• Home
  • »
  • News
  • »
  • lifestyle
  • »
  • Anemia Types: ಅನಿಮಿಯಾ ಸಮಸ್ಯೆ ಬರೋದು ಹೇಗೆ? ಅದರ ವಿಧಗಳು ಇಲ್ಲಿದೆ ನೋಡಿ

Anemia Types: ಅನಿಮಿಯಾ ಸಮಸ್ಯೆ ಬರೋದು ಹೇಗೆ? ಅದರ ವಿಧಗಳು ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Types of Anemia: ರಕ್ತಹೀನತೆಯಲ್ಲಿ ಹಲವು ಪ್ರಕಾರಗಳಿದ್ದು ಪ್ರತಿಯೊಂದೂ ಪ್ರಕಾರ ತನ್ನದೇ ಆದ ಕಾರಣವನ್ನು ಹೊಂದಿದೆ. ರಕ್ತಹೀನತೆ ತಾತ್ಕಾಲಿಕ ಅಥವಾ ದೀರ್ಘಾವಧಿಯದ್ದಾಗಿರಬಹುದು ಮತ್ತು ಸೌಮ್ಯದಿಂದ ಹಿಡಿದು ತೀವ್ರತರವಾದ  ಸ್ಥಿತಿಯವರೆಗೂ ಇರಬಹುದು.

  • Share this:

ಆಂಗ್ಲದಲ್ಲಿ ಅನೆಮಿಯಾ (Anemia) ಎಂದು ಕರೆಯಲಾಗುವ ರಕ್ತಹೀನತೆಯು ಒಂದು ಆರೋಗ್ಯದ ಸಮಸ್ಯೆಯಾಗಿದ್ದು (Health Problem)   ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ನಮಗೆ ಈಗಾಗಲೇ ಗೊತ್ತಿರುವಂತೆ ರಕ್ತದಲ್ಲಿ (Blood) ಕೆಂಪು ಹಾಗೂ ಬಿಳಿ ರಕ್ತಕಣಗಳಿರುತ್ತವೆ. ಅದರಲ್ಲೂ ವಿಶೇಷವಗಿ ಕೆಂಪು ರಕ್ತ ಕಣಗಳ ಜವಾಬ್ದಾರಿ ಮನುಷ್ಯನ ದೇಹದೊಳಗಿರುವ ಅಂಗಾಂಶಗಳಿಗೆ ಅವಶ್ಯಕವಾಗಿ ಬೇಕಾಗಿರುವ ಆಮ್ಲಜನಕವನ್ನು ಸರಬರಾಜು ಮಾಡುವುದಾಗಿದೆ. ಹೀಗೆ ದೇಹದ ಅಂಗಾಂಶಗಳಿಗೆ ಸಾಕಷ್ಟು ಆಮ್ಲಜನಕವನ್ನು ಸಾಗಿಸಲು ಬೇಕಾದ ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳ ಕೊರತೆಯಾಗಿರುವ ಸ್ಥಿತಿಯನ್ನೇ ರಕ್ತಹೀನತೆ ಎಂದು ಕರೆಯಲಾಗುತ್ತದೆ. ಕಡಿಮೆ ಹಿಮೋಗ್ಲೋಬಿನ್ ಎಂದೂ ಕರೆಯಲ್ಪಡುವ ರಕ್ತಹೀನತೆ ಸ್ಥಿತಿ ಬಂದಾಗ ದಣಿವು ಮತ್ತು ದುರ್ಬಲತೆ ಉಂಟಾಗುತ್ತದೆ.


ರಕ್ತಹೀನತೆಯಲ್ಲಿ ಹಲವು ಪ್ರಕಾರಗಳಿದ್ದು ಪ್ರತಿಯೊಂದೂ ಪ್ರಕಾರ ತನ್ನದೇ ಆದ ಕಾರಣವನ್ನು ಹೊಂದಿದೆ. ರಕ್ತಹೀನತೆ ತಾತ್ಕಾಲಿಕ ಅಥವಾ ದೀರ್ಘಾವಧಿಯದ್ದಾಗಿರಬಹುದು ಮತ್ತು ಸೌಮ್ಯದಿಂದ ಹಿಡಿದು ತೀವ್ರತರವಾದ  ಸ್ಥಿತಿಯವರೆಗೂ ಇರಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ರಕ್ತಹೀನತೆ ಒಂದಕ್ಕಿಂತ ಹೆಚ್ಚು ಕಾರಣಗಳನ್ನು ಹೊಂದಿರುತ್ತದೆ. ನಿಮಗೆ ರಕ್ತಹೀನತೆ ಇದೆ ಎಂದು ನೀವು ಅನುಮಾನಿಸಿದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಇದು ಗಂಭೀರ ಕಾಯಿಲೆಯ ಎಚ್ಚರಿಕೆಯ ಸಂಕೇತವಾಗಿರಬಹುದು.


ಕಾರಣವನ್ನು ಅವಲಂಬಿಸಿರುವ ರಕ್ತಹೀನತೆಯ ಚಿಕಿತ್ಸೆಗಳು ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಹಿಡಿದು ಹಲವು ವೈದ್ಯಕೀಯ ವಿಧಾನಗಳನ್ನು ಒಳಗೊಂಡಿರುತ್ತವೆ. ಆರೋಗ್ಯಕರ, ವೈವಿಧ್ಯಮಯ ಆಹಾರವನ್ನು ಸೇವಿಸುವ ಮೂಲಕ ನೀವು ಕೆಲವು ರೀತಿಯ ರಕ್ತಹೀನತೆಯನ್ನು ನಿಯಂತ್ರಿಸಲು ಸಾಧ್ಯವಾಗಬಹುದು.


ರಕ್ತಹೀನತೆಯ ಲಕ್ಷಣಗಳು


ರಕ್ತಹೀನತೆಯ ಲಕ್ಷಣಗಳು ಸಾಮಾನ್ಯವಾಗಿ ರಕ್ತಹೀನತೆಯ ಪ್ರಕಾರ, ಅದು ಉಂಟಾಗಿರುವುದಕ್ಕೆ ಕಾರಣ, ಅದರ ತೀವ್ರತೆ ಮತ್ತು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾದ ರಕ್ತಸ್ರಾವ, ಹುಣ್ಣುಗಳು, ಮುಟ್ಟಿನ ಸಮಸ್ಯೆಗಳು ಅಥವಾ ಕ್ಯಾನ್ಸರ್‌ ಮುಂತಾದವುಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಆ ಸಮಸ್ಯೆಗಳ ನಿರ್ದಿಷ್ಟ ಲಕ್ಷಣಗಳನ್ನು ಮೊದಲು ಗಮನಿಸಬಹುದು. 


ದೇಹವು ಆರಂಭಿಕ ಹಂತದಲ್ಲಿ ರಕ್ತಹೀನತೆ ಉಂಟಾದಾಗ ಅದನ್ನು ಎದುರಿಸುವ ಅಥವಾ ಸರಿದೂಗಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ರಕ್ತಹೀನತೆ ಸೌಮ್ಯವಾಗಿದ್ದರೆ ಅಥವಾ ದೀರ್ಘಕಾಲದವರೆಗೆ ಅಭಿವೃದ್ಧಿಗೊಂಡಿದ್ದರೆ, ನೀವು ಯಾವುದೇ ರೋಗಲಕ್ಷಣಗಳನ್ನು ಗಮನಿಸದೇ ಇರಬಹುದು. 


ರಕ್ತಹೀನತೆಯಲ್ಲಿರುವ ಪ್ರಕಾರಗಳು


ಹಲವಾರು ವಿಧದ ರಕ್ತಹೀನತೆಗಳಿವೆ ಹಾಗೂ ಬಹುತೇಕ ಎಲ್ಲ ಬಗೆಯ ರಕ್ತಹೀನತೆಗಳು ಕೆಂಪು ರಕ್ತ ಕಣಗಳ ಸಂಖ್ಯೆಯಲ್ಲಾಗುವ ಕುಸಿತ ಹಾಗೂ ಏರಿಕೆಯ ಮೇಲೆ ಸಂಬಂಧಿಸಿರುವುದೇ ಆಗಿದೆ. ಆದಾಗ್ಯೂ, ಸಾಮಾನ್ಯವಾಗಿ, ರಕ್ತಹೀನತೆಯಲ್ಲಿ ಮೂರು ಪ್ರಮುಖ ವಿಧಗಳಿವೆ, ಕೆಂಪು ರಕ್ತ ಕಣಗಳ ಗಾತ್ರಕ್ಕೆ ಅನುಗುಣವಾಗಿ ಅವುಗಳನ್ನು ವರ್ಗೀಕರಿಸಲಾಗಿದೆ.


ಮೈಕ್ರೋಸೈಟಿಕ್ ರಕ್ತಹೀನತೆ : ಕೆಂಪು ರಕ್ತ ಕಣಗಳು ಗಾತ್ರದಲ್ಲಿ ಸಾಮಾನ್ಯಕ್ಕಿಂತ ಚಿಕ್ಕದಾಗಿದ್ದರೆ, ಆ ಸ್ಥಿತಿಯನ್ನು ಮೈಕ್ರೋಸೈಟಿಕ್ ರಕ್ತಹೀನತೆ ಎಂದು ಕರೆಯಲಾಗುತ್ತದೆ. ಈ ವಿಧದ ರಕ್ತಹೀನತೆ ಉಂಟಾಗಲು ಪ್ರಮುಖ ಕಾರಣಗಳು ರಕ್ತದಲ್ಲಿ ಕಬ್ಬಿಣಾಂಶದ ಕೊರತೆ (ಕಡಿಮೆ ಮಟ್ಟದ ಕಬ್ಬಿಣ) ಮತ್ತು ಥಲಸ್ಸೆಮಿಯಾ (ಹಿಮೋಗ್ಲೋಬಿನ್‌ನ ಆನುವಂಶಿಕ ಅಸ್ವಸ್ಥತೆಗಳು).


ನಾರ್ಮೋಸೈಟಿಕ್ ರಕ್ತಹೀನತೆ : ಕೆಂಪು ರಕ್ತ ಕಣಗಳ ಗಾತ್ರವು ಗಾತ್ರದಲ್ಲಿ ಸಾಮಾನ್ಯವಾಗಿದ್ದು ಆದರೆ ಅವಶ್ಯಕವಾಗಿ ಬೆಖಾಗಿರುವ ಸಂಖ್ಯೆಯಲ್ಲಿ ಕಡಿಮೆಯಾಗಿದ್ದರೆ ಅದನ್ನು ನಾರ್ಮೋಸೈಟಿಕ್ ರಕ್ತಹೀನತೆ ಎಂದು ಕರೆಯಲಾಗುತ್ತದೆ, ಉದಾಹರಣೆಗೆ ಇದು ರಕ್ತಹೀನತೆ ದೀರ್ಘಕಾಲದ ಕಾಯಿಲೆ ಅಥವಾ ಮೂತ್ರಪಿಂಡದ ಕಾಯಿಲೆಗೆ ಸಂಬಂಧಿಸಿದ ರಕ್ತಹೀನತೆಯೊಂದಿಗೆ ಇರುತ್ತದೆ.


ಮ್ಯಾಕ್ರೋಸೈಟಿಕ್ ರಕ್ತಹೀನತೆ : ಕೆಂಪು ರಕ್ತ ಕಣಗಳು ಸಾಮಾನ್ಯಕ್ಕಿಂತ ದೊಡ್ಡದಾಗಿದ್ದರೆ, ಅದನ್ನು ಮ್ಯಾಕ್ರೋಸೈಟಿಕ್ ಅನೀಮಿಯಾ ಎಂದು ಕರೆಯಲಾಗುತ್ತದೆ. ಈ ವಿಧದ ರಕ್ತಹೀನತೆಗೆ ಕಾರಣಗಳೆಂದರೆ ಹಾನಿಕಾರಕ ರಕ್ತಹೀನತೆ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದಂತೆ ಉಂಟಾದ ರಕ್ತಹೀನತೆ.


ಇದನ್ನೂ ಓದಿ: ನಿಮ್ಮ ಸಂಬಂಧದಲ್ಲಾಗುವ ಈ ಬದಲಾವಣೆ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತೆ, ಎಚ್ಚರ!


ಇವುಗಳನ್ನು ಹೊರತುಪಡಿಸಿ ಇನ್ನೂ ಕೆಲವು ವಿವಿಧ ಪಕಾರಗಳ ರಕ್ತಹಿನತೆಯನ್ನೂ ಸಹ ಕಾಣಬಹುದಾಗಿದೆ. ಇವು ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯಲ್ಲದ ವಿಭಾಗದಲ್ಲಿ ಬರುತ್ತವೆ.


ವಿನಾಶಕಾರಿ ರಕ್ತಹೀನತೆ


ದೇಹಕ್ಕೆ ವಿಟಮಿನ್ ಬಿ 12 ಅವಶ್ಯಕವಾಗಿ ಬೇಕಾಗಿರುತ್ತದೆ. ಈ ಜೀವಸತ್ವವನ್ನು ಹೀರಿಕೊಳ್ಳಲು ಅನುವು ಮಾಡಿಕೊಡುವ ನಮ್ಮ ಶರೀರದಲ್ಲಿರುವ ಆಂತರಿಕ ಅಂಶದ ಕೊರತೆ ಉಂಟಾದಾಗ ವಿನಾಶಕಾರಿ ಅಥವಾ ಪೆರಿನಿಷಿಯಸ್ ಅನೆಮಿಯಾ ಉಂಟಾಗುತ್ತದೆ. ವಿಟಮಿನ್ ಬಿ 12 ಇಲ್ಲದೆ, ದೇಹವು ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. B9 (ಫೋಲಿಕ್ ಆಮ್ಲ) ನಂತಹ B ಜೀವಸತ್ವಗಳ ಕೊರತೆಯನ್ನು ಒಳಗೊಂಡಿರುವ ಇತರ ವಿಧದ ರಕ್ತಹೀನತೆಗಳು ಸಾಮಾನ್ಯವಾಗಿ ಹಾನಿಕಾರಕ ರಕ್ತಹೀನತೆಯಾಗಿ ಕೂಡಿರುತ್ತವೆ. 




ಹೆಮೋಲಿಟಿಕ್ ಅನಿಮಿಯಾ


ಈ ರೀತಿಯ ರಕ್ತಹೀನತೆಯು ಆನುವಂಶಿಕ ಅಥವಾ ನಾವಾಗಿಯೇ ಮಾಡಿಕೊಂಡ ರೋಗಗಳಿಂದ ಉಂಟಾಗಬಹುದು, ಈ ಸ್ಥಿತಿಯಲ್ಲಿ ದೇಹವು ವಿರೂಪಗೊಂಡ ಕೆಂಪು ರಕ್ತ ಕಣಗಳನ್ನು ಉಂಟುಮಾಡುತ್ತದೆ ಮತ್ತು ಅವು ಬೇಗನೆ ಸಾಯುತ್ತವೆ. ಇದು ಆನುವಂಶಿಕವಾಗಿಲ್ಲದಿದ್ದರೆ, ಹೆಮೋಲಿಟಿಕ್ ರಕ್ತಹೀನತೆಯು ಹಾನಿಕಾರಕ ಪದಾರ್ಥಗಳು ಅಥವಾ ಕೆಲವು ಔಷಧಿಗಳ ಅಡ್ಡ ಪರಿಣಾಮಗಳಿಂದ ಉಂಟಾಗಬಹುದಾದ ಸಾಧ್ಯತೆಯಿದೆ.


ಸಿಕಲ್ ಸೆಲ್ ಅನಿಮಿಯಾ


ರಕ್ತಹೀನತೆಯ ಈ ಆನುವಂಶಿಕ ರೂಪವು ಕೆಂಪು ರಕ್ತ ಕಣಗಳ ಆಕಾರವು ದೋಷಪೂರಿತವಾಗಿರುವುದರಿಂದ ಸಂಭವಿಸುತ್ತದೆ. ಅವು ಕುಡಗೋಲು ಆಕಾರದಲ್ಲಿರುತ್ತವೆ, ಅಂದರೆ ಅವು ರಕ್ತನಾಳಗಳನ್ನು ಮುಚ್ಚಿ ಹಾನಿಯನ್ನುಂಟುಮಾಡುತ್ತವೆ. ಹಿಮೋಗ್ಲೋಬಿನ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಈ ರೀತಿಯ ರಕ್ತಹೀನತೆ ಹೆಚ್ಚಾಗಿ ಆಫ್ರಿಕನ್ ಅಮೆರಿಕನ್ನರಲ್ಲಿ ಕಂಡುಬರುತ್ತವೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.


ಡೈಮಂಡ್-ಬ್ಲಾಕ್‌ಫ್ಯಾನ್ ರಕ್ತಹೀನತೆ


ಇದು ಅಪರೂಪದ ರಕ್ತದ ಕಾಯಿಲೆಯಾಗಿದ್ದು ಆನುವಂಶಿಕವಾಗಿ ಅಥವಾ ತಾನಾಗಿಯೇ ಬರಬಹುದು. ಈ ರೀತಿಯ ರಕ್ತಹೀನತೆಯಲ್ಲಿ, ಮೂಳೆ ಮಜ್ಜೆಯು ಸಾಕಷ್ಟು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದಿಲ್ಲ. ಡೈಮಂಡ್-ಬ್ಲಾಕ್‌ಫ್ಯಾನ್ ರಕ್ತಹೀನತೆಯನ್ನು ಹೊಂದಿರುವ ಸುಮಾರು 90% ಜನರಲ್ಲಿ ಅದು ಬಂದ ಮೊದಲ ವರ್ಷದಲ್ಲಿ ರೋಗನಿರ್ಣಯ ಮಾಡಲಾಗುತ್ತದೆ.


ಅಪ್ಲ್ಯಾಸ್ಟಿಕ್ ರಕ್ತಹೀನತೆ


ಇದು ಒಂದು ರೀತಿಯ ರಕ್ತಹೀನತೆಯಾಗಿದ್ದು ಇದು ಹಾನಿಗೊಳಗಾದ ಮೂಳೆ ಮಜ್ಜೆಯಿಂದ ಉಂಟಾಗುತ್ತದೆ, ಇದರಲ್ಲಿ ಸಾಕಷ್ಟು ಕೆಂಪು ರಕ್ತ ಕಣಗಳು ಉತ್ಪತ್ತಿಯಾಗುವುದಿಲ್ಲ. ಇದು ಜನ್ಮಜಾತ ಅಥವಾ ತಾನಾಗಿಯೇ ಅಭಿವೃದ್ಧಿಯಾಗಬಹುದು. ಅಪ್ಲಾಸ್ಟಿಕ್ ರಕ್ತಹೀನತೆಗೆ ಮತ್ತೊಂದು ಹೆಸರು ಮೂಳೆ ಮಜ್ಜೆಯ ಅಪ್ಲಾಸಿಯಾ (ವೈಫಲ್ಯ) ಎಂದು. ಕೆಲವರು ಈ ಸ್ಥಿತಿಯನ್ನು ಕ್ಯಾನ್ಸರ್ ಎಂದು ಭಾವಿಸಬಹುದು, ಆದರೆ ಅದು ಕ್ಯಾನ್ಸರ್  ಅಲ್ಲ.


ಕೆಲವು ಜನರು ಮೈಲೋಡಿಸ್ಪ್ಲಾಸ್ಟಿಕ್ ರಕ್ತಹೀನತೆ ಎಂದು ಕರೆಯುತ್ತಾರೆ. ಆದರೆ, ಮೈಲೋಡಿಪ್ಲಾಸ್ಟಿಕ್ ಸಿಂಡ್ರೋಮ್‌ಗಳು (MDS) ನಿಜವಾದ ಕ್ಯಾನ್ಸರ್ ಅನ್ನು ಉಲ್ಲೇಖಿಸುತ್ತವೆ ಮತ್ತು ಮೂಳೆ ಮಜ್ಜೆಯಲ್ಲಿನ ಅಸಹಜ ಕೋಶಗಳ ಪರಿಣಾಮ ಇದಾಗಿದೆ.


ಇದನ್ನೂ ಓದಿ: ಹುಳಿ ತೇಗು ಸಮಸ್ಯೆ ಕಾಡುತ್ತಿದ್ರೆ ಇಲ್ಲಿದೆ ನೋಡಿ ಪರಿಹಾರ


ಫ್ಯಾನ್ಕೋನಿ ರಕ್ತಹೀನತೆ


ಈ ರೀತಿಯ ರಕ್ತಹೀನತೆ ಅಪರೂಪ ಮತ್ತು ಇದು ಆನುವಂಶಿಕವಾಗಿದೆ. ಮೂಳೆ ಮಜ್ಜೆಯು ಸಾಕಷ್ಟು ಕೆಂಪು ರಕ್ತ ಕಣಗಳನ್ನು ಉತ್ಪಾದಿಸದ ಕಾರಣ ಇದು ಸಂಭವಿಸುತ್ತದೆ. ಅಸಹಜ ಮೂಳೆ ರಚನೆ ಮತ್ತು ಅಸಹಜ ಚರ್ಮದ ಬಣ್ಣ ಮುಂತಾದ ಈ ಸ್ಥಿತಿಯ ಭೌತಿಕ ಚಿಹ್ನೆಗಳು ಈ ರಕ್ತಹೀನತೆ ಒಳಗೊಂಡಿದೆ. ಈ ಸ್ಥಿತಿಯನ್ನು ಹೊಂದಿರುವ ಸುಮಾರು 50% ರಷ್ಟು ಜನರು 10 ವರ್ಷ ವಯಸ್ಸಾಗುವ ಹೊತ್ತಿಗೆ ಅವರಲ್ಲಿ ಈ ರೋಗವನ್ನು ಪತ್ತೆ ಹಚ್ಚಬಹುದಾಗಿದೆ.


ಮೆಡಿಟರೇನಿಯನ್ ರಕ್ತಹೀನತೆ


ಈ ಸ್ಥಿತಿಯನ್ನು ಕೂಲಿ ರಕ್ತಹೀನತೆ ಎಂದೂ ಕರೆಯುತ್ತಾರೆ ಮತ್ತು ವಾಸ್ತವವಾಗಿ ಬೀಟಾ ಥಲಸ್ಸೆಮಿಯಾ ಮೇಜರ್ ಅನ್ನು ಇದು ಸೂಚಿಸುತ್ತದೆ. ತಲಸ್ಸೆಮಿಯಾಗಳು ನಿಮ್ಮ ದೇಹವು ಸರಿಯಾದ ಪ್ರಮಾಣದಲ್ಲಿ ಹಿಮೋಗ್ಲೋಬಿನ್ ಅನ್ನು ಉತ್ಪಾದಿಸದ ಆನುವಂಶಿಕ ಸ್ಥಿತಿಗಳಾಗಿವೆ. 


ವೆಜಿಟೇರಿಯನ್ (ಸಸ್ಯಾಹಾರಿ) ಅಥವಾ ವೆಗನ್ ರಕ್ತಹೀನತೆ


ಈ ಪದವು ಸಸ್ಯಾಹಾರಿಗಳು ಅಥವಾ ಸಸ್ಯಾಹಾರಿಗಳಾಗಿರುವ ಜನರು ಮಾಂಸ, ಕೋಳಿ ಅಥವಾ ಸಮುದ್ರಾಹಾರವನ್ನು ಸೇವಿಸದ ಕಾರಣ ಸಾಕಷ್ಟು ಕಬ್ಬಿಣವನ್ನು ಪಡೆಯಲು ಕಷ್ಟಪಡುತ್ತಾರೆ ಎಂಬ ಕಲ್ಪನೆಯನ್ನು ಸೂಚಿಸುತ್ತದೆ, ಹಾಗಾಗಿ ಅವರು ಅನುಭವಿಸುವ ರಕ್ತಹೀನತೆಯನ್ನು ಈ ಹೆಸರಿನಿಂದ ಕರೆಯುತ್ತಾರೆ. ಆದರೆ, ವಾಸ್ತವದಲ್ಲಿ ಇದನ್ನು ಒಪ್ಪಲು ಕಷ್ಟಕರವಾಇದೆ, ಏಕೆಂದರೆ, ಸಸ್ಯ ಆಧಾರಿತ ಆಹಾರದೊಂದಿಗೆ ಸಾಕಷ್ಟು ಕಬ್ಬಿಣವನ್ನು ಪಡೆಯಲು ಸಾಕಷ್ಟು ಮಾರ್ಗಗಳಿವೆ.


ಇದನ್ನೂ ಓದಿ: ಫಿಟ್​ನೆಸ್​ ವಿಷಯದಲ್ಲಿ ಆಲಿಯಾ ಭಟ್‌, ರಾಬಿನ್‌ ಉತ್ತಪ್ಪ ಹೊಗಳಿದ ಸೆಲೆಬ್ರಿಟಿ ಟ್ರೈನರ್‌ ಸೋಹ್ರಾಬ್‌


 ಇದು ಮ್ಯಾಕ್ರೋಸೈಟಿಕ್ ಅನೀಮಿಯಾ (ಸಾಮಾನ್ಯ ಕೋಶಗಳಿಗಿಂತ ದೊಡ್ಡದು) ಅಥವಾ ಮೈಕ್ರೋಸೈಟಿಕ್ ಅನೀಮಿಯಾ (ಸಾಮಾನ್ಯ ಕೋಶಗಳಿಗಿಂತ ಚಿಕ್ಕದಾಗಿದೆ) ಆಗಿರಬಹುದಾಗಿದೆ. 

Published by:Sandhya M
First published: