Benefits Of Okra: ಚರ್ಮದ ಹೊಳಪನ್ನು ಹೆಚ್ಚಿಸಲು ಬೆಂಡೆಕಾಯಿ ಪೇಸ್ಟ್ ಟ್ರೈ ಮಾಡಿ

Skin Care: ಕೆಲವರ ಚರ್ಮ ಬಹಳ ಸೂಕ್ಷ್ಮವಾಗಿರುತ್ತದೆ. ಅವರಿಗೆ ಬೆಂಡೆಕಾಯಿ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಚರ್ಮದ ಮೇಲೆ ಬೆಂಡೆಕಾಯಿ ಬಳಸುವ ಮುನ್ನ ಪರೀಕ್ಷೆ ಮಾಡಿಕೊಳ್ಳಿ.

ಬೆಂಡೆಕಾಯಿ

ಬೆಂಡೆಕಾಯಿ

  • Share this:
ಬೆಂಡೆಕಾಯಿ  ಹಲವಾರು ಜನರಿಗೆ ಇಷ್ಟವಿಲ್ಲ. ಸಣ್ಣವರಿದ್ದಾಗಿನಿಂದಲೂ ಬೆಂಡೆಕಾಯಿ ಸೇವನೆ ಮಾಡುವುದು ಕಷ್ಟದ ಕೆಲಸ. ಆದರೆ ಕೆಲವರಿಗೆ ಬೆಂಡೆಕಾಯಿ ಎಂದರೆ ಬಹಳ ಇಷ್ಟ. ಬೆಂಡೆಕಾಯಿ ಹಲವು ಆರೋಗ್ಯಕರ ಪ್ರಯೋಜವನ್ನು ಹೊಂದಿದೆ.  ನಮ್ಮ ದೇಹಕ್ಕೆ ಅವಶ್ಯಕವಾದ ಹಲವಾರು ಪೋಷಕಾಂಶಗಳನ್ನು ಈ ಬೆಂಡೆಕಾಯಿ ಒದಗಿಸುತ್ತದೆ. ಆದರೆ ಬೆಂಡೆಕಾಯಿ ಚರ್ಮದ ಆರೋಗ್ಯಕ್ಕೆ ಸಹ ಉತ್ತಮವಾದ ಆಯ್ಕೆ ಎಂಬುದು ನಿಮಗೆ ಗೊತ್ತಾ? ಹೌದು, ಬೆಂಡೆಕಾಯಿ ನಿಮ್ಮ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.  

ಮಳೆಗಾಲದಲ್ಲಿ ಸಾಮಾನ್ಯವಾಗಿ ಹಲವು ಜನರಿಗೆ ವಿಭಿನ್ನ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ವಾತಾವರಣದಲ್ಲಿನ ಬದಲಾವಣೆ ಚರ್ಮದಲ್ಲಿ ಸೋಂಕು ಉಂಟು ಮಾಡಿ, ಅದರಿಂದ ಹಲವು ಚರ್ಮದ ರೋಗಗಳಿಗೆ ಕಾರಣವಾಗುತ್ತದೆ.

ಆದರೆ ಚರ್ಮದ ಹಲವಾರು ಸಮಸ್ಯೆಗಳಿಗೆ ನಾವು ಪ್ರತಿದಿನ ಬಳಕೆ ಮಾಡುವ ಬೆಂಡೆಕಾಯಿ ಪರಿಹಾರ ನೀಡುತ್ತದೆ.  ಏಕೆಂದರೆ ಬೆಂಡೆಕಾಯಿಯಲ್ಲಿರುವ ಲೋಳೆರಸ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ಇನ್ಫಾಮೇಟರಿ, ಅನಲ್ಗೆಸಿಕ್  ಗುಣಗಳನ್ನು ಹೊಂದಿದ್ದು, ಇದು ಚರ್ಮದ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ.

ಕೆಲವರ ಚರ್ಮ ಬಹಳ ಸೂಕ್ಷ್ಮವಾಗಿರುತ್ತದೆ. ಅವರಿಗೆ ಬೆಂಡೆಕಾಯಿ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಚರ್ಮದ ಮೇಲೆ ಬೆಂಡೆಕಾಯಿ ಬಳಸುವ ಮುನ್ನ ಪರೀಕ್ಷೆ ಮಾಡಿಕೊಳ್ಳಿ.

ಚರ್ಮದ ಹೊಳಪನ್ನು ಹೆಚ್ಚಿಸಲು ಬೆಂಡೆಕಾಯಿ ಬಳಕೆ ಉತ್ತಮ ಆಯ್ಕೆ. ಬೆಂಡೆಕಾಯಿ ತಿನ್ನುವುದರಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ. ಇದು ವಿಟಮಿನ್ ಸಿ, ವಿಟಮಿನ್ ಎ, ಫೋಲೇಟ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನಂತಹ ಪೋಷಕಾಂಶಗಳನ್ನು ಹೊಂದಿದ್ದು ಅದು ಆರೋಗ್ಯಕರ ಚರ್ಮ ಪಡೆಯಲು ಸಹಾಯ ಮಾಡುತ್ತದೆ.

ಫೇಶಿಯಲ್ ಮಾಸ್ಕ್: ಒಂದು ಬಟ್ಟಲಿನಲ್ಲಿ, 1 ಟೀಸ್ಪೂನ್  ಬೆಂಡೆಕಾಯಿ ಪುಡಿ ತೆಗೆದುಕೊಳ್ಳಿ ಅದಕ್ಕೆ ನೀರನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ, ಇದನ್ನು 10 ನಿಮಿಷಗಳ ಕಾಲ ಒಣಗಲು ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಮೂರು ಬಾರಿ ಇದನ್ನು ಬಳಸುವುದು ಉತ್ತಮ ಫಲಿತಾಂಶ ನೀಡುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಗರ್ಭೀಣಿಯರು ಈ ಕ್ರಮಗಳನ್ನು ಅನುಸರಿಸಿ

ಒಣ ಚರ್ಮದ ಸಮಸ್ಯೆಗೆ ಹಾಗೂ ಮೊಡವೆಗಳಿಗೆ ಈ ಬೆಂಡೆಕಾಯಿ ಉತ್ತಮ ಪರಿಹಾರ ಎಂದು ಚರ್ಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಸೋರಿಯಾಸಿಸ್ ಸಮಸ್ಯೆಯನ್ನು ಹೊಂದಿರುವವರಿಗೆ  ಚರ್ಮದ ಕೆರೆತ ಸಾಮಾನ್ಯವಾಗಿರುತ್ತದೆ. ಇದಕ್ಕೆ  ಪರಿಹಾರವೆಂದರೆ ಬೆಂಡೆಕಾಯಿಯ ಲೋಳೆ. ಸಮಸ್ಯೆ ಇರುವ ಸ್ಥಳದಲ್ಲಿ ಈ ಲೋಳೆಯನ್ನು ಹಚ್ಚುವುದು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

2 ಹಸಿ ತಾಜಾ ಬೆಂಡೆಕಾಯಿಗಳನ್ನು ತೆಗೆದುಕೊಳ್ಳಿ, ಅದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ ಮಿಕ್ಸಿ ಮಾಡಿ. ಪೇಸ್ಟ್ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಮಿಕ್ಸಿ ಮಾಡಲು ನೀರನ್ನು ಈ ಉಪಯೋಗಿಸಬಾರದು. ಏಕೆಂದರೆ ನೀರನ್ನು ಬಳಸಿದರೆ ಬೆಂಡೆಕಾಯಿಯಲ್ಲಿನ ಲೋಳೆ ಸಂಪೂರ್ಣವಾಗಿ ಕರಗಿ ಹೋಗುತ್ತದೆ. ನಂತರ ಬೆಂಡೆಕಾಯಿಯ ಪೇಸ್ಟ್ ತೆಗೆದುಕೊಂಡು ಮುಖಕ್ಕೆ  ಮೊಡವೆಗಳು ಹೆಚ್ಚಾಗಿ ಕಂಡು ಬರುವ ಕಡೆ ಹಚ್ಚಿ. ಅಲ್ಲದೇ, ಕುತ್ತಿಗೆಯ ಭಾಗದಲ್ಲಿ ಬೆಂಡೆಕಾಯಿ ಪೇಸ್ಟ್ ಹಚ್ಚುವುದರಿಂದ ಹೆಚ್ಚಿನ ಸಹಾಯವಾಗುತ್ತದೆ ಸ್ವಲ್ಪ ಹೊತ್ತು ಇದನ್ನು ಒಣಗಲು ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.

ಇನ್ನು ಬೆಂಡೆಕಾಯಿ ಕೇವಲ ಚರ್ಮಕ್ಕೆ ಮಾತ್ರವಲ್ಲದೆ ಕೂದಲಿನ ಬೆಳವಣಿಗೆಗೆ ಕೂಡ ಸಹಾಯ ಮಾಡುತ್ತದೆ. ಬೆಂಡೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದು ಕೂದಲಿನ ಆರೋಗ್ಯಕ್ಕೆ ಉತ್ತಮ. ಅಲ್ಲದೇ ಬೆಂಡೆಕಾಯಿ ಪೇಸ್ಟ್ ಅನ್ನು ತಲೆಗೆ ಹಚ್ಚಿ ಒಂದು ಗಂಟೆಗಳ ನಂತರ ತಲೆ ಸ್ನಾನ ಮಾಡುವುದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.
Published by:Sandhya M
First published: