Beauty Tips: ಕೂದಲಿಗೆ ಬ್ಲೀಚ್ ಮಾಡಿಸುವ ಮುನ್ನ ಈ ಸಲಹೆಗಳನ್ನು ಪಾಲಿಸಿ

Hair coloring : ನಾವು ಕುದಲಿನ ವಿಚಾರದಲ್ಲಿ ಚಾಲೆಂಜ್ ತೆಗೆದುಕೊಳ್ಳುವುದು ಒಳ್ಳೆಯದು, ಆದರೆ ಅದು ಶಾಶ್ವತವಾಗಿ ಕೂದಲಿನ ಹಾನಿಗೆ ಕಾರಣವಾಗಬಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೂದಲಿನ ಆರೈಕೆ ಮಾಡುವುದು ಅಷ್ಟು ಸುಲಭವಲ್ಲ. ಎಲ್ಲ ಉತ್ಪನ್ನಗಳು ಪ್ರತಿಯೊಬ್ಬರ ಕೂದಲಿಗೆ ಸರಿ ಹೊಂದುವುದಿಲ್ಲ. ಹಾಗೆಯೇ ಕುದಲಿಗೆ ಕಲರಿಂಗ್ ಮಾಡಿಸುವುದು ಸಹ ಹಾಗೆ. ನೀವು ನಿಮ್ಮ ಕೂದಲಿಗೆ ಹೆಚ್ಚಿನ ಬಣ್ಣಗಳನ್ನು ಹಾಕಿಸಿದ್ದರೇ, ಹೆಚ್ಚು ಆರೈಕೆಯ ಅಗತ್ಯವಿರುತ್ತದೆ. ನೀವು ನಿಮ್ಮ ಕೂದಲು ಸ್ಟೈಲ್ ಆಗಿ ಕಾಣಲು ಯಾವುದನ್ನಾರೂ ಮಾಡಿಸುವಾಗ ಅದರ ಪರಿಣಾಮಗಳನ್ನು ಸಹ ತಿಳಿದುಕೊಳ್ಳಬೇಕು. ನೀವು ಕುದಲಿಗೆ ಬ್ಲೀಚ್ ಮಾಡಿಸುವ ಮುನ್ನ ಮತ್ತು ಮಾಡಿಸಿದ ನಂತರ ಯಾವ ರೀತಿಯ ಕಾಳಜಿ ವಹಿಸಬೇಕು ಎಂಬುದು ಮುಖ್ಯವಾಗುತ್ತದೆ. ನೀವು ಬ್ಲೀಚ್ ಮಾಡಿಸಿಕೊಳ್ಳುವುದು ನಿಮಗೆ ಸಂತೋಷ ನೀಡುತ್ತದೆ. ಆದರೆ ನೀವು ಮಾಡಿಸಿಕೊಳ್ಳುವ ಮೊದಲು ಮತ್ತು ನಂತರ ಕೂದಲಿನ ಆರೈಕೆ ಚನ್ನಾಗಿ ಮಾಡಿರದಿದ್ದಲ್ಲಿ ಅಥವಾ ಮಾಡದಿದ್ದಲ್ಲಿ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುವುದು ಖಚಿತ.

ನಾವು ಕೂದಲಿನ ವಿಚಾರದಲ್ಲಿ ಚಾಲೆಂಜ್ ತೆಗೆದುಕೊಳ್ಳುವುದು ಒಳ್ಳೆಯದು, ಆದರೆ ಅದು ಶಾಶ್ವತವಾಗಿ ಕೂದಲಿನ ಹಾನಿಗೆ ಕಾರಣವಾಗಬಾರದು. ನೀವು ನಿಮ್ಮ ಕೂದಲಿಗೆ ಮೇಕ್ ಓವರ್ ಮಾಡುವುದಾದರೇ ಕೆಲ ಸಲಹೆಗಳನ್ನುಪಾಲಿಸಬೇಕು. ನೀವು ನಿಮ್ಮ ಕೂದಲನ್ನು ಡೈ ಮಾಡಿಸುವ ವಾರಗಳ ಮೊದಲು ಕೂದಲಿನ ಬಗ್ಗೆ ಹೆಚ್ಚು ಕಾಳಜಿವಹಿಸಿ ಆರೈಕೆ ಮಾಡಬೇಕು.

ಬ್ಲೀಚ್ ಮಾಡಿಸಿಕೊಳ್ಳುವ ಮೊದಲಿನ ಆರೈಕೆ ಇಲ್ಲಿದೆ.

ಸ್ಟೈಲಿಂಗ್ ಪರಿಕರಗಳಿಂದ ದೂರವಿರಿ
ನೀವು ನಿಮ್ಮ ಕೂದಲಿನ ತುದಿಗಳು ವಿಭಜಿತವಾಗಿರುವುದನ್ನ ಗಮನಿಸಿದರೆ ಅದು ಕೂದಲು ಹಾನಿಯಾಗಿರುವ ಲಕ್ಷಣ. ಹಾಗಾಗಿ ಇನ್ನು ಹೆಚ್ಚು ಹಾನಿ ಮಾಡಬೇಡಿ. ನೀವು ಬ್ಲೀಚ್ ಮಾಡಿಸಿಕೊಳ್ಳುವ ಕೆಲವು ವಾರಗಳ ಮೊದಲು ಕೂದಲನ್ನು ಸ್ಟೈಲ್ ಮಾಡುವ ಅಂದರೆ, ಹೇರ್ ಸ್ಟ್ರೈಟ್ನರ್ ಸೇರಿದಂತೆ ಬೇರೆ ಉಪಕರಣಗಳನ್ನು ಬಳಸಬೇಡಿ. ಕೆಲ ದಿನಗಳ ಕಾಲ ಈ ಉಪಕರಣಗಳನ್ನು ಬಳಸದಿರುವುದು, ಕೂದಲಿನ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

ನೀವು ನಿಮ್ಮ ಕೂದಲಿಗೆ ಬ್ಲೀಚ್ ಮಾಡಿಸುವಾಗ ಪರಿಣಿತರಿರುವ ಸಲೂನ್ಗಳಲ್ಲಿ ಮಾಡಿಸಿಕೊಳ್ಳಿ. ಯಾಕೆಂದರೆ ಅಲ್ಲಿನ ಹೇರ್ ಸ್ಟೈಲಿಸ್ಟ್‌ಗಳು ಒಳ್ಳೆಯ ಜ್ಞಾನವನ್ನು ಹೊಂದಿರುತ್ತಾರೆ. ಹೇಗೆ ಉತ್ಪನ್ನಗಳನ್ನು ಬಳಸಬೇಕು
ಅದು ನಿಮ್ಮ ಕೂದಲಿನ ಮೇಲೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನ ಅವರು ತಿಳಿದಿರುತ್ತಾರೆ. ಅಲ್ಲದೇ ಅವರು ಕೂದಲಿನ ಬೇರುಗಳಿಗೆ ಬಣ್ಣವನ್ನು ಹಚ್ಚುವುದಿಲ್ಲ.

ಕಟ್ಟುನಿಟ್ಟಾದ ನಿಯಮ ಪಾಲಿಸಿ-
ಕೂದಲಿಗೆ ಮಾಸ್ಕ್ , ಶ್ಯಾಂಪೂಗಳು ಮತ್ತು ಕಂಡಿಷನರ್‌ಗಳನ್ನು ಹೆಚ್ಚು ಬಳಸಿ. ಆದರೆ ಪ್ರತಿ ದಿನವಲ್ಲ. ನಿಮ್ಮ ಕೂದಲಿನ ಹಾನಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ಗೊರಕೆ ಹೊಡಿತೀರಾ? ಅದ್ರಿಂದ ತಪ್ಪಿಸಿಕೊಳ್ಳೋಕೆ ಹೀಗೆ ಮಾಡಿ

ಅತಿಯಾದ ತಲೆ ಸ್ನಾನಬೇಡ: ವಾರದಲ್ಲಿ ಹೆಚ್ಚು ತಲೆ ಸ್ನಾನವನ್ನು ಮಾಡಬೇಡಿ. ಅದರಲ್ಲೂ ಹೆಚ್ಚು ಎಣ್ಣೆಯನ್ನು ಸಹ ಬಳಸಬೇಡಿ.

ಬ್ಲೀಚ್ ನಂತರ ತೆಗೆದುಕೊಳ್ಳ ಬೇಕಾಗಿರುವ ಆರೈಕೆ

ವಿಭಜಿತ ಕೂದಲುಗಳಿಗೆ ಬೈ ಹೇಳಿ- ಒಮ್ಮೆ ನಿಮ್ಮ ಕೂದಲಿಗೆ ಬಣ್ಣ ಹಚ್ಚಿದ ನಂತರ, ನಿಮ್ಮ ಕೂದಲುಗಳಲ್ಲಿ ಕಂಡು ಬರುವ ವಿಭಜುತ ಕೂದಲುಗಳನ್ನು ತೆಗೆದು ಹಾಕಿ. ನಿಮ್ಮ ಹೇರ್ ಸ್ಟೈಲಿಸ್ಟ್ಗೆ ಹೇಳಿ ಅದನ್ನು ಕಟ್ ಮಾಡಿಸಿ.

ತಲೆ ಸ್ನಾನ ಮಾಡಬೇಡಿ: ದಯವಿಟ್ಟು ನೀವು ನಿಮ್ಮ ಕೂದಲನ್ನು ಕನಿಷ್ಠ 3 ದಿನಗಳ ನಂತರ ತೊಳೆಯಿರಿ. ಆಗ ಕೂದಲಿಗೆ ಹಾಕಿರುವ ಬಣ್ಣ ಹೆಚ್ಚು ಕಾಲ ಉಳಿಯಲು ಸಹಾಯವಾಗುತ್ತದೆ.

ಸರಿಯಾದ ಉತ್ಪನ್ನಗಳನ್ನು ಬಳಸಿ- ಕೂದಲಿಗೆ ಬಣ್ಣ ಹಾಕಿಸಿದ ನಂತರ ಒಳ್ಳೆಯ ಉತ್ಪನ್ನಗಳನ್ನು ಬಳಸಿ. ನಿಮ್ಮ ಸಾಮಾನ್ಯ ಶಾಂಪೂ ಬಳಸುವ ಬದಲು, ಬಣ್ಣ ಹಾಕಿರುವ ಕೂದಲಿಗೆ ಸೂಕ್ತವಾಗುವ ಶಾಂಪೂ ಬಳಸುವುದು ಉತ್ತಮ.

ತಣ್ಣೀರಿನಲ್ಲಿ ತಲೆ ಸ್ನಾನ ಮಾಡಿ: ಕೂದಲಿಗೆ ಬಣ್ಣ ಹಾಕಿಸಿದ ನಂತರ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಕೂದಲಿಗೆ ಬಿಸಿ ನೀರನ್ನು ಬಳಸುವುದು ಕೂದಲಿಗೆ ಹಾನಿ ಮಾಡುತ್ತದೆ.
Published by:Sandhya M
First published: