Dark Chocolate: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಿಕೊಳ್ಳಲು ಡಾರ್ಕ್ ಚಾಕೊಲೇಟ್​ಗಳನ್ನು ತಿನ್ನಿ

ಸರಿಯಾದ ರೀತಿಯ ಡಾರ್ಕ್ ಚಾಕೊಲೇಟ್ ಅನ್ನು ತಿನ್ನುವುದರಿಂದ ನೀವು ಸುಲಭವಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಿಕೊಳ್ಳಬಹುದು. ಅಬಾಟ್ ನ್ಯೂಟ್ರಿಷನ್ ನ ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ಮುಖ್ಯಸ್ಥರಾದ ಡಾ. ಇರ್ಫಾನ್ ಶೇಖ್ ಅವರು ಎಲ್ಲಾ ಚಾಕೊಲೇಟ್ ಪ್ರಿಯರಿಗೆ ಕೆಲವು ಉಪಯುಕ್ತ ಸಲಹೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಚಾಕೊಲೇಟ್ ಅನ್ನು (Chocolate) ತುಂಬಾನೇ ಇಷ್ಟಪಡುವವರು ನೀವಾಗಿದ್ದರೆ, ಅದರಲ್ಲೂ ನೀವು ಈ ಡಾರ್ಕ್ ಚಾಕೊಲೇಟ್ (Dark Chocolate) ಅನ್ನು ಹೆಚ್ಚು ಇಷ್ಟಪಡುತ್ತಿದ್ದರೆ ನಿಮಗೊಂದು ಇಲ್ಲಿ ಒಳ್ಳೆಯ ಸುದ್ದಿ ಇದೆ ನೋಡಿ. ಸಂಶೋಧನೆಯ ಪ್ರಕಾರ, ಸೀಮಿತ ಪ್ರಮಾಣದ ಡಾರ್ಕ್ ಚಾಕಲೇಟ್ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟ (Blood sugar level) ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಿದೆ. ನೀವು ಸಕ್ಕರೆ ಕಾಯಿಲೆಯ ಆರಂಭದಲ್ಲಿದ್ದರೆ, ನೀವು ಚಾಕೊಲೇಟ್ ಗಳನ್ನು ತುಂಬಾನೇ ಇಷ್ಟ ಪಡುತ್ತಿದ್ದರೆ ಚಿಂತೆ ಮಾಡಬೇಡಿ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಳಿತಗಳಿಗಾಗಿ ಇವುಗಳನ್ನು ತಿನ್ನುವುದನ್ನು ನೀವು ಬಿಡಬೇಕಾಗಿಲ್ಲ.

ಸರಿಯಾದ ರೀತಿಯ ಡಾರ್ಕ್ ಚಾಕೊಲೇಟ್ ಅನ್ನು ತಿನ್ನುವುದರಿಂದ ನೀವು ಸುಲಭವಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಿಕೊಳ್ಳಬಹುದು. ಅಬಾಟ್ ನ್ಯೂಟ್ರಿಷನ್ ನ ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ಮುಖ್ಯಸ್ಥರಾದ ಡಾ. ಇರ್ಫಾನ್ ಶೇಖ್ ಅವರು ಎಲ್ಲಾ ಚಾಕೊಲೇಟ್ ಪ್ರಿಯರಿಗೆ ಕೆಲವು ಉಪಯುಕ್ತ ಸಲಹೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.

ಮಧುಮೇಹ ಮತ್ತು ಡಾರ್ಕ್ ಚಾಕೊಲೇಟ್ ಗೂ ಹೇಗೆ ಸಂಬಂಧ?
ನೀವು ಪ್ರತಿದಿನ ಈ ಡಾರ್ಕ್ ಚಾಕಲೇಟ್ ಅನ್ನು ಸೇವಿಸುವ ಮೊದಲು ಡಾರ್ಕ್ ಚಾಕೊಲೇಟ್ ಮತ್ತು ಮಧುಮೇಹದ ನಡುವಿನ ಸಂಬಂಧದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ತುಂಬಾನೇ ಅವಶ್ಯಕವಾಗಿದೆ.

ಇದನ್ನೂ ಓದಿ: Cholesterol Home Remedy: ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣಗಳು ಯಾವವು ಮತ್ತು ನಿಯಂತ್ರಿಸಲು ಕೊತ್ತಂಬರಿ ಎಷ್ಟು ಪರಿಣಾಮಕಾರಿ?

ಡಾರ್ಕ್ ಚಾಕೊಲೇಟ್ ನಲ್ಲಿ ಪಾಲಿಫಿನಾಲ್ ಗಳಿದ್ದು, ನೈಸರ್ಗಿಕವಾಗಿ ಸಂಭವಿಸುವ ಸಂಯುಕ್ತಗಳು ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿವೆ, ಇದು ಹಾನಿಕಾರಕ ಅಣುಗಳಿಂದ ದೇಹವನ್ನು ಹಾನಿಯಿಂದ ರಕ್ಷಿಸುತ್ತದೆ. ಪಾಲಿಫಿನಾಲ್ ಗಳು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸಬಹುದು. ಪ್ರತಿಯಾಗಿ, ಇದು ರಕ್ತದಲ್ಲಿನ ಸಕ್ಕರೆ ನಿರ್ವಹಣೆಯನ್ನು ಬೆಂಬಲಿಸಬಹುದು. ಈ ಹೆಚ್ಚಿದ ಇನ್ಸುಲಿನ್ ಸೂಕ್ಷ್ಮತೆಯು ಮಧುಮೇಹದ ಆರಂಭವನ್ನು ವಿಳಂಬಗೊಳಿಸಬಹುದು ಅಥವಾ ತಡೆಯಬಹುದು.

ಸರಿಯಾದ ಡಾರ್ಕ್ ಚಾಕೊಲೇಟ್ ಅನ್ನು ಹೇಗೆ ಆಯ್ಕೆ ಮಾಡುವುದು?
1. ಪಾಲಿಫಿನಾಲ್ ಭರಿತ ಡಾರ್ಕ್ ಚಾಕಲೇಟ್ ಅನ್ನು ಆರಿಸಿಸಿಕೊಳ್ಳಿರಿ, ಏಕೆಂದರೆ ಎಲ್ಲಾ ಚಾಕೊಲೇಟ್ ಗಳನ್ನು ಸಮಾನವಾಗಿ ಇದರಿಂದ ಮಾಡಿರುವುದಿಲ್ಲ. ನೀವು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವ ಪಾಲಿಫಿನಾಲ್-ಸಮೃದ್ಧ ಮತ್ತು ಹೆಚ್ಚಿನ ಕೋಕೊವನ್ನು ಹೊಂದಿರುವ ಡಾರ್ಕ್ ಚಾಕಲೇಟ್ ಅನ್ನು ಆಯ್ಕೆ ಮಾಡಿಕೊಳ್ಳಿರಿ.

2. ಒಂದು ಚಾಕೊಲೇಟ್ ತಿನ್ನುವುದರಿಂದ ನೀವು ಯಾವ ಯಾವ ಅಂಶಗಳನ್ನು ಪಡೆಯುತ್ತಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಲು ಪೌಷ್ಟಿಕಾಂಶದ ಸಂಗತಿಗಳನ್ನು ಓದಿರಿ.

3. ಸಕ್ಕರೆಯಷ್ಟೇ ನಾರಿನಂಶವಿರುವ ಡಾರ್ಕ್ ಚಾಕೊಲೇಟ್ ಅನ್ನು ಆರಿಸಿಕೊಳ್ಳಿ.

4. ಡಾರ್ಕ್ ಚಾಕೊಲೇಟ್ ಅನ್ನು ಸಂಸ್ಕರಿಸಲಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿರಿ. ಈ ಪ್ರಕ್ರಿಯೆಯಲ್ಲಿ ಕೋಕೋ ಅಂಶವನ್ನು ಕಡಿಮೆ ಮಾಡಿ ಚಾಕೊಲೇಟ್ ನ ಆರೋಗ್ಯ ಗುಣಲಕ್ಷಣಗಳನ್ನು ತೆಗೆದು ಹಾಕುತ್ತದೆ.

5. ಸ್ಟೀವಿಯಾ ಅಥವಾ ಇತರ ನೈಸರ್ಗಿಕ ಸಕ್ಕರೆಯೊಂದಿಗೆ ಸಿಹಿಯಾದ ಸಕ್ಕರೆ ಮುಕ್ತ ಡಾರ್ಕ್ ಚಾಕೊಲೇಟ್ ಲಭ್ಯವಿದ್ದರೆ, ಅದನ್ನು ಆರಿಸಿಕೊಳ್ಳಿ.

6. ಇದನ್ನು ಸಹ ನೀವು ಮಿತವಾಗಿ ತಿನ್ನಿರಿ. ನೀವು ಇದನ್ನು ಅತಿಯಾಗಿ ಸೇವಿಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಖಂಡಿತವಾಗಿಯೂ ಏರಿಳಿತಗೊಳ್ಳುತ್ತದೆ.

ಇದನ್ನೂ ಓದಿ: Health Tips: ಮುಟ್ಟಿನ ನೋವು ಶಮನಕ್ಕೆ ದಾಲ್ಚಿನ್ನಿ! ಬಳಕೆ ಹೇಗೆ?

ನೀವು ಮಧುಮೇಹವನ್ನು ಹೊಂದಿದ್ದರೆ, ಬಿಳಿ ಸಕ್ಕರೆಯಿಂದ ಮಾಡಿದಂತಹ ಆಹಾರ ಪದಾರ್ಥಗಳ ಸೇವನೆಯನ್ನು ಮಿತಿಗೊಳಿಸುವುದು ಉತ್ತಮ. ಇದರರ್ಥ ನೀವು ಸಕ್ಕರೆಯುಕ್ತ ಆಹಾರಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂಬ ಅರ್ಥವಲ್ಲ. ಸಮತೋಲಿತ ಆಹಾರದ ಒಂದು ಭಾಗವಾಗಿ ಕೆಲವೊಮ್ಮೆ ಒಂದು ಅಥವಾ ಎರಡು ಡಾರ್ಕ್ ಚಾಕೊಲೇಟ್ ಗಳನ್ನು ತಿನ್ನುವುದು ಕೆಲವು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಸರಿಯಾದ ರೀತಿಯ ಚಾಕೊಲೇಟ್ ಅನ್ನು ಆಯ್ಕೆ ಮಾಡಲು ಮೇಲೆ ನೀಡಲಾದ ಸಲಹೆಗಳನ್ನು ನೆನಪಿನಲ್ಲಿಡಿ. ಚಾಕೊಲೇಟ್ ನಲ್ಲಿ ಸೇರಿಸಲಾದ ಪದಾರ್ಥಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಯಾವುದು ಒಳ್ಳೆಯದೋ ಅದನ್ನು ಮಾತ್ರ ಸೇವಿಸಿ, ಆರೋಗ್ಯವಾಗಿರಿ.
Published by:Ashwini Prabhu
First published: