೆಚ್ಚಾಗಲು ಇಷ್ಟು ಮಾಡಿ ಸಾಕು..

Child Care: ಒಂದು ಮಗು ಎತ್ತರವಾಗಿ ಬೆಳೆಯಬೇಕೆಂದರೆ ಅದರಲ್ಲಿ ತುಂಬಾ ಅಂಶಗಳು ಪ್ರಭಾವ ಬೀರುತ್ತವೆ.ಆದರೂ ನಿಮ್ಮ ಮಕ್ಕಳು ತಮ್ಮ ಗರಿಷ್ಠ ಎತ್ತರ ತಲುಪಲು ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ವ್ಯಾಯಾಮಗಳು(Exercises )ಇಲ್ಲಿವೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ತುಂಬಾ ಎತ್ತರವಾಗಿ ನಮ್ಮ ಮಕ್ಕಳು(Children) ಬೆಳೆಯದಿದ್ದರೂ ಪರವಾಗಿಲ್ಲ, ಆದರೆ ಅವರು ಕುಳ್ಳಗೆ ಇರಬಾರದೆಂದು ಸಾಮಾನ್ಯವಾಗಿ ಎಲ್ಲಾ ತಂದೆ ತಾಯಂದಿರು ಬಯಸುತ್ತಾರೆ ಮತ್ತು ಅದು ಸಹಜ ಕೂಡ.ಮಕ್ಕಳು ಉತ್ತಮ ಎತ್ತರ ಹೊಂದಿದ್ದರೆ, ಅವರ ಒಟ್ಟಾರೆ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಒಂದು ಮಗು ಎತ್ತರವಾಗಿ ಬೆಳೆಯಬೇಕೆಂದರೆ ಅದರಲ್ಲಿ ತುಂಬಾ ಅಂಶಗಳು ಪ್ರಭಾವ ಬೀರುತ್ತವೆ.ಆದರೂ ನಿಮ್ಮ ಮಕ್ಕಳು ತಮ್ಮ ಗರಿಷ್ಠ ಎತ್ತರ ತಲುಪಲು ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ವ್ಯಾಯಾಮಗಳು(Exercises )ಇಲ್ಲಿವೆ ನೋಡಿ. ಅವರು ಚಿಕ್ಕ ಮಕ್ಕಳಿದ್ದಾಗ ಈ ವ್ಯಾಯಾಮಗಳನ್ನು ಮಾಡಿಸಿ, ಇದು ಅವರ ಎತ್ತರವನ್ನು ಹೆಚ್ಚಿಸಲು ಮತ್ತು ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.


ಮಕ್ಕಳಿಗೆ ಈಜು ಕಲಿಸಿರಿ


ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಈಜು ಕಲಿಸುವುದರಿಂದ ಅವರ ಎತ್ತರವೂ ಹೆಚ್ಚಾಗಬಹುದು ಮತ್ತು ಇದು ದೇಹದೊಳಗಿನ ಜೀವಕೋಶಗಳನ್ನು ಉತ್ತೇಜಿಸುತ್ತದೆ. ಈಜು ದೇಹದಲ್ಲಿರುವ ಪ್ರತಿ ಸ್ನಾಯುವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ನೈಸರ್ಗಿಕವಾಗಿ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಮಕ್ಕಳಿಗೆ ಉದ್ಯಾನದಲ್ಲಿ ಹ್ಯಾಂಗಿಂಗ್ ವ್ಯಾಯಾಮ ಮಾಡಿಸಿ


ನಿಮ್ಮ ಮಕ್ಕಳಿಗೆ ಉದ್ಯಾನವನದಲ್ಲಿರುವಂತಹ ಹ್ಯಾಂಗಿಂಗ್ ಕಂಬಗಳಿಗೆ ಜೋತಾಡಲು ಹೇಳಿ, ಇದರಿಂದ ನಿಮ್ಮ ಮಗುವಿನ ತೋಳುಗಳ ಸಹಿಷ್ಣುತೆ ಹೆಚ್ಚಾಗುತ್ತದೆ ಮತ್ತು ಇದನ್ನು ಮಾಡಿಸುವುದರಿಂದ ದೇಹವು ಒಂದು ಆಕಾರ ಪಡೆಯುತ್ತದೆ ಮತ್ತು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಪಿರಿಯಡ್ಸ್ ಹೊಟ್ಟೆ ನೋವಿಗೆ ಈ ಜ್ಯೂಸ್​ಗಳು ರಾಮಬಾಣ

ಕಾಲ್ಬೆರಳುಗಳನ್ನು ಮುಟ್ಟುವ ವ್ಯಾಯಾಮ ಮಾಡಿಸಿ


ನಿಮ್ಮ ಮಗುವಿಗೆ ಪ್ರತಿ ದಿನ ಬೆಳಗ್ಗೆ ನೇರವಾಗಿ ನಿಂತುಕೊಂಡು ನಂತರ ಹಾಗೆಯೇ ಕೆಳಕ್ಕೆ ಬಾಗಿ ತಮ್ಮ ಕಾಲಿನ ಬೆರಳುಗಳನ್ನು ಮುಟ್ಟುವಂತೆ ಹೇಳಿರಿ. ಹೀಗೆ ಮಾಡುವುದರಿಂದ ನಿಮ್ಮ ಮಗುವಿನ ಬೆನ್ನಿನ ಸ್ನಾಯುಗಳನ್ನು ಇದು ಬಲಪಡಿಸುತ್ತದೆ ಮತ್ತು ಮಗುವಿನ ಎತ್ತರವನ್ನು ಇದು ಹೆಚ್ಚು ಮಾಡುತ್ತದೆ.


ನಾಗರ ಹಾವಿನ ಭಂಗಿ ವ್ಯಾಯಾಮ ಮಾಡಲು ಹೇಳಿರಿ


ನಿಮ್ಮ ಮಗುವಿಗೆ ನಾಗರ ಹಾವಿನ ಭಂಗಿಯ ವ್ಯಾಯಾಮ ಮಾಡಲು ಹೇಳಿರಿ. ನಿಮ್ಮ ಮಕ್ಕಳಿಗೆ ಅವರು ಕೆಳಗೆ ನೇರವಾಗಿ ಮಲಗಿ ನಂತರ ನಿಧಾನವಾಗಿ ತಮ್ಮ ಮುಂದಿನ ದೇಹದ ಅರ್ಧ ಭಾಗವನ್ನು ಮೇಲಕ್ಕೆ ಎತ್ತಿ ಮತ್ತು ಕೈಗಳನ್ನು ನೇರವಾಗಿ ಕೆಳಗೆ ಇರಿಸಬೇಕು. ಇದನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ಜೀವಕೋಶಗಳ ಬೆಳೆಯುತ್ತಿರುವ ಸಾಮರ್ಥ್ಯ ಹೆಚ್ಚಿಸಲು ನಿಮ್ಮ ದೇಹವು ಅನುಮತಿಸುತ್ತದೆ. ಇದು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಹಗ್ಗದಾಟ ಆಡಿಸಿರಿ


ನಿಮ್ಮ ಮಕ್ಕಳಿಗೆ ಪ್ರತಿದಿನ ಹಗ್ಗದಾಟ ಆಡಲು ಹೇಳಿರಿ. ಪ್ರತಿಯೊಬ್ಬರೂ ಆನಂದಿಸುವ ಮೋಜಿನ ಆಟವೆಂದರೆ ಅದುವೇ ಹಗ್ಗದಾಟವಾಗಿದೆ. ಈ ಚಟುವಟಿಕೆಯು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜಿಗಿಯುವುದರಿಂದ ನಿಮ್ಮ ದೇಹದ ಜೀವಕೋಶಗಳನ್ನು ತಲೆಯಿಂದ ಕಾಲಿನವರೆಗೂ ಪ್ರಚೋದಿಸುತ್ತದೆ ಮತ್ತು ಜೀವಕೋಶವನ್ನು ಸಕ್ರಿಯಗೊಳಿಸುತ್ತದೆ. ನಮ್ಮ ದೇಹದ ಸುವ್ಯವಸ್ಥಿತ ಬೆಳವಣಿಗೆ ಮತ್ತು ಎತ್ತರ ಹೆಚ್ಚಿಸಲು ಈ ರೀತಿಯ ಚಟುವಟಿಕೆ ಉತ್ತಮವಾಗಿದೆ.


ಇದನ್ನೂ ಓದಿ: ಖಾರ ಅಂತ ಅಳ್ಬೇಡಿ, ಹಸಿಮೆಣಸಿನಕಾಯಿ ತಿಂದ್ರೆ ಬೇಗ ಸಣ್ಣಗಾಗ್ತಾರಂತೆ!

ಕೇವಲ ವ್ಯಾಯಾಮ ಮಾತ್ರವಲ್ಲದೇ  ಮಕ್ಕಳಿಗೆ ಉತ್ತಮ ಪೋಷಕಾಂಶಯುಕ್ರ ಆಹಾರ ನೀಡುವುದು ಕೂಡ ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೆ ವ್ಯಾಯಾಮ ಮಾಡಿಸುವಾಗ ಬಹಳ ಎಚ್ಚರಿಕೆಯಿಂದ ಮಾಡಿಸಬೇಕು. ಮಕ್ಕಳ ವಯಸ್ಸಿನ ಅನುಸಾರವಾಗಿ ಹಾಗೂ ಅವರ ಶಕ್ತಿಯನ್ನು ನೋಡಿಕೊಂಡು ಮಾಡಿಸಬೇಕು. ಇಲ್ಲದಿದ್ದಲ್ಲಿ ಅದು  ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
Published by:Sandhya M
First published: