• Home
  • »
  • News
  • »
  • lifestyle
  • »
  • Health Care: ನಿಮಗೆ ಗೊತ್ತಾ? ದೇಹದಲ್ಲಿರುವ ಈ ಬ್ಯಾಕ್ಟೀರಿಯಾಗಳು ನಮ್ಮ ಸಾವಿಗೇ ಕಾರಣವಾಗುತ್ತಂತೆ!

Health Care: ನಿಮಗೆ ಗೊತ್ತಾ? ದೇಹದಲ್ಲಿರುವ ಈ ಬ್ಯಾಕ್ಟೀರಿಯಾಗಳು ನಮ್ಮ ಸಾವಿಗೇ ಕಾರಣವಾಗುತ್ತಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜ್ಞಾನ ಜರ್ನಲ್ ದಿ ಲ್ಯಾನ್ಸೆಟ್‌ನ ಅಧ್ಯಯನ ಹೇಳಿರುವ ಪ್ರಕಾರ ಭಾರತದಲ್ಲಿ 2019ರಲ್ಲಿ ಆದ ಸಾವುಗಳಿಗೆ 5 ಬ್ಯಾಕ್ಟೀರಿಯಾಗಳು ಪ್ರಮುಖ ಕಾರಣವಾಗಿದ್ದವು. ಈ ಬ್ಯಾಕ್ಟೀರಿಯಾ ಸೋಂಕುಗಳಿಗೆ ಔಷಧಿಗಳು ಯಾವುದೇ ಕೆಲಸ ಮಾಡದೇ ಹೋದವು. ಮತ್ತು ಸೋಂಕಿನ ನಂತರ ಸಾವಿನ ಅಪಾಯ ಹೆಚ್ಚುತ್ತದೆ ಎಂದು ಅಧ್ಯಯನ ತಿಳಿಸಿದೆ.

ಮುಂದೆ ಓದಿ ...
  • Share this:

    ದೇಹದಲ್ಲಿ (Body) ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳು (Good And Bad Bacteria) ಇವೆ. ಉತ್ತಮ ಬ್ಯಾಕ್ಟೀರಿಯಾಗಳು ದೇಹಕ್ಕೆ ಹಲವು ಪ್ರಯೋಜನ (Benefits) ನೀಡುತ್ತವೆ. ಅದೇ ಕೆಟ್ಟ ಬ್ಯಾಕ್ಟೀರಿಯಾಗಳು ಸಾಕಷ್ಟು ತೊಂದರೆ (Problem) ಉಂಟು ಮಾಡುತ್ತವೆ. ಅಂದ ಹಾಗೇ ಬ್ಯಾಕ್ಟೀರಿಯಾಗಳು ಸೂಕ್ಷ್ಮ ಜೀವಿಗಳು ಅವುಗಳನ್ನು ಬರೀ ಕಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ಅಧ್ಯಯನದ ಪ್ರಕಾರ, ಕೆಟ್ಟ ಬ್ಯಾಕ್ಟೀರಿಯಾಗಳು ಸಾವುಗಳಿಗೆ ಕಾರಣವಾಗಿದೆ ಎಂದು ಹೇಳಿದೆ. ಬ್ಯಾಕ್ಟೀರಿಯಾಗಳು ತುಂಬಾ ಚಿಕ್ಕದಾಗಿರುತ್ತವೆ. ಅವುಗಳನ್ನು ನೀವು ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಲು ಸಾಧ್ಯ. 2019 ರಲ್ಲಿ ಭಾರತದಲ್ಲಿ ಬ್ಯಾಕ್ಟೀರಿಯಾಗಳು ಸುಮಾರು 6.8 ಲಕ್ಷ ಜನರ ಸಾವಿಗೆ ಕಾರಣವಾಗಿದೆ ಎಂದು ಅಧ್ಯಯನವೊಂದು ಹೇಳಿದೆ.


    2019ರಲ್ಲಿ ಬ್ಯಾಕ್ಟೀರಿಯಾಗಳಿಂದ ಸುಮಾರು 6.8 ಲಕ್ಷ ಜನರ ಸಾವು


    ವಿಜ್ಞಾನ ಜರ್ನಲ್ ದಿ ಲ್ಯಾನ್ಸೆಟ್‌ನ ಅಧ್ಯಯನ ಹೇಳಿರುವ ಪ್ರಕಾರ, ಭಾರತದಲ್ಲಿ 2019ರಲ್ಲಿ ಆದ ಸಾವುಗಳಿಗೆ 5 ಬ್ಯಾಕ್ಟೀರಿಯಾಗಳು ಪ್ರಮುಖ ಕಾರಣವಾಗಿದ್ದವು. ಈ ಬ್ಯಾಕ್ಟೀರಿಯಾ ಸೋಂಕುಗಳಿಗೆ ಔಷಧಿಗಳು ಯಾವುದೇ ಕೆಲಸ ಮಾಡದೇ ಹೋದವು. ಮತ್ತು ಸೋಂಕಿನ ನಂತರ ಸಾವಿನ ಅಪಾಯ ಹೆಚ್ಚುತ್ತದೆ ಎಂದು ಅಧ್ಯಯನ ತಿಳಿಸಿದೆ.


    ಬ್ಯಾಕ್ಟೀರಿಯಾ ಸೋಂಕು ತಡೆಯುವ ಔಷಧಿ ನಿಷ್ಪರಿಣಾಮಕಾರಿ ಆಗಿದ್ದೇಕೆ?


    ಕಾಲಾನಂತರದಲ್ಲಿ ಬ್ಯಾಕ್ಟೀರಿಯಾಗಳು ತಮ್ಮ ರೂಪ ಬದಲಾಯಿಸಿವೆ. ಇವುಗಳಲ್ಲಿ ಅನೇಕ ರೀತಿಯ ರೂಪಾಂತರಗಳು ಉಂಟಾಗಿವೆ. ಹೀಗೆ ಉಂಟಾದ ರೂಪಾಂತರದ ನಂತರ ಈ ಬ್ಯಾಕ್ಟೀರಿಯಾಗಳ ಸೋಂಕು ತಡೆಗೆ ನೀಡಲು ಈಗಾಗಲೇ ಅಸ್ತಿತ್ವದಲ್ಲಿದ್ದ ಔಷಧಿಗಳು ತಮ್ಮ ಪರಿಣಾಮ ಕಳೆದುಕೊಂಡವು. ಇದು ಔಷಧಿ ಯಾವುದೇ ಕೆಲಸ ಮಾಡದೇ ಇರಲು ಕಾರಣವಾಯ್ತು. ಹಾಗೂ ಯಾವುದೇ ಚಿಕಿತ್ಸೆಯು ಸಾಧ್ಯವಿಲ್ಲ.




    ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಾ


    ಸಿಡಿಸಿ ಪ್ರಕಾರ, ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಾವನ್ನು ಇ.ಕೋಲಿ ಎಂದೂ ಕರೆಯುತ್ತಾರೆ. ಈ ಬ್ಯಾಕ್ಟೀರಿಯಾ ಪರಿಸರ, ಆಹಾರ ಮತ್ತು ಮಾನವರು ಮತ್ತು ಪ್ರಾಣಿಗಳ ಕರುಳಿನಲ್ಲಿ ಕಂಡು ಬರುತ್ತದೆ. ಅಧ್ಯಯನದ ಪ್ರಕಾರ ಭಾರತದಲ್ಲಿ ಹೆಚ್ಚಿನ ಸಾವುಗಳು ಎಸ್ಚೆರಿಯಾ ಕೋಲಿ ಬ್ಯಾಕ್ಟೀರಿಯಾ ಸೋಂಕಿನಿಂದ ಸಂಭವಿಸಿದೆ. ಅತಿಸಾರ, ಮೂತ್ರದ ಸೋಂಕು ಮತ್ತು ಶ್ವಾಸಕೋಶದ ಕಾಯಿಲೆಗೆ ಇದು ಕಾರಣವಾಗಿದೆ.


    ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾ


    ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾವನ್ನು ಎಸ್. ಔರೆಸ್ ಎಂದು ಕರೆಯುತ್ತಾರೆ. ಈ ಬ್ಯಾಕ್ಟೀರಿಯಾವು ಮಾನವನ ಮೂಗು ಮತ್ತು ಚರ್ಮದ ಮೇಲೆ ಇರುತ್ತದೆ. ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾ ಅಪಾಯಕಾರಿ ಅಲ್ಲ. ಆದರೆ ಇದು ತೀವ್ರಗೊಂಡರೆ ಇದು ಸೆಪ್ಸಿಸ್ನಂತಹ ಮಾರಣಾಂತಿಕ ಸ್ಥಿತಿಗೆ ಕಾರಣ ಆಗುತ್ತದೆ.


    ಅಸಿನೆಟೊಬ್ಯಾಕ್ಟರ್ ಬೌಮನ್ನಿ ಬ್ಯಾಕ್ಟೀರಿಯಾ


    ಅಸಿನೆಟೊಬ್ಯಾಕ್ಟರ್ ಬೌಮನ್ನಿ ಬ್ಯಾಕ್ಟೀರಿಯಾವನ್ನು ಎ ಬೌಮನ್ನಿ ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾವು ಅನೇಕ ಬ್ಯಾಕ್ಟೀರಿಯಾಗಳ ಗುಂಪು ಆಗಿದೆ. ಪರಿಸರದಲ್ಲಿ ಮಣ್ಣು, ನೀರು ಇತ್ಯಾದಿಗಳಲ್ಲಿ ಇರುತ್ತದೆ. ಈ ಬ್ಯಾಕ್ಟೀರಿಯಾವು ರಕ್ತ, ಮೂತ್ರ ವ್ಯವಸ್ಥೆ, ಶ್ವಾಸಕೋಶ ಮತ್ತು ಗಾಯ ಸೋಂಕಿಗೆ ಕಾರಣ ಆಗುತ್ತದೆ.


    ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಬ್ಯಾಕ್ಟೀರಿಯಾ


    ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಈ ಬ್ಯಾಕ್ಟೀರಿಯಾವು ಉಸಿರಾಟ ವ್ಯವಸ್ಥೆಯ ಮೇಲಿನ ಪದರದ ಮೇಲೆ ಇರುತ್ತೆ. ಈ ವೈರಸ್‌ನಿಂದ ಉಂಟಾಗುವ ಸೋಂಕನ್ನು ನ್ಯುಮೋಕೊಕಲ್ ಸೋಂಕು ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಮಕ್ಕಳನ್ನು ಹೆಚ್ಚು ಬಲಿಪಶುವನ್ನಾಗಿ ಮಾಡುತ್ತದೆ.


    ಇದನ್ನೂ ಓದಿ: ಗ್ಯಾಸ್ ಪ್ರಾಬ್ಲೆಮ್ ಅಂತ ಸಿಹಿ ಗೆಣಸು ತಿನ್ನಲ್ವಾ? ಇಲ್ಲಿ ಕೇಳಿ, ಇದು ಶ್ವಾಸಕೋಶಕ್ಕೆ ಒಳ್ಳೆಯದಂತೆ!


    ಕ್ಲೆಬ್ಸಿಯೆಲ್ಲಾ ನ್ಯುಮೋನಿಯಾ ಬ್ಯಾಕ್ಟೀರಿಯಾ


    ಕ್ಲೆಬ್ಸಿಯೆಲ್ಲಾ ನ್ಯುಮೋನಿಯಾ ಬ್ಯಾಕ್ಟೀರಿಯಾವನ್ನು ಕೆ. ನ್ಯುಮೋನಿಯಾ ಎಂದು ಕರೆಯುತ್ತಾರೆ. ಈ ಬ್ಯಾಕ್ಟೀರಿಯಾ ಆರೋಗ್ಯವಂತ ಜನರ ಕರುಳು ಮತ್ತು ಮಲದಲ್ಲಿ ಇರುತ್ತೆ. ಈ ಬ್ಯಾಕ್ಟೀರಿಯಾ ನ್ಯುಮೋನಿಯಾ, ರಕ್ತದ ಸೋಂಕು, ಗಾಯದ ಸೋಂಕಿಗೆ ಕಾರಣವಾಗುತ್ತದೆ.

    Published by:renukadariyannavar
    First published: