Women Health: ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಿಸುವ ಅದ್ಭುತ ಗಿಡಮೂಲಿಕೆಗಳಿವು, ಒಮ್ಮೆ ಬಳಸಿ ನೋಡಿ

ಮದುವೆ ಹಾಗೂ ಮಕ್ಕಳಾದ ನಂತರ ಉಂಟಾಗುವ ಹಾರ್ಮೋನುಗಳ ಬದಲಾವಣೆ ಅವಧಿಯ ಏರುಪೇರು ಮತ್ತು ಗರ್ಭಧಾರಣೆ ಹೀಗೆ ಹಲವು ಬದಲಾವಣೆಗಳು ಮಹಿಳೆಯರ ಆರೋಗ್ಯವನ್ನು ಕುಗ್ಗಿಸುತ್ತವೆ. ಅವರು ಪ್ರತಿದಿನ ಕೆಲವು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಡೀ ಕುಟುಂಬದ ಜವಾಬ್ದಾರಿ (Family Responsibilities) ಹೊರುವ ಮಹಿಳೆ (Women) ತನ್ನ ಆರೋಗ್ಯದತ್ತ (Health) ಗಮನ ಹರಿಸುವುದು ತುಂಬಾ ಕಡಿಮೆ. ಇಡೀ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ (Care) ವಹಿಸುವ ಆಕೆ, ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಮರೆತೇ ಬಿಡುತ್ತಾಳೆ. ಎಷ್ಟೇ ನೋವಿದ್ದರೂ ಮನಸೊಳಗೆ ಇಟ್ಟುಕೊಳ್ಳುತ್ತಾಳೆ. ಆದರೆ ಎಲ್ಲರ ಆರೋಗ್ಯದ ಕಾಳಜಿ ವಹಿಸುವ ಮಹಿಳೆ ತನ್ನ ಆರೋಗ್ಯದತ್ತ ಕಾಳಜಿ ವಹಿಸುವುದು ಮುಖ್ಯ ಆಗಿದೆ. ಅದಾಗ್ಯೂ ನಾವು ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಪುರುಷರಿಗಿಂತ ಮಹಿಳೆಯರು ರೋಗಗಳಿಗೆ ಹೆಚ್ಚು ತುತ್ತಾಗುತ್ತಾರೆ ಎನ್ನುತ್ತಾರೆ ತಜ್ಞರು. ಹುಡುಗಿಯು ಋತುಮತಿ ಆದ ನಂತರದಿಂದ ಆಕೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ.  

    ಮಹಿಳೆಯರಲ್ಲಿ ಆರೋಗ್ಯ ತೊಂದರೆ

    ಮದುವೆ ಹಾಗೂ ಮಕ್ಕಳಾದ ನಂತರ  ಉಂಟಾಗುವ ಹಾರ್ಮೋನುಗಳ ಬದಲಾವಣೆ, ಅವಧಿಯ ಏರುಪೇರು ಮತ್ತು ಗರ್ಭಧಾರಣೆ ಹೀಗೆ ಹಲವು ಬದಲಾವಣೆಗಳು ಮಹಿಳೆಯರ ಆರೋಗ್ಯವನ್ನು ಕುಗ್ಗಿಸುತ್ತವೆ. ಅವರು ಪ್ರತಿದಿನ ಕೆಲವು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಮೂವತ್ತರ ಹರೆಯದ ನಂತರ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡುತ್ತವೆ.

    40 ಪ್ರತಿಶತ ಗರ್ಭಿಣಿಯರಲ್ಲಿ ರಕ್ತಹೀನತೆ ಸಮಸ್ಯೆ

    ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಸುಮಾರು 40 ಪ್ರತಿಶತ ಗರ್ಭಿಣಿಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ಪ್ರಕರಣಗಳಿಂದ ವಿಶ್ವಾದ್ಯಂತ ಪ್ರತಿದಿನ ಕನಿಷ್ಠ 810 ಮಹಿಳೆಯರು ಸಾಯುತ್ತಿರುವುದು ತುಂಬಾ ಕಳವಳಕಾರಿ ಸಂಗತಿ ಆಗಿದೆ. 2018 ರಲ್ಲಿ 311,000 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದು WHO ಮಾಹಿತಿ ತಿಳಿಸಿದೆ.

    ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

    ಆರೋಗ್ಯಕರ ಆಹಾರ ಮತ್ತು ಸಕ್ರಿಯ ಜೀವನಶೈಲಿ

    ಅದೇ ರೀತಿ ಮಹಿಳೆಯರಲ್ಲಿ ಅನೇಕ ರೋಗಗಳು ಕೆಟ್ಟ ಜೀವನಶೈಲಿಯಿಂದ ಬರುತ್ತವೆ. ಈ ಕಾರಣಕ್ಕಾಗಿ ವೈದ್ಯರು ಮತ್ತು ತಜ್ಞರು ಮಹಿಳೆಯರಿಗೆ ಆರೋಗ್ಯಕರ ಆಹಾರ ಮತ್ತು ಸಕ್ರಿಯ ಜೀವನಶೈಲಿ ನಡೆಸಲು ಸಲಹೆ ನೀಡುತ್ತಾರೆ. ಆಯುರ್ವೇದದಲ್ಲಿ ಮಹಿಳೆಯರ ಆರೋಗ್ಯಕ್ಕೆ ಪರಿಣಾಮಕಾರಿ ಎಂದು ಹೇಳಲಾದ ಅನೇಕ ಗಿಡಮೂಲಿಕೆಗಳಿವೆ. ಅವು ಮಹಿಳೆಯರ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.

    ಕೇರಳ ಆಯುರ್ವೇದವು ಕೆಲವು ವಿಶೇಷ ಗಿಡಮೂಲಿಕೆಗಳು ಮಹಿಳಾ ಸ್ನೇಹಿ ಎಂದು ಹೇಳಿದೆ. ಋತುಬಂಧ, ಚರ್ಮ, ಹಾರ್ಮೋನುಗಳು ಮತ್ತು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ ತಪ್ಪಿಸಲು ಸಹಾಯ ಮಾಡುತ್ತವೆ.

    ಅಶೋಕ ಮರ

    ನೀವು ಯಾವುದೇ ಉದ್ಯಾನವನ ಅಥವಾ ಕಾಡಿನಲ್ಲಿ ಶಾಲೆ ಮತ್ತು ಕಾಲೇಜುಗಳ ಮುಂಭಾದಲ್ಲಿ ಅಶೋಕ ಮರವನ್ನು ಕಾಣಬಹುದು. ಇದು ಕೆಂಪು ಹೂವುಗಳನ್ನು ಬಿಡುತ್ತದೆ. ಮತ್ತು ಅದರ ಎಲೆಗಳು ಉದ್ದವಾಗಿರುತ್ತವೆ. ಈ ಮರವು ಮಹಿಳೆಯರಲ್ಲಿ ಮುಟ್ಟಿನ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ. ಹಾಗೂ ಸ್ತ್ರೀ ಹಾರ್ಮೋನುಗಳನ್ನು ಸಮತೋಲನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

    ಮಂಜಿಷ್ಠ ಗಿಡ

    ಕಾಡು ಕುರುಚಲು ಗಿಡದಂತೆ ಕಾಣುವ ಈ ಮಂಜಿಷ್ಠ ಗಿಡವನ್ನು ಯಾವುದೇ ಅರಣ್ಯ ಅಥವಾ ಉದ್ಯಾನವನದಲ್ಲಿ ನೋಡಬಹುದು. ಆಯುರ್ವೇದದಲ್ಲಿ ಇದನ್ನು ಅದ್ಭುತವಾದ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಉರಿಯೂತದ ವಿರುದ್ಧ ಹೋರಾಡುತ್ತದೆ. ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ.

    ಷಟ್ಪುಷ್ಪ ಗಿಡ

    ಜೀರಿಗೆ ಮತ್ತು ಶುಂಠಿಯ ಗಿಡದಂತೆ ಕಾಣುವ ಈ ಸಸ್ಯವು ಹಲವು ಔಷಧೀಯ ಗುಣಗಳಳಿಂದ ಸಮೃದ್ಧವಾಗಿದೆ. ಆಯುರ್ವೇದದಲ್ಲಿ ಷಟ್ಪುಷ್ಪ ಗಿಡವನ್ನು ಅನೇಕ ರೋಗಗಳ ಗುಣಪಡಿಸಲು ಬಳಕೆ ಮಾಡಲಾಗುತ್ತದೆ. ಈ ಸಸ್ಯವು ಮಲಬದ್ಧತೆ, ಮೂಳೆಗಳ ದೌರ್ಬಲ್ಯ ಹೋಗಲಾಡಿಸಲು ಮತ್ತು ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಯೂರಿಕ್ ಆಮ್ಲದಿಂದ ಬರಬಹುದು ಈ ಸಮಸ್ಯೆಗಳು, ಅದಕ್ಕೆ ಪರಿಹಾರ ಇಲ್ಲಿದೆ

    ಶತಾವರಿ

    ಶತಾವರಿ ಬಳ್ಳಿ ಅಥವಾ ಪೊದೆಯಾಕಾರದ ಶತಾವರಿ ಒಂದು ಗಿಡ ಮೂಲಿಕೆ ಆಗಿದೆ. ಆಯುರ್ವೇದದಲ್ಲಿ ಇದನ್ನು ಅನೇಕ ಔಷಧಿಗಳು ಮತ್ತು ರೋಗಗಳ ಚಿಕಿತ್ಸೆಗೆ ಬಳಕೆ ಮಾಡ್ತಾರೆ. ಒತ್ತಡ, ಮನಸ್ಥಿತಿ ಬದಲಾವಣೆ, ಹಾರ್ಮೋನುಗಳ ಬದಲಾವಣೆ ಸಮಸ್ಯೆಗೆ ಈ ಮೂಲಿಕೆಯು ಪರಿಣಾಮಕಾರಿಯಾಗಿದೆ.
    Published by:renukadariyannavar
    First published: