• Home
  • »
  • News
  • »
  • lifestyle
  • »
  • Diabetes: ರಕ್ತದಲ್ಲಿನ ಸಕ್ಕರೆ ಮಟ್ಟದ ನಿರ್ವಹಣೆಗೆ ಅನ್ನ ಸೇವನೆ ಹೀಗಿದ್ದರೆ ಉತ್ತಮ

Diabetes: ರಕ್ತದಲ್ಲಿನ ಸಕ್ಕರೆ ಮಟ್ಟದ ನಿರ್ವಹಣೆಗೆ ಅನ್ನ ಸೇವನೆ ಹೀಗಿದ್ದರೆ ಉತ್ತಮ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೇಹದಲ್ಲಿನ ರಕ್ತದ ಮಟ್ಟದಲ್ಲಿ ಸಕ್ಕರೆ ಅಂಶವು ಹೆಚ್ಚಾಗಿ ಮಧುಮೇಹ ರೋಗಕ್ಕೆ ನೇರವಾಗಿ ಈ ಕೊಬ್ಬು ಕಾರಣವಾಗುತ್ತದೆ. ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಸೇವಿಸುವುದರಿಂದ ಮಧುಮೇಹ ಸಮಸ್ಯೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲಿಯೂ ಸಹ ಇದೆ. ಈ ಕುರಿತು ಸಂಪೂರ್ಣ ಮಾಹಿತಿಯ ತಿಳಿಯೋಣ ಬನ್ನಿ.

ಮುಂದೆ ಓದಿ ...
  • Share this:

ಇಂದಿನ ಜೀವನಶೈಲಿಯಲ್ಲಿ ಯಾವುದೇ ಆಹಾರವನ್ನು (Food) ಸೇವನೆ ಮಾಡಿದರೂ ಕೂಡ ಅದು ಸರಿಯಾಗಿ ಜೀರ್ಣವಾಗದೇ ಅನಾರೋಗ್ಯಕರ ಕೊಬ್ಬು ಆಗಿ ದೇಹದ ಸೂಕ್ಷ್ಮ ಭಾಗಗಳಲ್ಲಿ ಹೆಚ್ಚಾಗಿ ಸಂಗ್ರಹವಾಗುತ್ತದೆ. ಇದರಿಂದ ದೇಹದಲ್ಲಿನ ರಕ್ತದ ಮಟ್ಟದಲ್ಲಿ (blood level) ಸಕ್ಕರೆ ಅಂಶವು ಹೆಚ್ಚಾಗಿ ಮಧುಮೇಹ (Diabetes) ರೋಗಕ್ಕೆ ನೇರವಾಗಿ ಈ ಕೊಬ್ಬು (Fat) ಕಾರಣವಾಗುತ್ತದೆ. ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಸೇವಿಸುವುದರಿಂದ ಮಧುಮೇಹ ಸಮಸ್ಯೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲಿಯೂ ಸಹ ಇದೆ. ಈ ಕುರಿತು ಸಂಪೂರ್ಣ ಮಾಹಿತಿಯ ತಿಳಿಯೋಣ ಬನ್ನಿ. ಅಕ್ಕಿಯಿಂದ ಮಾಡಿದ ಅನ್ನಕ್ಕೆ ಸೂಕ್ತ ಅನುಪಾತದಲ್ಲಿ ಪ್ರೋಟೀನ್, ಫೈಬರ್ ಅಥವಾ ಕೊಬ್ಬಿನಾಂಶ (fat content) ಹೊಂದಿರುವ ಆಹಾರವನ್ನು ಜೋಡಿಸಿಕೊಂಡು ಅನ್ನ ಸೇವನೆ ಮಾಡುವುದರಿಂದ ಇದು ಆಹಾರದಲ್ಲಿ ಸೇವಿಸುವ GI ಅನ್ನು ಕಡಿಮೆ ಮಾಡುತ್ತದೆ.


GI ಎಂದರೇನು?
GI ಅಥವಾ ಗ್ಲೈಸೆಮಿಕ್ ಸೂಚ್ಯಂಕ ಎಂದರೆ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಅವುಗಳ ಪರಿಣಾಮವನ್ನು ಆಧರಿಸಿ 1 ರಿಂದ 100 ರವರೆಗಿನ ಪ್ರಮಾಣದಲ್ಲಿ ಆಹಾರಗಳನ್ನು ಶ್ರೇಣೀಕರಿಸುವ ವ್ಯವಸ್ಥೆ ಆಗಿದೆ. ಆ ಆಹಾರ ಮಧುಮೇಹ ಸ್ನೇಹಿ ಆಹಾರವನ್ನಾಗಿ ಮಾಡುತ್ತದೆ.


ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ ಮಾಡುವ ಅನ್ನ ಸೇವನೆಯ ಬಗ್ಗೆ ಪೌಷ್ಟಿಕತಜ್ಞರ ಅಭಿಪ್ರಾಯವೇನು?
ಅಕ್ಕಿಯಲ್ಲಿ ಅಧಿಕ ಗ್ಲೈಸೆಮಿಕ್ ಸೂಚ್ಯಂಕ (GI) ಇರುವುದರಿಂದ ಮಧುಮೇಹ ಇರುವವರು ಸಾಮಾನ್ಯವಾಗಿ ಅಕ್ಕಿಯ ರೆಸಿಪಿಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಇದರ ಬಗ್ಗೆ ಇತ್ತೀಚಿಗೆ ಪೌಷ್ಟಿಕಾಂಶ ತಜ್ಞರೊಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ “ಅನ್ನವನ್ನು ಪ್ರೋಟೀನ್, ಫೈಬರ್ ಅಥವಾ ಕೊಬ್ಬಿನಾಂಶ ಇರುವ ಆಹಾರದೊಂದಿಗೆ ಸೇವಿಸಿದರೆ ಆಹಾರವು ಮಧುಮೇಹ ಸ್ನೇಹಿಯಾಗಬಹುದು ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ” ಎಂದು ಹೇಳುತ್ತಾರೆ.


ಪೌಷ್ಟಿಕಾಂಶ ತಜ್ಞ ಭುವನ್ ರಸ್ತೋಗಿಯವರು ಪ್ರೋಟೀನ್ ಮತ್ತು ಫೈಬರ್‌ನಂತಹ ಪೋಷಕಾಂಶಗಳನ್ನು ಸೇರಿಸುವ ಮೂಲಕ ಅನ್ನವನ್ನು ಸಮತೋಲನಗೊಳಿಸಬಹುದು ಎಂದು ಹೇಳುತ್ತಾರೆ, ಇದು ಉತ್ತಮ ಆಹಾರವಾಗುತ್ತದೆ ಮತ್ತು ಸಕ್ಕರೆಯ ಅಂಶವನ್ನು ಕ್ರಮೇಣ ಕಡಿಮೆಗೊಳಿಸುತ್ತದೆ.


ಇದನ್ನೂ ಓದಿ:  Onion Benefits: ಕೆಂಪು ಈರುಳ್ಳಿಗಿಂತ ಬಿಳಿ ಈರುಳ್ಳಿ ಆರೋಗ್ಯಕರವಂತೆ! ಹೇಗೆ ಗೊತ್ತಾ?


"ನೀವು ಬಿಳಿ ಅನ್ನವನ್ನು ಸೇವಿಸಲು ಭಯಪಡುತ್ತೀರಾ? ಇದಕ್ಕೆ ಸರಳವಾದ ಪರಿಹಾರ ಇಲ್ಲಿದೆ. ಅಕ್ಕಿಯು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (GI) ಅನ್ನು ಹೊಂದಿರುವುದರಿಂದ ಸೂಕ್ತ ಅನುಪಾತದಲ್ಲಿ ಪ್ರೋಟೀನ್, ಫೈಬರ್ ಅಥವಾ ಕೊಬ್ಬಿನಾಂಶ ಹೊಂದಿರುವ ಆಹಾರವನ್ನು ಜೋಡಿಸಿಕೊಂಡು ಅನ್ನ ಸೇವನೆ ಮಾಡುವುದರಿಂದ ಇದು ಆಹಾರದಲ್ಲಿ ಸೇವಿಸುವ GI ಅನ್ನು ಕಡಿಮೆ ಮಾಡುತ್ತದೆ” ಎಂದು ಭುವನ್ ರಸ್ತೋಗಿ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದಿದ್ದಾರೆ..


ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ ಮಾಡುವ ಅನ್ನ ಸೇವನೆಯ ಬಗ್ಗೆ 5 ವಿಧಾನಗಳು ಇಂತಿವೆ:
ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಆಹಾರವನ್ನು ಅನ್ನದ ಜೊತೆ ನೀವು ಸೇವಿಸಬಹುದು. ಆ ಆಹಾರಗಳ ಬಗ್ಗೆ ರಸ್ತೋಗಿ ಅವರು ಇಲ್ಲಿ ಸೂಚಿಸುತ್ತಾರೆ:


ದಾಹಿ ಬಾತ್‌: ದಾಹಿ ಬಾತ್‌ನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಪ್ರೋಟೀನ್ ಅಂಶಗಳು ಇರುವುದರಿಂದ ಇದು ನಿಮ್ಮ ಊಟದ GI ಅನ್ನು ಕಡಿಮೆ ಮಾಡುತ್ತದೆ.


ದಾಲ್/ರಾಜ್ಮಾ ಚಾವಲ್‌ನೊಂದಿಗೆ ಅಕ್ಕಿ: ದ್ವಿದಳ ಧಾನ್ಯಗಳಲ್ಲಿ ನಾರಿನಂಶ ಹೆಚ್ಚಿರುತ್ತದೆ ಮತ್ತು ಮಧ್ಯಮ ಪ್ರಮಾಣದಲ್ಲಿ ಪ್ರೋಟೀನ್ ಕೂಡ ಇರುತ್ತದೆ.


ಇದನ್ನೂ ಓದಿ: Health Tips: ತ್ವಚೆ ಮತ್ತು ಕೂದಲಿಗೆ ಅಕ್ಕಿ ನೀರಿನಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಗೊತ್ತಾ?


ತರಕಾರಿಗಳು ಮತ್ತು ಪನೀರ್‌ನೊಂದಿಗೆ ಪುಲಾವ್: ತರಕಾರಿಗಳು ಆಹಾರಕ್ಕೆ ಫೈಬರ್ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಪನೀರ್ ಆಹಾರವು ಅಧಿಕ ಪ್ರೋಟೀನ್ ಮತ್ತು ಕೊಬ್ಬಿನಾಂಶವನ್ನು ಹೊಂದಿರುತ್ತದೆ.


ಫಿಶ್‌ ಬಾತ್: ಅನ್ನದೊಂದಿಗೆ ಫಿಶ್‌ ಸೇರಿಸಿ ನೀವು ಆಹಾರ ಸೇವಿಸಿದರೆ ಇದು ನಿಮ್ಮ ಪ್ಲೇಟ್‌ನ GI ಕಡಿಮೆ ಮಾಡುತ್ತದೆ. ಅದರೊಂದಿಗೆ ಮೀನು ಪ್ರೋಟೀನ್ ಮತ್ತು ಕೊಬ್ಬಿನಾಂಶವನ್ನು ನಿಮ್ಮ ದೇಹಕ್ಕೆ ಒದಗಿಸುತ್ತದೆ.


ಈ 5 ಕ್ರಮಗಳನ್ನು ನೀವು ಫಾಲೋ ಮಾಡಿ ಸೂಕ್ತ ಅನುಪಾತದಲ್ಲಿ ಅನ್ನ ಸೇವಿಸುವುದರಿಂದ ನಿಮ್ಮ ಮಧುಮೇಹ ಸಮಸ್ಯೆಯನ್ನು ಕ್ರಮೇಣವಾಗಿ ತಡೆಗಟ್ಟಬಹುದು.

Published by:Ashwini Prabhu
First published: