Weight Loss: ಗಿಡಮೂಲಿಕೆಗಳಿಂದ ಶೀಘ್ರ ತೂಕ ಇಳಿಕೆ, ಇದು ಹೇಗೆ ಕೆಲಸ ಮಾಡುತ್ತೆ?

ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವುದರಲ್ಲಿ ಮತ್ತು ಅದರ ನಿರ್ವಹಣೆಯಲ್ಲಿ ಆಯುರ್ವೇದವು ವಿಶೇಷವಾದ ಪಾತ್ರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಮತ್ತು ಅದರ ನಿರ್ವಹಣೆಗಾಗಿ ಆಯುರ್ವೇದವು ವಿವಿಧ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಉಲ್ಲೇಖಿಸುತ್ತದೆ. ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ 5 ಆಯುರ್ವೇದ ಗಿಡಮೂಲಿಕೆಗಳು ಸಹಾಯ ಮಾಡುತ್ತವೆ ಎಂದು ಹೇಳಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವರು ತಮ್ಮ ದೇಹದಲ್ಲಿರುವ (Body) ಅತಿಯಾದ ತೂಕವನ್ನು ಕಡಿಮೆ  ಮಾಡಿಕೊಳ್ಳಲು (Weight Loss) ಅನೇಕ ಕಸರತ್ತುಗಳನ್ನು ಮಾಡುವುದನ್ನು ನಾವು ನೋಡುತ್ತೇವೆ. ಕೆಲವರು ತಮ್ಮ ಊಟದ ಪದ್ದತಿ (Lunchtime) ಮತ್ತು ಕ್ರಮವನ್ನು ಬದಲಾಯಿಸಿಕೊಂಡರೆ, ಇನ್ನೂ ಕೆಲವರು ಊಟದ ಮೇಲೆ ಸ್ವಲ್ಪ ನಿಯಂತ್ರಣವನ್ನು ಇರಿಸಿಕೊಂಡು ಜಿಮ್ ಗೆ (Gym) ಹೋಗಿ ವ್ಯಾಯಾಮ (Exercise) ಮತ್ತು ಮನೆಯಲ್ಲಿ ಯೋಗ (Yoga) ಸಹ ಮಾಡುವುದನ್ನು ನಾವು ನೋಡುತ್ತೇವೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆಯು ತುಂಬಾನೇ ನಿಧಾನಗತಿಯ ಮತ್ತು ಸ್ಥಿರವಾದ ಪ್ರಕ್ರಿಯೆಯಾಗಿದೆ. ರಾತ್ರೋ ರಾತ್ರಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಅಸಾಧ್ಯ.

ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವುದರಲ್ಲಿ ಮತ್ತು ಅದರ ನಿರ್ವಹಣೆಯಲ್ಲಿ ಆಯುರ್ವೇದವು ವಿಶೇಷವಾದ ಪಾತ್ರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಮತ್ತು ಅದರ ನಿರ್ವಹಣೆಗಾಗಿ ಆಯುರ್ವೇದವು ವಿವಿಧ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಉಲ್ಲೇಖಿಸುತ್ತದೆ.

ನಿಮ್ಮ ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ 5 ಆಯುರ್ವೇದ ಗಿಡಮೂಲಿಕೆಗಳು ಸಹಾಯ ಮಾಡುತ್ತವೆ ಎಂದು ಹೇಳಬಹುದು.

1. ಅರಿಶಿನ
ಒಂದು ಚಿಟಿಕೆ ಅರಿಶಿನವಿಲ್ಲದೆ ಯಾವುದೇ ಭಾರತೀಯ ಭಕ್ಷ್ಯವು ಪೂರ್ಣಗೊಳ್ಳುವುದಿಲ್ಲ. ಈ ಹಳದಿ ಮಸಾಲೆ ಭಾರತೀಯ ಮನೆಗಳಲ್ಲಿ ಔಷಧೀಯ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಅರಿಶಿನವು ತೂಕ ನಿರ್ವಹಣಾ ಗುಣಲಕ್ಷಣಗಳನ್ನು ಹೊಂದಿದೆ. ಅರಿಶಿನವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದು ತೂಕ ಕಳೆದುಕೊಳ್ಳಲು ಬಯಸುವವರಿಗೆ ಉತ್ತಮ ಸಂಕೇತವಾಗಿದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ, ಇದು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.



ಅರಿಶಿನ ಮತ್ತು ಕರಿಮೆಣಸಿನೊಂದಿಗೆ ಬೆಚ್ಚಗಿನ ನೀರನ್ನು ನೀವು ಸೇವಿಸಬಹುದು. ನೀವು ಇದನ್ನು ಒಂದು ಲೋಟ ಹಾಲಿಗೆ ಸೇರಿಸಬಹುದು ಮತ್ತು ಮಲಗುವ ಮೊದಲು ಇದನ್ನು ಸೇವಿಸಬಹುದು.

2. ಜೀರಿಗೆ
ತೂಕ ಇಳಿಸಿಕೊಳ್ಳಲು ಜೀರಿಗೆ ನೀರನ್ನು ಬಳಸುವುದು ಎಲ್ಲರಿಗೂ ತಿಳಿದೇ ಇರುತ್ತದೆ. ಜೀರಿಗೆಯನ್ನು ಭಾರತೀಯ ಬಹುತೇಕ ಭಕ್ಷ್ಯಗಳಲ್ಲಿ ಒಗ್ಗರಣೆ ಹಾಕಲು ವ್ಯಾಪಕವಾಗಿ ಬಳಸಲಾಗುತ್ತದೆ. ಜೀರಿಗೆ ಚಯಾಪಚಯವನ್ನು ಪ್ರಚೋದಿಸುವ ಅಂಶಗಳನ್ನು ಹೊಂದಿದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೀರಿಗೆಯು ಹೊಟ್ಟೆ ಉಬ್ಬರ ಮತ್ತು ಕರುಳಿನಲ್ಲಿ ಅನಿಲ ರಚನೆಯನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Weight Loss: ತೂಕ ಇಳಿಸಲು ಬಯಸುವವರು ಮೊದಲು ಈ ವಿಚಾರಗಳನ್ನು ತಿಳಿದುಕೊಳ್ಳಿ



ಜೀರಿಗೆಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಮೊದಲ ಬಾರಿಗೆ ಸೇವಿಸುವುದರಿಂದ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

3. ಕರಿಮೆಣಸು
ಭಾರತದಲ್ಲಿ ಅತ್ಯಂತ ಸ್ಥಳೀಯವಾಗಿರುವ ಅನೇಕ ಮಸಾಲೆಗಳಲ್ಲಿ ಕರಿಮೆಣಸು ಸಹ ಒಂದಾಗಿದೆ. ಕರಿಮೆಣಸು ಭಾರತದ ಮಲಬಾರ್ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ ಮತ್ತು ಇದು ಪ್ರಾಚೀನ ಸಾಂಬಾರ ಪದಾರ್ಥಗಳಲ್ಲಿ ಒಂದಾಗಿದೆ.



ಮೆಣಸಿನಕಾಯಿಯನ್ನು ಹೋಲುವ ಅದರ ವಿಶಿಷ್ಟ ರುಚಿಯಿಂದಾಗಿ, ಕರಿಮೆಣಸನ್ನು ಯಾವಾಗಲೂ ಕೊಬ್ಬನ್ನು ಸುಡುವ ಮಸಾಲೆಯಾಗಿ ನೋಡಲಾಗುತ್ತದೆ.

ಸಂಶೋಧನಾ ಅಧ್ಯಯನದ ಪ್ರಕಾರ, ಕರಿಮೆಣಸಿನಲ್ಲಿ ಕಂಡು ಬರುವ ಪೈಪರೀನ್ ಅಂಶವು ಹೊಸ ಕೊಬ್ಬಿನ ಕೋಶಗಳನ್ನು ರೂಪಿಸಲು ಕಾರಣವಾಗುವ ಜೀಣುಗಳ ಚಟುವಟಿಕೆಗೆ ಅಡ್ಡಿಪಡಿಸುತ್ತದೆ. ಇದು ದೇಹದಲ್ಲಿ ಕೊಬ್ಬಿನ ರಚನೆಯನ್ನು ನಿಯಂತ್ರಿಸುವ ಸರಪಳಿ ಪ್ರತಿಕ್ರಿಯೆಯನ್ನು ಹೊಂದಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ.

4. ದಾಲ್ಚಿನ್ನಿ
ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ದೇಹವನ್ನು ಪೂರ್ಣವಾಗಿರಿಸುತ್ತದೆ. ಇದು ಕಡುಬಯಕೆಗಳು ಮತ್ತು ಹಸಿವಿನ ಯಾತನೆಗಳನ್ನು ನಿಗ್ರಹಿಸುತ್ತದೆ ಮತ್ತು ಒಂದು ರೀತಿಯಲ್ಲಿ ನಿಮ್ಮನ್ನು ಅನಗತ್ಯವಾಗಿ ಸೇವಿಸುವ ಜಂಕ್ ಫುಡ್ ಗಳಿಂದ ನಿಮ್ಮನ್ನು ದೂರವಿಡುತ್ತದೆ.



ನೀವು ದಾಲ್ಚಿನ್ನಿಯನ್ನು ಸೇವಿಸಲು ವಿವಿಧ ಮಾರ್ಗಗಳಿವೆ. ನೀವು ಅದನ್ನು ನಿಮ್ಮ ಚಹಾಕ್ಕೆ ಸೇರಿಸಬಹುದು, ಅಥವಾ ನಿಮ್ಮ ಪ್ಯಾನ್ ಕೇಕ್ ನೊಂದಿಗೆ ಸೇವಿಸಬಹುದು. ನೀವು ದಾಲ್ಚಿನ್ನಿಯ ಒಂದು ಸಣ್ಣ ತುಂಡನ್ನು ಸಹ ಅಗಿಯಬಹುದು, ಇದು ರುಚಿಯಲ್ಲಿ ಸಿಹಿಯಾಗಿರುತ್ತದೆ.

5. ಶುಂಠಿ
ಅನೇಕ ಜನರಿಗೆ ದಿನವು ಬಿಸಿಯಾದ ಹಬೆಯಾಡುವ ಕಪ್ ಶುಂಠಿ ಚಹಾದೊಂದಿಗೆ ಪ್ರಾರಂಭವಾಗುತ್ತದೆ. ಶುಂಠಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಹಸಿವನ್ನು ನಿಗ್ರಹಿಸುತ್ತದೆ. ಶುಂಠಿಯು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತದೆ ಮತ್ತು ಉರಿಯೂತ ಶಮನಕಾರಿ ಪರಿಣಾಮಗಳನ್ನು ಹೊಂದಿದೆ.

ಇದನ್ನೂ ಓದಿ:  Weight Loss: ಹೊಟ್ಟೆ ಬೊಜ್ಜು ಕರಗಿಸಲು ಪ್ರತಿನಿತ್ಯ ಈ ಪಾನೀಯ ಕುಡಿಯಿರಿ



ಶುಂಠಿಯ ನಿಯಮಿತ ಸೇವನೆಯು ಹಸಿವಿನ ಭಾವನೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಥರ್ಮೋಜೆನೆಸಿಸ್ ಅನ್ನು ಹೆಚ್ಚಿಸುತ್ತದೆ ಅಥವಾ ಕ್ಯಾಲೋರಿ ದಹಿಸುವುದರಿಂದ ಶಾಖ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ವಿವಿಧ ಅಧ್ಯಯನಗಳು ದೃಢಪಡಿಸಿವೆ.
Published by:Ashwini Prabhu
First published: