News18 India World Cup 2019

ನೀವು ಡಯಟ್ ಮಾಡ್ತೀರಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ರೀತಿ ಮಾಡಬೇಡಿ!

ನಾವು ತಿನ್ನುವ ಆಹಾರ ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ, ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಬದಲು ದೇಹಕ್ಕೆ ಏನು ಬೇಕೆಂದು ನೋಡಿಕೊಂಡು ತಿನ್ನುವುದು ಉತ್ತಮ.

Sushma Chakre | news18
Updated:April 11, 2019, 10:16 PM IST
ನೀವು ಡಯಟ್ ಮಾಡ್ತೀರಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ರೀತಿ ಮಾಡಬೇಡಿ!
ಸಾಂದರ್ಭಿಕ ಚಿತ್ರ
Sushma Chakre | news18
Updated: April 11, 2019, 10:16 PM IST
ಇಂದಿನ ಯುವಪೀಳಿಗೆಯವರ ಜೀವನಶೈಲಿ ಸಾಕಷ್ಟು ಬದಲಾಗಿದೆ. ಹಾಗಂತ ಹೇಗೆ ಬೇಕೋ ಹಾಗೆ ಮೈಯನ್ನು ಬೆಳೆಸಿಕೊಂಡು ತಿರುಗಾಡಲು ಅವರು ತಯಾರಿಲ್ಲ. ಜಂಕ್​ ಫುಡ್​ ಬಿಡಲಾಗದೆ, ಉಬ್ಬಿರುವ ಹೊಟ್ಟೆಯನ್ನು ನೋಡಲಾಗದೆ ಜಿಮ್​ಗೆ ಸೇರಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಲೇ ಇದೆ. ನೀವು ಕೂಡ ಆ ಪಟ್ಟಿಯಲ್ಲಿದ್ದೀರಾ? ಪ್ರತಿದಿನದ ನಿಮ್ಮ ಶೆಡ್ಯೂಲ್​ನಲ್ಲಿ ಡಯಟ್​ ಕೂಡ ಸೇರಿದೆಯಾ? ಹಾಗಿದ್ದರೆ ಇಲ್ಲೊಮ್ಮೆ ಗಮನಹರಿಸಿ...

ಯುವಕ-ಯುವತಿಯರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯೂ ಬದಲಾಗುತ್ತಿರುವುದರಿಂದ ಡಯಟ್​ ಮತ್ತು ಜಿಮ್ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಮಧ್ಯವಯಸ್ಸು ದಾಟಿದವರು ಯೋಗ- ವ್ಯಾಯಾಮದ ಮೊರೆಹೋದರೆ ಯುವಕರಿಗೆ ಜಿಮ್​ನತ್ತ ಆಕರ್ಷಣೆ ಜಾಸ್ತಿ. ಕೆಲವರು ದೇಹದ ತೂಕ ಇಳಿಸಲು ಹೋದರೆ ಇನ್ನು ಕೆಲವರು ಗಟ್ಟಿಮುಟ್ಟಾದ ದೇಹವನ್ನು ಪಡೆಯಬೇಕೆಂದು ಹೋಗುತ್ತಾರೆ. ಅದೇನೇ ಇರಲಿ, ಅವರೆಲ್ಲರಿಗೂ ಡಯಟ್​ ಇದ್ದೇ ಇರುತ್ತದೆ.

ಎಚ್ಚರಿಕೆ: ನಿಂತು ನೀರು ಕುಡೀತೀರಾ? ಹಾಗಿದ್ರೆ ನಿಮ್ಮ ಆರೋಗ್ಯದಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುವುದು ಖಚಿತ!

ನಿಮ್ಮ ದಿನನಿತ್ಯದ ಶೆಡ್ಯೂಲ್​ನಲ್ಲಿಯೂ ಡಯಟ್​ ಇದೆಯಾ? ನೀವು ಕೂಡ ಆಹಾರವನ್ನು ತಿನ್ನುವ ಮುನ್ನ ಎರಡು ಬಾರಿ ಯೋಚಿಸುತ್ತೀರಾ? ನಾಲಿಗೆ ಬೇಕು ಎನ್ನುತ್ತಿದ್ದರೂ ಡಯಟ್​ ಹಾಳಾಗುತ್ತದೆ ಎಂದು ತಿನ್ನಲು ಹಿಂದೇಟು ಹಾಕುತ್ತೀರಾ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ.ಆರೋಗ್ಯಕರವಾದ ಡಯಟ್ ಹೇಗೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆಯೋ ಹಾಗೇ ಕೆಲವೊಮ್ಮೆ ನೀವು ಆರೋಗ್ಯಕರವೆಂದು ಭಾವಿಸುವ ಡಯಟ್​ ನಿಮ್ಮ ಪ್ರಾಣಕ್ಕೆ ಮುಳುವಾಗುವ ಸಾಧ್ಯತೆಯೂ ಇದೆ. ಹೌದು! ನಿಮಗೆ ಆಶ್ವರ್ಯವಾದರೂ ಇದು ಸತ್ಯ. ನಾವು ಸೇವಿಸುವ ಕೆಲವು ಆಹಾರಗಳೇ ನಮ್ಮ ಜೀವಕ್ಕೆ ಅಪಾಯವನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಡಯಟ್​ ಮೊರೆಹೋಗಿ ಹೊಟ್ಟೆ ತುಂಬಿದರೆ ಸಾಕೆಂದು ಯಾವ್ಯಾವುದೋ ಆಹಾರವನ್ನು ಕೆಲವರು ಸೇವಿಸುತ್ತಾರೆ. ಅದರಲ್ಲಿ ದೇಹಕ್ಕೆ ಅಗತ್ಯವಾದ ಯಾವ ಉತ್ತಮ ಅಂಶಗಳೂ ಇರುವುದಿಲ್ಲ. ಇಂತಹ ಡಯಟ್​ ಸಿಗರೇಟ್​ ಸೇದುವುದಕ್ಕಿಂತಲೂ ಅಪಾಯಕಾರಿ ಎನ್ನುತ್ತದೆ ಒಂದು ಅಧ್ಯಯನ.
Loading...

ಜ್ಯೂಸ್ ಕುಡೀತೀರಾ? ಹಾಗಿದ್ರೆ ಬೀಟ್​ ರೂಟ್​ ಜ್ಯೂಸ್ ಕುಡಿಯಿರಿ, ಇದರಲ್ಲಿದೆ ನೀವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಪ್ರಯೋಜನಗಳು

ದಿ ಲೆನ್ಸೆಟ್​ ಎಂಬ ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಯೊಂದರಲ್ಲಿ ಪ್ರಕಟವಾಗಿರುವ ಸಮೀಕ್ಷೆಯಲ್ಲಿ 195 ದೇಶಗಳ 25 ವರ್ಷದೊಳಗಿನ ಯುವಕ-ಯುವತಿಯರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. 40 ದೇಶಗಳ ಸುಮಾರು 130 ವಿಜ್ಞಾನಿಗಳು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.ನಾವು ಏನು ತಿನ್ನಬೇಕು ಅಥವಾ ನಮ್ಮ ದೇಹಕ್ಕೆ ಏನು ಬೇಕೆಂಬುದೇ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ನಾವು ಏನು ತಿನ್ನುತ್ತೇವೋ ಅದರಂತೆಯೇ ನಮ್ಮ ದೇಹವೂ ಇರುತ್ತದೆ. ಸರಿಯಾದ ಡಯಟ್​ ಅನುಕರಣ ಮಾಡದಿರುವುದರಿಂದ 2017ರಲ್ಲಿ 25 ವರ್ಷದೊಳಗಿನ 10.9 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ ಎನ್ನುತ್ತದೆ ಅಧ್ಯಯನ. ಅದೇ ಧೂಮಪಾನದಿಂದ ಸಾವನ್ನಪ್ಪುವವರ ಸಂಖ್ಯೆ 8.0 ಮಿಲಿಯನ್. ಹೀಗಾಗಿ, ನಮ್ಮ ಆಹಾರಪದ್ಧತಿ ಸರಿಯಿಲ್ಲದಿರುವುದು ಧೂಮಪಾನಕ್ಕಿಂತಲೂ ಅಪಾಯಕಾರಿ.

ರೆಡ್​ ಮೀಟ್, ಸಕ್ಕರೆ ಅಂಶ ಹೆಚ್ಚಿರುವ ತಿಂಡಿಗಳು, ಆ್ಯಸಿಡ್​ ಅಂಶ ಹೆಚ್ಚಾಗಿರುವ ಪದಾರ್ಥಗಳ ಬಳಕೆ ಆದಷ್ಟೂ ಮಿತವಿದ್ದಷ್ಟೂ ಒಳ್ಳೆಯದು. ಅತಿಯಾದ ಸೋಡಿಯಂ ಅಂಶ ಇರುವ ಪದಾರ್ಥಗಳ ಬಳಕೆ, ಹಣ್ಣುಗಳನ್ನು ಹೆಚ್ಚು ಸೇವಿಸದಿರುವುದು, ಧಾನ್ಯಗಳ ಕಡಿಮೆ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

First published:April 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...