World Hypertension Day: ಅಧಿಕ ರಕ್ತದೊತ್ತಡ ನಿಮ್ಮ ಹೃದಯಕ್ಕೆ ಅಪಾಯವಂತೆ - ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Heart Health: ಅಧಿಕ ರಕ್ತದೊತ್ತಡವನ್ನು ನಿಯಂತ್ರಣ ಮಾಡುವುದು ನಮ್ಮ ಕೈಯಲ್ಲೇ ಇದೆ. ಆದರೆ, ಇದು ಕೈಮೀರಿ ಹೋದಾಗ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ರಕ್ತದೊತ್ತಡದ ಲಕ್ಷಣಗಳು ಕಂಡು ಬಂದ ಕೂಡಲೇ ನಿಮ್ಮ ಪ್ರತಿದಿನದ ಚಟುವಟಿಕೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕು.

  • Share this:

ಬದಲಾಗುತ್ತಿರುವ ಜೀವನ ಶೈಲಿ (Lifestyle) ಹಾಗೂ ಆಹಾರ ಕ್ರಮಗಳಿಂದ ಆರೋಗ್ಯದಲ್ಲಿನ ಏರಿಳಿತ ಸಹಜವಾಗಿದೆ. ವಯಸ್ಸಿನ ಮಿತಿ ಇಲ್ಲದೇ ಇಂದು ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯ ಆರೋಗ್ಯ ಸಮಸ್ಯೆ (Health problem) ಕಾಡುತ್ತಿದೆ. ಇಂದು ವಿಶ್ವ ಅಧಿಕ ರಕ್ತದೊತ್ತಡ ದಿನ. ಬಹುತೇಕದಲ್ಲಿ ರಕ್ತದೊತ್ತಡ (ಬಿಪಿ) ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿಬಿಟ್ಟಿದೆ. ಬಿಪಿಯಿಂದ ಸಾಕಷ್ಟು ಕಾಯಿಲೆ ಬರುವುದು ತಿಳಿದ ವಿಷಯ. ಇದರೊಟ್ಟಿಗೆ ರಕ್ತದೊತ್ತಡ ಹೃದ್ರೋಗಕ್ಕೂ ಕಾರಣವಾಗಬಹುದು ಎಂಬುದು ತಿಳಿದಿದೆಯೇ? ಹೌದು, ಅಧಿಕ ರಕ್ತದೊತ್ತಡ ಇರುವವರು ನಿಮ್ಮ ಹೃದಯದ (Heart) ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಲೇಬೇಕು. ಇಲ್ಲವಾದರೆ, ಹೃದಯಾಘಾತ ಅಥವಾ ಇತರೆ ಹೃದಯ ಸಮಸ್ಯೆ ಕಾಯಿಲೆಗಳಿಗೆ ಒಳಗಾಗುವುದು ನಿಶ್ಚಿತ. ರಕ್ತದೊತ್ತಡವು ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಹಾಗೂ ಅದಕ್ಕೆ ಪರಿಹಾರ ಏನೂ ಎಂಬುದರ ಕುರಿತು ಫೋರ್ಟಿಸ್‌ ಆಸ್ಪತ್ರೆ ಕಾರ್ಡಿಯಾಲಜಿ ನಿರ್ದೇಶಕರಾದ ಡಾ. ಆರ್‌. ಕೇಶವ ಅವರು ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.


ಅಧಿಕ ರಕ್ತದೊತ್ತಡವು ಹೃದಯದ ದೀರ್ಘಕಾಲದ ಕಾಯಿಲೆಯಾಗಿದೆ. ಅಧಿಕ ರಕ್ತದೊತ್ತಡ ಇರುವವರಲ್ಲಿ ಹೃದಯಕ್ಕೆ ಅಪಧಮನಿಗಳ ಮೂಲಕ ಹರಿಯುವ ರಕ್ತವು ಕ್ರಮೇಣ ಏರುತ್ತಾ ಹೋಗುತ್ತದೆ. ಇದು ಅಪಧಮನಿಗಳ ವಿರುದ್ಧವೇ ಒತ್ತಡ ಬೀರಲು ಶುರು ಮಾಡುತ್ತದೆ. ಇದನ್ನು ಹೀಗೆ ನಿರ್ಲಕ್ಷಿಸಿದರೆ ಹೃದಯಾಘಾತ ಸಂಭವಿಸುವುದರಲ್ಲಿ ಆಶ್ಚರ್ಯವಿಲ್ಲ. ಅಷ್ಟೆ ಅಲ್ಲದೆ, ಇನ್ನೂ ಕೆಲವರಿಗೆ ಹೃದಯ ಸಂಬಂಧಿ ಕಾಯಿಲೆಗೂ ಇದು ಹಾದಿ ಮಾಡಿಕೊಡುತ್ತದೆ.


ಹೆಚ್ಚಾಗುತ್ತಿದೆ ರಕ್ತದೊತ್ತಡ ಸಮಸ್ಯೆ


ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಇರುವವರ ಸಂಖ್ಯೆ ಅಧಿಕವಾಗಿದೆ. ಕೋವಿಡ್‌ ಕಾರಣದಿಂದಾಗಿ ಇಡೀ ಜಗತ್ತೇ ಲಾಕ್‌ಡೌನ್‌ನಿಂದ ಎಲ್ಲಾ ರೀತಿಯ ದೈಹಿಕ ಚಟುವಟಿಕೆಗೂ ಬ್ರೇಕ್‌ ಹಾಕಿತ್ತು. ಇದರಿಂದ ಜನರು ಮನೆಯಲ್ಲಿಯೇ ಇದ್ದು, ದೈಹಿಕ ಚಟುವಟಿಕೆ ನಡೆಸದ ಕಾರಣ ರಕ್ತದೊತ್ತಡ ಕೂಡ ಹೆಚ್ಚಳವಾಗಿರುವ ಪ್ರಕರಣಗಳು ಕಂಡು ಬಂದಿದೆ. ಇದರಿಂದ ಹೃದಯಾಘಾತದ ಪ್ರಕರಣಗಳು ಸಹ ಸಾಕಷ್ಟು ಕಂಡು ಬಂದಿರುವುದು ಗೊತ್ತೇ ಇದೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಪ್ರತಿ ನಾಲ್ಕು ಪುರುಷರಲ್ಲಿ ಒಬ್ಬರಿಗೆ ಹಾಗೂ ಐದು ಮಹಿಳೆಯರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಕಂಡು ಬರುತ್ತಿದೆ ಎನ್ನಲಾಗಿದೆ. ಇದು ಅಪಾಯಕಾರಿ ಬೆಳವಣಿಗೆ.


ರಕ್ತದೊತ್ತಡ ಹೃದಯದ ಮೇಲೆ ಹೇಗೆ ಪರಿಣಾಮ ಬೀರಲಿದೆ:
ರಕ್ತದೊತ್ತಡ ಇರುವವರಲ್ಲಿ ಹೃದಯಕ್ಕೆ ರಕ್ತ ಹರಿಸುವ ಅಪಧಮನಿಗಳು ಕಿರಿದಾಗುತ್ತದೆ. ಇದರಿಂದ ಹೃದಯಕ್ಕೆ ಅಗತ್ಯಕ್ಕಿಂತ ಹೆಚ್ಚು ರಕ್ತದ ಹರಿ ಉಂಟುಮಾಡುತ್ತದೆ, ಇದು ಎದೆ ನೋವು, ಅಸಹಜ ಹೃದಯ ಬಡಿತ, ಹೃದಯಾಘಾತ ಅಥವಾ ಪರಿಧಮನಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ.


ಇನ್ನು, ರಕ್ತದೊತ್ತಡ ಹೆಚ್ಚಾದಾಗ, ಹೃದಯವು ದೇಹದ ಉಳಿದ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸಬೇಕು, ಇದರ ಪರಿಣಾಮವಾಗಿ ಕೆಳಗಿನ ಎಡ ಹೃದಯದ ಕೋಣೆ (ಎಡ ಕುಹರದ) ದಪ್ಪವಾಗುತ್ತದೆ. ಇದು ಹೃದಯದ ಎಲ್ಲಾ ಸ್ನಾಯುಗಳು ಆಯಾಸಗೊಳ್ಳಲು ಕಾರಣವಾಗಿ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಜೊತೆಗೆ ಹೃದಯ ವೈಫಲ್ಯ, ಹಠಾತ್ ಹೃದಯ ಸ್ತಂಭನದ ಸಾಧ್ಯತೆಯೂ ಹೆಚ್ಚು.


ಮಹಿಳೆಯರಲ್ಲೇ ಹೆಚ್ಚು
ಇತ್ತೀಚಿನ ಅಧ್ಯಯನಗಳ ಪ್ರಕಾರ ಮಹಿಳೆಯರಲ್ಲಿಯೇ ಹೆಚ್ಚು ರಕ್ತದೊತ್ತಡ ಪ್ರಕರಣಗಳು ಕಂಡು ಬರುತ್ತಿದೆ. ಮಹಿಳೆಯರು ಮನೆ ಹಾಗೂ ಕೆಲಸ ಎರಡೂ ಕಡೆ ಒತ್ತಡ ಉಂಟು ಮಾಡುತ್ತಿದೆ.  ಇದನ್ನು ನಿಭಾಯಿಸುವಲ್ಲಿ ಮಹಿಳೆಯರು ತನ್ನ ಮೇಲೆ ಒತ್ತಡ ಏರಿಕೊಳ್ಳುವುದು ಹೆಚ್ಚಾಗಿದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೇ ಇರುವುದು, ದೈಹಿಕ ಚಟುವಟಿಕೆಗೆ ಸಮಯಾಕಾಶ ಇಲ್ಲದೇ ಇರುವುದು, ಬೊಜ್ಜು ಹೆಚ್ಚಳ ಈ ಎಲ್ಲಾ ಕಾರಣದಿಂದ ಮಹಿಳೆಯರಲ್ಲಿ ರಕ್ತದೊತ್ತಡವೂ ಹೆಚ್ಚಾಗುತ್ತಿದೆ.


ಇದನ್ನೂ ಓದಿ: ಕಣ್ಣೀರು ತರಿಸುವ ಈರುಳ್ಳಿಯಲ್ಲಿ ಮುಖದ ಕಾಂತಿ ಹೆಚ್ಚಿಸುವ ಗುಣ ಕೂಡ ಇದೆ ಗೊತ್ತಾ?


ಅಧಿಕರಕ್ತದೊತ್ತಡದ ಲಕ್ಷಣಗಳು ಇವು:
ಅಧಿಕ ರಕ್ತದೊತ್ತಡ ಹೊಂದಿರುವ ಜನರು ರೋಗಲಕ್ಷಣಗಳನ್ನು ಗಮನಿಸುವುದಿಲ್ಲ. ಅದರ ಲಕ್ಷಣಗಳ ಬಗ್ಗೆ ಜಾಗೃತಿ ಇಲ್ಲದ ಕಾರಣ, ಇದೊಂದು ಕಾಯಿಲೆ ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ, ರಕ್ತದೊತ್ತಡದ ಲಕ್ಷಣಗಳನ್ನು ಕಡೆಗಣಿಸಿದರೆ, ಹೃದಯಾಘಾತಕ್ಕೆ ಆಹ್ವಾನ ನೀಡಿದಂತೆ, ಹೀಗಾಗಿ ಇದರ ರೋಗ ಲಕ್ಷಣಗಳನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವುದು ಅವಶ್ಯಕ.
• ಬೆಳಿಗ್ಗಿನ ವಿಪರೀತ ತಲೆನೋವು
• ಮೂಗಿನಲ್ಲಿ ರಕ್ತಸ್ರಾವ ಆಗುವುದು
• ಅನಿಯಮಿತ ಹೃದಯ ಬಡಿತ
• ದೃಷ್ಟಿ ಮಬ್ಬಾಗುವ ಅನುಭವ
* ಆಯಾಸ, ವಾಕರಿಕೆ, ವಾಂತಿ, ಗೊಂದಲ, ಆತಂಕ, ಎದೆ ನೋವು ಮತ್ತು ಸ್ನಾಯುಗಳ ನಡುಕ


ಅಧಿಕ ರಕ್ತದೊತ್ತಡಕ್ಕೆ ಕಾರಣಗಳಿವು
• ದೈಹಿಕ ವ್ಯಾಯಾಮದ ಕೊರತೆ
• ಮಧುಮೇಹಿಗಳು
• ಅಧಿಕ ಕೊಲೆಸ್ಟ್ರಾಲ್ ಮಟ್ಟ ಏರಿಕೆ, ಬೊಜ್ಜು
• 45 ವರ್ಷಕ್ಕಿಂತ ಮೇಲ್ಪಟ್ಟವರು
• ಧೂಮಪಾನ ಅಥವಾ ತಂಬಾಕು ವ್ಯಸನ
• ಅಧಿಕ ಉಪ್ಪು ಇರುವ ಆಹಾರವನ್ನು ಸೇವನೆ
• ಮಧ್ಯಪಾನ ಸೇವನೆ


ಇದನ್ನೂ ಓದಿ: ನಿಮ್ಮ ಮಗು ಓದಿನಲ್ಲಿ ಮುಂದುಬರಬೇಕೇ? ಹಾಗಿದ್ರೆ ಪೋಷಕರು ಮೊದಲು ಮಾಡಬೇಕಾದ ಕರ್ತವ್ಯವಿದು


ಅಧಿಕ ರಕ್ತದೊತ್ತಡದ ಮುನ್ನೆಚ್ಚರಿಕೆ ಹಾಗೂ ಪರಿಹಾರ:
ಅಧಿಕ ರಕ್ತದೊತ್ತಡವನ್ನು ನಿಯಂತ್ರಣ ಮಾಡುವುದು ನಮ್ಮ ಕೈಯಲ್ಲೇ ಇದೆ. ಆದರೆ, ಇದು ಕೈಮೀರಿ ಹೋದಾಗ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ರಕ್ತದೊತ್ತಡದ ಲಕ್ಷಣಗಳು ಕಂಡು ಬಂದ ಕೂಡಲೇ ನಿಮ್ಮ ಪ್ರತಿದಿನದ ಚಟುವಟಿಕೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕು.
• ವ್ಯಾಯಾಮ, ಧ್ಯಾನ, ಯೋಗ
• ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು
• ಹೃದಯದ ಆರೋಗ್ಯಕ ಕಾಪಾಡು ಆಹಾರ, ಪೌಷ್ಟಿಕ ಆಹಾರ ಸೇವನೆ
* ಎಣ್ಣೆಯುಕ್ತ ಆಹಾರದ ಮೇಲೆ ನಿಯಂತ್ರಣ,
* ಕೆಲಸ ಹಾಗೂ ಮನೆ ಒತ್ತಡದಿಂದ ರಿಲೀಫ್‌..
* ಸದಾ ಖುಷಿಯಾಗಿರಲು ಪ್ರಯತ್ನಿಸಿ
* ಉಪ್ಪಿನಂಶ ಹೆಚ್ಚಿರುವ ಆಹಾರಗಳ ಮೇಲೆ ನಿಯಂತ್ರಣವಿರಲಿ
*೧೮ ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ

top videos
    First published: