• Home
  • »
  • News
  • »
  • lifestyle
  • »
  • Lemon: ಆಹಾರದಲ್ಲಿ ನಿಂಬೆಹಣ್ಣಿನ ರಸ ಮಾಡುತ್ತೆ ಮ್ಯಾಜಿಕ್! ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತೆ

Lemon: ಆಹಾರದಲ್ಲಿ ನಿಂಬೆಹಣ್ಣಿನ ರಸ ಮಾಡುತ್ತೆ ಮ್ಯಾಜಿಕ್! ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತೆ

ಲಿಂಬೆ ಹಣ್ಣು

ಲಿಂಬೆ ಹಣ್ಣು

ಸಿಟ್ರಸ್ ಇರುವ ಹಣ್ಣಿನಲ್ಲಿ ಕಂಡು ಬರುವ ಹೇರಳವಾದ ಕರಗುವ ನಾರು ಮತ್ತು ವಿಟಮಿನ್ ಸಿ ಯಿಂದಾಗಿ ನಿಂಬೆಹಣ್ಣು ನಿಮ್ಮ ಸಹಾಯಕ್ಕೆ ಬರಬಹುದು. ಇತ್ತೀಚಿನ ಒಂದು ಅಧ್ಯಯನವು ನಿಂಬೆಹಣ್ಣಿನ ರಸವು ಗರಿಷ್ಠ ರಕ್ತದ ಗ್ಲುಕೋಸ್ ಅನ್ನು ಹೇಗೆ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಆ ಉತ್ತುಂಗವನ್ನು 35 ನಿಮಿಷಗಳಿಗಿಂತ ಹೆಚ್ಚು ಕಾಲದವರೆಗೆ ವಿಳಂಬಗೊಳಿಸುತ್ತದೆ ಎಂದು ತೋರಿಸಿದೆ.

ಮುಂದೆ ಓದಿ ...
  • Share this:

ನೀವು ಮಧುಮೇಹದಿಂದ ಬಳಲುತ್ತಿದ್ದರೆ ಮತ್ತು ಆಗಾಗ್ಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು (Blood sugar level) ಜಾಸ್ತಿಯಾಗುತ್ತಿದ್ದರೆ ಭಯ ಪಡಬೇಡಿ, ಅದನ್ನು ನಿಯಂತ್ರಿಸಲು ಅನೇಕ ಮಾರ್ಗಗಳಿವೆ. ಅದರಲ್ಲಿ ನಿಮ್ಮ ಆಹಾರದಲ್ಲಿ ನಿಂಬೆಹಣ್ಣನ್ನು (Lemon) ಸೇರಿಸಿಕೊಳ್ಳುವುದು ಸಹ ಒಂದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸಿಟ್ರಸ್ (Citrus) ಇರುವ ಹಣ್ಣಿನಲ್ಲಿ ಕಂಡು ಬರುವ ಹೇರಳವಾದ ಕರಗುವ ನಾರು ಮತ್ತು ವಿಟಮಿನ್ ಸಿ ಯಿಂದಾಗಿ ನಿಂಬೆಹಣ್ಣು ನಿಮ್ಮ ಸಹಾಯಕ್ಕೆ ಬರಬಹುದು. ಇತ್ತೀಚಿನ ಒಂದು ಅಧ್ಯಯನವು ನಿಂಬೆಹಣ್ಣಿನ ರಸವು ಗರಿಷ್ಠ ರಕ್ತದ ಗ್ಲುಕೋಸ್ ಅನ್ನು (Blood Glucose) ಹೇಗೆ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಆ ಉತ್ತುಂಗವನ್ನು 35 ನಿಮಿಷಗಳಿಗಿಂತ ಹೆಚ್ಚು ಕಾಲದವರೆಗೆ ವಿಳಂಬಗೊಳಿಸುತ್ತದೆ ಎಂದು ತೋರಿಸಿದೆ.


ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಸಹ ನಿಂಬೆಹಣ್ಣನ್ನು ದೀರ್ಘಕಾಲದಿಂದ ಮಧುಮೇಹಕ್ಕೆ ಸೂಪರ್ ಫುಡ್ ಎಂದು ಪರಿಗಣಿಸಿರುವುದರಿಂದ ಇದು ಆಶ್ಚರ್ಯಕರವಾದ ಸುದ್ದಿಯೇನಲ್ಲ. ಇದು ಕಡಿಮೆ ಜಿಐ (ಗ್ಲೈಸೆಮಿಕ್ ಇಂಡೆಕ್ಸ್) ಹೊಂದಿರುವಂತಹ ಆಹಾರವಾಗಿದೆ ಮತ್ತು ನೀವು ನಿಮ್ಮ ಆಹಾರದಲ್ಲಿ ಸರಿಯಾದ ರೀತಿಯಲ್ಲಿ ನಿಂಬೆಹಣ್ಣನ್ನು ಸೇರಿಸಿಕೊಂಡರೆ ನಿಮ್ಮ ಉರಿಯೂತವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಆಹಾರ ಸೇವಿಸಿದ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.


"ನಿಮ್ಮ ದೈನಂದಿನ ಆಹಾರದಲ್ಲಿ ಅಗತ್ಯವಾದ ಆರೋಗ್ಯಕರ ಅಂಶಗಳನ್ನು ಸೇರಿಸುವುದು ಬಹಳ ಮುಖ್ಯ. ನಿಂಬೆಹಣ್ಣಿನ ರಸವು ನಿಮ್ಮ ಅನಿಯಮಿತ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮತ್ತು ಮಧುಮೇಹಕ್ಕೆ ಉತ್ತಮ ರಕ್ಷಕರಾಗಿ ಕಾರ್ಯನಿರ್ವಹಿಸಬಲ್ಲ ಅಂತಹ ಒಂದು ಶಕ್ತಿಯುತ ಕಷಾಯವಾಗಿದೆ" ಎಂದು ಪೌಷ್ಟಿಕತಜ್ಞ ಮತ್ತು ಹೋಮಿಯೋಪಥಿ ಕನ್ಸಲ್ಟೆಂಟ್ ಡಾ ಸ್ಮಿತಾ ಭೋಯಿರ್ ಪಾಟೀಲ್ ಹೇಳುತ್ತಾರೆ.


ಮಧುಮೇಹ ಹೊಂದಿರುವ ಜನರಿಗೆ ಈ ನಿಂಬೆಹಣ್ಣು ಹೇಗೆ ಉಪಯುಕ್ತ?
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್, ಉರಿಯೂತ ಶಮನಕಾರಿ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಅದರ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ನಿಂಬೆಹಣ್ಣಿನಲ್ಲಿರುವ ಪೋಷಕಾಂಶಗಳು ಉತ್ತಮ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ.


ಇದನ್ನೂ ಓದಿ: Grape Fruit Benefits: ಮೂಳೆಗಳ ಆರೋಗ್ಯವನ್ನು ಕಾಪಾಡಲು ಗ್ರೇಫ್ ಫ್ರೂಟ್ಸ್ ಬೆಸ್ಟ್ ಮೆಡಿಸಿನ್ ಅಂತೆ


"ನಿಂಬೆಹಣ್ಣಿನ ರಸದಲ್ಲಿ ಕಡಿಮೆ ಕ್ಯಾಲೋರಿಗಳಿದ್ದು, ಮಧುಮೇಹ ರೋಗಿಗಳು ಇದನ್ನು ಸೇವಿಸಲು ಸೂಕ್ತವಾಗಿದೆ. ನಿಂಬೆಹಣ್ಣಿನ ರಸದಲ್ಲಿರುವ ವಿಟಮಿನ್ ಸಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ನಿಂಬೆಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುವ ಸುಲಭ ನಾರುಗಳಿಂದ ತುಂಬಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ"ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.


ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ನಿಂಬೆ ರಸವನ್ನು ಸೇರಿಸುವ 5 ವಿಧಾನಗಳು ಇಲ್ಲಿವೆ ನೋಡಿ.
1. ನಿಮ್ಮ ಆಹಾರದಲ್ಲಿ ಕೆಲವು ಹನಿ ತಾಜಾ ನಿಂಬೆಹಣ್ಣಿನ ರಸವನ್ನು ಹಿಂಡುವುದು ನಿಮ್ಮ ಆಹಾರದಲ್ಲಿ ನಿಂಬೆಯನ್ನು ಸೇರಿಸಲು ಸುಲಭವಾದ ಮಾರ್ಗವಾಗಿದೆ. ಅನ್ನ ದಿಂದ ಹಿಡಿದು ಮೇಲೋಗರದವರೆಗೆ, ಪಾಸ್ತಾದವರೆಗೆ, ಕೆಲವು ಹನಿ ನಿಂಬೆಯನ್ನು ಬಹುತೇಕ ಯಾವುದೇ ಆಹಾರಕ್ಕೂ ಸೇರಿಸಬಹುದು. ಇದು ಆಹಾರಕ್ಕೆ ಉತ್ತಮ ಪರಿಮಳ ಮತ್ತು ಸುವಾಸನೆಯನ್ನು ನೀಡುವುದರ ಮೂಲಕ ರುಚಿಯನ್ನು ಸಹ ಹೆಚ್ಚಿಸುತ್ತದೆ. ನಿಮ್ಮ ಸಲಾಡ್ ಗಳನ್ನು ರುಚಿಕರವಾಗಿಸಲು ನೀವು ನಿಂಬೆ ರಸವನ್ನು ಅದರ ಮೇಲೆ ಹಾಕಿಕೊಳ್ಳಬಹುದು.


2. ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನಿಂಬೆ ರಸವು ನಿಮಗೆ ಅತ್ಯುತ್ತಮ ಔಷಧಿಯಾಗಿದೆ. ಇದನ್ನು ತಯಾರಿಸುವುದು ಸುಲಭ, ಇದನ್ನು ಕುಡಿಯುವುದರಿಂದ ನೀವು ತಾಜಾ ಅನುಭವವನ್ನು ಪಡೆಯುತ್ತೀರಿ. ನೀರನ್ನು ಉಗುರು ಬೆಚ್ಚಗೆ ಅಥವಾ ಸಾಮಾನ್ಯ ತಾಪಮಾನದಲ್ಲಿ ಇರಿಸಿ ಮತ್ತು ಅದಕ್ಕೆ ಅರ್ಧ ನಿಂಬೆ ಹಣ್ಣನ್ನು ಸೇರಿಸಿ. ನಿಂಬೆ ನೀರನ್ನು ತಯಾರಿಸುವಾಗ ತುಂಬಾ ಬಿಸಿ ನೀರನ್ನು ಬಳಸದಂತೆ ಎಚ್ಚರವಹಿಸಿ ಮತ್ತು ನಿಂಬೆಯ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಯಾವುದೇ ಸಕ್ಕರೆ ಅಥವಾ ಇತರ ಸಿಹಿಕಾರಕಗಳನ್ನು ಅದಕ್ಕೆ ಸೇರಿಸಬೇಡಿ.


3. ನಿಂಬೆ ಹಣ್ಣಿನ ತುಂಡುಗಳಿಂದ ನಿಮ್ಮದೇ ಆದ ಡಿಟಾಕ್ಸ್ ನೀರನ್ನು ತಯಾರಿಸಿಕೊಳ್ಳಿ. ದಿನವಿಡೀ ಈ ಡಿಟಾಕ್ಸ್ ನೀರನ್ನು ಕುಡಿಯುತ್ತಲೇ ಇರಿ. ಇದು ದೇಹದಿಂದ ವಿಷವನ್ನು ಹೊರ ಹಾಕುತ್ತದೆ ಮತ್ತು ಯಾವುದೇ ಅಕಾಲಿಕ ಸಕ್ಕರೆ ಮಟ್ಟವನ್ನು ಜಾಸ್ತಿ ಮಾಡಲು ಅನುಮತಿಸುವುದಿಲ್ಲ, ಆದ್ದರಿಂದ ನೀವು ಯಾವಾಗಲೂ ಒತ್ತಡದಿಂದ ಮುಕ್ತರಾಗಿರುತ್ತೀರಿ.


4. ನಿಂಬೆ ರಸವನ್ನು ಸೇರಿಸಲು ಮತ್ತೊಂದು ಆರೋಗ್ಯಕರ ವಿಧಾನವೆಂದರೆ ನಿಮ್ಮ ಸಲಾಡ್. ಇದು ಸಲಾಡ್ ನ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಶಕ್ತಿಯುತ ಘಟಕಾಂಶವಾಗಿ ಕೆಲಸ ಮಾಡುತ್ತದೆ. ನಿಮ್ಮ ಸಲಾಡ್ ಮೇಲೆ ಮಧ್ಯಮ ಪ್ರಮಾಣದಲ್ಲಿ ನಿಂಬೆ ರಸವನ್ನು ಹಿಂಡಿಕೊಳ್ಳಿ, ಹೆಚ್ಚು ನಿಂಬೆ ರಸವು ಆಮ್ಲೀಯವಾಗಿರಬಹುದು.


ಇದನ್ನೂ ಓದಿ:  Wheat Grass Benefits: ಗೋಧಿ ಹುಲ್ಲಿನಲ್ಲಿ ಅಡಗಿದೆ ಈ ಎಲ್ಲಾ ಔಷಧೀಯ ಗುಣಗಳು


5. ಅನ್ನ, ಆಲೂಗಡ್ಡೆ, ಬೀಟ್ರೂಟ್ ಮತ್ತು ಜೋಳದಂತಹ ಪಿಷ್ಟಭರಿತ ಆಹಾರಗಳಲ್ಲಿ ನಿಂಬೆ ರಸವನ್ನು ಸೇರಿಸುವುದನ್ನು ಮರೆಯಬೇಡಿ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೇಹದಲ್ಲಿ ಆರೋಗ್ಯಕರ ಸಮತೋಲನವನ್ನು ಉತ್ತೇಜಿಸುವಾಗ ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಉತ್ತಮ ರುಚಿಯನ್ನು ಪಡೆಯಲು ನೀವು ಕೆಲವು ಪಿಷ್ಟದ ತರಕಾರಿಗಳ ಮೇಲೂ ಸಹ ನಿಂಬೆ ರಸವನ್ನು ಹಾಕಿಕೊಳ್ಳಬಹುದು.

Published by:Ashwini Prabhu
First published: