Inflammation: ಈ ಆಹಾರ ಸೇವನೆಯು ಉರಿಯೂತದಂತಹ ಸಮಸ್ಯೆಗಳನ್ನು ತಂದೊಡ್ಡಬಹುದು! ಎಚ್ಚರ

ಈಗ ಬಹುತೇಕ ಜನರು ತಮ್ಮ ಒತ್ತಡದ ಜೀವನಶೈಲಿಯಲ್ಲಿ ಪಾಲಿಸುವ ಕೆಟ್ಟ ಆಹಾರ ಪದ್ದತಿಗಳೇ ಉರಿಯೂತಕ್ಕೆ ಮುಖ್ಯವಾದ ಕಾರಣವೆಂದು ಹೇಳಬಹುದು. ಪೌಷ್ಠಿಕಾಂಶ ಇರುವಂತಹ ಆಹಾರದ ಕೊರತೆ ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದು ಇದಕ್ಕೆ ಕಾರಣ. ಹೀಗೆ ಇದೆಲ್ಲದರ ಪರಿಣಾಮವಾಗಿ ನಮಗೆ ವಯಸ್ಸಾಗುವಿಕೆಯ ಪ್ರಕ್ರಿಯೆ ತುಂಬಾನೇ ವೇಗವಾದಂತೆ ಅನ್ನಿಸುತ್ತದೆ ಮತ್ತು ಇದರಿಂದ ನಮಗೆ ಅನೇಕ ರೋಗಗಳು ಸಹ ಕಾಡಲು ಶುರುವಾಗುತ್ತವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಈ ಉರಿಯೂತ (Inflammation) ಎಂಬ ಪದವನ್ನು ನಾವು ಅನೇಕ ಬಾರಿ ಕೇಳುತ್ತಿದ್ದೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಈಗ ಬಹುತೇಕ ಜನರು ತಮ್ಮ ಒತ್ತಡದ ಜೀವನಶೈಲಿಯಲ್ಲಿ (Lifestyle) ಪಾಲಿಸುವ ಕೆಟ್ಟ ಆಹಾರ ಪದ್ದತಿಗಳೇ ಇದಕ್ಕೆ ಮುಖ್ಯವಾದ ಕಾರಣವೆಂದು ಹೇಳಬಹುದು. ಪೌಷ್ಠಿಕಾಂಶ (Nutrition) ಇರುವಂತಹ ಆಹಾರದ ಕೊರತೆ ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಸರಿಯಾದ ಸಮಯಕ್ಕೆ ಆಹಾರ (Food) ಸೇವಿಸದೆ ಇರುವುದು ಇದಕ್ಕೆ ಕಾರಣ. ಹೀಗೆ ಇದೆಲ್ಲದರ ಪರಿಣಾಮವಾಗಿ ನಮಗೆ ವಯಸ್ಸಾಗುವಿಕೆಯ ಪ್ರಕ್ರಿಯೆ ತುಂಬಾನೇ ವೇಗವಾದಂತೆ ಅನ್ನಿಸುತ್ತದೆ ಮತ್ತು ಇದರಿಂದ ನಮಗೆ ಅನೇಕ ರೋಗಗಳು ಸಹ ಕಾಡಲು ಶುರುವಾಗುತ್ತವೆ.

ಬನ್ನಿ ಹಾಗಾದರೆ ಇತ್ತೀಚೆಗೆ ಹಾಟ್ ಟಾಪಿಕ್ ಆದ ಈ ಉರಿಯೂತವನ್ನು ಉಂಟು ಮಾಡುವ ಮತ್ತು ವಯಸ್ಸಾಗುವಿಕೆಯನ್ನು ವೇಗಗೊಳಿಸುವ ಕೆಟ್ಟ ಆಹಾರ ಅಭ್ಯಾಸಗಳು ಯಾವುವು ಎಂಬುದನ್ನು ತಿಳಿದುಕೊಂಡು ಬರೋಣ. ಈಗ ಉದಾಹರಣೆಗೆ ನೀವು ಜೇನುನೊಣದಿಂದ ಕಚ್ಚಿಸಿಕೊಂಡರೆ ಅಥವಾ ಒಲೆಯ ಮೇಲೆ ನಿಮ್ಮ ಕೈಯನ್ನು ಸುಟ್ಟುಕೊಂಡರೆ, ನಿಮ್ಮ ದೇಹವು ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊಂದಿದೆ ಮತ್ತು ಅದು ವಿಷಗಳು, ರೋಗಕಾರಕಗಳು ಮತ್ತು ಸೋಂಕುಗಳನ್ನು ತಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಅಲ್ಪಾವಧಿಯ ಉರಿಯೂತಕ್ಕೆ ಕಾರಣವಾಗುತ್ತದೆ.

ಉರಿಯೂತ ದೇಹದ ಅಂಗಾಗದ ಮೇಲೆ ಹೇಗೆ ಪರಿಣಾಮ ಬೀರುತ್ತದೆ
ಆದರೆ ದೀರ್ಘಕಾಲೀನ ಉರಿಯೂತವು ನಮ್ಮ ದೇಹದ ಅಂಗಾಂಶಗಳು ಮತ್ತು ಕೀಲುಗಳನ್ನು ಹಾನಿಗೊಳಿಸಬಹುದು. "ನೀವು ನಿರಂತರವಾಗಿ ಉರಿಯೂತಕ್ಕೆ ಒಳಗಾದಾಗ ನಿಮ್ಮ ಚರ್ಮವು ವೇಗವಾಗಿ ವಯಸ್ಸಾಗುವುದನ್ನು ಸಹ ನೀವು ಗಮನಿಸಬಹುದು, ಏಕೆಂದರೆ ಉರಿಯೂತವು ಕ್ಯಾಲೊಜನ್ ಮತ್ತು ಎಲಾಸ್ಟಿನ್ ಅನ್ನು ಬ್ರೇಕ್ ಮಾಡಬಹುದು, ಇದು ನಿಮ್ಮ ಚರ್ಮವನ್ನು ಯೌವನ ಮತ್ತು ಮೃದುವಾಗಿ ಕಾಣುವಂತೆ ಮಾಡಲು ಕಾರಣವಾಗಿದೆ" ಎಂದು ರಿವೈವ್ ಬೇರಿಯಾಟ್ರಿಕ್ಸ್ ನ ಶಸ್ತ್ರಚಿಕಿತ್ಸಕ ಡಾ. ರೆನೆ ಅರ್ಮೆಂಟಾ ಹೇಳುತ್ತಾರೆ.

ನೇಚರ್ ಮೆಡಿಸಿನ್ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ದೀರ್ಘಕಾಲದ ಉರಿಯೂತದ ತಿಂಗಳುಗಳು ಮತ್ತು ವರ್ಷಗಳು ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ಟೈಪ್ 2 ಮಧುಮೇಹ, ಮೂತ್ರಪಿಂಡದ ಕಾಯಿಲೆ, ಆಟೋಇಮ್ಯೂನ್ ಅಸ್ವಸ್ಥತೆಗಳು ಮತ್ತು ಆಲ್ಕೋಹಾಲ್ ರಹಿತ ಕೊಬ್ಬಿನ ಯಕೃತ್ತಿನ ಕಾಯಿಲೆಗಳಂತಹ ಉರಿಯೂತದ ಕಾಯಿಲೆಗಳನ್ನು ಪ್ರಾರಂಭಿಸಬಹುದು. ಈ ಉರಿಯೂತದ ಕಾಯಿಲೆಗಳು ಮತ್ತು ಅಸ್ವಸ್ಥತೆಗಳು ವಯಸ್ಸಾಗುವಿಕೆಯೊಂದಿಗೆ ಸಂಬಂಧ ಹೊಂದಿವೆ.

ಇದನ್ನೂ ಓದಿ: Uric Acid: ರಕ್ತದಲ್ಲಿರುವ ಅಧಿಕ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಈ 5 ಪಾನೀಯಗಳನ್ನು ಸೇವಿಸಿ

ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಆಹಾರಗಳನ್ನು ತಿನ್ನುವುದು ವಯಸ್ಸಾಗುವಿಕೆಗೆ ಸಂಬಂಧಿಸಿದ ರೋಗಗಳನ್ನು ತಪ್ಪಿಸಲು ಸಹಾಯಕವಾಗಬಹುದು. ಇನ್ನೊಂದು, ಉರಿಯೂತವನ್ನು ಪ್ರಚೋದಿಸುವ ಮತ್ತು ವೃದ್ಧಾಪ್ಯವನ್ನು ವೇಗಗೊಳಿಸುವ ಆಹಾರ ಕ್ರಮದಿಂದ ದೂರವಿರಿ.

1)  ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನದಿರುವುದು
ದೀರ್ಘಕಾಲದ ಉರಿಯೂತದಿಂದ ನೀವು ತಪ್ಪಿಸಿಕೊಳ್ಳಲು ಇರುವ ಮಾರ್ಗಗಳಲ್ಲಿ ಇದು ಒಂದು ಎಂದು ಹೇಳಬಹುದು. "ಬೆರ್ರಿಗಳು ಮತ್ತು ಕಿತ್ತಳೆಯಂತಹ ಹಣ್ಣುಗಳು ಮತ್ತು ಪಾಲಕ್ ಮತ್ತು ಕೇಲ್ ನಂತಹ ಹಸಿರು ಎಲೆ ತರಕಾರಿಗಳು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ, ಇದು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ನಮಗೆ ಸಹಾಯ ಮಾಡುತ್ತದೆ, ಇದು ವಿಶೇಷವಾಗಿ ನೀವು ವಯಸ್ಸಾದಂತೆ ತುಂಬಾನೇ ಅತ್ಯಗತ್ಯವಾಗುತ್ತದೆ" ಎಂದು ವೈದ್ಯಕೀಯ ಪರಿಶೀಲನಾ ಮಂಡಳಿಯ ಸದಸ್ಯ ಆಮಿ ಗುಡ್ಸನ್ ಅವರು ಹೇಳುತ್ತಾರೆ.

2) ಫ್ರೆಂಚ್ ಫ್ರೈಸ್ ನಂತಹ ಆಹಾರಗಳನ್ನು ಹೆಚ್ಚಾಗಿ ತಿನ್ನುವುದು
ಆಹಾರವನ್ನು ಹುರಿಯಲು ಅಗತ್ಯವಿರುವ ಹೆಚ್ಚಿನ ತಾಪಮಾನವು ಅಡ್ವಾನ್ಸ್ಡ್ ಗ್ಲೈಕೇಶನ್ ಎಂಡ್ ಪ್ರಾಡಕ್ಟ್ಸ್ (ಎಜಿಇಗಳು) ಎಂದು ಕರೆಯಲ್ಪಡುವ ಹಾನಿಕಾರಕ ಸಂಯುಕ್ತಗಳನ್ನು ಸೃಷ್ಟಿಸುತ್ತದೆ, ಅದು ನಮ್ಮ ದೇಹವನ್ನು ವಯಸ್ಸಾದಂತೆ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

"ಬೇಯಿಸಿದ ಕೆಂಪು ಮಾಂಸ ಮತ್ತು ಬಿಳಿ ಬ್ರೆಡ್ ನಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟುಗಳಂತಹ ಆಹಾರಗಳು ಎಜಿಇಗಳನ್ನು ಹೊಂದಿರುತ್ತವೆ" ಎಂದು ಡಯಟಿಷಿಯನ್ ಜೋನಾ ಬರ್ಡಿಯೋಸ್ ಹೇಳುತ್ತಾರೆ. "ಈ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಕೋಶೀಯ ಹಾನಿ ಮತ್ತು ಉರಿಯೂತಕ್ಕೆ ಕಾರಣವಾಗಬಹುದು, ಇದು ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಸಹ ಹೆಚ್ಚಿಸುತ್ತದೆ.

ಚರ್ಮದಲ್ಲಿನ ಉರಿಯೂತದ ಪ್ರತಿಕ್ರಿಯೆಯು ಸುಕ್ಕುಗಳು, ಉಬ್ಬುವಿಕೆ ಮತ್ತು ಮೊಡವೆಗಳಂತಹ ದುರ್ಬಲವಾದ ಚರ್ಮದ ಸ್ಥಿತಿಸ್ಥಾಪಕತ್ವದ ಗೋಚರ ಚಿಹ್ನೆಗಳಲ್ಲಿ ಕಂಡು ಬರುತ್ತದೆ.

3) ಸಂಸ್ಕರಿಸಿದ ಜಂಕ್ ಫುಡ್ ಗಳನ್ನು ಅತಿಯಾಗಿ ತಿನ್ನುವುದು
ಕೋಲ್ಡ್ ಕಟ್ಸ್, ಬೇಕನ್, ಹಾಟ್ ಡಾಗ್ ಗಳಂತಹ ಸಂಸ್ಕರಿಸಿದ ಮಾಂಸಗಳು ಮತ್ತು ಕ್ಯಾಂಡಿ ಬಾರ್ ಗಳು, ಕುಕೀಗಳು, ಸಕ್ಕರೆಯುಕ್ತ ಪಾನೀಯಗಳು, ಆಲೂಗೆಡ್ಡೆ ಚಿಪ್ಸ್, ಐಸ್‌ಕ್ರೀಮ್ ಮತ್ತು ಫಾಸ್ಟ್‌ಫುಡ್ ಗಳಂತಹ ಜಂಕ್ ಫುಡ್ ಗಳು ತಿನ್ನಲು ಆರೋಗ್ಯಕರ ವಸ್ತುಗಳಲ್ಲ. ವೆಸ್ಟರ್ನ್ ಡಯಟ್ ಎಂದು ಕರೆಯಲ್ಪಡುವ ಈ ಅಲ್ಟ್ರಾ ಸಂಸ್ಕರಿಸಿದ ಆಹಾರಗಳು, ಕರುಳು ಅಥವಾ ಸೂಕ್ಷ್ಮಜೀವಿಗಳಲ್ಲಿನ ಆರೋಗ್ಯಕರ ಮತ್ತು ಅನಾರೋಗ್ಯಕರ ಸೂಕ್ಷ್ಮಜೀವಿಗಳ ಸೂಕ್ಷ್ಮ ಸಮತೋಲನವನ್ನು ಭಂಗಗೊಳಿಸಬಹುದು ಎಂದು ಸಂಶೋಧನೆ ಸೂಚಿಸುತ್ತದೆ.

ಇದನ್ನೂ ಓದಿ: Intelligent: ಇದೇ ಕಾರಣಕ್ಕೆ ಬುದ್ಧಿವಂತರು ಸಂತೋಷವಾಗಿ ಇರುವುದೇ ಇಲ್ಲ!

"ಸಂಸ್ಕರಿಸಿದ ಆಹಾರಗಳು ನಮ್ಮ ಕರುಳಿನಲ್ಲಿ ವಾಸಿಸುವ ಬ್ಯಾಕ್ಟೀರಿಯಾವನ್ನು ಬದಲಾಯಿಸಿದಾಗ, ಇದು ಬದಲಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ಇದು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ" ಎಂದು ದಿ ಏಜ್ ಡೆಫಿಯಿಂಗ್ ಡಯಟೀಷಿಯನ್ ನ ಕ್ಯಾಥರಿನ್ ಪೈಪರ್ ಅವರು ಹೇಳುತ್ತಾರೆ. "ಮಧುಮೇಹ, ಹೃದ್ರೋಗ ಮತ್ತು ಬುದ್ಧಿಮಾಂದ್ಯತೆಯು ದೀರ್ಘಕಾಲದ ಉರಿಯೂತಕ್ಕೆ ಸಂಬಂಧಿಸಿದೆ" ಎಂದು ಹೇಳುತ್ತಾರೆ.

4) ಸಾಕಷ್ಟು ನಾರಿನಂಶವಿರುವ ಆಹಾರವನ್ನು ತಿನ್ನದಿರುವುದು
ಅನಾರೋಗ್ಯಕರ ಮೈಕ್ರೋಬಯೋಮ್ ಗೆ ಪರಿಹಾರವೆಂದರೆ ಅಲ್ಟ್ರಾ ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಮತ್ತು ಹೆಚ್ಚು ನಾರಿನಾಂಶವಿರುವ ಆಹಾರಗಳನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳುವುದು. ಇಡೀ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಬೀಜಗಳು, ಬೀನ್ಸ್, ಬೇಳೆಕಾಳುಗಳು ಮತ್ತು ದ್ವಿದಳ ಧಾನ್ಯಗಳಂತಹ ಆಹಾರಗಳನ್ನು ದಿನಕ್ಕೆ 25 ರಿಂದ 38 ಗ್ರಾಂ ಸೇವಿಸಬೇಕು.

"ಕೆಲವೇ ಕೆಲವು ಜನರು ಸಾಕಷ್ಟು ನಾರಿನಂಶವಿರುವ ಆಹಾರಗಳನ್ನು ಸೇವಿಸುತ್ತಾರೆ, ಆದರೆ ನೀವು ಧನಾತ್ಮಕ ಕರುಳಿನ ಆರೋಗ್ಯ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ನೊಂದಿಗೆ ವಯಸ್ಸಾಗದೆ ಕಾಣಲು ಬಯಸಿದರೆ, ಫೈಬರ್ ಅಂಶವು ತುಂಬಾನೇ ಪ್ರಮುಖವಾಗಿದೆ" ಎಂದು ಗುಡ್ಸನ್ ಅವರು ಹೇಳುತ್ತಾರೆ. "ದಿನವಿಡೀ ಪ್ರತಿ ಊಟ ಮತ್ತು ಉಪಾಹಾರದಲ್ಲಿ 4 ರಿಂದ 6 ಗ್ರಾಂ ನಷ್ಟು ನಾರಿನಂಶವನ್ನು ಪಡೆಯುವ ಗುರಿಯನ್ನು ನಿಮ್ಮದಾಗಿಸಿಕೊಳ್ಳಿ" ಎಂದು ಇವರು ಹೇಳುತ್ತಾರೆ.

5) ಹೆಚ್ಚಾಗಿ ಆಲ್ಕೋಹಾಲ್ ಕುಡಿಯುವುದು
ಆಲ್ಕೊಹಾಲ್ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಉರಿಯೂತ ಹೆಚ್ಚಾಗಬಹುದು ಮತ್ತು ಅತಿಯಾದ ಆಲ್ಕೋಹಾಲ್ ಸೇವನೆಯು ಖಂಡಿತವಾಗಿಯೂ ಇತರ ಆರೋಗ್ಯ ಅಪಾಯಗಳ ನಡುವೆ ದೀರ್ಘಕಾಲದ ಉರಿಯೂತದ ಅಪಾಯವನ್ನು ಸಹ ಹೆಚ್ಚಿಸುತ್ತದೆ ಎಂದು ಪೈಪರ್ ಹೇಳುತ್ತಾರೆ.

"ನೀವು ಆಲ್ಕೋಹಾಲ್ ಕುಡಿಯುವವರಾಗಿದ್ದರೆ, ನೀವು ಮಹಿಳೆಯರಾಗಿದ್ದಲ್ಲಿ ದಿನಕ್ಕೆ 1 ಕ್ಕಿಂತ ಕಡಿಮೆ ಆಲ್ಕೊಹಾಲ್ ಯುಕ್ತ ಪಾನೀಯಗಳಿಗೆ ಮತ್ತು ಪುರುಷರಾದಲ್ಲಿ ದಿನಕ್ಕೆ 2 ಕ್ಕಿಂತ ಕಡಿಮೆ ಪಾನೀಯಗಳಿಗೆ ಸೀಮಿತಗೊಳಿಸಿಕೊಳ್ಳಿರಿ" ಎಂದು ಅವರು ಹೇಳುತ್ತಾರೆ.

6) ಗ್ಲುಟೆನ್ ಅಂಶ ಹೊಂದಿರುವ ಸಾಕಷ್ಟು ಆಹಾರಗಳನ್ನು ತಿನ್ನುವುದು
ಗ್ಲುಟೆನ್ ಎಂಬುದು ಗೋಧಿ ಮತ್ತು ಇತರ ಧಾನ್ಯಗಳಲ್ಲಿ ಕಂಡು ಬರುವ ಪ್ರೋಟೀನ್ ಆಗಿದೆ, ಅಂದರೆ ಇದು ಬ್ರೆಡ್, ಪಿಜ್ಜಾ ಕ್ರಸ್ಟ್, ಪಾಸ್ತಾ, ಬೇಯಿಸಿದ ಸರಕುಗಳು ಮತ್ತು ಧಾನ್ಯಗಳಲ್ಲಿ ಕಂಡು ಬರುತ್ತದೆ. ಅನೇಕ ಜನರು ಸಮಸ್ಯೆಯಿಲ್ಲದೆ ಗ್ಲುಟೆನ್ ಅನ್ನು ಜೀರ್ಣಿಸಿಕೊಂಡರೂ, ಗ್ಲುಟೆನ್ (ನಾನ್ಸೆಲಿಯಾಕ್ ಗ್ಲುಟೆನ್ ಸೆನ್ಸಿಟಿವಿಟಿ ಎಂದು ಕರೆಯಲ್ಪಡುವ ಸ್ಥಿತಿ) ಗೆ ಸಂವೇದನಾಶೀಲರಾಗಿರುವ ಜನರು ವಿಭಿನ್ನ ರೀತಿಯ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಅನುಭವಿಸುತ್ತಾರೆ. ಅದು ಉರಿಯೂತದ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು 2020 ರ ಅಧ್ಯಯನಗಳು ಹೇಳುತ್ತವೆ.

ಇದನ್ನೂ ಓದಿ:  Heart Attack At Gym: ಜಿಮ್​ನಲ್ಲೇ ಹೆಚ್ಚು ಹೃದಯಾಘಾತ ಆಗೋದೇಕೆ? ತಡೆಯುವುದು ಹೇಗೆ?

"ಯಾರಾದರೂ ಕರುಳಿನ ಸಮಸ್ಯೆಗಳನ್ನು ಅನುಭವಿಸಿದರೆ, ಆಟೋ ಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದರೆ, ಅಥವಾ ಆಟೋ ಇಮ್ಯೂನ್ ಕಾಯಿಲೆ ಅಥವಾ ಮತ್ತೊಂದು ಗಂಭೀರ ರೋಗನಿರ್ಣಯದ ಹಾದಿಯಲ್ಲಿ ಅವರನ್ನು ಕರೆದೊಯ್ಯುವ ವಿವರಿಸಲಾಗದ ದೀರ್ಘಕಾಲದ ರೋಗಲಕ್ಷಣಗಳನ್ನು ಹೊಂದಿದ್ದರೆ, ಆಗ ಅವರು ಗ್ಲುಟೆನ್ ಮುಕ್ತವಾಗಿರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು" ಎಂದು ಪ್ರಮಾಣೀಕರಿಸಿದ ಸಮಗ್ರ ಪೋಷಕಾಂಶ ತರಬೇತುದಾರ ಮತ್ತು ‘ಡಿಯರ್ ಗ್ಲುಟೆನ್, ಇಟ್ಸ್ ನಾಟ್ ಮಿ, ಇಟ್ಸ್ ಯೂ’ ಪುಸ್ತಕದ ಲೇಖಕಿ ಜೆನ್ನಿ ಲೆವಿನ್ ಫಿಂಕೆ ಅವರು ಹೇಳುತ್ತಾರೆ.

ನ್ಯೂಟ್ರಿಷನ್ ರಿವ್ಯೂಸ್ ನಲ್ಲಿ ಪ್ರಕಟವಾದ 2022 ರ ಅಧ್ಯಯನದಲ್ಲಿ, ಸಂಶೋಧಕರು ಗ್ಲುಟೆನ್ ಮುಕ್ತವಾಗಿರುವ ಆಹಾರವು 64.7 ಪ್ರತಿಶತದಷ್ಟು ಆಟೋ ಇಮ್ಯೂನ್ ಸಂಬಂಧಿತ ರೋಗಲಕ್ಷಣಗಳನ್ನು ಸುಧಾರಿಸಬಹುದು ಎಂದು ಕಂಡು ಹಿಡಿದಿದ್ದಾರೆ. ಗ್ಲುಟೆನ್ ಅಂಶವು ನಿಮ್ಮ ಆರೋಗ್ಯವನ್ನು ಎಷ್ಟರ ಮಟ್ಟಿಗೆ ಅವರಿಸಿಕೊಂಡಿದೆ ಎನ್ನುವುದನ್ನು ತಿಳಿದುಕೊಳ್ಳಲು ನಿಮ್ಮ ವೈದ್ಯರನ್ನು ಅಥವಾ ಡಯಟೀಷಿಯನ್ ಅನ್ನು ಭೇಟಿ ಮಾಡುವುದು ಒಳ್ಳೆಯದು.
Published by:Ashwini Prabhu
First published: