Kids Food: ಮಗ ಎತ್ತರವಾಗಿ ಬೆಳೆಯಬೇಕೆಂಬ ಕನಸೇ? ಹಾಗಿದ್ರೆ ಈ ಆಹಾರಗಳನ್ನು ತಿನ್ನಿಸಿ

ಸಾಮಾನ್ಯವಾಗಿ ಮಹಿಳೆಯರಿಗೆ 18 ಮತ್ತು ಪುರುಷರಿಗೆ 21 ವರ್ಷ ವಯಸ್ಸಾಗುವವರೆಗೂ ಅವರ ಎತ್ತರ ಬೆಳವಣಿಗೆ ಆಗುವ ಸಾಧ್ಯತೆಗಳಿರುತ್ತವೆ.  ಆದ್ದರಿಂದ ನಿಮ್ಮ ಮಗುವು ಬೆಳೆದು ಈ ವಯಸ್ಸನ್ನು ತಲುಪುವ ಹೊತ್ತಿಗೆ ಅವರು ಸರಾಸರಿ 5'6 ಅಥವಾ 5'7 ಎತ್ತರವನ್ನು ಹೊಂದಿರಬೇಕು ಎಂದು ನೀವು ಅಂದು ಕೊಂಡರೆ, ನೀವು ಈ ಆಹಾರದ ಪಟ್ಟಿಯನ್ನು ನೋಡಬೇಕು ಮತ್ತು ನಿಮ್ಮ ಮಕ್ಕಳಿಗೆ ಈ ಆಹಾರಗಳನ್ನು ನೀಡಬೇಕು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ಮನೆಯಲ್ಲಿ ಒಂದು ಪುಟ್ಟ ಮಗು (Child) ಇದ್ದರೆ, ಆ ಮಗುವಿನ ಪೋಷಕರು (Parents) ಅದರಲ್ಲೂ ತಾಯಂದಿರು (Mother) ತಮ್ಮ ಮಕ್ಕಳ ಬೆಳವಣಿಗೆಯ (Child Growth) ಪ್ರತಿ ಹಂತವನ್ನು ಸಹ ತುಂಬಾನೇ ಹತ್ತಿರದಿಂದ ಗಮನಿಸುತ್ತಾ ಇರುತ್ತಾಳೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಮಗುವು ಮಾತು ಆಡಲು (Paly) ಶುರುವಾಗುವ ಹಂತದಲ್ಲಿ ಮತ್ತು ನಡೆಯಲು ಕಲಿಯುವ ಹಂತದಲ್ಲಿ ಪೋಷಕರಿಗೆ ತಮ್ಮ ಮಗುವಿನ ಬೆಳವಣಿಗೆಯನ್ನು ಹತ್ತಿರದಿಂದ ನೋಡುವುದೇ ಒಂದು ಪರಮಾನಂದ ಎಂದು ಹೇಳಬಹುದು. ನಂತರ ಮಗುವಿನ ಎತ್ತರದ (Height) ಬಗ್ಗೆ ಅಂತೂ ಪೋಷಕರು ತುಂಬಾನೇ ಗಮನ ಹರಿಸಿರುತ್ತಾರೆ.

ಅದರಲ್ಲೂ ಪಕ್ಕದ ಮನೆಯವರ ಮಗು ಮತ್ತು ತಮ್ಮ ಮಗು ಒಂದೇ ವಯಸ್ಸಿನವರಾದರಂತೂ ಮುಗಿದೇ ಹೋಯಿತು ಕಥೆ. ಅವರ ಮಗು ಸ್ವಲ್ಪ ಎತ್ತರವಾಗಿದ್ದು, ತಮ್ಮ ಮಗು ಸ್ವಲ್ಪ ಕುಳ್ಳಗೆ ಇದ್ದರೆ, ತಮ್ಮ ಮಗು ಏಕೆ ಎತ್ತರವಾಗಿ ಬೆಳೆಯುತ್ತಿಲ್ಲ ಅಂತ ತಾಯಂದಿರಿಗೆ ದೊಡ್ಡ ಚಿಂತೆ ಆಗಿ ಬಿಡುತ್ತದೆ. ಒಬ್ಬ ವ್ಯಕ್ತಿಗೆ ಉತ್ತಮ ಎತ್ತರವು ಅವರ ವ್ಯಕ್ತಿತ್ವವನ್ನು ಬಲವಾಗಿ ಮತ್ತು ಹೆಚ್ಚು ಆತ್ಮವಿಶ್ವಾಸದಿಂದ ಕಾಣುವಂತೆ ಮಾಡುತ್ತದೆ.

ಮಗುವಿನ ಬೆಳವಣಿಗೆಗೆ ಏನೆಲ್ಲಾ ಮುಖ್ಯವಾಗಿರುತ್ತದೆ?
ಹೀಗೆ ಮಗುವಿನ ಬೆಳವಣಿಗೆಯು ಅವರ ವಂಶವಾಹಿಗಳ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಆದರೆ ಆಹಾರಕ್ರಮವು ಸಹ ಮಗುವಿನ ಎತ್ತರವನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜರ್ನಲ್ ಪ್ಲೋಸ್ ಒನ್ ನಲ್ಲಿ ಪ್ರಕಟವಾದ ಒಂದು ಅಂತರರಾಷ್ಟ್ರೀಯ ಅಧ್ಯಯನದ ಪ್ರಕಾರ 'ಬಾಲ್ಯದಿಂದ ಹದಿಹರೆಯದ ಕೊನೆಯವರೆಗೆ ತೂಕ, ಎತ್ತರ ಮತ್ತು ಬಿಎಂಐನಲ್ಲಿನ ವ್ಯತ್ಯಾಸವನ್ನು ವಿವರಿಸುವಲ್ಲಿ ಜೆನೆಟಿಕ್ಸ್ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ, ಹುಡುಗರು ಈ ಪರಿಣಾಮಗಳಿಂದ ಹೆಚ್ಚು ಗಮನಾರ್ಹವಾಗಿ ಪ್ರಭಾವಿತರಾಗುತ್ತಾರೆ'.

ಹದಿಹರೆಯದ ಮಕ್ಕಳ ಎತ್ತರಕ್ಕೆ ಬಂದಾಗ ಪೌಷ್ಟಿಕಾಂಶದಂತಹ ಸಾಮಾನ್ಯ ಪರಿಸರ ಅಂಶಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ಎಎಂಎ ಜರ್ನಲ್ ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ನಿದ್ರೆಯ ಅಸ್ವಸ್ಥತೆಗಳು ಮತ್ತು ಕಡಿಮೆ ಮಟ್ಟದ ಮಾನವ ಬೆಳವಣಿಗೆ ಹಾರ್ಮೋನ್ (ಎಚ್‌ಜಿಎಚ್) ನಡುವಿನ ಸಂಬಂಧವನ್ನು ತೋರಿಸುತ್ತದೆ, ಇದು ಮೂಳೆ ಬೆಳವಣಿಗೆ ಮತ್ತು ನಂತರದ ಎತ್ತರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ಉತ್ತಮ ಎತ್ತರವನ್ನು ಸಾಧಿಸಲು ಉತ್ತಮ ನಿದ್ರೆಯೂ ಸಹ ಪ್ರಮುಖವಾಗಿದೆ.

ಈ ಅಧ್ಯಯನಗಳನ್ನೆಲ್ಲವನ್ನು ವಿವರವಾಗಿ ನೋಡಿದ ನಂತರ, ಬೆಳೆಯುತ್ತಿರುವ ಮಕ್ಕಳ ಆಹಾರವನ್ನು ಅವರು ಬಯಸಿದ ಎತ್ತರವನ್ನು ಸಾಧಿಸಲು ಸಹಾಯ ಮಾಡುವ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವ ರೀತಿಯಲ್ಲಿ ತಯಾರಿಸಬೇಕೆಂದು ಪೋಷಕರು ಅರ್ಥ ಮಾಡಿಕೊಳ್ಳಬಹುದು. ಮಗುವಿನ ಎತ್ತರ ಹೆಚ್ಚಿನ ಪೋಷಕರಿಗೆ ಒಂದು ದೊಡ್ಡ ಕಾಳಜಿಯ ಅಂಶವಾಗಿದೆ.

ಮಗುವಿನ ಎತ್ತರ ಮತ್ತು ಪೌಷ್ಟಿಕ ಆಹಾರದ ನಡುವೆ ಹೇಗೆ ಸಂಬಂಧವಿದೆ?
ಒಬ್ಬ ವ್ಯಕ್ತಿಯ ಎತ್ತರ ಅವರು ಸೇವಿಸುವ ಆಹಾರ ಎರಡಕ್ಕೂ ನೇರವಾದ ಸಂಬಂಧವಿದೆ ಎಂದು ನಿಮಗೆ ತಿಳಿದಿದೆಯೇ? 'ಹೆಲ್ತ್ ನ್ಯೂಟ್ರಿಷನ್' ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನವು, ಒಬ್ಬ ವ್ಯಕ್ತಿಯು ಡೈರಿ ಆಹಾರಗಳು, ಚಿಕನ್ ಮತ್ತು ಇತರ ಪ್ರಾಣಿ ಆಧಾರಿತ ಆಹಾರಗಳನ್ನು ಸೇವಿಸಿದಾಗ, ಅದು ಮಕ್ಕಳನ್ನು ಎತ್ತರವಾಗಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

ಇದನ್ನೂ ಓದಿ: Parenting Tips: ಪೋಷಕರೇ, ಇಷ್ಟು ಮಾಡಿದ್ರೆ ಸಾಕಂತೆ ನಿಮ್ಮ ಮಕ್ಕಳ ಐಕ್ಯೂ ಲೆವೆಲ್​ ಹೆಚ್ಚಾಗುತ್ತೆ

ಸಾಮಾನ್ಯವಾಗಿ ಮಹಿಳೆಯರಿಗೆ 18 ಮತ್ತು ಪುರುಷರಿಗೆ 21 ವರ್ಷ ವಯಸ್ಸಾಗುವವರೆಗೂ ಅವರ ಎತ್ತರ ಬೆಳವಣಿಗೆ ಆಗುವ ಸಾಧ್ಯತೆಗಳಿರುತ್ತವೆ.  ಆದ್ದರಿಂದ ನಿಮ್ಮ ಮಗುವು ಬೆಳೆದು ಈ ವಯಸ್ಸನ್ನು ತಲುಪುವ ಹೊತ್ತಿಗೆ ಅವರು ಸರಾಸರಿ 5'6 ಅಥವಾ 5'7 ಎತ್ತರವನ್ನು ಹೊಂದಿರಬೇಕು ಎಂದು ನೀವು ಅಂದು ಕೊಂಡರೆ, ನೀವು ಈ ಆಹಾರದ ಪಟ್ಟಿಯನ್ನು ನೋಡಬೇಕು ಮತ್ತು ನಿಮ್ಮ ಮಕ್ಕಳಿಗೆ ಈ ಆಹಾರಗಳನ್ನು ನೀಡಬೇಕು.

1. ಡೈರಿ ಉತ್ಪನ್ನಗಳು
ಹಾಲಿನ ಜೊತೆಗೆ, ಎತ್ತರದ ಮೇಲೆ ಪರಿಣಾಮ ಬೀರಲು ಡೈರಿ ಉತ್ಪನ್ನಗಳನ್ನು ಸಹ ಸೇವಿಸಬೇಕು. ಡೈರಿ ಉತ್ಪನ್ನಗಳಾದ ಚೀಸ್, ಪನೀರ್, ಮೊಸರು, ವಿಪ್ಪಿಂಗ್ ಕ್ರೀಮ್, ಐಸ್‌ಕ್ರೀಮ್ ವಿಟಮಿನ್ ಎ, ಬಿ, ಡಿ ಮತ್ತು ಇ ಯಿಂದ ಸಮೃದ್ಧವಾಗಿವೆ. ಅವು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅನ್ನು ಸಹ ಹೊಂದಿರುತ್ತವೆ. ಬೆಳವಣಿಗೆಗೆ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ತುಂಬಾನೇ ಅತ್ಯಗತ್ಯವಾಗುತ್ತವೆ. ವಿಟಮಿನ್ ಡಿ ಕೊರತೆಯು ನಿಮ್ಮ ಮಗ ಅಥವಾ ಮಗಳ ಕಡಿಮೆ ಎತ್ತರಕ್ಕೆ ಕಾರಣವಾಗಬಹುದು. ವಿಶೇಷವಾಗಿ ಈ ಪ್ರೌಢಾವಸ್ಥೆಯಲ್ಲಿ ನಾವು ಸಾಕಷ್ಟು ಕ್ಯಾಲ್ಸಿಯಂ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು ಮತ್ತು ಮುಖ್ಯವಾಗಿರುತ್ತದೆ.

2. ಪಿಷ್ಟಗಳು ಮತ್ತು ಧಾನ್ಯಗಳು
ಪಿಷ್ಟಗಳು ಮತ್ತು ಧಾನ್ಯಗಳು ನಮ್ಮ ದೇಹದಲ್ಲಿ ಶಕ್ತಿಯ ಮುಖ್ಯ ಮೂಲಗಳಾಗಿವೆ. ಇದಲ್ಲದೆ, ಅವು ವಿಟಮಿನ್ ಬಿ, ಫೈಬರ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸೆಲೆನಿಯಂ ಅನ್ನು ಒದಗಿಸುತ್ತವೆ. ಅವು ಅಗತ್ಯವಾದ ಕ್ಯಾಲೋರಿಗಳನ್ನು ಒದಗಿಸುವುದರಿಂದ, ಅವುಗಳ ಬಳಕೆಯನ್ನು ಹೆಚ್ಚಿಸಬೇಕು, ವಿಶೇಷವಾಗಿ ಪ್ರೌಢಾವಸ್ಥೆಯಲ್ಲಿ, ಮಕ್ಕಳು ತ್ವರಿತ ಬೆಳವಣಿಗೆಯ ಹಂತವನ್ನು ಹಾದು ಹೋದಾಗ ಎಂದು ಹೇಳಬಹುದು. ಕಂದು ಅಕ್ಕಿ, ಪಾಪ್ ಕಾರ್ನ್, ಸಂಪೂರ್ಣ ಗೋಧಿ ಮತ್ತು ಸಂಪೂರ್ಣ ಧಾನ್ಯದ ಪಾಸ್ತಾ ಸರಿಯಾದ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ:  Diabetes in Children: ಮಕ್ಕಳಲ್ಲಿ ಹೆಚ್ಚಾಗ್ತಿದೆ ಮಧುಮೇಹ. ಪೋಷಕರು ತಪ್ಪದೇ ಈ ಕೆಲಸ ಮಾಡಬೇಕು

3. ಮೊಟ್ಟೆಗಳು
ಮೊಟ್ಟೆಗಳು ಪ್ರೋಟೀನ್ ಗಳ ಉತ್ತಮ ಮೂಲವಾಗಿದ್ದು, ಅದರಲ್ಲಿರುವ ಬಿಳಿ ಬಣ್ಣದ ಅಲ್ಬುಮೆನ್ 100 ಪ್ರತಿಶತ ಪ್ರೋಟೀನ್ ಅನ್ನು ಹೊಂದಿರುತ್ತದೆ. ಮೊಟ್ಟೆಗಳು ವಿಟಮಿನ್ ಬಿ 2 ಅನ್ನು ಸಹ ಹೊಂದಿರುತ್ತವೆ, ಇದನ್ನು ರೈಬೋಫ್ಲೇವಿನ್ ಎಂದೂ ಕರೆಯಲಾಗುತ್ತದೆ. ಎತ್ತರವನ್ನು ಹೆಚ್ಚಿಸಲು, 2 ರಿಂದ 4 ಮೊಟ್ಟೆಗಳನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳ ಆಹಾರದಲ್ಲಿ ಸೇರಿಸಬೇಕು.

4. ಸೋಯಾಬೀನ್
ಎಲ್ಲಾ ಸಸ್ಯಾಹಾರಿ ಆಹಾರಗಳಲ್ಲಿ ಸೋಯಾಬೀನ್ ಗಳು ಅತ್ಯಧಿಕ ಪ್ರೋಟೀನ್ ಗಳನ್ನು ಹೊಂದಿರುತ್ತವೆ. ಸೋಯಾಬೀನ್ ಗಳಲ್ಲಿರುವ ಶುದ್ಧ ಪ್ರೋಟೀನ್ ಮೂಳೆ ಮತ್ತು ಅಂಗಾಂಶದ ದ್ರವ್ಯರಾಶಿಯನ್ನು ಸುಧಾರಿಸುತ್ತದೆ. ಎತ್ತರವನ್ನು ಹೆಚ್ಚಿಸಲು, ಪ್ರತಿದಿನ 50 ಗ್ರಾಂ ಸೋಯಾಬೀನ್ ಗಳನ್ನು ಶಿಫಾರಸು ಮಾಡಲಾಗುತ್ತದೆ. ಸಸ್ಯಾಹಾರಿಗಳು ತಮ್ಮ ಪ್ರೋಟೀನ್ ಅವಶ್ಯಕತೆಗಳನ್ನು ಅತ್ಯಂತ ಪೌಷ್ಟಿಕವಾಗಿರುವ ಸೋಯಾಬೀನ್ ಗಳಿಂದ ಪೂರೈಸಿಕೊಳ್ಳಬಹುದು.

5. ಹಸಿರು ತರಕಾರಿಗಳು
ಪಾಲಕ್ ನಂತಹ ಗಾಢ ಹಸಿರು ಸೊಪ್ಪು ತರಕಾರಿಗಳು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಫೋಲೇಟ್, ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಇವು ಅತ್ಯಗತ್ಯ. ಅದಕ್ಕಾಗಿಯೇ ನಿಮ್ಮ ಮಗುವು ಎತ್ತರವಾಗಿ ಬೆಳೆಯಬೇಕೆಂದು ನೀವು ಬಯಸಿದರೆ, ಅವುಗಳ ಎತ್ತರವನ್ನು ಹೆಚ್ಚಿಸಲು ಆಹಾರದಲ್ಲಿ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇರಿಸಿ.

6. ಬಾಳೆಹಣ್ಣು
ನಿಮ್ಮ ಮಗುವಿನ ಎತ್ತರವನ್ನು ಹೆಚ್ಚಿಸಲು ಬಾಳೆಹಣ್ಣು ಅತ್ಯಂತ ಪ್ರಮುಖವಾದ ಹಣ್ಣಾಗಿದೆ. ಪೊಟ್ಯಾಸಿಯಮ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಕರಗುವ ನಾರು, ವಿಟಮಿನ್ ಬಿ 6, ಸಿ, ಎ ಮತ್ತು ಆರೋಗ್ಯಕರ ಪ್ರಿಬಯಾಟಿಕ್ ಗಳಂತಹ ಅನೇಕ ಅಗತ್ಯ ಪೋಷಕಾಂಶಗಳಿಂದ ಇದು ಸಮೃದ್ಧವಾಗಿದೆ. ನಿಮ್ಮ ಮಗುವಿನ ಎತ್ತರವನ್ನು ಹೆಚ್ಚಿಸಲು ಸಮತೋಲಿತ ಆಹಾರವನ್ನು ಆಯ್ಕೆ ಮಾಡುವಾಗ ನೀವು ನಿರ್ಲಕ್ಷಿಸಲಾಗದ ಒಂದು ಹಣ್ಣು ಇದಾಗಿದೆ.

ಇದನ್ನೂ ಓದಿ:  Child Education: ಪೋಷಕರೇ, ಮಗುವಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕೆ? ಇಲ್ಲಿದೆ ಕೆಲವು ಟಿಪ್ಸ್

7. ಮೀನು
ಮಕ್ಕಳು ಎತ್ತರವಾಗಿ ಬೆಳೆಯಲು ಮೀನು ವಿಶೇಷವಾಗಿ ಮೌಲ್ಯಯುತವಾಗಿದೆ. ಏಕೆಂದರೆ ಇದು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದೆ. 100 ಗ್ರಾಂ ಸಾಲ್ಮನ್ ನಲ್ಲಿ 2.3 ಗ್ರಾಂ ಒಮೆಗಾ-3, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸೆಲೆನಿಯಂ ಮತ್ತು ಪ್ರಮುಖ ಜೀವಸತ್ವಗಳಿವೆ. 2017ರ ಅಧ್ಯಯನದ ಪ್ರಕಾರ, ಒಮೆಗಾ-3 ಕೊಬ್ಬಿನಾಮ್ಲಗಳು ಅರಿವಿನ ಕಾರ್ಯ, ಹೃದಯ ರಕ್ತನಾಳದ ಆರೋಗ್ಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುವಾಗ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
Published by:Ashwini Prabhu
First published: