ದೇಹವು ಆರೋಗ್ಯಯುತವಾಗಿರಲು ನಮ್ಮ ರೋಗನಿರೋಧಕ ಶಕ್ತಿಯು (Immunity System) ಹೆಚ್ಚಾಗಿರಬೇಕು. ದುರ್ಬಲ ರೋಗನಿರೋಧಕ ಶಕ್ತಿ ಇದ್ದರೆ ಅನಾರೋಗ್ಯಕ್ಕೆ (Health Issues) ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಇತರ ಮೆಡಿಸಿನ್ ಗಳನ್ನು ತಿನ್ನುವ ಬದಲು ನಮ್ಮ ಮನೆಯಲ್ಲೇ ನಾವು ಪ್ರತಿದಿನ ತಿನ್ನುವ ಆಹಾರಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಫಬಹುದು. ನಾವು ಸೇವಿಸುವ ಆಹಾರದ ಮೇಲೆ ನಮ್ಮ ಆರೋಗ್ಯ (Health) ನಿರ್ಧಾರವಾಗುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗಬೇಕು ಎಂದಲ್ಲಿ ಪ್ರೋಟಿನ್ಯುಕ್ತ (Protein) ಆಹಾರ ಸೇವನೆ ಬಹಳ ಮುಖ್ಯ ಈ ಲೇಖನದಲ್ಲಿ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಆಹಾರಗಳ ಬಗ್ಗೆ ತಿಳಿಯೋಣ.
ಬ್ರೊಕೋಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ಎಲೆಕೋಸು ಜಾತಿಗೆ ಸೇರಿದ ಬ್ರೊಕೋಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಖ್ಯವಾಗಿ ಇದರಲ್ಲಿ ವಿಟಮಿನ್ ಎ ವಿಟಮಿನ್ ಎ ಮತ್ತು ವಿಟಮಿನ್ ಸಿ ಹಾಗೆ ಅನೇಕ ಬಗೆಯ ಆರೋಗ್ಯಕರ ದೇಹಕ್ಕೆ ಬೇಕಾಗಿರುವಂತಹ ಆಂಟಿಆಕ್ಸಿಡೆಂಟ್ ಅಂಶಗಳು ಅಡಕವಾಗಿವೆ. ಆದ್ದರಿಂದ ಇದು ದೇಹದಲ್ಲಿ ಕಂಡುಬರುವ ಪ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಮೂಲಕ ಅನೇಕ ರೋಗಗಳನ್ನು ನಮ್ಮತ್ತ ಬರದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬ್ರೊಕೋಲಿ ಮತ್ತು ಸ್ವಲ್ಪ ಬೆಣ್ಣೆಯನ್ನು ಜೊತೆಗೆ ಸೇರಿಸಿ ಸೇವನೆ ಮಾಡಿ.
ಇದನ್ನೂ ಓದಿ: Heart Attack Risk: ವಿವಾಹಿತರಿಗೆ ಹೃದಯಾಘಾತ ಆಗೋದು ಕಡಿಮೆ! ಈ ಕಾರಣಕ್ಕಾದ್ರೂ ಮದುವೆ ಆಗುತ್ತಾರಾ ಪುರುಷರು?
ರೋಗನಿರೋಧಕ ಶಕ್ತಿ ಹೆಚ್ಚಿಸಲು ಶುಂಠಿ ಸಹಕಾರಿ
ಆಯುರ್ವೇದದಲ್ಲಿ ಶುಂಠಿಗೆ ಮಹತ್ವದ ಸ್ಥಾನವಿದೆ. ಇದು ಕೇವಲ ಅಡುಗೆಗೆ ರುಚಿ ಕೊಡುವುದು ಮಾತ್ರವಲ್ಲ ಅನೇಕ ಆರೋಗ್ಯ ಸಂಬಂಧಿ ಕಾಯಿಲೆಗಳು ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುವ ಗುಣವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್ ಹಾಗೆ ಕ್ಯಾಲ್ಸಿಯಂ ಬೀಟಾ-ಕ್ಯಾರೋಟಿನ್ ನಂತಹ ಖನಿಜಗಳಿಂದ ಇದು ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪಿನಿಂದ ತಯಾರಿಸಿದ ಆಹಾರ ಸೇವಿಸಿ
ಪಾಲಕ್ ಸೊಪ್ಪು ವಿಟಮಿನ್ ಎ ಮತ್ತು ವಿಟಮಿನ್ ಕೆ ನಿಂದ ಸಮೃದ್ಧವಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಮೆದುಳಿನ ಕಾರ್ಯವನ್ನು ಕೂಡ ಸುಧಾರಿಸುತ್ತದೆ. ಇದು ಹಲವಾರು ಉತ್ಕರ್ಷಣ ನಿರೋಧಕಗಳು ಮತ್ತು ಬೀಟಾ ಕ್ಯಾರೋಟಿನ್ನಿಂದ ಕೂಡಿದೆ, ಇದು ನಮ್ಮ ರೋಗನಿರೋಧಕ ವ್ಯವಸ್ಥೆಗಳ ಸೋಂಕಿನ-ಹೋರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮೊಸರು ಸೇವನೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ
ಮೊಸರು ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ ಮೊಸರಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಹೇಗೋ ಸೇರಿಕೊಂಡ ಅತ್ಯಂತ ಸೂಕ್ಷ್ಮ ಕ್ರಿಮಿಗಳನ್ನು ಬಗ್ಗುಬಡಿಯಲು ಸಮರ್ಥವಾಗಿವೆ. ಮೊಸರು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ ಆದ್ದರಿಂದ ಇದು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು.
ಇದನ್ನೂ ಓದಿ: Health Care: ಬಾಳೆ ಎಲೆಯ ಊಟದಲ್ಲಿರುವ ಗಮ್ಮತ್ತು ನಿಮಗೇನು ಗೊತ್ತು? ಆರೋಗ್ಯ ದೃಷ್ಟಿಯಲ್ಲೂ ಇದು ಬೆಸ್ಟ್!
ನೆನೆಸಿಟ್ಟ ಬಾದಾಮಿ ಬೀಜಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ
ನೆನೆಸಿಟ್ಟ ಬಾದಾಮಿ ಬೀಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ನೆನೆಸಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರೀ ಬಯಾಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ ಆಗಿರುತ್ತದೆ. ಪ್ರೀ ಬಯಾಟಿಕ್ ಅಂಶವು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯವನ್ನು ಉತ್ಪಾದಿಸುವ ಮೂಲಕ ಹೊಟ್ಟೆಯ ಮೇಲೆ ಪರಿಣಾಮ ಬೀರುವಂತಹ ರೋಗಗಳನ್ನು ತಡೆಗಟ್ಟುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ