Women’s Health: ಮಹಿಳೆಯರಲ್ಲಿ ಅತಿಯಾಗಿ ಕಂಡು ಬರುವ ಈ ಕಾಯಿಲೆಗಳು ಸಾಕಷ್ಟು ಸಂಕಷ್ಟ ತಂದೊಡ್ಡುತ್ತವೆ!

ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಹಾರ್ಮೋನುಗಳ ಬದಲಾವಣೆ ಅಥವಾ ಇತರ ಕಾರಣಗಳಿಂದ ಉಂಟಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಮ್ಯಾಮೊಗ್ರಾಮ್ ಮತ್ತು ಎಂಆರ್ಐ ಮೂಲಕ ಕಂಡು ಹಿಡಿಯಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಂತಾರಾಷ್ಟ್ರೀಯ ಮಹಿಳಾ ಆರೋಗ್ಯ ದಿನಾಚರಣೆ (World Women’s Health day) ಯನ್ನು ಪ್ರತಿ ವರ್ಷ  (Every Year) ಮೇ 28 ರಂದು ಆಚರಣೆ ಮಾಡಲಾಗುತ್ತದೆ. ಈ ದಿನದಂದು ಮಹಿಳಾ ಆರೋಗ್ಯದ ವೃದ್ಧಿಯ ಜಾಗೃತಿ ಮೂಡಿಸಲಾಗುತ್ತದೆ. ಮಹಿಳೆಯರ ಸಮಸ್ಯೆಗಳು (Problems) ಮತ್ತು ಕಾಯಿಲೆಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಗುತ್ತದೆ. ಮಹಿಳೆಯರು ತಮ್ಮ ಆರೋಗ್ಯ ಕಾಯ್ದುಕೊಳ್ಳುವ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಮಹಿಳೆಯರಿಗೆ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಕೆಲಸ, ಅಧ್ಯಯನ ಮತ್ತು ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಮಹಿಳೆಯರು  ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಹೆಚ್ಚು ಸಾಧ್ಯವಾಗಲ್ಲ.

    ಮಹಿಳೆಯರು ಎದುರಿಸುತ್ತಿರುವ ಸಾಮಾನ್ಯ ಕಾಯಿಲೆಗಳು, ಲಕ್ಷಣಗಳು ಮತ್ತು ಅವುಗಳನ್ನು ಹೇಗೆ ತಪ್ಪಿಸುವುದು ಎಂಬುದನ್ನು ಇಲ್ಲಿ ನೋಡೋಣ.

    ಸ್ತನ ಕ್ಯಾನ್ಸರ್ ಕಾಯಿಲೆ

    ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಹಾರ್ಮೋನುಗಳ ಬದಲಾವಣೆ ಅಥವಾ ಇತರ ಕಾರಣಗಳಿಂದ ಉಂಟಾಗುತ್ತದೆ.

    ಸ್ತನ ಕ್ಯಾನ್ಸರ್ ಅನ್ನು ಮ್ಯಾಮೊಗ್ರಾಮ್ ಮತ್ತು ಎಂಆರ್ಐ ಮೂಲಕ ಕಂಡು ಹಿಡಿಯಲಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಲುಂಪೆಕ್ಟಮಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದು ಸ್ತನ ಕ್ಯಾನ್ಸರ್ನ ಗೆಡ್ಡೆ ತೆಗೆದು ಹಾಕುವ ವಿಧಾನವಾಗಿದೆ. ತೂಕವನ್ನು ನಿಯಂತ್ರಿಸುವ ಮೂಲಕ ಸ್ತನ ಕ್ಯಾನ್ಸರ್ ತಪ್ಪಿಸಬಹುದು.

    ಇದನ್ನೂ ಓದಿ: ತೈಲ ಮತ್ತು ಮಸಾಲೆ ಪದಾರ್ಥಗಳಿಂದ ಕೂಡಿದ ಭಾರವಾದ ಊಟದ ನಂತರ ಹೀಗೆ ಮಾಡಿದ್ರೆ ಕರುಳಿನ ಸಮಸ್ಯೆ ಕಡಿಮೆಯಾಗುತ್ತೆ!

    ಹೃದ್ರೋಗ ಹೃದಯ ಸಂಬಂಧಿ ಸಮಸ್ಯೆ

    ಪುರುಷರು ಮತ್ತು ಮಹಿಳೆಯರಲ್ಲಿ ಬಹಳ ಸಾಮಾನ್ಯವಾದ ಕಾಯಿಲೆ ಹೃದ್ರೋಗ ಸಮಸ್ಯೆಯಾಗಿದೆ. ಮಹಿಳೆಯರು ಹೆಚ್ಚು ಹೃದಯ ಸಂಬಂಧಿ ಕಾಯಿಲೆ ಅಪಾಯವ ಹೊಂದಿರುತ್ತಾರೆ.

    ಹೃದ್ರೋಗದ ಕಾರಣಗಳು:

    ಮಧುಮೇಹ

    ಸ್ಥೂಲಕಾಯ

    ಧೂಮಪಾನ

    ಖಿನ್ನತೆ

    ಮಧುಮೇಹ, ಮೂತ್ರಪಿಂಡದ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಮಹಿಳೆಯರು ಹೃದ್ರೋಗ ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ.

    ಹೃದ್ರೋಗ ತಪ್ಪಿಸುವ ಮಾರ್ಗಗಳು

    ಕರಿದ ಪದಾರ್ಥ ಮತ್ತು ಉಪ್ಪಿನ ಸೇವನೆ ಕಡಿಮೆ ಮಾಡಿ ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಿ. ಕನಿಷ್ಠ 3 ರಿಂದ 4 ದಿನಗಳ ಕಾಲ ಮದ್ಯಪಾನ ಸೇವಿಸಬೇಡಿ. ಧೂಮಪಾನ ತ್ಯಜಿಸಿ ಸಮಯಕ್ಕೆ ಔಷಧಿ ಸೇವಿಸಿ ಕೊಲೆಸ್ಟ್ರಾಲ್ ನಿಯಂತ್ರಿಸಿ. ರಕ್ತದೊತ್ತಡ ನಿಯಂತ್ರಿಸಿ. ಒತ್ತಡ ತೆಗೆದುಕೊಳ್ಳಬೇಡಿ.

    ಖಿನ್ನತೆ

    ಮಹಿಳೆಯರು ಕೆಲವೊಮ್ಮೆ ದುಃಖಿತರಾಗುತ್ತಾರೆ. ಈ ಭಾವನೆಗಳು ದೀರ್ಘಕಾಲದವರೆಗೆ ಮುಂದುವರಿದರೆ ಅದು ಮಹಿಳೆ ಮತ್ತು ಅವಳ ಸುತ್ತಲಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಯನ್ನು ಖಿನ್ನತೆ ಎಂದು ಕರೆಯುತ್ತಾರೆ.

    ಖಿನ್ನತೆಗೆ ಕಾರಣಗಳು

    ಜೆನೆಟಿಕ್ಸ್ ಒತ್ತಡ

    ಪೌಷ್ಟಿಕಾಂಶದ ಕೊರತೆ

    ಮೆದುಳಿನಲ್ಲಿ ರಾಸಾಯನಿಕ ಅಸಮತೋಲನ

    ಆರೋಗ್ಯ ಸ್ಥಿತಿ ಹಾರ್ಮೋನ್ ಅಸಮತೋಲನ

    ಖಿನ್ನತೆಯ ಚಿಕಿತ್ಸೆ:

    ಖಿನ್ನತೆಯಿಂದ ದೂರವಿರಲು ಮುಕ್ತವಾಗಿ ಮಾತನಾಡಿ. ವೈದ್ಯರನ್ನು ಕೂಡ ಸಂಪರ್ಕಿಸಿ. ವ್ಯಾಯಾಮ, ಪೌಷ್ಟಿಕ ಆಹಾರ ಸೇವಿಸಿ.

    ಬೊಜ್ಜು

    ಮಹಿಳೆಯರಲ್ಲಿ ಸ್ಥೂಲಕಾಯ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನಿಂದ ಉಂಟಾಗಬಹುದು. ಸ್ಥೂಲಕಾಯ ಮಹಿಳೆಯರಲ್ಲಿ ಮಧುಮೇಹ ಮತ್ತು ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ. ಸ್ಥೂಲಕಾಯಕ್ಕೆ ಕಾರಣ: ಒತ್ತಡದ ಜೆನೆಟಿಕ್ಸ್, ಸಕ್ರಿಯ ಆಹಾರ ರಹಿತ ಸೇವನೆ, ಔಷಧಿಗಳ ಅತಿಯಾದ ಬಳಕೆ, ಖಿನ್ನತೆ, ಹೃದ್ರೋಗ ಕ್ಯಾನ್ಸರ್

    ಮಹಿಳೆಯರಲ್ಲಿ ಮಧುಮೇಹ

    ಮಧುಮೇಹವು ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಉಂಟಾಗುವ ಚಯಾಪಚಯ ಅಸ್ವಸ್ಥತೆ. ಎರಡು ವಿಧಗಳಿವೆ, ಟೈಪ್ 1, ಟೈಪ್ 2.

    ಇದನ್ನೂ ಓದಿ: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಕಾಡುತ್ತವೆ? ಪರಿಹಾರವೇನು?

    ಮಹಿಳೆಯರಲ್ಲಿ ಮಧುಮೇಹದ ಕಾರಣಗಳು:

    ವಯಸ್ಸಾಗುವಿಕೆ

    ಅಧಿಕ ತೂಕದ ಆನುವಂಶಿಕತೆ

    ವ್ಯಾಯಾಮ ಕೊರತೆ ಅಧಿಕ

    ಕೊಲೆಸ್ಟ್ರಾಲ್

    ಅಧಿಕ ರಕ್ತದೊತ್ತಡ

    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್
    Published by:renukadariyannavar
    First published: